ಸ್ನೇಹಿತರನ್ನೇ ಮದುವೆ ಆಗ್ತೀರಾ? ಆಗಬಹುದಾದ ಈ ದೊಡ್ಡ ಅನಾಹುತ ತಪ್ಪಿಸಬಹುದು! ಯಾವುದು?

Published : Mar 21, 2025, 04:31 PM ISTUpdated : Mar 21, 2025, 04:38 PM IST

ಇಂದು ಅರೇಂಜ್‌ ಮ್ಯಾರೇಜ್‌, ಲವ್‌ ಮ್ಯಾರೇಜ್‌ ಚಾಲ್ತಿಯಲ್ಲಿದೆ. ಲವ್‌ ಮ್ಯಾರೇಜ್‌ ಆದವರು ಡಿವೋರ್ಸ್‌ ತಗೊಳ್ರಾರೆ. ಅರೇಂಜ್‌ ಮ್ಯಾರೇಜ್‌ ಆದವರು ಕೂಡ ಡಿವೋರ್ಸ್‌ ತಗೊಳ್ತಾರೆ. ಆದರೆ ಬೆಸ್ಟ್‌ಫ್ರೆಂಡ್‌ನ್ನೇ ಯಾಕೆ ಮದುವೆ ಆಗಬೇಕು ಅಂತ ಕಾರಣ ಇಲ್ಲಿದೆ! 

PREV
17
ಸ್ನೇಹಿತರನ್ನೇ ಮದುವೆ ಆಗ್ತೀರಾ? ಆಗಬಹುದಾದ ಈ ದೊಡ್ಡ ಅನಾಹುತ ತಪ್ಪಿಸಬಹುದು! ಯಾವುದು?
ಅರ್ಥ ಮಾಡಿಕೊಳ್ಳಬಹುದು!

ಪರಸ್ಪರ ಒಬ್ಬರನ್ನೊಬ್ಬರು ತುಂಬ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ನಿಮ್ಮ ಹವ್ಯಾಸ, ಇಷ್ಟ-ಕಷ್ಟ, ನಡೆದುಬಂದ ಹಾದಿ ಎಲ್ಲವೂ ಸ್ನೇಹಿರಿಗೆ ತಿಳಿದಿರುತ್ತದೆ. ಇದರಿಂದ ತುಂಬ ಚೆನ್ನಾಗಿ ಸಂವಹನ ನಡೆಯುವುದು. ನಮಗೆ ಇಷ್ಟವಾಗದ ವ್ಯಕ್ತಿ ಜೊತೆ ಹತ್ತು ನಿಮಿಷ ಮಾತಾಡೋದೇ ಕಷ್ಟ. ಹೀಗಾಗಿ ಮದುವೆ ವಿಚಾರದಲ್ಲಿ ತುಂಬ ಹುಷಾರ್‌ಆಗಿರಬೇಕು. 

27
ನಂಬಿಕೆ ಹಾಗೂ ಪ್ರಾಮಾಣಿಕತೆ

ನಂಬಿಕೆ ಹಾಗೂ ಪ್ರಾಮಾಣಿಕತೆಯೇ ಸುಂದರ ಸ್ನೇಹದ ಬುನಾದಿ. ಈಗಾಗಲೇ ನಂಬಿರುವ ವ್ಯಕ್ತಿಯನ್ನು ಮದುವೆಯಾದರೆ ಜೀವನ ಇನ್ನಷ್ಟು ಚೆನ್ನಾಗಿರುತ್ತದೆ. ಅಲ್ಲಿ ಅಭದ್ರತೆ, ಅಪನಂಬಿಕೆ ಯಾವುದೂ ಇರೋದಿಲ್ಲ. ಎಲ್ಲಿ ಭರವಸೆ, ನಂಬಿಕೆ, ಪ್ರಾಮಾಣಿಕತೆ ಇರುತ್ತದೆಯೋ ಅಲ್ಲಿ ಸಂಬಂಧ ಗಟ್ಟಿಯಾಗಿರುತ್ತದೆ. 
 

