ಉತ್ತಮ ನೆರೆ'ಹೊರೆ' ಆಗೋದು ಸಾಧ್ಯವೇ? ಇಲ್ಲಿವೆ ಈಸಿ ಟಿಪ್ಸ್

Published : Mar 27, 2023, 05:34 PM IST

ನಮ್ಮ ಸುತ್ತಮುತ್ತಲಿರುವ ಮನೆಗಳು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುವ ಜನರಿಂದ ತುಂಬಿರುತ್ತವೆ. ಕೆಲವರು ತುಂಬಾ ಸೋಶಿಯಲ್ ಆಗಿದ್ದು, ಇನ್ನು ಕೆಲವರು ಯಾರ ಜೊತೆಗೂ ಮಾತನಾಡದವರು ಆಗಿರುತ್ತಾರೆ. ಅದೇನೇ ಇದ್ದರೂ, ಉತ್ತಮ ನೆರೆಹೊರೆಯವರಾಗಲು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಹಲವಾರು ನಿಯಮಗಳು ಇಲ್ಲಿವೆ. ಇವುಗಳನ್ನು ಪಾಲಿಸುವ ಮೂಲಕ ನೀವು ಉತ್ತಮ ನೆರೆಹೊರೆಯವರಾಗಿ ಉಳಿಯಬಹುದು. 

PREV
110
ಉತ್ತಮ ನೆರೆ'ಹೊರೆ' ಆಗೋದು ಸಾಧ್ಯವೇ? ಇಲ್ಲಿವೆ ಈಸಿ ಟಿಪ್ಸ್

ನಿಮ್ಮ ಕಾಂಟಾಕ್ಟ್ ವಿವರ ಹಂಚಿಕೊಳ್ಳಿ
ನೀವು ಹೊಸ ನೆರೆಹೊರೆಯವರನ್ನು ಸ್ವಾಗತಿಸುತ್ತಿದ್ದರೆ, ನಿಮ್ಮ ಇಮೇಲ್ ಅಥವಾ ಫೋನ್ ನಂಬರ್ ಹಂಚಿಕೊಳ್ಳುವುದನ್ನು (share your contact details) ಒಳ್ಳೆಯದು. ಅವರಿಗೆ ಏನಾದರೂ ಸಹಾಯ ಬೇಕಿದ್ರೆ ಸಂಪರ್ಕಿಸಲು ಹೇಳಿ. ಇದರಿಂದ ಸಂಬಂಧ ಉತ್ತಮವಾಗಿರುತ್ತೆ. ಅದಕ್ಕೂ ಮುನ್ನ ಅವರ ಬಗ್ಗೆ ತಿಳಿದುಕೊಳ್ಳೋದು ಮುಖ್ಯ.

210

ಊಟಕ್ಕೆ ಆಹ್ವಾನಿಸಿ
ನಿಮ್ಮ ಮನೆಯಲ್ಲಿ ಏನಾದರೂ ಪಾರ್ಟಿ ಏರ್ಪಡಿಸಿ. ನಿಮ್ಮ ನೆರೆಹೊರೆಯವರನ್ನು ಕಾಫಿ ಅಥವಾ ಊಟಕ್ಕೆ ಆಹ್ವಾನಿಸಿ. ಇದು ಅವರನ್ನು ತಿಳಿದುಕೊಳ್ಳಲು ಇದು ಉತ್ತಮ ಮಾರ್ಗವಾಗಿದೆ. ಟ್ರೈ ಮಾಡಿ ನೋಡಿ. 

310

ಅವರ ವಿಶೇಷ ದಿನಗಳನ್ನು ಸೆಲೆಬ್ರೇಟ್ ಮಾಡಿ (celebrate their special day)
ನಿಮ್ಮ ನೆರೆಹೊರೆಯವರ ವಿಶೇಷ ದಿನಗಳನ್ನು ಅಂದರೆ ಜನ್ಮದಿನಗಳು ಮತ್ತು ವಾರ್ಷಿಕೋತ್ಸವಗಳಂತಹ ದಿನಗಳನ್ನು ನೆನಪಿಡಿ. ಅವರಿಗೆ ವಿಶ್ ಮಾಡಿ, ಜೊತೆಗೆ ಆ ದಿನ ಅವರು ಹೆಚ್ಚು ಖುಷಿಯಾಗಿರುವಂತೆ ನೋಡಿಕೊಳ್ಳೋದು ಮುಖ್ಯ. 

410

ಫ್ರೆಂಡ್ಲಿ ಆಗಿರಿ (be friendly)
ನಿಮ್ಮ ನೆರೆಹೊರೆಯವರನ್ನು ನೀವು ಹೊರಗೆ ನೋಡಿದಾಗ ಐ ಕಾಂಟಾಕ್ಟ್ ಮಾಡಿ ಮತ್ತು ಅವರಿಗೆ ಕೈ ಬೀಸಿ. ಅವರು ಬೇಗನೆ ನಿಮ್ಮ ಜೊತೆ ಮಾತನಾಡಲು ಬಯಸುವಂತೆ ಕಂಡು ಬಂದರೆ, ಸಾಂದರ್ಭಿಕ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳಿ. ಇದರಿಂದ ಅವರಿಗೂ ಮಾತನಾಡಲು ಸುಲಭವಾಗುತ್ತೆ.

