ಹೌದು ! ಇಲ್ಲಿ ತಾಯಿ-ಮಗ, ತಂದೆ-ಮಗಳ ನಡುವೆಯೇ ಇರುತ್ತೆ ದೈಹಿಕ ಸಂಬಂಧ

Published : Sep 04, 2022, 06:01 PM IST

ಇಂಡೋನೇಷ್ಯಾದ ಪೊಲಾಹಿ ಬುಡಕಟ್ಟು ಜನಾಂಗವು (Tribal Community) ಪ್ರಪಂಚದಾದ್ಯಂತದ ಸಂಶೋಧಕರಿಗೆ ಅರ್ಥವಾಗದ ಒಗಟಾಗಿ ಉಳಿದಿದೆ. ಪೋಲಾಹಿ ಜನಾಂಗದಲ್ಲಿ, ಒಡಹುಟ್ಟಿದವರು, ತಾಯಿ -ಮಗ ಮತ್ತು ತಂದೆ-ಹೆಣ್ಣುಮಕ್ಕಳೊಂದಿಗೆ ದೈಹಿಕ ಸಂಬಂಧ (Physical Relationship) ಬೆಳೆಸೋದು ಸಹ ಸಾಮಾನ್ಯ ಅಂದ್ರೆ ಆಶ್ಚರ್ಯ ಆಗದೇ ಇರಲ್ಲ. ಅಂತಹ ಸಂಬಂಧಗಳಿಂದ ಜನಿಸಿದ ಮಕ್ಕಳು ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಗಳ ಅಪಾಯ ಹೊಂದುವ ಸಾಧ್ಯತೆ/t ಹೆಚ್ಚಾಗಿರುತ್ತೆ, ಆದರೆ ಈ ಜನಾಂಗದಲ್ಲಿ ಇಲ್ಲಿವರೆಗೂ ಈ ರೀತಿಯ ಯಾವ ಸಮಸ್ಯೆ ಕಂಡುಬಂದಿಲ್ಲ ಅನ್ನೋದೆ ವಿಚಿತ್ರ..  

PREV
112
ಹೌದು ! ಇಲ್ಲಿ ತಾಯಿ-ಮಗ, ತಂದೆ-ಮಗಳ ನಡುವೆಯೇ ಇರುತ್ತೆ ದೈಹಿಕ ಸಂಬಂಧ

ಇಂಡೋನೇಷ್ಯಾದ ಗೊರೊಂಟಾಲೊ ಪರ್ವತದಲ್ಲಿ ಆಳವಾದ ಮತ್ತು ದಟ್ಟವಾದ ಕಾಡುಗಳಲ್ಲಿ ವಾಸಿಸುವ ಪೊಲಾಹಿ ಬುಡಕಟ್ಟು ಜನಾಂಗವು ಪ್ರಪಂಚದಾದ್ಯಂತದ ಸಂಶೋಧಕರಿಗೆ ಅರ್ಥವಾಗದ ಒಗಟಾಗಿ ಉಳಿದಿದೆ. ಇಲ್ಲಿನ ಆಚರಣೆ ಎಷ್ಟು ವಿಚಿತ್ರವಾಗಿದೆ ಎಂದರೆ, ಇದರ ಬಗ್ಗೆ ಕೇಳಿದವರು, ಹೀಗೂ ನಡೆಯುತ್ತಾ ಅನ್ನದೇ ಇರಲಾರರು. ಹಾಗಾದರೆ ಅಲ್ಲಿ ಏನು ನಡೆಯುತ್ತೆ ಗೊತ್ತಾ? 

212

ಪೋಲಾಹಿ ಎಂಬ ಬುಡಕಟ್ಟು ಜನಾಂಗದಲ್ಲಿನ ದೈಹಿಕ ಸಂಬಂಧದ (Physical Relationship) ಆಚರಣೆಯೇ ವಿಚಿತ್ರವಾದುದು. ಹೌದು, ಇಲ್ಲಿ ಒಡಹುಟ್ಟಿದವರು, ತಾಯಿ -ಮಗ ಮತ್ತು ತಂದೆ- ಮಗಳು ದೈಹಿಕ ಸಂಬಂಧ ನಡೆಸೋದು ಸಾಮಾನ್ಯ. ಅಂತಹ ಸಂಬಂಧಗಳಿಂದ ಜನಿಸಿದ ಮಕ್ಕಳು ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಗಳ ಹೊಂದುವ ಸಾಧ್ಯತೆ ಇರುತ್ತದೆ, ಆದರೆ ಅವರಲ್ಲಿ ಈ ರೀತಿಯ ಯಾವುದೂ ಕಂಡುಬಂದಿಲ್ಲ. ಇಲ್ಲಿದೆ ನೋಡಿ ಆ ಜನಾಂಗದ ಒಂದು ಇಂಟರೆಸ್ಟಿಂಗ್ ಸ್ಟೋರಿ

312
ಈ ಪೋಲಾಹಿ ಬುಡಕಟ್ಟು ಜನಾಂಗ ಯಾವುದು?

