ಭಾರತದಲ್ಲಿ, ಮದುವೆಯ ಬಗ್ಗೆ ವಿವಿಧ ಸ್ಥಳಗಳ ಸಂಪ್ರದಾಯವು ವಿಭಿನ್ನವಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ, ಮದುವೆಗೆ ಸಂಬಂಧಿಸಿದ ಅಂತಹ ಆಚರಣೆಗಳನ್ನು ನಡೆಸಲಾಗುತ್ತದೆ, ಇದರ ಬಗ್ಗೆ ತಿಳಿದುಕೊಂಡರೆ ಆಶ್ಚರ್ಯ ಆಗೋದು ಖಂಡಿತಾ. ಇಲ್ಲಿ ಬುಡಕಟ್ಟು ಸಮಾಜದಲ್ಲಿ, ವರನ ಬದಲು ಬೇರೆ ಯಾರೋ ವಧುವನ್ನು ಮದುವೆಯಾಗುತ್ತಾರೆ.
ಹೌದು, ಮದುವೆಯಾಗೋದು ವರನ ತಂಗಿ. ವರನ ತಂಗಿ ವಧುವಿನ ಜೊತೆ ಏಳು ಸುತ್ತುಗಳನ್ನು ಸುತ್ತುತ್ತಾಳೆ. ಇದು ಓದಲು ವಿಚಿತ್ರವಾಗಿ ತೋರುತ್ತದೆ, ಆದರೆ ಅದು ವಾಸ್ತವವಾಗಿದೆ. ಇಂದಿಗೂ, ಈ ಸಂಪ್ರದಾಯವನ್ನು ಅಲ್ಲಿ ಆಚರಣೆಯಲ್ಲಿದೆ.
ಈ ಮೂರು ಹಳ್ಳಿಗಳಲ್ಲಿ, ವರನ ಮೆರವಣಿಗೆ ಇರೋದಿಲ್ಲ
ಈ ವಿಚಿತ್ರ ಸಂಪ್ರದಾಯವನ್ನು ಗುಜರಾತ್, ಮಧ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಮೂರು ಹಳ್ಳಿಗಳಲ್ಲಿ ಆಚರಣೆಯಲ್ಲಿದೆ. ಹಳ್ಳಿಗಳ ಹೆಸರು ಸುರ್ಖೇಡ, ಸನದಾ ಮತ್ತು ಅಂಬಾಲ. ಇಲ್ಲಿ ವರನ ಸಣ್ಣ ತಂಗಿ ಅಣ್ಣನ ಬದಲಾಗಿ ತಾನು ಭಾರಾತ್ ತೆಗೆದುಕೊಂಡು ಹೋಗಿ ವಧುವನ್ನು ಕರೆತರುತ್ತಾಳೆ.
ಮದುವೆಯ ಸಿದ್ಧತೆಗಳು ಇತರ ಸ್ಥಳಗಳಲ್ಲಿರುವಂತೆಯೇ ನಡೆಯುತ್ತವೆ. ಎಲ್ಲಾ ಮದುವೆ ಆಚರಣೆಗಳನ್ನು (marriage tradition) ಸಹ ಎಲ್ಲೆಡೆಯಂತೆ ನಡೆಸಲಾಗುತ್ತದೆ. ಆದರೆ ಇಲ್ಲಿ ಸ್ವಲ್ಪ ಚೇಂಜಸ್ ಏನಂದ್ರೆ ವರನ ಬದಲು ಆತನ ತಂಗಿ ಮದುವೆಯಾಗುತ್ತಾಳೆ. ಇದೇ ಇಲ್ಲಿನ ವಿಚಿತ್ರ ಪದ್ಧತಿಯಾಗಿದೆ.
