ಪರಸ್ಪರ ನಂಬಿಕೆ ಇರುವ ಜೋಡಿಗಳು
ವಿಶ್ವಾಸವು ಯಾವುದೇ ಯಶಸ್ವಿ ಸಂಬಂಧದ (Successfull Relationship) ಅಡಿಪಾಯವಾಗಿದೆ. ಅದು ಇಲ್ಲದಿದ್ದರೆ, ಸಂಬಂಧವು ಬೇಗನೆ ಮುರಿದು ಬೀಳುವ ಸಾಧ್ಯತೆಯಿದೆ. ನೀವು ಯಾರೊಂದಿಗಾದರೂ ಆಳವಾದ ಭಾವನಾತ್ಮಕ ಇಂಟಿಮೆಸಿ ಹೊಂದಿರುವಾಗ, ನೀವು ಒಬ್ಬರನ್ನೊಬ್ಬರು ನಂಬಲು ಆರಂಭಿಸುತ್ತೀರಿ. ಸಂಬಂಧದಲ್ಲಿ ನೀವು ಭಾವನಾತ್ಮಕವಾಗಿ ಸುರಕ್ಷಿತವಾಗಿದ್ದೀರಿ ಎಂಬುದಕ್ಕೆ ನಂಬಿಕೆ ಪುರಾವೆ.
ಟೀಕೆಗಳನ್ನು ಒಪ್ಪುವ ಜೋಡಿಗಳು
ಕೆಲವೊಮ್ಮೆ, ವಾದಗಳು ಸರಿಯಾಗಿರುತ್ತವೆ. ಜೀವನದ ಪ್ರತಿಯೊಂದು ವಿಷಯದಲ್ಲೂ ಇಬ್ಬರ ನಡುವೆ ವ್ಯತ್ಯಾಸಗಳು ಇರುವುದು ಸಾಮಾನ್ಯ.ನಿಮ್ಮಿಬ್ಬರ ಭಾವನೆ, ಯೋಚನೆ ಒಂದೇ ರೀತಿಯಾಗಿರುವ ಅವಶ್ಯಕತೆಯೇ ಇಲ್ಲ. ಸಂಬಂಧದಲ್ಲಿ, ಟೀಕೆಯ ಭಯವಿಲ್ಲದೆ ಒಬ್ಬರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಟೀಕೆಗಳನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವ ಜೋಡಿಗಳು ಮೇಡ್ ಫಾರ್ ಈಚ್ ಅದರ್ (made for each other) ಕಪಲ್ಸ್.
ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು
ಸಂಬಂಧದ ಆರಂಭದಲ್ಲಿ, ನೀವು ಹೇಗೆ ಕಾಣುತ್ತೀರಿ ಎಂಬುದರ ಬಗ್ಗೆ ನೀವು ಕಾಳಜಿ ವಹಿಸುತ್ತೀರಿ. ಆದರೆ, ಸಮಯ ಕಳೆದಂತೆ ನೀವು ಅದರ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸುತ್ತೀರಿ. ಸಂಬಂಧ ಅಂದರೆ ನಾವು ಮೇಲ್ನೋಟಕ್ಕೆ ಹೇಗೆ ಕಾಣಿಸ್ತೀವಿ ಅನ್ನೋದಲ್ಲ. ಪರಸ್ಪರ ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಸಾಧ್ಯವಿರುವ ಪ್ರತಿಯೊಂದು ಪರಿಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಬೆಂಬಲ ನೀಡುವುದು ಮುಖ್ಯ.
ಸಂಬಂಧದಲ್ಲಿನ ಸಣ್ಣ ವಿಷಯಗಳಿಗೆ ಗಮನ ಕೊಡೋದು.
ಸಂಬಂಧದಲ್ಲಿ ಸಣ್ಣ ವಿಷಯಗಳು ಮುಖ್ಯ. ನೀವು ಭಾವನಾತ್ಮಕವಾಗಿ (emotional intimacy) ತುಂಬಾ ಕನೆಕ್ಟ್ ಆಗಿದ್ದರೆ, ನೀವು ಮತ್ತು ನಿಮ್ಮ ಸಂಗಾತಿ ದೈನಂದಿನ ಸಣ್ಣ ವಿಷಯಗಳಿಗೆ ಗಮನ ಹರಿಸುತ್ತೀರಿ. ಅವರ ಮುಖದಲ್ಲಿ ನಗು ತರುವ ವಿಷ್ಯ ಯಾವುದು? ಮತ್ತು ಅವರನ್ನು ಕಿರಿಕಿರಿಗೊಳಿಸುವ ವಿಷ್ಯ ಯಾವುದು ಅನ್ನೋದು ಅವರಿಗೆ ಸರಿಯಾಗಿ ತಿಳಿದಿರುತ್ತೆ.
ಪರಸ್ಪರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು.
