Behavior boys dislike: ಹುಡುಗರು ಬಹಿರಂಗವಾಗಿ ಏನನ್ನೂ ಹೇಳದಿರಬಹುದು. ಆದರೆ ಈ ಅಭ್ಯಾಸ ಆರೋಗ್ಯಕರವಾದ ಸಂಬಂಧದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ನಿಜಕ್ಕೂ ನೀವು ನಿಮ್ಮ ಸಂಬಂಧವನ್ನು ಬಲವಾಗಿಡಲು ಬಯಸಿದರೆ ಹುಡುಗರು ಇಷ್ಟಪಡದ ಆ ಮೂರು ಸಾಮಾನ್ಯ ಅಭ್ಯಾಸಗಳ ಬಗ್ಗೆ ನೋಡೋಣ ಬನ್ನಿ..
ಸಂಬಂಧಗಳಲ್ಲಿ ಸಣ್ಣಪುಟ್ಟ ಅಭ್ಯಾಸಗಳೇ ದೊಡ್ಡ ಸಮಸ್ಯೆಯಾಗಬಹುದು. ಸಾಮಾನ್ಯವಾಗಿ ಹುಡುಗರಿಗೆ ಹುಡುಗಿಯರ ಈ ಮೂರು ಅಭ್ಯಾಸ ಇಷ್ಟವಾಗಲ್ಲ. ಆದ್ದರಿಂದ ಮುಂದೆಯಾದರೂ ಈ ತಪ್ಪನ್ನು ಪುನರಾವರ್ತಿಸದೆ ಸಂಬಂಧವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಇಬ್ಬರ ನಡುವಿನ ಪ್ರೀತಿ ಯಾವಾಗಲೂ ಚೆನ್ನಾಗಿರುತ್ತೆ.
26
ಆ ಮೂರು ಸಾಮಾನ್ಯ ಅಭ್ಯಾಸ
ಸಂಬಂಧದಲ್ಲಿ ಪ್ರೀತಿ ಎಷ್ಟು ಮುಖ್ಯವೋ, ಪರಸ್ಪರ ತಿಳುವಳಿಕೆ ಮತ್ತು ನಂಬಿಕೆಯೂ ಅಷ್ಟೇ ಮುಖ್ಯ. ಆದರೆ ಕೆಲವೊಮ್ಮೆ ಹುಡುಗಿಯರು ತಿಳಿಯದೆಯೇ ತಮ್ಮ ಹುಡುಗನಿಗೆ ತೊಂದರೆ ಕೊಡುವ ಅಭ್ಯಾಸಗಳನ್ನು ಅಳವಡಿಸಿಕೊಂಡಿರುತ್ತಾರೆ. ಹುಡುಗರು ಬಹಿರಂಗವಾಗಿ ಏನನ್ನೂ ಹೇಳದಿರಬಹುದು. ಆದರೆ ಈ ಅಭ್ಯಾಸ ಆರೋಗ್ಯಕರವಾದ ಸಂಬಂಧದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ನಿಜಕ್ಕೂ ನೀವು ನಿಮ್ಮ ಸಂಬಂಧವನ್ನು ಬಲವಾಗಿಡಲು ಬಯಸಿದರೆ ಹುಡುಗರು ಇಷ್ಟಪಡದ ಆ ಮೂರು ಸಾಮಾನ್ಯ ಅಭ್ಯಾಸಗಳ ಬಗ್ಗೆ ನೋಡೋಣ ಬನ್ನಿ..
36
ಕಾಳಜಿ ಅತಿಯಾದಾಗ
ಹುಡುಗಿಯರ ಕಾಳಜಿ ವಹಿಸುವ ಸ್ವಭಾವ ಒಳ್ಳೆಯದೇ. ಆದರೆ ಈ ಕಾಳಜಿ ಅನುಮಾನಕ್ಕೆ ತಿರುಗಿದಾಗ ಸಂಬಂಧವು ಹಾಳಾಗುತ್ತದೆ. "ನೀವು ಎಲ್ಲಿದ್ದೀರಿ?", "ನೀವು ಯಾರೊಂದಿಗೆ ಇದ್ದೀರಿ?", "ನೀವು ಫೋನ್ ಏಕೆ ಎತ್ತಲಿಲ್ಲ?" ಮುಂತಾದ ಪ್ರಶ್ನೆಗಳನ್ನು ಪದೇ ಪದೇ ಕೇಳುವುದರಿಂದ ಹುಡುಗರು ತಮ್ಮ ನಿಯಂತ್ರಣದಲ್ಲಿದ್ದಾರೆ ಎಂದು ನಿಮಗೆ ಭಾಸವಾಗುತ್ತದೆ. ಆದರೆ ನಿರಂತರವಾಗಿ ಕರೆ ಮಾಡುವುದು, ಸಂದೇಶ ಕಳುಹಿಸುವುದು ಅಥವಾ ಅವರ ಫೋನ್ ಪರಿಶೀಲಿಸುವುದರಿಂದ ಅವರು ಅಸುರಕ್ಷಿತ ಮತ್ತು ನಿರ್ಬಂಧಿತ ಭಾವನೆಯನ್ನು ಅನುಭವಿಸಬಹುದು. ಹುಡುಗರು ಅವರಿಗೆ ಸ್ಪೇಸ್ ನೀಡಲೆಂದು ಬಯಸುತ್ತಾರೆ.
