First Love... ಜೀವನದಲ್ಲಿ ಮರೆಯಲು ಸಾಧ್ಯವೇ ಇರದ ಸಿಹಿ ಅನುಭವ

Suvarna News   | Asianet News
Published : Oct 15, 2020, 05:55 PM IST

ಈ ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡ ಒಂದಲ್ಲ ಒಂದು ಬಾರಿ ಪ್ರೀತಿಸುತ್ತಾರೆ. ಇದು ಸ್ವಾಭಾವಿಕ. ಹಾಗಂತ ಎಲ್ಲರಿಗೂ ಜೀವನದಲ್ಲಿ ಪ್ರೀತಿ ಒಂದೇ ಬಾರಿ ಆಗುತ್ತದೆ ಎಂದು ಹೇಳಲೂ ಸಾಧ್ಯವಿಲ್ಲ. ಬ್ರೇಕ್‌ಅಪ್‌, ಬೇರೆಯವರ ಜೊತೆ ಮದುವೆ.. ಇವೆಲ್ಲಾ ಲೈಫ್‌ಅಲ್ಲಿ ಸಾಮಾನ್ಯವಾಗಿದೆ... ಜೀವನದಲ್ಲಿ ಏನೇ ಆದರೂ ಫಸ್ಟ್ ಲವ್ ತುಂಬಾನೇ ಸ್ಪೆಷಲ್, ಇದನ್ನ ಅಷ್ಟು ಸುಲಭವಾಗಿ ಮರೆಯಲು ಸಾಧ್ಯವೇ ಇಲ್ಲ ಆಲ್ವಾ? 

PREV
110
First Love... ಜೀವನದಲ್ಲಿ ಮರೆಯಲು ಸಾಧ್ಯವೇ ಇರದ ಸಿಹಿ ಅನುಭವ

 ನಾವು ಜೀವನದಲ್ಲಿ ಎಷ್ಟೇ ಮುಂದುವರೆದರೂ ಸಹ ನಮ್ಮ ಫಸ್ಟ್‌ ಲವ್‌ನ್ನು ಮರೆಯಲೂ ಸಾಧ್ಯವೇ ಇಲ್ಲ. ಒಂದಲ್ಲ ಒಂದು ಬಾರಿ ಮೊದಲ ಪ್ರೀತಿಯ ನೆನಪಾಗುತ್ತದೆ. ಯಾಕೆ ಅನ್ನೋದಕ್ಕೆ ಹಲವು ಕಾರಣಗಳಿವೆ. ಕೆಲವೊಂದಿಷ್ಟನ್ನು ನಾವಿಲ್ಲಿ ನೀಡಿದ್ದೇವೆ ನೋಡಿ.. 

210

ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗೋದಿಲ್ಲ : ಮೊದಲ ಪ್ರೀತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅದೊಂದು ಅದ್ಭುತ ಅನುಭವವಾಗಿರುತ್ತದೆ. ಈ ರೀತಿಯ ಫೀಲಿಂಗ್‌ ನಿಮಗೆ ಇಲ್ಲಿವರೆಗೆ ಯಾರ ಜೊತೆಯೂ ಆಗಿರಲ್ಲ. ಹೇಳಿಕೊಳ್ಳಲಾಗದ ವಿಚಿತ್ರ ಹಾಗೂ ಸುಂದರವಾದ ಕೋಲಾಹಲವನ್ನು ಎಬ್ಬಿಸುವುದು ಕೇವಲ ಮೊದಲ ಪ್ರೀತಿ ಮಾತ್ರ. ಆದುದರಿಂದ ಅದನ್ನು ಮರೆಯೋದು ಸ್ವಲ್ಪ ಕಷ್ಟವಾಗಿದೆ.

310

ನೀವು ಪ್ರೀತಿ ಮಾಡಿದ ಮೊದಲ ವ್ಯಕ್ತಿ ಅವರಾಗಿರುತ್ತಾರೆ : ಪ್ರೀತಿ, ಪ್ರೇಮ ಎಂಬ ಸೆಳೆತಕ್ಕೆ ಮೊದಲ ಬಾರಿ ನಿಮ್ಮನ್ನು ತಳ್ಳಿದ ಅಥವಾ ಸೆಳೆದ ವ್ಯಕ್ತಿ ಅವರಾಗಿರುತ್ತಾರೆ. ನಿಮ್ಮ ಹೃದಯ ಮಂದಿರದಲ್ಲಿ ವಿಶೇಷ ಸ್ಥಾನ ನೀಡಿ ಪೂಜಿಸಿದ ಮೊದಲ ವ್ಯಕ್ತಿ ಅವರಾಗಿರುತ್ತಾರೆ. ನಮ್ಮ ಜೀವನದಲ್ಲಿ ಯಾವುದೆ ವಿಷಯ ಮೊದಲ ಬಾರಿ ನಮ್ಮ ಬಳಿ ಬಂದ ಎಲ್ಲಾ ವಸ್ತುವೂ ನಮಗೆ ತುಂಬಾನೆ ಇಷ್ಟವಾಗುತ್ತದೆ.

