ಹೆಂಡತಿಯನ್ನು ಖುಷಿಯಾಗಿಡಬೇಕು ಅಂದ್ರೆ ಮಲಗೋ ಮುಂಚೆ ಈ ಮೂರು ಕೆಲ್ಸ ಮಾಡಬೇಕು!

Published : Dec 15, 2023, 06:23 PM IST

ನಿಮ್ಮ ಹೆಂಡತಿಯನ್ನು ಮೆಚ್ಚಿಸಲು ನೀವು ಬಯಸುವಿರಾ? ಹಾಗಿದ್ರೆ ರಾತ್ರಿ ಮಲಗುವ ಮೊದಲು ಕೇವಲ ಮೂರು ಸಣ್ಣ ಕೆಲಸ ಮಾಡಿ. ಇದರಿಂದ ನೀವು ಮತ್ತು ನಿಮ್ಮ ಹೆಂಡತಿ ಇಬ್ಬರ ಜೀವನವು ಸಂತೋಷವಾಗಿರುತ್ತದೆ ಎಂದು ನಿಮಗೆ ತಿಳಿದಿದೆಯೇ?    

PREV
18
ಹೆಂಡತಿಯನ್ನು ಖುಷಿಯಾಗಿಡಬೇಕು ಅಂದ್ರೆ ಮಲಗೋ ಮುಂಚೆ ಈ ಮೂರು ಕೆಲ್ಸ ಮಾಡಬೇಕು!

ಹೆಚ್ಚಿನ ಪುರುಷರ ಸಮಸ್ಯೆಯೆಂದರೆ ಹೆಂಡತಿಯನ್ನು ಉತ್ತಮ ಮನಸ್ಥಿತಿಯಲ್ಲಿಡೋದು ಹೇಗೆ ಅಥವಾ ಅವರನ್ನು ಸಂತೋಷವಾಗಿಡಲು ಹೇಗೆ ಅನ್ನೋದನ್ನು ಅರ್ಥ ಮಾಡಿಕೊಳ್ಳೋದೇ ಇಲ್ಲ. ಅವರನ್ನು ಖುಷಿಯಾಗಿಡಬೇಕೆಂದ್ರೆ ದೊಡ್ಡ ದೊಡ್ಡ ವಿಷ್ಯಗಳೇ ಆಗಬೇಕೆಂದೇನೂ ಇಲ್ಲ. ಯಾಕಂದ್ರೆ ಸಾಮಾನ್ಯವಾಗಿ ಮಹಿಳೆಯರು ಸಣ್ಣ ವಿಷಯಗಳನ್ನು ಮಾತ್ರ ನಿರೀಕ್ಷಿಸುತ್ತಾರೆ. ಇದನ್ನು ಪುರುಷರು ಅರ್ಥ ಮಾಡಿಕೊಳ್ಳೋದಿಲ್ಲ. ಪತಿ ಸಣ್ಣ ಪುಟ್ಟ ಕೆಲವು ವಿಷಯಗಳನ್ನು ಮಾಡಿದಾಗ, ಹೆಂಡತಿ ನಿಮ್ಮಂತ ಜೀವನ ಸಂಗಾತಿಯನ್ನು (life partner) ಪಡೆಯಲು ತಾನು ಪುಣ್ಯ ಮಾಡಿದ್ದೇನೆ ಎಂದು ಭಾವಿಸುತ್ತಾಳೆ. 
 

28

ನೀವು ಹೆಂಡತಿಗಾಗಿ ಮಾಡುವ ಸಣ್ಣ ಸಣ್ಣ ಕೆಲಸಗಳು. ಅವರನ್ನು ಒಳಗಿನಿಂದ ಸಂತೋಷವಾಗಿರಿಸುತ್ತದೆ, ಇದು ಹೊರಗಿನಿಂದಲೂ ಪ್ರತಿಫಲಿಸುತ್ತದೆ. ಈ ಪಟ್ಟಿಯು ಅನೇಕ ವಿಷಯಗಳನ್ನು ಒಳಗೊಂಡಿದ್ದರೂ, ಪ್ರಮುಖವಾದ ಮೂರು ವಿಷಯಗಳು ಇಲ್ಲಿವೆ. ಮಲಗುವ ಮೊದಲು ಪತಿ ಈ ಕೆಲಸ ಮಾಡಿದ್ರೆ, ಅವನ ಹೆಂಡತಿ ಖಂಡಿತವಾಗಿಯೂ ಸಂತೋಷವಾಗಿರುತ್ತಾಳೆ.
 

38
Image: Getty Images

ಪತ್ನಿ ಜೊತೆ ಮಾತನಾಡಿ, ದಿನ ಹೇಗೆ ಕಳೆಯಿತು ಹೇಳಿ
ನಾನು ತುಂಬಾ ದಣಿದಿದ್ದೇನೆ, ಬೇಗ ಊಟ ಕೊಡು... ನಾನು ಮಲಗಲು ಹೋಗುತ್ತೇನೆ... ಈಗ ನನ್ನ ಜೊತೆ ಏನೂ ಹೇಳ್ಬೇಡ… ಕೇಳುವ ಮೂಡ್ ನನಗಿಲ್ಲ ... ಕೆಲಸ ಮಾಡುವ ಪುರುಷರು ಸಾಮಾನ್ಯವಾಗಿ ಕಚೇರಿಯಿಂದ ಮನೆಗೆ ಹಿಂದಿರುಗಿದ ನಂತರ ಹೆಚ್ಚಾಗಿ ಹೇಳುವ ಡೈಲಾಗ್ ಗಳು ಇದುವೇ… 

