Jobs women find attractive: ನಿಜ ಜೀವನದಲ್ಲಿ ಯಾರನ್ನಾದರೂ ನೋಡಿದ ತಕ್ಷಣಕ್ಕೇ ಪ್ರೀತಿಯಲ್ಲಿ ಬೀಳುವುದಿಲ್ಲ. ಮೊದಲು ಅವರು ಯಾರು?, ಹೇಗಿದ್ದಾರೆಂದು ತಿಳಿದುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಪುರುಷರಿಗಿಂತ ಮಹಿಳೆಯರು ಈ ವಿಷಯಗಳಿಗೆ ಗಮನ ಕೊಡುವುದರಲ್ಲಿ ವಿಶೇಷವಾಗಿ ನಿಪುಣರು.
'ಮೊದಲ ನೋಟದಲ್ಲೇ ಪ್ರೀತಿ' ಸಿನಿಮಾಗಳಲ್ಲಿ ಮಾತ್ರ. ನಿಜ ಜೀವನದಲ್ಲಿ ಯಾರನ್ನಾದರೂ ನೋಡಿದ ತಕ್ಷಣಕ್ಕೇ ಪ್ರೀತಿಯಲ್ಲಿ ಬೀಳುವುದಿಲ್ಲ. ಪ್ರೀತಿಯಲ್ಲಿ ಬೀಳುವ ಮೊದಲು ಅವರು ಯಾರು?, ಏನು ಅಧ್ಯಯನ ಮಾಡ್ತಾರೆ? ಹೇಗಿದ್ದಾರೆಂದು ತಿಳಿದುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಪುರುಷರಿಗಿಂತ ಮಹಿಳೆಯರು ಈ ವಿಷಯಗಳಿಗೆ ಗಮನ ಕೊಡುವುದರಲ್ಲಿ ವಿಶೇಷವಾಗಿ ನಿಪುಣರು.
28
ಯಾವ ಕ್ಷೇತ್ರದಲ್ಲಿರುವ ಪುರುಷರನ್ನು ಹೆಚ್ಚು ಇಷ್ಟಪಡುತ್ತಾರೆ?
ಪ್ರೀತಿಯಲ್ಲಿ ಬೀಳುವಾಗ ಹಲವು ಅಂಶಗಳು ಪಾತ್ರವಹಿಸುತ್ತವೆ. ಅದರಲ್ಲಿ ಪುರುಷನ ಕೆಲಸವು ಬಹಳ ಮುಖ್ಯವಾದದ್ದು. ಪುರುಷನ ಕೆಲಸಕ್ಕೆ ನೀಡುವ ಪ್ರಾಮುಖ್ಯತೆಯು ಮಹಿಳೆಯರಿಂದ ಮಹಿಳೆಯರಿಗೆ ಮತ್ತು ಸಂಸ್ಕೃತಿ ನಡುವೆ ಬಹಳ ವ್ಯತ್ಯಾಸಗೊಳ್ಳಬಹುದು. ಚಲನಚಿತ್ರ, ಧಾರಾವಾಹಿಗಳಲ್ಲಿ ಮಾತ್ರ ಮಹಿಳೆಯರು ನಿರುದ್ಯೋಗಿ ಪುರುಷರನ್ನು ಬೆನ್ನಟ್ಟಿ ಪ್ರೀತಿಸುತ್ತಾರೆ. ಆದರೆ ರಿಯಾಲಿಟಿ ನೋಡಿದಾಗ ಸಂಪೂರ್ಣವಾಗಿ ಭಿನ್ನವಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಕೆಲವು ಉದ್ಯೋಗಗಳಲ್ಲಿರುವ ಪುರುಷರು ಇತರರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ಆದ್ದರಿಂದ ಈ ಲೇಖನದಲ್ಲಿ ಮಹಿಳೆಯರು ಯಾವ ಕ್ಷೇತ್ರದಲ್ಲಿರುವ ಪುರುಷರನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ನೀವು ನೋಡಬಹುದು.
38
ಆರೋಗ್ಯ ಸೇವೆ
ಆರೋಗ್ಯ ಸೇವೆಯಲ್ಲಿರುವವರು ವಿಶೇಷವಾಗಿ ವೈದ್ಯರು ಮಹಿಳೆಯರನ್ನು ಆಕರ್ಷಿಸುವ ಪಟ್ಟಿಯಲ್ಲಿ ಹೆಚ್ಚಾಗಿ ಅಗ್ರಸ್ಥಾನದಲ್ಲಿರುತ್ತಾರೆ. ಅಂದರೆ ಮಹಿಳೆಯರು ಈ ಕ್ಷೇತ್ರದಲ್ಲಿನ ಪುರುಷರನ್ನು ಇಷ್ಟಪಡಲು ಕಾರಣ ಅವರ ಕಾಳಜಿ, ಬುದ್ಧಿವಂತಿಕೆ ಮತ್ತು ಆರ್ಥಿಕ ಸ್ಥಿರತೆ. ಮಹಿಳೆಯರು ವೈದ್ಯರ ಜ್ಞಾನ, ಸಮರ್ಪಣೆ ಮತ್ತು ಘನತೆಯನ್ನು ಗೌರವಿಸುತ್ತಾರೆ.