ಶೃಂಗಾರಗೊಂಡು ನಿಲ್ಲುವ ಮದುಮಗ ಮಂಟಪಕ್ಕೆ ಹೋಗೋದೆ ಇಲ್ಲ
ಮೆರವಣಿಗೆ ಹೊರಡುವ ಮೊದಲು, ವರನು ಶೇರ್ವಾನಿ ಮತ್ತು ಪೇಟ ಧರಿಸುತ್ತಾನೆ. ಅವನು ತನ್ನ ಸಾಂಪ್ರದಾಯಿಕ ಖಡ್ಗವನ್ನು ಸಹ ತನ್ನೊಂದಿಗೆ ಒಯ್ಯುತ್ತಾನೆ. ಆದರೆ ಮನೆಯಿಂದ ಹೊರಗೆ ಮಾತ್ರ ಹೋಗೋದಿಲ್ಲ. ಮದುವೆ ದಿನ ಅವನು ತನ್ನ ತಾಯಿಯೊಂದಿಗೆ ಮನೆಯಲ್ಲಿ ಉಳಿಯುತ್ತಾನೆ.
ಅದೇ ಸಮಯದಲ್ಲಿ, ಅವನ ತಂಗಿ ಪೂರ್ತಿಯಾಗಿ ಅಲಂಕಾರಗೊಂಡು ಮೆರವಣಿಗೆಯೊಂದಿಗೆ ವಧುವನ್ನು ಕರೆದೊಯ್ಯಲು ಹೊರಗೆ ಬರುತ್ತಾಳೆ. ವಧುವಿನ ಸ್ಥಳದಲ್ಲಿ ಬಾರಾತ್ ಅನ್ನು ಸ್ವಾಗತಿಸಲಾಗುತ್ತದೆ. ವಧುವು ವರನ ಸಹೋದರಿಯೊಂದಿಗೆ ಏಳು ಸುತ್ತು ಸುತ್ತುತ್ತಾರೆ. ನಂತರ ಬಿದಾಯಿ ಸಮಾರಂಭ ನಡೆಯುತ್ತೆ. ಸಹೋದರಿ ವಧುವಿನೊಂದಿಗೆ ಮನೆಗೆ ಬಂದು ಅವಳನ್ನು ಸಹೋದರನಿಗೆ ಒಪ್ಪಿಸುತ್ತಾಳೆ. ಅದರ ನಂತರ ಇಲ್ಲಿ ಕೆಲವು ಆಚರಣೆಗಳನ್ನು ನಡೆಸಲಾಗುತ್ತದೆ.
ವೈವಾಹಿಕ ಜೀವನದಲ್ಲಿ ಯಾವುದೇ ಅಡೆತಡೆ ಬರೋದಿಲ್ಲ :
ವರನು ಸ್ವತಃ ಮದುವೆಯಾಗಲು ಹೋದರೆ, ಅವನ ವೈವಾಹಿಕ ಜೀವನವು (married life) ಸರಿಯಾಗಿ ನಡೆಯುವುದಿಲ್ಲ ಎಂದು ಇಲ್ಲಿ ನಂಬಲಾಗಿದೆ. ಆದುದರಿಂದ ಇಲ್ಲಿನ ಜನರು ಇಂದಿಗೂ ಸಹ ಈ ಸಂಪ್ರದಾಯವನ್ನು ಇಲ್ಲಿ ನಂಬಿಕೊಂಡು, ಅನುಸರಿಸಿಕೊಂಡು ಬರುತ್ತಾರೆ ಎಂದು ಹೇಳಲಾಗುತ್ತದೆ.
ಕೆಲವರು ಈ ಸಂಪ್ರದಾಯದಿಂದ ದೂರವಿರಲು ಪ್ರಯತ್ನಿಸಿದರು, ನಂತರ ಅವರ ವೈವಾಹಿಕ ಜೀವನದಲ್ಲಿ ಅನೇಕ ತೊಂದರೆ ಉಂಟಾದವು ಎಂದು ಜನರು ಹೇಳುತ್ತಾರೆ. ಅದರ ನಂತರ ಜನರು ವರ್ಷಗಳಿಂದ ನಡೆಯುತ್ತಿರುವ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಇದರಿಂದ ದಂಪತಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರೋದೇ ಇಲ್ಲ,ದಂಪತಿಗಳು ಸುಖವಾಗಿ ದಾಂಪತ್ಯ ನಡೆಸುತ್ತಾರೆ ಎನ್ನಲಾಗಿದೆ.