410

ಮೊದಲ ಪ್ರೀತಿ ಮಗುವಿನಂತೆ ಇರುತ್ತದೆ : ಫಸ್ಟ್‌ ಲವ್‌ ಆಗಲು ತುಂಬಾ ಕಷ್ಟಪಡಬೇಕಾಗಿಲ್ಲ. ಅದು ಹೀಗೆ ಆಗಿ ಬಿಡುತ್ತದೆ. ಆದುದರಿಂದ ಮೊದಲ ಪ್ರೀತಿ ಎಂಬುದು ತುಂಬಾನೆ ನೆನಪಿನಲ್ಲಿಡುವಂತದ್ದಾಗಿರುತ್ತದೆ. ಅಲ್ಲದೆ ಫಸ್ಟ್‌ ಲವ್‌ನಲ್ಲಿ ಯಾವುದೆ ಕಪಟ ಇರೋದಿಲ್ಲ, ಅದು ಮಗುವಿನಂತೆ ಮುಗ್ಧವಾಗಿರುತ್ತದೆ.

510

ಮೊದಲ ಪ್ರೀತಿ ದೂರಾದಾಗ : ಮೊದಲ ಪ್ರೀತಿ ಹೆಚ್ಚಾಗಿ ಯಾವುದೋ ಕೆಟ್ಟ ಕಾರಣದಿಂದ ದೂರವಾಗುತ್ತದೆ. ಇಬ್ಬರದು ಬೇರೆ ಬೇರೆ ಕರಿಯರ್‌ ಇರಬಹುದು ಅಥವಾ ಬೇರೆ ತಾಣಕ್ಕೆ ಶಿಫ್ಟ್‌ ಆಗಿರಬಹುದು ಅಥವಾ ಇನ್ನೇನೋ ಕಾರಣದಿಂದ ಇಬ್ಬರು ದೂರವಾಗಿರಬಹುದು. ಆದರೆ ಆ ಮುಗ್ಧ ಪ್ರೀತಿ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಆದುದರಿಂದ ಆ ಕಾರಣವನ್ನು ಮರೆಯಲು ಸಾಧ್ಯವಾಗೋದಿಲ್ಲ.

610

ಮತ್ತೆ ಅಂತಹುದೆ ಪ್ರೀತಿ ಸಿಕ್ಕೋದು ಕಷ್ಟ : ಮೊದಲ ಪ್ರೀತಿಯ ಆ ಫಸ್ಟ್‌ ಟಚ್‌ ದೇಹದಲ್ಲಿ ವಿದ್ಯುತ್‌ ಸಂಚಾರವಾದಂತೆ ಅನುಭವ ನೀಡುತ್ತದೆ. ಹೊಟ್ಟೆಯಲ್ಲಿ ಚಿಟ್ಟೆ ಹಾರಾಡಿದ ಅನುಭವ ಆಗುತ್ತದೆ. ಈ ಎಲ್ಲಾ ಅನುಭವ ನಂತರದ ದಿನಗಳಲ್ಲಿ ಯಾರಿಂದಲೂ ನೀಡಲು ಸಾಧ್ಯವಾಗೋದಿಲ್ಲ.

710

ಮತ್ತೆ ಮತ್ತೆ ನೋಡುವ ಹಂಬಲ : ಮೊದಲ ಬಾರಿ ಪ್ರೀತಿಯಾದಾಗ ಎಲ್ಲವೂ ಹೊಸ ಅನುಭವವಾಗಿರುತ್ತದೆ. ಆದುದರಿಂದ ಪ್ರೇಮಿಯನ್ನು ನೋಡುವ ಹಂಬಲ ಹೆಚ್ಚಾಗಿರುತ್ತದೆ. ಜೊತೆಗೆ ಮೊದಲ ಬಾರಿ ಇಬ್ಬರ ನಡುವೆ ನಡೆದ ಪ್ರತಿಯೊಂದು ವಿಷಯವೂ ನೆನಪಾಗುತ್ತದೆ. 

810

ಮೊದಲ ಪ್ರೀತಿಯ ಮೊದಲ ಮುತ್ತು : ಮೊದಲ ಪ್ರೀತಿಯಂತೆ ಮೊದಲ ಮುತ್ತನ್ನು ಮರೆಯಲು ಸಾಧ್ಯವಿಲ್ಲ. ಜೀವನದಲ್ಲಿ ನಂತರ ಏನೇನೋ ಆಗಿರಬಹುದು, ಆದರೆ ಮೊದಲ ಬಾರಿ ಪಡೆದ ಆ ಮೊದಲ ಪ್ರೀತಿ ಮತ್ತು ಮೊದಲ ಮುತ್ತಿನ ಅನುಭವ ನಿನ್ನೆ ನಡೆದಂತೆ ಯಾವಾಗಲೂ ನೆನಪಿನಲ್ಲಿರುತ್ತದೆ. 

910

ಜೀವನ ಪಾಠ : ಹೌದು ಮೊದಲ ಪ್ರೀತಿ ಜೀವನದಲ್ಲಿ ಪಾಠ ಕಲಿಸುತ್ತದೆ. ಪ್ರೀತಿ ಅಂದ್ರೆ ಏನು? ದೂರ ಆದಾಗ ಆಗುವ ಅನುಭವ ಏನು? ಮುಂದೆ ನಾವು ಹೇಗಿರಬೇಕು? ಎಲ್ಲವನ್ನೂ ಮೊದಲ ಪ್ರೀತಿ ಕಲಿಸಿಕೊಡುತ್ತದೆ. 

1010

ಹೌದು ತಾನೇ... ಇದೆಲ್ಲಾ ನಿಮಗೂ ನಿಜ ಅನಿಸಲ್ವಾ? ಮೊದಲ ಪ್ರೀತಿಯ ಮತ್ತು ಜೀವನ ಪೂರ್ತಿ ಅಮಲೇರಿಸುವುದು ಖಂಡಿತಾ.. 

click me!

Recommended Stories