ಕೆಲವೊಮ್ಮೆ ಹುಡುಗಿಯರು ಹಿಂದಿನ ಜಗಳ ಅಥವಾ ತಪ್ಪನ್ನು ಮರೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿ ಬಾರಿ "ನೀವು ಮೊದಲು ಹಾಗೆ ಮಾಡಿದ್ದೀರಿ!" ಎಂದು ಅದೇ ವಿಷಯವನ್ನು ಪುನರಾವರ್ತಿಸುತ್ತಲೇ ಇರುತ್ತಾರೆ. ಈ ಅಭ್ಯಾಸವು ಹುಡುಗರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನಾವೆಷ್ಟೇ ಪ್ರಯತ್ನಿಸಿದರೂ ಅವರಿಗೆ ಎಂದಿಗೂ ಸಂಪೂರ್ಣವಾಗಿ ಕ್ಷಮಿಸುವ ಗುಣ ಬರುವುದಿಲ್ಲ ಎಂದು ಭಾವಿಸಲು ಪ್ರಾರಂಭಿಸುತ್ತಾರೆ. ಒಂದು ವೇಳೆ ನೀವು ಈಗಾಗಲೇ ತಪ್ಪನ್ನು ಕ್ಷಮಿಸಿದ್ದರೂ ಸಹ ಅದನ್ನು ನಿರಂತರವಾಗಿ ಅವರಿಗೆ ನೆನಪಿಸುವುದರಿಂದ ಸಂಬಂಧವು ದುರ್ಬಲಗೊಳ್ಳುತ್ತಾ ಬರುತ್ತದೆ.
56
ಅತಿಯಾಗಿ ಪ್ರತಿಕ್ರಿಯಿಸುವುದು
ಹುಡುಗರು ಸಿಂಪಲ್ ಆಗಿರಲು ಮತ್ತು ಶಾಂತಿಯಿಂದ ಇರಲು ಬಯಸುತ್ತಾರೆ. ಆದರೆ ಚಿಕ್ಕ ಚಿಕ್ಕ ವಿಷಯಗಳಿಗೂ ಸಹ ಕೋಪ, ಅಳುವುದು ಅಥವಾ ಡ್ರಾಮಾ ಮಾಡಿದಾಗ ಅವರಿಗೆ ಮೆಂಟಲಿ ಸ್ಟ್ರೈನ್ ಆಗುತ್ತದೆ. ಉದಾಹರಣೆಗೆ ಅವನು ಮೀಟಿಂಗ್‌ನಲ್ಲಿರುತ್ತಾನೆ ಮತ್ತು ನಿಮ್ಮ ಕರೆಗೆ ಉತ್ತರಿಸಲ್ಲ. ಆಗ ಅವನು ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾನೆಂದು ಊಹಿಸಿದ ತಕ್ಷಣ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಸಣ್ಣ ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳಲು ಕಲಿಯಿರಿ. ಇದು ನಿಮ್ಮ ಸಂಬಂಧವನ್ನು ಸಂತೋಷವಾಗಿಡುತ್ತದೆ.
66
ಸ್ವಲ್ಪ ಬುದ್ಧಿವಂತಿಕೆ ತೋರಿಸಿ
ಈ ಅಭ್ಯಾಸಗಳಿಗೆ ಸ್ವಲ್ಪ ಗಮನ ಕೊಡುವ ಮೂಲಕ ಮತ್ತು ಬುದ್ಧಿವಂತಿಕೆಯನ್ನು ತೋರಿಸುವ ಮೂಲಕ ಪ್ರತಿ ಹುಡುಗಿಯೂ ತನ್ನ ಸಂಬಂಧವನ್ನು ಬಲವಾಗಿ ಕಾಪಾಡಿಕೊಳ್ಳಬಹುದು.