37
ಆಸಕ್ತಿಗಳು ಒಂದೇ

ಮೌಲ್ಯ, ಫ್ಯಾಷನ್‌ ಆಸಕ್ತಿ, ಹವ್ಯಾಸ ಎಲ್ಲವೂ ಒಂದೇ ಆಗಿರುತ್ತದೆ. ಹೀಗಾಗಿ ಈ ಜೋಡಿ ಜೀವನವನ್ನು ಚೆನ್ನಾಗಿ ಕಳೆಯಬಹುದು. ಗಂಡನಿಗೆ ಟಿವಿ ನೋಡೋದು ಅಂದ್ರೆ ಆಗೋದಿಲ್ಲ, ಹೆಂಡ್ತಿಗೆ ಟಿವಿ ಅಂದ್ರೆ ಇಷ್ಟ ಅಂದರೆ ಕಷ್ಟ ಆಗಬಹುದು. ಒಂದೇ ಆಸಕ್ತಿಗಳು ಇವರಿಬ್ಬರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತವೆ. 

47
ಭಾವನಾತ್ಮಕ ಸಂಬಂಧ

ತಾಳಿ ಕಟ್ಟಿದ ತಕ್ಷಣ ಅಲ್ಲಿ ಭಾವನಾತ್ಮಕ ಸಂಬಂಧ ಹುಟ್ಟಿಕೊಳ್ಳುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ಇಷ್ಟ ಇಲ್ಲದೆ ಅರೇಂಜ್‌ ಮ್ಯಾರೇಜ್‌ ಮಾಡಿಕೊಳ್ಳುವವರೂ ಇದ್ದಾರೆ. ಸ್ನೇಹಿತರಲ್ಲಿ ಈಗಾಗಲೇ ಭಾವನಾತ್ಮಕ ಸಂಬಂಧ ಹುಟ್ಟಿ ಒಂದು ಗಟ್ಟಿ ರಿಲೇಶನ್‌ಶಿಪ್‌ ಹುಟ್ಟಿರುತ್ತದೆ.

57
ನಗು, ಎಂಜಾಯ್‌ಮೆಂಟ್‌

ಪರಸ್ಪರ ಆಸಕ್ತಿ, ಗುಣಗಳೆಲ್ಲವೂ ಗೊತ್ತಿರುತ್ತದೆ. ಹೀಗಾಗಿ ಇವರಿಬ್ಬರು ಜೀವನವನ್ನು ಒಟ್ಟಿಗೆ ಎಂಜಾಯ್‌ ಮಾಡುತ್ತಾರೆ. ಅಷ್ಟೇ ಅಲ್ಲದೆ ಅವರಿಬ್ಬರಿಗೂ ಯಾವ ವಿಷಯ ಹಾಸ್ಯ ಎನಿಸಬಹುದು ಎಂಬುದು ಕೂಡ ಗೊತ್ತಿರುತ್ತದೆ.

67
ಕುಟುಂಬದ ಪರಿಚಯ ಇರುತ್ತದೆ

ಕುಟುಂಬ ಹೇಗಿದೆ? ಕುಟುಂಬದವರು ಹೇಗಿದ್ದಾರೆ? ಈ ಹಿಂದೆ ಏನಾಗಿತ್ತು ಎಂಬುದರ ಬಗ್ಗೆಯೂ ಸ್ನೇಹಿತರ ಮಧ್ಯೆ ಚರ್ಚೆ ಆಗಿರುತ್ತದೆ. ಹೀಗಾಗಿ ಅಲ್ಲಿ ಮುಚ್ಚಿಡೋದು ಏನೂ ಇರೋದಿಲ್ಲ.

77
ಒಟ್ಟಿಗೆ ಬೆಳೆಯಬಹುದು

ಈಗಾಗಲೇ ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿರುತ್ತಾರೆ. ಇಬ್ಬರ ಪ್ಲಸ್‌, ಮೈನಸ್‌ ಕೂಡ ಗೊತ್ತಿರೋದಿಕ್ಕೆ ಒಟ್ಟಿಗೆ ಇಬ್ಬರೂ ಸಹಕಾರ ಕೊಟ್ಟಿಕೊಂಡು ಬೆಳೆಯಬಹುದು. ಇನ್ನು ಇಷ್ಟೆಲ್ಲ ಒಳ್ಳೆಯ ಪ್ರಯೋಜನ ಇರೋದರಿಂದ ದೊಡ್ಡ ಅನಾಹುತ ಅಂದರೆ ಡಿವೋರ್ಸ್‌ ತಪ್ಪಿಸಬಹುದು. 

Read more Photos on
click me!

Recommended Stories