ಹುಡುಗೀರು ಹೀಗೂ ಫ್ಲರ್ಟ್ ಮಾಡ್ತಾರೆ… ಆದ್ರೆ ಹುಡುಗರಿಗದು ಗೊತ್ತೇ ಆಗಲ್ಲ

Published : Mar 29, 2025, 01:12 PM ISTUpdated : Mar 29, 2025, 02:17 PM IST

ಹುಡುಗರು ಫ್ಲರ್ಟ್ ಮಾಡೋದ್ರಲ್ಲಿ ನಿಸ್ಸೀಮರಾಗಿರ್ತಾರೆ, ಆದ್ರೆ ಅವರು ಫ್ಲರ್ಟ್ ಮಾಡ್ತಾರೆ ಅನ್ನೋದನ್ನು ಸುಲಭವಾಗಿ ಕಂಡು ಹಿಡಿಯಬಹುದು. ಆದರೆ ಹುಡುಗಿಯರು ಫ್ಲರ್ಟ್ ಮಾಡಿದ್ರೆ ಗೊತ್ತೇ ಆಗಲ್ವಂತೆ!  

PREV
19
ಹುಡುಗೀರು ಹೀಗೂ  ಫ್ಲರ್ಟ್ ಮಾಡ್ತಾರೆ… ಆದ್ರೆ ಹುಡುಗರಿಗದು ಗೊತ್ತೇ ಆಗಲ್ಲ

ಹುಡುಗರು ಮಾತ್ರ ಫ್ಲರ್ಟ್ ಮಾಡೋದ ಖಂಡಿತಾ ಇಲ್ಲ, ಹುಡುಗಿಯರು ಸಹ ಫ್ಲರ್ಟ್ (Girls can flirt) ಮಾಡ್ತಾರೆ, ಆದ್ರೆ ಹುಡುಗರಷ್ಟು ಓಪನ್ ಆಗಿ ಅಲ್ಲ. ಮಾಡುವಾಗ ಕಣ್ಣಿನ ಸಂಪರ್ಕವನ್ನು ಮಾಡಿಕೊಳ್ಳುತ್ತಾರೆ. ಅವರ ನೋಡುವ ಶೈಲಿ ತುಂಬಾ ಭಿನ್ನವಾಗಿದೆ.

29

ಹುಡುಗಿಯರು ಹೆಚ್ಚು ಸಮಯದವರೆಗೆ ಐ ಕಾಂಟಾಕ್ಟ್  (Eye contact) ಕಾಪಾಡಿಕೊಳ್ಳುತ್ತಾರೆ. ತುಂಬಾ ಹೊತ್ತಿನವರೆಗೂ ಕಣ್ಣಿನಲ್ಲೇ ಫ್ಲರ್ಟ್ ಮಾಡುತ್ತಾರೆ, ತುಂಬಾ ಹೊತ್ತಿನ ಬಳಿಕವೇ ಅವರು ಕಣ್ಣಿನ ರೆಪ್ಪೆಯನ್ನು ಮುಚ್ಚಿತ್ತಾರೆ. 

39

ಹುಡುಗಿ ನಗುತ್ತಾ ಐ ಕಾಂಟಾಕ್ಟ್ ಮಾಡುತ್ತಿದ್ದಾರೆ ಅಂದ್ರೆ ಆಕೆ ನಿಮ್ಮ ಜೊತೆ ಫ್ಲರ್ಟಿಂಗ್ ಮಾಡುತ್ತಾಳೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಹುಡುಗಿಯರಿಗೆ ಕಣ್ಣಿನಲ್ಲೇ ಕೊಲ್ಲೋ ಅಭ್ಯಾಸ ಇದೆ. 

49

ಒಂದು ವೇಳೆ ಹುಡುಗಿಯರು ನಿಮ್ಮ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ ಎಂದರೆ, ಅವರು ಹುಡುಗರನ್ನು ಮುಟ್ಟುತ್ತಾರೆ. ಸಣ್ಣ ಪುಟ್ಟ ಟಚ್ ಗಳನ್ನು ಮಾಡುತ್ತಾರೆ. ಆಕೆಗೆ ಇಷ್ಟ ಇಲ್ಲ ಅಂದ್ರೆ ನಿಮ್ಮನ್ನ ಮುಟ್ಟೋದು ಇಲ್ಲ. 