ಗೊರೊಂಟಾಲೊ ಇಂಡೋನೇಷ್ಯಾದ ಗೊರೊಂಟಾಲೊ ಪ್ರಾಂತ್ಯದ ರಾಜಧಾನಿ ಮತ್ತು ಒಂದು ನಗರ. ಪೋಲಾಹಿ ಬುಡಕಟ್ಟಿನವರು ಇಲ್ಲಿನ ಒಳ ಕಾಡುಗಳಲ್ಲಿ ವಾಸಿಸುತ್ತಾರೆ. ಈ ಜನಾಂಗದಲ್ಲಿ, ಒಡಹುಟ್ಟಿದವರು, ತಾಯಿ-ಪುತ್ರರು ಮತ್ತು ತಂದೆ-ಪುತ್ರಿಯರೊಂದಿಗೆ ದೈಹಿಕ ಸಂಬಂಧಗಳು ಸಹ ರೂಪುಗೊಳ್ಳುತ್ತವೆ. ಅಂದರೆ, ಈ ಜನರು ಇನ್ ಬ್ರೀಡಿಂಗ್ (inbreeding) ಸಂಪ್ರದಾಯ ಅನುಸರಿಸುತ್ತಿದ್ದಾರೆ. 

412

ಅಂದರೆ ಈ ಜನರು ರಕ್ತಸಂಬಂಧಿಗಳನ್ನು ಸಹ ಮದುವೆಯಾಗುವ ಸಂಪ್ರದಾಯವನ್ನು ಹೊಂದಿದ್ದಾರೆ. ಡಚ್ ವಸಾಹತುಶಾಹಿ ಯುಗದಿಂದಲೂ ಅವರ ನಡುವಿನ ಈ ವಿವಾಹ ವ್ಯವಸ್ಥೆ ನಡೆಯುತ್ತಿದೆ. ಇದನ್ನು ಅಸಾಮಾನ್ಯ ಅಥವಾ ವಿಚಿತ್ರವೆಂದು ಪರಿಗಣಿಸಲಾಗಿದ್ದರೂ, ಈ ಸಂಸ್ಕೃತಿ ಇಂದಿಗೂ ಅಸ್ತಿತ್ವದಲ್ಲಿದೆ. ಈ ಬಗ್ಗೆ ಅಲ್ಲಿನ ಜನರಿಗೆ ತಪ್ಪು ಎಂದು ಅನಿಸಿಯೇ ಇಲ್ಲ, ಅವರ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗದೇ ಇಂದಿಗೂ ಈ ಸಂಪ್ರದಾಯ ಮುಂದುವರಿಯುತ್ತಿದೆ.

512

ಪೋಲಾಹಿ ಬುಡಕಟ್ಟು ಜನಾಂಗದಲ್ಲಿ ಈ ಸಂಪ್ರದಾಯದ ಬಗ್ಗೆ ದೀರ್ಘಕಾಲದಿಂದ ಸಂಶೋಧನೆ ನಡೆಯುತ್ತಿದೆ. ಈ ಅಧ್ಯಯನಗಳ ಫಲಿತಾಂಶಗಳ ಪ್ರಕಾರ ಪೋಲಾಹಿ ಬುಡಕಟ್ಟಿನವರಿಗೆ ಸಾಕಷ್ಟು ತಿಳುವಳಿಕೆ ಮತ್ತು ಜ್ಞಾನದ ಕೊರತೆಯಿದೆ ಎಂದು ತೋರಿಸುತ್ತದೆ. ಅಲ್ಲದೇ ಮತ್ತೊಂದು ಮಾನವ ಗುಂಪಿನೊಂದಿಗೆ ಹೇಗೆ ಸಂಪರ್ಕ ಸಾಧಿಸಬೇಕೆಂದು ಅವರಿಗೆ ತಿಳಿದಿಲ್ಲ. ಆದ್ದರಿಂದ, ಅವರು ತಮ್ಮ ನಡುವೆ ಸಂತಾನೋತ್ಪತ್ತಿ ಮಾಡುತ್ತಾರೆ ಅನ್ನೋದನ್ನು ಕಂಡು ಹಿಡಿದಿದ್ದಾರೆ.