510

ಹೊರಗೆ ಸಮಯ ಕಳೆಯಿರಿ
ತೋಟದಲ್ಲಿ ಕೆಲಸ ಮಾಡುವ ಮೂಲಕ, ಮನೆ ಎದುರು ಕುಳಿತುಕೊಳ್ಳುವ ಮೂಲಕ ಅಥವಾ ಸಾಮಾನ್ಯ ಪ್ರದೇಶಗಳಲ್ಲಿ ಸುತ್ತಾಡುವ ಮೂಲಕ, ನೀವು ನೆರೆಹೊರೆಯವರ ಜೊತೆ ಮಾತನಾಡಲು ಅವಕಾಶ ಪಡೆದುಕೊಳ್ಳಬಹುದು. 

610

ನಿಮ್ಮನ್ನು ಪರಿಚಯಿಸಿಕೊಳ್ಳಿ 
ಇದು ವಿಚಿತ್ರವೆನಿಸಿದರೂ ಸಹ, ನಿಮ್ಮನ್ನು ಪರಿಚಯಿಸಿಕೊಳ್ಳೋದು (introduce yourself) ಉತ್ತಮ. ನೀವು ಈಗಷ್ಟೇ ಬೇರೆ ಸ್ಥಳಕ್ಕೆ ಶಿಫ್ಟ್ ಆಗಿದ್ರೆ, ಅಥವಾ ಯಾರಾದರೂ ನೆರೆಹೊರೆಯಲ್ಲಿ ಹೊಸಬರು ಬಂದಿದ್ರೆ ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳುವುದು ಉತ್ತಮ ಮಾರ್ಗ. ಹೀಗೆ ಮಾಡಿದ್ರೆ ಇಬ್ಬರಿಗೂ ಮಾತನಾಡುವ ಭರವಸೆ ಸಿಗುತ್ತೆ.

710

ಶಬ್ದವನ್ನು ಕಡಿಮೆ ಮಾಡಿ
ನೀವು ಶಾಂತವಾಗಿರಬೇಕಾಗಿಲ್ಲ, ಅದನ್ನು ಯಾವ ನೆರೆಹೊರೆಯವರು ನಿರೀಕ್ಷೆ ಕೂಡ ಮಾಡಲ್ಲ, ಆದರೆ ನೀವು ಎಷ್ಟು ಶಬ್ದ ಮಾಡುತ್ತೀರಿ ಎಂಬುದರ ಬಗ್ಗೆ ನೀವು ಇನ್ನೂ ಜಾಗರೂಕರಾಗಿರಬೇಕು. ಸ್ವಲ್ಪ ಮೋಜು ಮಾಡುವುದು ಒಳ್ಳೆಯದು, ಆದರೆ ವಾಲ್ಯೂಮ್ ಅನ್ನು ಕಡಿಮೆ (low valume)  ಮಾಡಿ, ವಿಶೇಷವಾಗಿ ಇತರರು ಮಲಗಿರುವ ಸಮಯದಲ್ಲಿ ಶಾಂತವಾಗಿರಿ.
 

810

ಪಡೆದ ಐಟಂಗಳನ್ನು ಹಿಂದಿರುಗಿಸಿ
ನೀವು ನೆರೆಹೊರೆಯವರಿಂದ ಏನನ್ನಾದರೂ ಎರವಲು ಪಡೆದರೆ ಜಾಗರೂಕರಾಗಿರಿ, ಮತ್ತು ಬಳಸಿದ ತಕ್ಷಣ ಅದನ್ನು ಹಿಂದಿರುಗಿಸಲು (return the item) ಖಚಿತಪಡಿಸಿಕೊಳ್ಳಿ. ನೀವು ಐಟಂ ಅನ್ನು ಮುರಿದರೆ, ಅದನ್ನು ಸರಿಪಡಿಸಲು ಅಥವಾ ಬದಲಿಸಿ ನಂತರ ಹಿಂತಿರುಗಿಸಿ..

910

ವಿವಾದದ ಸಂದರ್ಭದಲ್ಲಿ ನೆರವು
ನಿಮ್ಮ ನೆರಹೊರೆಯವರ ಮನೆಯಲ್ಲಿ ಹೆಚ್ಚಿನ ರೀತಿಯಲ್ಲಿ ಸಮಸ್ಯೆ, ಜಗಳ, ವಿವಾದಗಳು ಇದ್ದರೆ, ಅದನ್ನು ಪರಿಹರಿಸಲು ಪ್ರಯತ್ನಿಸಿ. ಸಹಾಯ ಮಾಡಲು ಸಾಧ್ಯವಾಗದಿದ್ದರೆ, ನೀವು ಮನೆ ಮಾಲೀಕರ ಸಂಘ, ಪೊಲೀಸರ ಬಳಿ ದೂರು ನೀಡುವುದು ಉತ್ತಮ..

1010

ಜನರನ್ನು ಮತ್ತು ಅವರ ಹೆಸರನ್ನು ನೆನಪಿಡಿ
ನೆರೆಹೊರೆಯ ವಿಷಯಗಳಿಗಾಗಿ ನಿಮ್ಮ ಫೋನ್ ನಲ್ಲಿ ಟಿಪ್ಪಣಿಯನ್ನು (remember their name) ಇರಿಸಿಕೊಳ್ಳಿ. ಈ ರೀತಿಯಾಗಿ, ನೀವು ಯಾರನ್ನಾದರೂ ಭೇಟಿಯಾದಾಗ, ನೀವು ಅವರ ಹೆಸರುಗಳನ್ನು ತ್ವರಿತವಾಗಿ ಹೇಳಬಹುದು. ನೆರೆಹೊರೆಯವರ ಹೆಸರು ತಿಳಿದುಕೊಂಡಿದ್ದರೆ ಅವರಿಗೂ ಖುಷಿಯಾಗುತ್ತೆ.

Read more Photos on
click me!

Recommended Stories