ಸಂಗಾತಿ ಮೂಡ್ ಸರಿಮಾಡಲು ಇದಕ್ಕಿಂತ ಸಖತ್ ಐಡಿಯಾ ಇನ್ನೊಂದಿಲ್ಲ!

First Published Oct 16, 2020, 11:41 PM IST

ಮದುವೆಯ ಆರಂಭದಲ್ಲಿ ಹಾಲು -ಜೇನಿನಂತಿದ್ದ ಸಂಬಂಧ ದಿನಗಳೆದಂತೆ ಬೋರ್ ಅನಿಸೋಕೆ ಶುರುವಾಗುತ್ತದೆ. ಇನ್ನು ಕೆಲವರ ದಾಂಪತ್ಯ ಜೀವನದಲ್ಲಿ ಕಲಹ -ವಿರಹ ಬಂದು ಏನೇನೋ ಆಗಿ ಬಿಡುತ್ತದೆ. ನಿಮ್ಮ ಜೀವನದಲ್ಲೂ ಕಲಹದ ಗಾಳಿ ಬೀಸಿದ್ದರೇ , ಸಂಗಾತಿಯನ್ನು ಇವತ್ತೇ ನಿಮ್ಮವರನ್ನಾಗಿ ಮಾಡಿಕೊಳ್ಳಿ, ಅದಕ್ಕಾಗಿ ನೀವು ಏನು ಮಾಡಬೇಕು ಅನ್ನೋದನ್ನು ನಾವು ಹೇಳುತ್ತೇವೆ. 

