ನಾವು ಈಗಲೂ ಯುವ ಜೋಡಿಯಂತೆ ಡೈವ್‌ ಹೋಗುತ್ತೇವೆ: ಮುಖೇಶ್ ಅಂಬಾನಿ ಪ್ರೀತಿ ಬಗ್ಗೆ ನೀತಾ ಮಾತು

First Published | Nov 24, 2023, 6:20 PM IST

ಸಿಎನ್‌ಬಿಸಿ ಇಂಟರ್‌ನ್ಯಾಶನಲ್‌ಗೆ ನೀಡಿದ ಸಂದರ್ಶನದಲ್ಲಿ, ನೀತಾ ಅಂಬಾನಿ ತಮ್ಮ ಪತಿ ಮುಖೇಶ್ ಅವರೊಂದಿಗಿನ ಸಂಬಂಧ ಸೇರಿದಂತೆ ತಮ್ಮ ಕುಟುಂಬ ಜೀವನ, ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಪ್ರೀತಿ ಬಗ್ಗೆ ಬಿಚ್ಚಿಟ್ಟಿದ್ದಾರೆ.

ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಸಮಾನ ಎಂದು ಕಲಿಯಬೇಕಾದರೆ, ಅದನ್ನು ಅವರು ಅವರವರ ಮನೆಯಲ್ಲಿ ನೋಡಬೇಕು ಎಂದು  ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಹೇಳುತ್ತಾರೆ. ರಿಲಯನ್ಸ್ ಸಾಮ್ರಾಜ್ಯದ ಉತ್ತರಾಧಿಕಾರ ಯೋಜನೆಯಲ್ಲಿ ಸಮಾನ ಪಾಲು ಪಡೆದ ತಮ್ಮ ಮೂರು ಮಕ್ಕಳಲ್ಲಿ ಅವರು ಹೇಗೆ ಭಿನ್ನವಾಗಿರಲಿಲ್ಲ ಎಂಬುದರ ಬಗ್ಗೆ ಮಾತನಾಡುತ್ತಾ ಹೇಳಿದ್ದಾರೆ. 

ಮುಖೇಶ್ ಮತ್ತು ನೀತಾ ಅವರಿಗೆ ಮೂವರು ಮಕ್ಕಳಿದ್ದಾರೆ. ಅವಳಿಗಳಾದ ಇಶಾ ಮತ್ತು ಆಕಾಶ್ ಅವರಿಗೆ 32 ವರ್ಷ ಮತ್ತು ಅನಂತ್ (28) ಈ ಮೂವರನ್ನು ಇತ್ತೀಚೆಗೆ ಭಾರತದ ಅತ್ಯಮೂಲ್ಯ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಮೂವರಿಗೂ  ಮೂರು ಬಹುತೇಕ ಸಮಾನತೆ ನೀಡಲಾಗಿದೆ.

Tap to resize

 ಪಿರಾಮಲ್ ಗ್ರೂಪ್‌ನ ಅಜಯ್ ಮತ್ತು ಸ್ವಾತಿ ಪಿರಾಮಲ್ ಅವರ ಪುತ್ರ ಆನಂದ್ ಪಿರಮಾಲ್ ಅವರನ್ನು ವಿವಾಹವಾದ ಇಶಾ ಅವರು ಚಿಲ್ಲರೆ ವ್ಯಾಪಾರಕ್ಕಾಗಿ, ಆಕಾಶ್ ಅವರು ಡಿಜಿಟಲ್/ಟೆಲಿಕಾಂ ವ್ಯವಹಾರ ಮತ್ತು ಕೊನೆ ಮಗ ಅನಂತ್ ನೂತನ ವ್ಯಾಪಾರದ ವಿಭಾಗಗಳಿಗೆ ನೇಮಕವಾಗಿದ್ದಾರೆ.

ನಾವು ಒಬ್ಬರಿಗೊಬ್ಬರು ತುಂಬಾ ಕಲಿತಿದ್ದೇವೆ. ನಾನು ಹೇಳುವಂತೆ ಮುಕೇಶ್ ಜೀವನದಲ್ಲಿ ಫ್ಲಡ್‌ಲೈಟ್‌ ನಂತೆ (ತುಂಬಾ ಎತ್ತರವಾಗಿರುತ್ತದೆ. ವಿಸ್ತಾರದ ಬೆಳಕು ನೀಡುತ್ತದೆ). ಅವರು  ತನ್ನ ಸಮಯಕ್ಕಿಂತ ಬಹಳ ದೂರ ಆಲೋಚನೆ ಮಾಡುತ್ತಾರೆ. ನಾನು ನಿಖರವಾದ ವಿವರ ನೀಡಿದರೆ ಅವರು ಅದನ್ನು ಸ್ಪಾಟ್‌ಲೈಟ್ಸ್ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.

ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯವಾದ ನಿರ್ಧಾರ ಎಂದು ನೀತಾ ಅಂಬಾನಿ ಯಾವಾಗಲೂ ತನ್ನ ಮಕ್ಕಳಿಗೆ ಹೇಳುತ್ತಿರುತ್ತಾರಂತೆ. ನನ್ನ ಉತ್ತಮ ಸ್ನೇಹಿತ ಮತ್ತು ನನ್ನ ಜೀವನ ಸಂಗಾತಿಯಾದ ಮುಖೇಶ್ ಅವರನ್ನು ಹೊಂದಲು ನಾನು ತುಂಬಾ ಅದೃಷ್ಟವಂತೆಯಾಗಿದ್ದೆ  ನಿಮಗೆ ಗೊತ್ತಾ, ನಾವು ಜೀವನದ ಪ್ರಯಾಣವನ್ನು ಆನಂದಿಸಿದ್ದೇವೆ, ನಮ್ಮ ಮಕ್ಕಳು ಮತ್ತು ನಮ್ಮ ಮೊಮ್ಮಕ್ಕಳನ್ನು ಬೆಳೆಸುತ್ತಿದ್ದೇವೆ"  ಎಂದು ನೀತಾ ಹೇಳಿದರು.

ದಂಪತಿಗಳು ಈಗ ಕೂಡ ಯುವ ಜೋಡಿಯಂತೆ ಇರುವುದು ಇಷ್ಟಪಡುತ್ತಾರಂತೆ.  ಅದಕ್ಕಾಗಿ ಈಗ ಕೂಡ ನನ್ನನ್ನು ಡ್ರೈವ್‌ಗೆ ಕರೆದುಕೊಂಡು ಹೋಗುತ್ತಾನೆ, ನಾವಿಬ್ಬರೂ ಹಿಂದಿ ಸಂಗೀತವನ್ನು ಕೇಳಲು ಇಷ್ಟಪಡುತ್ತೇವೆ, ಬೀದಿ ಆಹಾರವನ್ನು ತಿನ್ನುತ್ತೇವೆ, ನಾನು ರಸ್ತೆಯಲ್ಲಿ ನನ್ನ 'ಭೇಲ್' ಅನ್ನು ಪ್ರೀತಿಸುತ್ತೇನೆ ಮತ್ತು ಅವನು ತನ್ನ 'ದೋಸಾ ಇಡ್ಲಿ'ಯನ್ನು ಪ್ರೀತಿಸುತ್ತಾನೆ. ನಾವು ಇಷ್ಟಪಡುವದನ್ನು ಮಾಡಲು ಯಾವಾಗಲೂ ಇಚ್ಚಿಸುತ್ತೇವೆ. ಹಾಗಾಗಿ ನಮ್ಮ ಕುಟುಂಬವನ್ನು ಪ್ರೀತಿಸುವ, ನಮ್ಮ ಹಿರಿಯರನ್ನು ಗೌರವಿಸುವ, ಪ್ರಾಮಾಣಿಕವಾಗಿ, ವಿನಮ್ರತೆಯಿಂದ ನಾವು ಪ್ರತಿದಿನ ಬದುಕುವ ಮೌಲ್ಯಗಳಾಗಿವೆ, ನಾನು ಹೆಚ್ಚು ಬದಲಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ನೀತಾ ಅವರು ಹೇಳಿದ್ದಾರೆ

ಮಕ್ಕಳ ಬಗ್ಗೆ ಮಾತನಾಡಿದ ಅವರು ಅವಳಿ ಮಕ್ಕಳ ತಾಯಿಯಾಗಿರುವ ಮಗಳು ಇಶಾ,  ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ಅನ್ನು ಪ್ರಾರಂಭಿಸುವುಕ್ಕೆ ಕೈಜೋಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಇದು ಮೊದಲ ಅನುಭವ. ಮುಂಬೈನಲ್ಲಿರುವ ಬಹು-ಶಿಸ್ತಿನ ಸಾಂಸ್ಕೃತಿಕ ಕಲೆಯ ಸ್ಥಳವಾಗಿದೆ. ಇಶಾ ಈಗ ನಮ್ಮ ಚಿಲ್ಲರೆ ವ್ಯಾಪಾರವನ್ನು  ಮುನ್ನಡೆಸುತ್ತಿದ್ದಾಳೆ" ಎಂದು ಅವರು ಹೇಳಿದರು. 
 

