ಇಂದು ಮಾರ್ಚ್ 20 ಅಂತಾರಾಷ್ಟ್ರೀಯ ಸಂತೋಷ ದಿನ (International Day of Happiness 2025)ಪ್ರಪಂಚದೆಲ್ಲೆಡೆ ಈ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. ಅನೇಕರು ನಮ್ಮ ನಡುವೆ ಜನರ ಮಧ್ಯೆಯೇ ಇದ್ದರೂ ಖುಷಿಯಿಂದ ಇರುವುದಿಲ್ಲ, ಏನೋ ಯೋಚಿಸಿಕೊಂಡು ಕೊರಗುತ್ತಲೇ ಇರುತ್ತಾರೆ ಒಂಟಿಯಾಗಿರುತ್ತಾರೆ. ಗುಂಪಿನಲ್ಲಿದ್ದರೂ ಒಂಟಿತನ ಅವರನ್ನು ಕಾಡುತ್ತದೆ. ಹೀಗಿರುವಾಗ ಸಂತೋಷದ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಜನರ ನಡುವೆ ಸಂತೋಷದ ಮಹತ್ವವನ್ನು ಅರ್ಥಮಾಡಿಸುವುದು. ಈ ವರ್ಷದ ಸಂತೋಷ ದಿನದ ಥೀಮ್ ಕೇರಿಂಗ್ ಅಂಡ್ ಶೇರಿಂಗ್ ಆಗಿದೆ. ನಿಮ್ಮ ಜೀವನದಲ್ಲಿ ನೀವು ಸಂತೋಷವಾಗಿರಲು ಬಯಸಿದರೆ, ಅದಕ್ಕಾಗಿ ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ. ಕೆಲವು ಸರಳ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸಹ ಸಂತೋಷವಾಗಿರಬಹುದು. ಅದೇನು ಅಂತ ಈ ಲೇಖನದಲ್ಲಿ ನೋಡೋಣ.
ಮೈಂಡ್ಫುಲ್ ಮೊಮೆಂಟ್ ಅನ್ನು ಆನಂದಿಸಿ (Enjoy mindful moment)
ನಿಮ್ಮ ಜೀವನದ ಸಣ್ಣಪುಟ್ಟ ಸಂತೋಷಗಳನ್ನು ನೀವು ಆನಂದಿಸುವುದನ್ನು ಕಲಿಯಿರಿ. ಯಾವುದೇ ವಿಚಾರಗಳನ್ನು ತುಂಬು ಮನಸ್ಸಿನಿಂದ ಆಸ್ವಾದಿಸಿ ಆನಂದಿಸಿದರೆ, ನಿಮ್ಮ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ನೀವು ಸಂತೋಷವಾಗಿರುತ್ತೀರಿ.
ಪ್ರೀತಿಪಾತ್ರರೊಂದಿಗೆ ಮಾತನಾಡುವುದು ಸಂತೋಷವನ್ನು ಹೆಚ್ಚಿಸುತ್ತದೆ (Talking to your loved)
ಇತ್ತೀಚಿನ ದಿನಗಳಲ್ಲಿ, ಬಿಡುವಿಲ್ಲದ ಜೀವನದಲ್ಲಿ, ಜನರಿಗೆ ತಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡಲು ಸಹ ಸಮಯವಿಲ್ಲ. ದಿನಕ್ಕೆ ಒಮ್ಮೆಯಾದರೂ ನಿಮಗೆ ಇಷ್ಟವಾದ ವ್ಯಕ್ತಿಯೊಂದಿಗೆ ಮಾತನಾಡಿ. ನಂಬಿ, ಕೆಲವೇ ನಿಮಿಷಗಳ ಮಾತು ನಿಮಗೆ ಬಹಳಷ್ಟು ಸಂತೋಷವನ್ನು ನೀಡುತ್ತದೆ.
ದಿನನಿತ್ಯದ ವ್ಯಾಯಾಮದಿಂದ ಸಂತೋಷ (Happiness through daily exercise)
ಕೆಲವೊಮ್ಮೆ ಏನನ್ನೂ ಮಾಡಲು ಮನಸ್ಸಾಗುವುದಿಲ್ಲ ಮತ್ತು ಬೇಸರವಾಗುತ್ತದೆ. ಇದರಿಂದ ಮನಸ್ಸು ದುಃಖಿತವಾಗುತ್ತದೆ ಮತ್ತು ವ್ಯಕ್ತಿ ಒತ್ತಡವನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಪ್ರತಿದಿನ ಕೆಲವು ನಿಮಿಷಗಳು ಅಥವಾ ಗಂಟೆಗಳ ಕಾಲ ವ್ಯಾಯಾಮ ಮಾಡಿ. ಇದು ನಿಮ್ಮ ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸುತ್ತದೆ ಮತ್ತು ಸಂತೋಷವನ್ನು ಅನುಭವಿಸುವಿರಿ.
smile pay
ನಿಮ್ಮ ಹವ್ಯಾಸಕ್ಕೆ ಪ್ರತಿದಿನ ಸಮಯ ನೀಡಿ (Give time to your hobby daily)
ಪ್ರತಿಯೊಬ್ಬರಿಗೂ ಖುಷಿ ನೀಡುವಂತಹ ಹವ್ಯಾಸ ಇರುತ್ತದೆ. ನಿಮ್ಮ ಹವ್ಯಾಸವನ್ನು ನಿರ್ಲಕ್ಷಿಸಬೇಡಿ ಮತ್ತು ಅದನ್ನು ಪ್ರತಿದಿನ ಮಾಡಿ. ಇದರಿಂದ ನಿಮ್ಮ ಮನಸ್ಸು ಸಂತೋಷವಾಗುತ್ತದೆ.
ಕಲಿಕೆಯ ಕೌಶಲ್ಯವನ್ನು ಅಭಿವೃದ್ಧಿಪಡಿಸಿ (Develop learning skills)
ಪ್ರತಿದಿನ ನಿಮ್ಮನ್ನು ಚಾಲೆಂಜ್ ಮಾಡಿಕೊಳ್ಳುವುದು ದೇಹದಲ್ಲಿ ಒಂದು ವಿಭಿನ್ನ ಮಟ್ಟದ ಶಕ್ತಿಯನ್ನು ತುಂಬುತ್ತದೆ. ಹೊಸ ಕೌಶಲ್ಯವನ್ನು ಕಲಿಯುವ ಮೂಲಕವೂ ನೀವು ನಿಮ್ಮನ್ನು ಸಂತೋಷವಾಗಿಟ್ಟುಕೊಳ್ಳಬಹುದು. ಕಲೆ ಮತ್ತು ಕರಕುಶಲ ವಸ್ತುಗಳು, ನೃತ್ಯ ಅಥವಾ ಕುಂಬಾರಿಕೆ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ನೋಡಿ.