ಸಂಬಂಧದಲ್ಲಿ ಉಳಿಯಲು ಬಹುಶಃ ಅನೇಕ ಕಾರಣಗಳು ಬೇಕಾಗುತ್ತವೆ, ಆದರೆ ಸಂಬಂಧ ಹಾಳುಮಾಡಲು ಒಂದು ಕಾರಣವು ಸಾಕು. ಪ್ರೀತಿಯಲ್ಲಿ(Love) ಜಗಳ ಇರೋದು ಸಾಮಾನ್ಯ. ಆದರೆ ಈ ಜಗಳವು ತೀವ್ರ ರೂಪ ತೆಗೆದುಕೊಂಡರೆ, ಸಂಬಂಧದಿಂದ ಹೊರಬರೋದು ಬುದ್ಧಿವಂತಿಕೆ.
ಅನೇಕ ಬಾರಿ ಸಂಬಂಧದಲ್ಲಿ(Relationship) ಅಂತಹ ಪರಿಸ್ಥಿತಿ ಇದ್ದರೆ, ನಾವು ಸಂಗಾತಿಯ ಅಂತಹ ತಪ್ಪುಗಳನ್ನು ಕ್ಷಮಿಸಲು ಪ್ರಾರಂಭಿಸುತ್ತೇವೆ, ಇದು ನಿಮಗೆ ಒಳ್ಳೆಯದು ಅನಿಸಬಹುದು, ಆದರೆ ಇದು ಒಳ್ಳೆಯದಲ್ಲ. ಸಂಗಾತಿಯ ಸಣ್ಣ ತಪ್ಪುಗಳನ್ನು ಕ್ಷಮಿಸಬಹುದು, ಆದರೆ ಅವರು ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತಿದ್ದರೆ, ನೀವು ಸಂಬಂಧವನ್ನು (Relationship) ಮುರಿಯುವ ಬಗ್ಗೆ ಮತ್ತು ಮುಂದುವರಿಯುವ ಬಗ್ಗೆ ಯೋಚಿಸಬೇಕು. ಯಾವ ಸಂದರ್ಭದಲ್ಲಿ ನೀವು ಈ ಬಗ್ಗೆ ಯೋಚಿಸಬೇಕು ನೋಡೋಣ.
ಮತ್ತೆ ಮತ್ತೆ ಸುಳ್ಳು (Lie)ಹೇಳೋದು
ಸುಳ್ಳು ಹೇಳೋದು ಯಾವುದೇ ಸಂಬಂಧಕ್ಕೆ ಸೂಕ್ತವಲ್ಲ. ಅನೇಕ ಬಾರಿ ಸಂಗಾತಿ ನಿಮಗೆ ಸುಳ್ಳು ಹೇಳುವ ಮೂಲಕ ಸಂಬಂಧವನ್ನು ಉಳಿಸಲು ಪ್ರಯತ್ನಿಸುತ್ತಾರೆ. ಆದರೆ ನೀವು ಸಂಗಾತಿಯ ಸುಳ್ಳನ್ನು ಮತ್ತೆ ಮತ್ತೆ ಕಂಡುಹಿಡಿಯುತ್ತಿದ್ದರೆ, ಆಗ ಜಾಗರೂಕರಾಗಿರಿ ಏಕೆಂದರೆ ರಿಪೀಟೆಡ್ ಸುಳ್ಳುಗಳ ಅಗತ್ಯವಿರುವ ಸಂಬಂಧದಲ್ಲಿ, ಎಲ್ಲವೂ ಸರಿಯಾಗಿಲ್ಲ ಎಂದರ್ಥ. ಆದ್ದರಿಂದ ಈ ಸಮಸ್ಯೆಯನ್ನು ತಪ್ಪಿಸಲು, ಸಂಗಾತಿಯೊಂದಿಗೆ ನೇರವಾಗಿ ಮಾತನಾಡಿ ಅಥವಾ ಬ್ರೇಕ್ ಅಪ್ ಆಗೋದು ಉತ್ತಮ.
ಮೆಸೇಜ್ ಮತ್ತು ಕಾಲ್ ಅವಾಯ್ಡ್(Avoid) ಮಾಡೋದು
ಅನೇಕ ಬಾರಿ ಜನರು ಬ್ಯುಸಿ ಆಗಿರೋದ್ರಿಂದ ಮೆಸೇಜ್ ಮತ್ತು ಕಾಲ್‌ಗಳಿಗೆ ಉತ್ತರಿಸಲು ಸಾಧ್ಯವಾಗೋದಿಲ್ಲ. ಈ ಸಮಸ್ಯೆ ಕೆಲವೊಮ್ಮೆ ಸಂಬಂಧದಲ್ಲಿ ಸಂಭವಿಸಿದರೆ, ಅದು ಮುಂದುವರಿಯುತ್ತೆ. ಆದರೆ ನಿಮ್ಮ ಸಂಗಾತಿಯು ಇದನ್ನು ಆಗಾಗ್ಗೆ ಮಾಡುತ್ತಿದ್ದರೆ, ಮೊದಲು ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ದೈನಂದಿನ ದಿನಚರಿ ಮತ್ತು ಕೆಲಸದ ಬಗ್ಗೆ ನೀವು ತಿಳಿದಿರುವುದು ಬಹಳ ಮುಖ್ಯ.