ಆದರೆ ಹುಡುಗಿಯರು ತಾವು ಸಮಾನರು ಎಂದು ಕಲಿಯಬೇಕು.  ನಮ್ಮ ಮನೆಯಲ್ಲಿಯೇ  ಅವರು ಹುಡುಗರಿಗಿಂತ ಕಡಿಮೆಯಿಲ್ಲ ಎಂದು ತಿಳಿದಿರುವ ಮಾರ್ಗದರ್ಶಕರನ್ನು ಹೊಂದಿದ್ದಾರೆ. ನಾನು ಯಾವತ್ತೂ ಇಶಾ, ಆಕಾಶ್ ಮತ್ತು ಅನಂತ್ ಅಂತ ಭೇದ ಮಾಡಿಲ್ಲ. ನನ್ನ ಹುಡುಗರು ಏನು ಮಾಡಬಹುದೋ ಅದನ್ನು ನನ್ನ ಮಗಳೂ ಮಾಡಬಲ್ಲಳು. ಮತ್ತು ಇದು ರಿಲಯನ್ಸ್‌ನ ಉತ್ತರಾಧಿಕಾರದಲ್ಲಿ ಒಬ್ಬಳು. ಇಶಾ ಪರಿಮಳ್‌ರನ್ನು ಮದುವೆಯಾಗಿದ್ದರೂ, ವ್ಯವಹಾರದಲ್ಲಿ ತನ್ನ ಸಹೋದರರಂತೆ ಸಮಾನ ಪಾಲನ್ನು ಪಡೆಯುತ್ತಿದ್ದಾರೆ. 

ಆಕಾಶ್, ಇಶಾ ಮತ್ತು ಅನಂತ್ ಮತ್ತು ಇಡೀ ಯುವ ಪೀಳಿಗೆಯು ರಿಲಯನ್ಸ್ ಮತ್ತು ಭಾರತಕ್ಕೆ ಮುಂದಿನ ನಾಯಕತ್ವವನ್ನು ಈ ಮೂಲಕ ಹೊಂದಲಿದೆ. ಮೂವರಲ್ಲಿಯೂ ನಾನು ಬೇರೆ ಬೇರೆ ಗುಣಗಳನ್ನು ಕಾಣುತ್ತೇನೆ. ನನ್ನ ಕಿರಿಯಮಗ  ಅನಂತ್‌ನಲ್ಲಿ, ಪ್ರಪಂಚವನ್ನು ಉತ್ತಮ ಸ್ಥಳವನ್ನಾಗಿ ಮಾಡುವಲ್ಲಿ ಸಂರಕ್ಷಣೆಯಲ್ಲಿ ನಂಬಿಕೆಯಿರುವ ಸಹಾನುಭೂತಿಯ ಯುವಕನನ್ನು ನಾನು ನೋಡುತ್ತೇನೆ ಎಂದು ಅವರು ಹೇಳಿದರು. 
 

ಆಕಾಶ್ ಜಿಯೋ ಮೂಲಕ ಡಿಜಿಟಲ್ ಕ್ರಾಂತಿಯನ್ನು ಮುನ್ನಡೆಸುತ್ತಿದ್ದಾರೆ. ಇಶಾ ರಿಲಯನ್ಸ್ ಫೌಂಡೇಶನ್‌ನಲ್ಲಿ ಸಕ್ರಿಯ ಆಸಕ್ತಿಯನ್ನು ತೆಗೆದುಕೊಳ್ಳುವುದರ ಜೊತೆಗೆ ಚಿಲ್ಲರೆ ವ್ಯಾಪಾರವನ್ನು ಮುನ್ನಡೆಸುತ್ತಿದ್ದಾರೆ. ಈ ಮೂವರೂ ರಿಲಯನ್ಸ್‌ನಲ್ಲಿ ಕೆಲಸ ಮಾಡಲು ತುಂಬಾ ಬದ್ಧರಾಗಿದ್ದಾರೆ. ಅವರು ತಮ್ಮದೇ ಆದ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಹೇಳಿದರು. 