59

ಹುಡುಗಿಯರು ತಮ್ಮ ನೆಚ್ಚಿನ ಹುಡುಗರೊಂದಿಗೆ ಡಬಲ್ ಮೀನಿಂಗ್ (double meaning) ಮಾತುಕತೆ ಮತ್ತು ಜೋಕ್‌ಗಳನ್ನು ಹಂಚಿಕೊಳ್ಳುತ್ತಾರೆ. ಇದು ತಾವು ಇಷ್ಟಪಟ್ಟ ಹುಡುಗನೊಂದಿಗೆ ಮಾತ್ರ. 
 

69

ಹೆಚ್ಚಿನ ಹುಡುಗಿಯರು ಫ್ಲರ್ಟ್ ಮಾಡುವಾಗ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳಲು ಪ್ರಯತ್ನಿಸುತ್ತಾರೆ.  ನೀವು ಜೊತೆಯಾಗಿದ್ದರೂ ಸಹ ಅವರು ಒಬ್ಬರೇ ಏನೇನೋ ಮಾತನಾಡುತ್ತಿದ್ದರೆ, ಅರ್ಥ ಮಾಡಿಕೊಳ್ಳಬೇಕು ಅವರಿಗೆ ನಿಮ್ಮ ಮೇಲೇ ಏನೋ ಫೀಲಿಂಗ್ ಇದೆ.
 

79

ಹುಡುಗಿಯರು ತಮಗೆ ಇಷ್ಟವಾದ ಹುಡುಗರಿಂದ ಸಹಾಯ ಕೇಳುತ್ತಾರೆ. ನೀವು ನನ್ನನ್ನು ಮನೆಗೆ ಬಿಡಬಹುದೇನೋ? ನನ್ನ ಜೊತೆ ಶಾಪಿಂಗ್ ಗೆ ಬರ್ತೀರಾ? ದೇವಸ್ಥಾನಕ್ಕೆ ಹೋಗಿ ಬರೋಣ. ಇವತ್ತು ರೆಸ್ಟೋರೆಂಟಲ್ಲಿ ಏನಾದ್ರೂ ತಿನ್ನೋಣ ಎಂದು ಕೇಳುತ್ತಾರೆ. 
 

89
Image: Getty Images

ನಿಮ್ಮನ್ನು ನಿಮಗೆ ಗೊತ್ತಿಲ್ಲದೇ ಇಷ್ಟಪಡುವ ಆ ಹುಡುಗಿಯನ್ನು ನೀವು ಇದ್ದಕ್ಕಿದ್ದಂತೆ ನೋಡಿದರೆ, ಅವಳು ಆತಂಕಕ್ಕೊಳಗಾಗಬಹುದು, ಅಂದರೆ ಅವಳು ತನ್ನ ಕೂದಲು ಅಥವಾ ಬಟ್ಟೆಗಳನ್ನು ಸರಿಪಡಿಸಲು ಪ್ರಾರಂಭಿಸಬಹುದು. ಇದು ಆಕೆ ನಿಮ್ಮನ್ನ ಇಷ್ಟ ಪಡ್ತಾಳೆ ಅನ್ನೋದನ್ನು ಸೂಚಿಸುತ್ತೆ. 
 

99

ಒಂದು ಹುಡುಗಿ ನಿಮ್ಮನ್ನ ಇಷ್ಟ ಪಡ್ತಾಳೆ ಅಂತಾದರೆ, ಆ ಹುಡುಗಿ ತಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ನಿಮ್ಮನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ನಿಮಗಿಷ್ಟವಾದ ಕೆಲಸಗಳನ್ನೇ ಮಾಡ್ತಾರೆ ಇವರು. ಬೇಕಾದ್ರೆ ನೀವೇ ಗಮನಿಸಿ ನೋಡಿ. 

Read more Photos on
click me!

Recommended Stories