ಸಂಶೋಧನೆಯೊಂದು ಹೇಳುವಂತೆ ದಂಪತಿಗಳ ಮಲಗುವ ಹವ್ಯಾಸದಿಂದಾಗಿ ಇಂತಹ ಸಿಚುವೇಶನ್‌ ಉಂಟಾಗುತ್ತದೆ. ನಿಮ್ಮ ಜೀವನದಲ್ಲೂ ಇದೆಲ್ಲ ಆಗುತ್ತಿದ್ದರೆ, ನಿಮ್ಮ ಮಲಗುವ ಹವ್ಯಾಸವನ್ನು ಬದಲಾಯಿಸಿ. ಆವಾಗ ಮಾತ್ರ ನಿಮ್ಮ ಸೆಕ್ಸ್‌ ಲೈಫ್‌ ಜೊತೆಗೆ ವೈವಾಹಿಕ ಜೀವನ ಹ್ಯಾಪಿಯಾಗಿರಲು ಸಾಧ್ಯ...
undefined
ಹೆಚ್ಚಾಗಿ ಜಗಳವಾಡಿದ ನಂತರ ಕಪಲ್ಸ್‌ ಬೇರೆ ಬೇರೆ ರೂಮ್‌ನಲ್ಲಿ ಮಲಗುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ಜೊತೆಯಾಗಿ ಮಲಗಲು ಟ್ರೈ ಮಾಡಿ. ಇದರಿಂದ ಸಂಬಂಧ ಬೆಸೆಯುತ್ತದೆ.
undefined
ಸಣ್ಣ ಸಣ್ಣ ವಿಷಯಗಳಿಗೂ ನಿಮ್ಮ ಸಂಗಾತಿಯನ್ನು ಹೊಗಳಿ. ಇದರಿಂದ ಅವರು ನಿಮಗೆ ಎಷ್ಟೊಂದು ಸ್ಪೆಷಲ್‌ ಎನ್ನುವುದನ್ನು ಅವರಿಗೆ ಫೀಲ್‌ ಆಗುವ ರೀತಿ ಮಾಡಿ.
undefined
ಆಫೀಸ್‌ ಅಥವಾ ಸಂಬಂಧಿಕರ ಮಾತುಗಳನ್ನು ಮನೆಯಲ್ಲಿ ಮಾತನಾಡಬೇಡಿ. ಅದರ ಬದಲು ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡಿ. ಇದರಿಂದ ಇಬ್ಬರಲ್ಲಿ ಪ್ರೀತಿ ಹೆಚ್ಚುತ್ತದೆ.
undefined
ರಾತ್ರಿ ನಿದ್ರೆ ಮಾಡುವ ಸಮಯದಲ್ಲಿ ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ ಬಳಕೆ ಮಾಡುವುದನ್ನ ಕಡಿಮೆ ಮಾಡಿ. ಈ ಸಮಯದಲ್ಲಿ ನಿಮ್ಮ ಪಾರ್ಟ್‌ನರ್‌ ಜೊತೆಗೆ ಮಾತನಾಡಿ. ಇದರಿಂದ ಇಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
undefined
ಮಲಗುವ ಮುನ್ನ ನಿಮ್ಮ ಸಂಗಾತಿಗೆ ಗುಡ್‌ ನೈಟ್‌ ಹೇಳಿ ಕಿಸ್‌ ಮಾಡಲು ಮರೆಯದಿರಿ. ಇದರಿಂದ ಆ ದಿನದ ಎಲ್ಲಾ ಬೇಸರ, ಚಿಂತೆ ಎಲ್ಲವೂ ದೂರವಾಗಿ ಸಂಗಾತಿ ನಿಮ್ಮ ಪ್ರೀತಿಯಲ್ಲಿ ಕಳೆದು ಹೋಗುತ್ತಾರೆ.
undefined
ಅಲ್ಲದೆ ನಿಮ್ಮ ಸಂಗಾತಿಗೆ ನೀವೆಷ್ಟು ಅವರನ್ನು ಪ್ರೀತಿ ಮಾಡುತ್ತೀರಿ ಅನ್ನೋದನ್ನ ಹೇಳಿ. ಇದು ನಿಮ್ಮ ಸಂಬಂಧ ಸದಾ ಕಾಲ ಮಧುರವಾಗಿರಲು ಸಹಾಯ ಮಾಡುತ್ತದೆ.
undefined
ನಿಮ್ಮಿಬ್ಬರ ನಡುವೆ ಯಾವುದೇ ಕಾರಣಕ್ಕೂ ಜಗಳ ಆಗಿರಲಿ, ರಾತ್ರಿ ಮಲಗುವ ಹೊತ್ತು ಎಲ್ಲಾ ಕೋಪ, ಅಹಂ ಬಿಟ್ಟು ಅವರ ಬಳಿ ಸಾರೀ ಕೇಳಿ. ಯಾಕೆಂದರೆ ಈ ಸಮಯದಲ್ಲಿ ಸಾರಿ ಕೇಳಿದರೆ ಅವರ ಮನಸ್ಸು ಶಾಂತವಾಗುತ್ತದೆ. ಜೊತೆಗೆ ಬೇಗನೆ ನಿಮ್ಮನ್ನು ಕ್ಷಮಿಸುತ್ತಾರೆ.
undefined
ಇಬ್ಬರ ಮಧ್ಯೆ ಮನಸ್ತಾಪ ಇದ್ದರೂ ಸಂಗಾತಿಯನ್ನು ನಗಿಸಲು ಟ್ರೈ ಮಾಡಿ, ಜೊತೆಗೆ ಸ್ವಲ್ಪ ಫ್ಲರ್ಟ್, ಹಗ್ ಎಲ್ಲವೂ ಇರಲಿ ಇದರಿಂದ ಅವರ ಎಲ್ಲಾ ಕೋಪ ಕರಗಿ ಮತ್ತೆ ನಿಮ್ಮ ಜೊತೆ ಒಂದಾಗುತ್ತಾರೆ.
undefined
ಸಂಗಾತಿಯ ಮೂಡ್ ಸರಿ ಇಲ್ಲ ಎಂದೆನಿಸಿದರೆ ಅವರ ಇಷ್ಟವಾದ ಮ್ಯೂಸಿಕ್ ಅಥವಾ ಮೂವಿ ಹಾಕಿ ಅವರ ಜೊತೆಯಾಗಿ ನೋಡಿ. ಇದರಿಂದ ಅವರ ಮನಸಿಗೆ ನೆಮ್ಮದಿ ಸಿಗುತ್ತದೆ.
undefined
click me!