48

ಕಚೇರಿ ಕೆಲಸ ಯಾವುದೇ ವ್ಯಕ್ತಿಯನ್ನು ಕೆಟ್ಟದಾಗಿ ದಣಿಯುವಂತೆ (tired) ಮಾಡುತ್ತದೆ ಎಂಬುದನ್ನು ತಳ್ಳಿ ಹಾಕಲಾಗುವುದಿಲ್ಲ, ಆದರೆ ಮನೆಯನ್ನು ನೋಡಿಕೊಳ್ಳುವ ಹೆಂಡತಿ ಕೂಡ ಪ್ರತಿದಿನ ಎಲ್ಲಾ ಜವಾಬ್ದಾರಿಗಳನ್ನು (responsibility) ನಿರ್ವಹಿಸಿದ ನಂತರ ದಣಿದಿರುತ್ತಾಳೆ ಅನ್ನೋದನ್ನು ಮರೆಯೋ ಹಾಗಿಲ್ಲ. ಹಾಗಾಗಿ ಮನೆಗೆ ಬಂದ ಕೂಡಲೇ ಅವರ ಮೇಲೆ ಕೂಗಾಡುವ ಬದಲು ಅವರ ದಿನ ಹೇಗೆ ಕಳೆದಿತು ಎಂದು ಏಕೆ ಕೇಳಬಾರದು?

58

ಹೆಂಡತಿ ತಮ್ಮ ಸಮಸ್ಯೆಯನ್ನು ನಿಮಗೆ ಹೇಳಲು ಬಂದರೆ, ಅದನ್ನು ತಳ್ಳಿಹಾಕುವ ಬದಲು, ಪರಸ್ಪರ ಮಾತನಾಡುವ ಮೂಲಕ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸಿ. ಅಂತಹ ಯಾವುದೇ ವಿಷಯ ಇದ್ದರೂ, ಇಲ್ಲದೇ ಇದ್ದರೂ ಹೆಂಡತಿ ಜೊತೆ ಸ್ವಲ್ಪ ಹೊತ್ತು ಮನಸ್ಸು ಬಿಚ್ಚಿ ಮಾತನಾಡೋದ್ರಲ್ಲಿ ತಪ್ಪೇನಿದೆ. 

68

ಮನೆಕೆಲಸಗಳಲ್ಲಿ ಸಹಾಯ
ರಾತ್ರಿ ಮಲಗುವ ಮೊದಲು, ಹೆಂಡತಿ ಯಾವಾಗಲೂ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡುವ ಮೂಲಕ ಮತ್ತು ಇಡೀ ಮನೆಯನ್ನು ಆರ್ಗನೈಸ್ (organise) ಮಾಡುವ ಮೂಲಕ ಅಡುಗೆಮನೆಯಲ್ಲಿ ರಾತ್ರಿಯವರೆಗೆ ಕಳೆಯುತ್ತಾಳೆ. ಈ ವಿಷಯದಲ್ಲಿ ನೀವು ಅವರಿಗೆ ಏಕೆ ಸಹಾಯ ಮಾಡಬಾರದು?

78

ಪತ್ನಿ ಅಡುಗೆ ಮನೆಯನ್ನು ನಿರ್ವಹಿಸುತ್ತಿದ್ದರೆ, ಮನೆಯಲ್ಲಿ ಉಳಿದ ವಸ್ತುಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳುತ್ತೀರಿ. ಇದನ್ನು ಮಾಡುವುದರಿಂದ, ಕೆಲಸವೂ ಬೇಗನೆ ಕೊನೆಗೊಳ್ಳುತ್ತದೆ ಮತ್ತು ನೀವಿಬ್ಬರೂ ಕುಳಿತು ಮಾತನಾಡಲು ಸಮಯವನ್ನು ಪಡೆಯುತ್ತೀರಿ. ಈ ಸಮಯವು ದಂಪತಿಗೆ ಬಹಳ ಮುಖ್ಯ.
 

88

ಸ್ವೀಟ್ ಸರ್ಪ್ರೈಸ್ ನೀಡಿ
ಹೆಂಡತಿ ಎಷ್ಟೇ ದಣಿದಿರಲಿ ಅಥವಾ ಅವರ ದಿನ ಎಷ್ಟೇ ಕೆಟ್ಟದಾಗಿರಲಿ, ಪತಿ ಕೇವಲ ಒಂದು ಗುಲಾಬಿಯನ್ನು ತಂದರೆ, ಹೆಂಡತಿಯ ಸಂಪೂರ್ಣ ಮೂಡ್ ಬದಲಾಗುತ್ತದೆ. ಈ ಸಣ್ಣ ವಿಷ್ಯಗಳು (little sweet surprises) ದಿನವಿಡೀ ನಡೆದದ್ದನ್ನು ಮರೆಯಲು ಮತ್ತು ಹೃದಯವನ್ನು ಖುಷಿಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಆಕೆ ನೆನಪಿಟ್ಟುಕೊಳ್ಳುತ್ತಾಳೆ, ಜೊತೆಗೆ ನಿಮ್ಮನ್ನು ಸಂತೋಷವಾಗಿಡಲು ಆಕೆ ಒಂದಲ್ಲ ಒಂದು ವಿಧದಲ್ಲಿ ಪ್ರಯತ್ನಿಸುತ್ತಲೇ ಇರುತ್ತಾಳೆ. 

Read more Photos on
click me!

Recommended Stories