612
ರಕ್ತ ಸಂಬಂಧದಲ್ಲಿ ದೈಹಿಕ ಸಂಬಂಧಗಳನ್ನು ನಿಷೇಧಿಸಲಾಗಿದೆ

ಅಂದಹಾಗೆ, ಈ ರೀತಿಯ ಕುಟುಂಬ ಅನೈತಿಕ ಸಂಬಂಧವು ಒಂದು ನಿಷಿದ್ಧ ನಡವಳಿಕೆ. ಹೆಚ್ಚಿನ ದೇಶಗಳು ರಕ್ತ ಸಂಬಂಧಿಗಳೊಂದಿಗೆ ಅನೈತಿಕ ಸಂಬಂಧ ಅಥವಾ ಮದುವೆಯನ್ನು ನಿಷೇಧಿಸುವ ಕಾನೂನುಗಳನ್ನು ಹೊಂದಿವೆ. ಇದನ್ನು ಸಮಾಜಕ್ಕೆ ಆದರ್ಶವೆಂದು ಪರಿಗಣಿಸಲಾಗುವುದಿಲ್ಲ. 
 

712

ಇದಲ್ಲದೆ, ರಕ್ತ ಸಂಭಂಧಿಗಳೊಂದಿಗೆ ಸೆಕ್ಸ್ ಮಾಡೋದು ಆರೊಗ್ಯಕ್ಕೆ ಅಪಾಯಕಾರಿ ಎಂದು ಸಹ ತಿಳಿಸಲಾಗಿದೆ. ನಿಕಟ ಸಂಬಂಧಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿರುವವರಿಗೆ ಜನಿಸಿದ ಮಕ್ಕಳು ಜನನ ದೋಷಗಳನ್ನು (birth defects) ಹೊಂದಿವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಒಂದು ಅಧ್ಯಯನವು ತೋರಿಸುತ್ತದೆ. ಅಂದರೆ, ಹತ್ತಿರದ ಸಂಬಂಧಿಕರು ಅಥವಾ ಅನೈತಿಕ ಸಂಬಂಧದಿಂದ (Illicit Relationship) ಜನಿಸಿದ ಮಕ್ಕಳು ದೊಡ್ಡವರಾದಾಗ ಮಾನಸಿಕ ಪರಿಸ್ಥಿತಿಗಳಿಂದ ಬಳಲುತ್ತಾರೆ. ಅಂದ್ರೆ ಸಾಮಾಜಿಕವಾಗಿ ಬೆರೆಯಲು ಕಷ್ಟವಾಗುವುದು, ಕಡಿಮೆ ಆತ್ಮಗೌರವ, ಮಾನಸಿಕ ಅಸ್ವಸ್ಥತೆಗಳು (psychotic disorders), ಖಿನ್ನತೆ, ಒತ್ತಡ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆ. 

812

ರಕ್ತ ಸಂಬಂಧದಲ್ಲಿ ಹುಟ್ಟಿದ ಶೇಕಡಾ 40 ರಷ್ಟು ಮಕ್ಕಳು ಆಟೋಸೋಮಲ್ ರಿಸೆಸಿವ್ ಅಸ್ವಸ್ಥತೆಯನ್ನು ಹೊಂದಿರುವುದು ಕಂಡುಹಿಡಿದಿದೆ. ಅಂದರೆ, ಪೋಷಕರಿಂದ ಆನುವಂಶಿಕವಾಗಿ ಪಡೆದ ಎರಡು ಬದಲಾದ ಜೀಣುಗಳು ಅಂದರೆ ರೂಪಾಂತರಗಳು (mutations) ಕಂಡುಬರುತ್ತವೆ. ಇದು ದೈಹಿಕ ಅಥವಾ ಮಾನಸಿಕದಂತಹ ಗಂಭೀರ ಸಮಸ್ಯೆಗೆ ಕಾರಣವಾಗಿದೆ. 

912
ಆಶ್ಚರ್ಯಕ ಸಂಗತಿ ಏನಂದ್ರೆ?

ಅಂತಹ ಸಂಬಂಧಗಳಿಂದ ಜನಿಸಿದ ಮಕ್ಕಳಲ್ಲಿ ಯಾವ ಅಸ್ವಸ್ಥತೆಗಳು ಸಂಭವಿಸಬಹುದು ಎಂಬುದನ್ನು ಕಂಡುಹಿಡಿಯಲು ಒಂದು ಅಧ್ಯಯನ ನಡೆಸಲಾಯಿತು. ಜೆಕೊಸ್ಲೊವಾಕಿಯಾದಲ್ಲಿ ಜನಿಸಿದ ಮಕ್ಕಳ ಅಧ್ಯಯನದ ಪ್ರಕಾರ, ಅವರಲ್ಲಿ 42 ಪ್ರತಿಶತದಷ್ಟು ಜನರು ಕೆಲವು ಗಂಭೀರ ಜನನ ದೋಷದಿಂದ ಬಳಲುತ್ತಿದ್ದರು ಅಥವಾ ಹೆಚ್ಚು ಕಾಲ ಬದುಕಲು ಸಾಧ್ಯವಾಗಲಿಲ್ಲ. 11 ರಷ್ಟು ಜನರು ಮಾನಸಿಕ ಅಸ್ವಸ್ಥತೆ ಅಥವಾ ಬೌದ್ಧಿಕ ಕೊರತೆಯನ್ನು (intellectual deficit) ಹೊಂದಿದ್ದರು.