ಅವರು ತಮ್ಮ ಮಕ್ಕಳನ್ನು ತಮ್ಮ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಲು ಮತ್ತು ಅವರನ್ನು ಬಲಪಡಿಸುವ ಬಗ್ಗೆ ಮಾತನಾಡಿದ್ದಾರೆ. ಯಾರೂ ಪರಿಪೂರ್ಣರಾಗಿ ಹುಟ್ಟುವುದಿಲ್ಲ ಅಥವಾ ಯಾರೂ ಪರಿಪೂರ್ಣರಾಗಲು ಸಾಧ್ಯವಿಲ್ಲ.  ತಪ್ಪುಗಳನ್ನು ಮಾಡುವುದು ಸರಿ. ನಿಮ್ಮ ಯಶಸ್ಸಿನಿಂದ ನೀವು ಕಲಿಯುವುದಕ್ಕಿಂತ ನಿಮ್ಮ ತಪ್ಪುಗಳಿಂದ ನೀವು ಹೆಚ್ಚಿನದನ್ನು ಕಲಿಯುತ್ತೀರಿ. ವಿನಮ್ರರಾಗಿರಿ, ಸಹಾನುಭೂತಿಯಿಂದಿರಿ, ಜನರನ್ನು ಗೌರವದಿಂದ ನೋಡಿಕೊಳ್ಳಿ.  ರಿಲಯನ್ಸ್‌ನಲ್ಲಿ ಬೆಳೆಯುತ್ತಿರುವ ಹೊಸ ಯುವ ಪೀಳಿಗೆ ಬಗ್ಗೆ ನಾನು ತುಂಬಾ ಸಂತೋಷಪಡುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿದರು. 

ಭರತನಾಟ್ಯ ನರ್ತಕಿಯಾಗಿರುವ ನೀತಾ ಅವರು ಕ್ರಿಕೆಟ್ ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದಾಗ ಮತ್ತು ಸಿಡ್ನಿ ಒಪೇರಾ ಹೌಸ್ ಅನ್ನು ನೋಡಿದಾಗ NMACC ಸ್ಥಾಪಿಸಲು ಸ್ಫೂರ್ತಿ ಬಂದಿತು ಎಂದು ಹೇಳಿದ್ದಾರೆ. "ಆ ಸಮಯದಲ್ಲಿ, ನಾನು ಯೋಚಿಸಿದೆ, ಭಾರತವು ತನ್ನದೇ ಆದಂತಹದನ್ನು ಏಕೆ ಹೊಂದಬಾರದು? ಆದ್ದರಿಂದ ಆಸ್ಟ್ರೇಲಿಯಾದಲ್ಲಿ ಆ ಸಮಯದಲ್ಲಿ ಈ ಕಲ್ಪನೆಯು ನಿಜವಾಗಿಯೂ ಹುಟ್ಟಿಕೊಂಡಿತು. ಮತ್ತು ಇದನ್ನು ಜೀವಂತಗೊಳಿಸಲು ನಾವು ಒಂದು ದಶಕ ತೆಗೆದುಕೊಂಡೆವು ಎಂದು ಹೇಳಿದರು.

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸದಸ್ಯರಾಗಿರುವ ನೀತಾ, ಭಾರತವು ಒಲಿಂಪಿಕ್ಸ್ ಆತಿಥ್ಯಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ.  ನಾವು ಭಾರತದಲ್ಲಿ ಒಲಿಂಪಿಕ್ಸ್ ನಡೆಸಲು ಇಷ್ಟಪಡುವಂತೆಯೇ, ಒಲಿಂಪಿಕ್ಸ್ ಸಹ ಭಾರತದ 1.4 ಶತಕೋಟಿ ಜನರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಎಂದು ಹೇಳಿದ್ದಾರೆ. ನೀತಾ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಲೋಕೋಪಕಾರಿ ಅಂಗವಾದ ರಿಲಯನ್ಸ್ ಫೌಂಡೇಶನ್‌ನ ಮುಖ್ಯಸ್ಥರಾಗಿದ್ದಾರೆ.

Latest Videos

click me!