ಪ್ರತಿಯೊಬ್ಬ ವ್ಯಕ್ತಿಗೂ ಸ್ವಲ್ಪ ಪರ್ಸನಲ್ ಸ್ಪೇಸ್ ನ(Personal space) ಅಗತ್ಯವಿದೆ, ನೀವು ಅದನ್ನು ನಿಮ್ಮ ಸಂಗಾತಿಗೆ ನೀಡಬೇಕು. ಆದರೆ ಇದೆಲ್ಲದ್ದರ ಹೊರತಾಗಿಯೂ, ನಿಮ್ಮ ಸಂಗಾತಿ ಯಾವಾಗಲೂ ನಿಮ್ಮ ಮೆಸೇಜ್ ಮತ್ತು ಕಾಲ್ ಗಳನ್ನು ಅವಾಯ್ಡ್ ಮಾಡಿದ್ರೆ ಮತ್ತು ನಿಮ್ಮ ಜೊತೆ ಮಾತನಾಡೋದನ್ನು ಅವರು ಇಷ್ಟ ಪಡ್ತಿಲ್ಲ ಎಂದು ನಿಮಗೆ ಅನಿಸಿದರೆ, ನೀವು ಸಂಗಾತಿಯೊಂದಿಗೆ ಮಾತನಾಡಬೇಕು. ವಿಷಯ ಇನ್ನೂ ಸರಿ ಆಗದಿದ್ದರೆ, ಬ್ರೇಕ್ ಅಪ್ ಬಗ್ಗೆ ನಿರ್ಧರಿಸಿ.
ಪ್ರತಿಯೊಂದಕ್ಕೂ ಜಗಳ (Fight)
ನಿಮ್ಮ ಸಂಗಾತಿಯು ಪ್ರತಿಯೊಂದಕ್ಕೂ ನಿಮ್ಮೊಂದಿಗೆ ಜಗಳವಾಡಿದರೆ, ಬಹುಶಃ ಸಂಬಂಧದಲ್ಲಿ ಏನೋ ಸರಿಯಾಗಿ ನಡೆಯುತ್ತಿಲ್ಲ ಎಂದರ್ಥ. ಸಂಗಾತಿ ಮನಸ್ಸಿನಲ್ಲಿ ಏನೋ ನಡೆಯುತ್ತಿದೆ ಎಂದು ಸಹ ಆಗಿರಬಹುದು. ಇದು ಸಂಬಂಧದಲ್ಲಿ ಆಗಾಗ್ಗೆ ಸಂಭವಿಸಿದರೆ, ಸಂಗಾತಿಯೊಂದಿಗೆ ಮಾತನಾಡಿ, ಏಕೆಂದರೆ ಅನೇಕ ಬಾರಿ ಜಗಳದ ಹಿಂದಿನ ಕಾರಣ ಅಥವಾ ಸಮಸ್ಯೆ ಬಗ್ಗೆ ಕೂತು ಮಾತನಾಡಿ ಪರಿಹರಿಸಬಹುದು. ಆದರೆ ಮಾತನಾಡಿದರೂ ಸಮಸ್ಯೆ ಕಡಿಮೆಯಾಗದಿದ್ರೆ, ಬ್ರೇಕ್ ಅಪ್ ಉತ್ತಮ.
ದಾಂಪತ್ಯ ದ್ರೋಹ
ಸಂಬಂಧದಲ್ಲಿ ಅತ್ಯಂತ ಪ್ರಮುಖ ವಿಷಯ ಎಂದರೆ ವಿಶ್ವಾಸ. ಅದೇ ಮುರಿದು ಬಿದ್ದರೆ, ಸಂಬಂಧದಲ್ಲಿ ಉಳಿಯೋದು ತುಂಬಾ ಕಷ್ಟವಾಗುತ್ತೆ. ನಿಮ್ಮ ಸಂಗಾತಿಯು ಮತ್ತೊಂದು ಸಂಬಂಧವನ್ನು ಹೊಂದಿದ್ದರೆ, ಅಂತಹ ಸಂಬಂಧದಿಂದ ಹೊರಬರೋದು ಸರಿಯಾದ ನಿರ್ಧಾರವಾಗಿದೆ. ಬ್ರೇಕಪ್(Break up) ನಿರ್ಧರಿಸುವ ಮೊದಲು ನಿಮ್ಮ ಸಂಗಾತಿಯೊಂದಿಗೆ ಒಮ್ಮೆ ಮಾತನಾಡಿ.
ಯಾವಾಗ್ಲೂ Ex ಬಗ್ಗೆ ಮಾತನಾಡೋದು
ನಿಮ್ಮ ಸಂಗಾತಿಯು ಯಾವಾಗ್ಲೂ Ex ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ, ಇದು ನಿಮಗೆ ಖಂಡಿತವಾಗಿಯೂ ಇರಿಟೇಟ್(Irritate) ಆಗುತ್ತೆ ಅಲ್ವಾ? ಅವರು ಬಿಟ್ಟೂ ಬಿಡದೆ ಮತ್ತೆ ಮತ್ತೆ ಎಕ್ಸ್ ಬಗ್ಗೆ ಮಾತಾಡ್ಟಾ ಇದ್ರೆ ಸಂಗಾತಿಯ ಮನಸ್ಸಿನಲ್ಲಿ ಏನೋ ನಡೆಯುತ್ತಿದೆ ಎಂದು ತಿಳ್ಕೊಳಿ. ಈ ರೀತಿ ಎಕ್ಸ್ ಬಗ್ಗೆ ಮಾತನಾಡೋದು ಇಷ್ಟವಿಲ್ಲ ಎಂದು ನೀವು ಅವರಿಗೆ ಹೇಳಬಹುದು. ಆದರೆ ಸಂಗಾತಿ ನಿಮ್ಮ ಮಾತನ್ನು ಇಗ್ನೋರ್ ಮಾಡಿ ಮತ್ತೆ ಎಕ್ಸ್ ಬಗ್ಗೆ ಮಾತನಾಡಿದ್ರೆ ಬಹುಶಃ ನೀವು ಬ್ರೇಕಪ್ ಬಗ್ಗೆ ಯೋಚಿಸಬೇಕು.