ಇದು ಪುರುಷ ಅಥವಾ ಮಹಿಳೆಯೊಂದಿಗಿನ ಇಮೋಷನಲ್ ಇಂಟಿಮೆಸಿಯ ಬಲವಾದ ಸಂಕೇತ. ಏನೋ ತಪ್ಪಾಗಿದೆ ಅಥವಾ ಮೂಡ್ ಆಫ್ ಆಗಿದೆ ಎಂದು ಅರ್ಥಮಾಡಿಕೊಳ್ಳಲು ಅವರ ಧ್ವನಿ ಅಥವಾ ಅವರ ಮುಖಭಾವಗಳು ಸಾಕು. ನೀವು ಯಾರೊಂದಿಗಾದರೂ ಆಳವಾದ ಭಾವನಾತ್ಮಕ ಸಂಪರ್ಕ ಹೊಂದಿರುವಾಗ, ಪ್ರತಿಯೊಂದು ವಿಷಯಗಳನ್ನು ವಿವರಿಸುವ ಅಗತ್ಯವಿರೋದಿಲ್ಲ.
ವಿಷಯಗಳನ್ನು ಪರಸ್ಪರ ಹಂಚಿಕೊಳ್ಳೋದು
ನಿಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದು ಸಂಭವಿಸಿದಾಗ, ಅದನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ನೀವು ಕಾಯುತ್ತೀರಿ. ಅದು ದೊಡ್ಡ ವಿಷಯ ಮತ್ತು ಸಣ್ಣ ವಿಷಯ ಏನೇ ಆಗಿರಲಿ ಅದೇ ಉತ್ಸಾಹದಿಂದ ಹಂಚಿಕೊಳ್ಳುತ್ತೀರಿ. ನಿಮ್ಮ ಸಂಗಾತಿಗೆ ಏನನ್ನೂ ಹೇಳಲು ನಿಮಗೆ ಸಾಧ್ಯವಾಗದಿದ್ದಾಗ, ನೀವು ಅತೃಪ್ತರಾಗಿ ಉಳಿಯುತ್ತೀರಿ. ಇದು ರಿಯಲ್ ಬಾಂಡಿಂಗ್ (Bonding).
ಪರಸ್ಪರರ ಬಗ್ಗೆ ಕಾಳಜಿ (Caring) ವಹಿಸೋದು
ಸಂಬಂಧದಲ್ಲಿ ಭಾವನಾತ್ಮಕ ಅನ್ಯೋನ್ಯತೆಯನ್ನು ಹೊಂದಿರುವುದು ಎಂದರೆ ನೀವು ಪರಸ್ಪರರ ಬಗ್ಗೆ ತುಂಬಾ ಆಳವಾಗಿ ಕಾಳಜಿ (caring) ವಹಿಸೋದು ಎಂದರ್ಥ. ನಿಮ್ಮ ಪ್ರೀತಿ ಬೇಷರತ್ತಾಗಿದೆ ಮತ್ತು ನಿಮ್ಮ ಸಂಗಾತಿಯಿಂದ ಅತ್ಯುತ್ತಮವಾದದ್ದನ್ನು ನೀವು ಬಯಸುತ್ತೀರಿ. ಅವರು ನಿಮಗಾಗಿ ಏನಾದರು ಮಾಡಿದ್ರೆ ನೀವು ಸಂತೋಷವಾಗಿರುತ್ತೀರಿ, ಅವರು ಸಂತೋಷವಾಗಿದ್ದಾಗ ನೀವು ಮತ್ತಷ್ಟು ಸಂತೋಷವಾಗಿರುತ್ತೀರಿ, ಮತ್ತು ನಿಮ್ಮ ಸಂಗಾತಿ ಯಾವಾಗಲೂ ಸಂತೋಷವಾಗಿಯೇ ಇರಲಿ ಎನ್ನುವ ಕಾಳಜಿ ಎದೆಯಲ್ಲ, ಅದುವೇ ನಿಜವಾದ ಪ್ರೀತಿ.
ಪರಸ್ಪರರಿಗಾಗಿ ಸಮಯ ಮೀಸಲಿಡೋದು
ನಿಮ್ಮ ಬ್ಯುಸಿ ಜೀವನದ (busy life) ಹೊರತಾಗಿಯೂ ನಿಮ್ಮ ಸಂಗಾತಿ ಮತ್ತು ಸಂಬಂಧಕ್ಕೆ ನೀವು ಆದ್ಯತೆ ನೀಡಿದಾಗ ಸಂಬಂಧದಲ್ಲಿ ಭಾವನಾತ್ಮಕ ಸಂಪರ್ಕ (Emotional Connection) ಉಂಟಾಗುತ್ತದೆ. ನೀವೆಷ್ಟೇ ಬ್ಯುಸಿ ಇದ್ದರೂ ಸಂಗಾತಿಗಾಗಿ ಸಮಯ ಮೀಸಲಿಟ್ಟರೆ ಅದರಿಂದ ನಿಮ್ಮ ಸಂಬಂಧ ಗಟ್ಟಿಯಾಗುತ್ತಲೇ ಇರುತ್ತೆ. ಅದನ್ನ ಮರೆಯಬೇಡಿ.