ನಾವು ಎಂಜಿನಿಯರಿಂಗ್ ಅನ್ನು ಎಷ್ಟೇ ಕಡೆಗಣಿಸಿದರೂ ಅದು ಇನ್ನೂ ವಿಶೇಷ ಮೌಲ್ಯವನ್ನು ಹೊಂದಿದೆ. ತಂತ್ರಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಒಂದು ಪಾತ್ರವನ್ನು ವಹಿಸುತ್ತಿರುವುದರಿಂದ ಅನೇಕ ಮಹಿಳೆಯರು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿರುವ ಪುರುಷರ ಬಗ್ಗೆ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಈ ಕೆಲಸವು ಆಕರ್ಷಕವಾಗಿದೆ. ಏಕೆಂದರೆ ಇದು ಸಮಸ್ಯೆ ಪರಿಹರಿಸುವ ಕೌಶಲ್ಯ ಮತ್ತು ವಿಶ್ಲೇಷಣಾತ್ಮಕ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ.
58
ಹಣಕಾಸು ಮತ್ತು ಲೆಕ್ಕಪತ್ರಗಾರರು
ಹಣಕಾಸು ಮತ್ತು ಲೆಕ್ಕಪತ್ರ ಕ್ಷೇತ್ರಗಳಲ್ಲಿರುವ ಪುರುಷರನ್ನೂ ಮಹಿಳೆಯರು ಬಯಸುತ್ತಾರೆ. ಈ ಕ್ಷೇತ್ರವು ಹೆಚ್ಚಿನ ಹಣ ಮತ್ತು ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ ಎಂಬ ಕಾರಣದಿಂದಾಗಿ ಮಹಿಳೆಯರು ಈ ಕ್ಷೇತ್ರವನ್ನು ಹೆಚ್ಚು ಇಷ್ಟಪಡುತ್ತಾರೆ. ಹಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮತ್ತು ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯವನ್ನು ಪ್ರದರ್ಶಿಸುವ ಪುರುಷರ ಕಡೆಗೆ ಮಹಿಳೆಯರು ಸುಲಭವಾಗಿ ಆಕರ್ಷಿತರಾಗುತ್ತಾರೆ.
68
ಶಿಕ್ಷಕರು
ಬೋಧನೆಯನ್ನು ಒಂದು ಶ್ರೇಷ್ಟ ವೃತ್ತಿ ಎಂದು ಪರಿಗಣಿಸಲಾಗುತ್ತದೆ. ಶಿಕ್ಷಕರು ತಾಳ್ಮೆ, ತಿಳುವಳಿಕೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುತ್ತಾರೆ. ಇವು ಮಹಿಳೆಯರು ಪಾರ್ಟ್ನರ್ಸ್‌ನಲ್ಲಿ ಹುಡುಕುವ ಪ್ರಮುಖ ಲಕ್ಷಣಗಳಾಗಿವೆ.
78
ಕಲಾವಿದರು ಮತ್ತು ಸೃಜನಶೀಲರು
ಕಲಾವಿದರು, ಸಂಗೀತಗಾರರು ಮತ್ತು ಇತರ ಸೃಜನಶೀಲ ವೃತ್ತಿಪರರು... ಇವರಿಗೆ ಹೆಚ್ಚಿನ ಆದಾಯವಿಲ್ಲದಿದ್ದರೂ ಸಹ ಉತ್ಸಾಹ, ಕಲ್ಪನೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವಿರುವ ಪುರುಷರತ್ತ ಸುಲಭವಾಗಿ ಆಕರ್ಷಿತರಾಗುತ್ತಾರೆ. ಅಸಾಂಪ್ರದಾಯಿಕ ಜೀವನಶೈಲಿಯು ಅನೇಕ ಮಹಿಳೆಯರ ಆಸಕ್ತಿಯನ್ನು ಕೆರಳಿಸಬಹುದು.
88
ಪೊಲೀಸ್ ಮತ್ತು ಮಿಲಿಟರಿ
ಪೊಲೀಸ್ ಅಥವಾ ಮಿಲಿಟರಿ ಸೇವೆಗೆ ಸಂಬಂಧಿಸಿದ ಕೆಲಸಗಳಿಗೆ ಒಂದು ನಿರ್ದಿಷ್ಟ ಗೌರವ ಇರುತ್ತದೆ. ಈ ಕ್ಷೇತ್ರಗಳು ಹೆಚ್ಚಾಗಿ ಶೌರ್ಯ, ಭದ್ರತೆ ಮತ್ತು ಶಿಸ್ತಿನೊಂದಿಗೆ ಸಂಬಂಧ ಹೊಂದಿವೆ. ಇದು ಅನೇಕ ಮಹಿಳೆಯರಿಗೆ ಆಕರ್ಷಕ ಗುಣಗಳಾಗಿರಬಹುದು.