1012

ಅನೇಕ ಅಧ್ಯಯನಗಳು ಮತ್ತು ಸಂಶೋಧನೆಗಳ ಹೊರತಾಗಿಯೂ, ಪೊಲಾಹಿ ಬುಡಕಟ್ಟಿನ ಈ ಸಂಪ್ರದಾಯದಿಂದ ಹುಟ್ಟಿದ ಮಕ್ಕಳ ಬಗ್ಗೆ ಅಚ್ಚರಿಯ ಫಲಿತಾಂಶ ಬಂದಿದೆ. ಅದೇನೆಂದರೆ ಪೊಲಾಹಿ ಬುಡಕಟ್ಟಿನ ಅನೈತಿಕ ಸಂಬಂಧ ವಿವಾಹಗಳಿಂದ ಜನಿಸಿದ ಮಕ್ಕಳು ಇತರ ಮಾನವ ಗುಂಪುಗಳಿಗಿಂತ ಫಿಟ್ ಆಗಿರುವುದು ಕಂಡುಬಂದಿದೆ. ಇದು ಏಕೆ ಸಂಭವಿಸುತ್ತದೆ ಎಂದು ಕಂಡುಹಿಡಿಯಲು ಸಂಶೋಧಕರು ಇನ್ನೂ ವಿಫಲರಾಗಿದ್ದಾರೆ. 

1112

ಗೊರೊಂಟಾಲೊ-ಯು.ಎನ್.ಜಿ.ಯ ರಾಜ್ಯ ವಿಶ್ವವಿದ್ಯಾಲಯದ ಮಾನವಶಾಸ್ತ್ರಜ್ಞ (anthropologist State University of Gorontalo-UNG )ಯೋವನ್ ತಮು, ನಡೆಸಿದ ಅಧ್ಯಯನದಂತೆ ಈ ವಂಶಜರಲ್ಲಿ ಇಲ್ಲಿವರೆಗೆ ಯಾವುದೇ ದೋಷಗಳು ಕಂಡುಬಂದಿಲ್ಲ ಅನ್ನೋದೆ ಅಚ್ಚರಿಯಾಗಿದೆ ಎಂದು ಹೇಳಿದರು. ಆದರೆ ಇತರ ದೇಶಗಳಲ್ಲಿ ಸಮಸ್ಯೆ ಕಂಡು ಬಂದಿರುವುದು ಮಾತ್ರ ನಿಜ.

1212

ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಪೋಲಾಹಿ ಬುಡಕಟ್ಟು ಜನಾಂಗದವರು ತಮ್ಮ ಜೀವನದಲ್ಲಿ ವಿಶೇಷ ಆಚರಣೆಗಳನ್ನು ಹೊಂದಿರುವ ಸಾಧ್ಯತೆಯಿದೆ, ಇದರಿಂದ ಅವರ ಮಕ್ಕಳು ಸಾಮಾನ್ಯರಾಗಿರುತ್ತಾರೆ ಎಂದು ತಮು ಹೇಳುತ್ತಾರೆ. ಅಂದರೆ ಈ ಬುಡಕಟ್ಟಿನವರು ಕಾಡಿನಲ್ಲಿ ಒಂದು ನಿರ್ದಿಷ್ಟ ಸಸ್ಯವನ್ನು ಸೇವಿಸುತ್ತಿರಬಹುದು, ಅದರ ಬಗ್ಗೆ ಹೊರಗಿನ ಸಮುದಾಯಕ್ಕೆ ತಿಳಿದಿರುವ ಸಾಧ್ಯತೆ ಕಡಿಮೆ ಇರಬಹುದು. ಇದರಿಂದ ಇಲ್ಲಿನ ಜನರು ಯಾವುದೇ ಸಮಸ್ಯೆ ಇಲ್ಲದೇ ಫಿಟ್ ಆಗಿರುತ್ತಾರೆ ಎನ್ನುತ್ತಾರೆ ಸಂಶೋಧಕರು. 

Read more Photos on
click me!

Recommended Stories