ಸಹನಟನೊಂದಿಗೆ ಪ್ರೇಮಕ್ಕೆ ಮನೆಯವರ ಗ್ರೀನ್ ಸಿಗ್ನಲ್: ಎಂಗೇಜ್ ಆದ ಬಿಗ್‌ಬಾಸ್‌ ಶೋಭಾ ಶೆಟ್ಟಿ

First Published | Jan 25, 2024, 2:15 PM IST

ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಅವರಿಗೆ ವಿವಾಹ ನಿಶ್ಚಿತಾರ್ಥವಾಗಿದೆ. ತೆಲುಗು ನಟ ಯಶವಂತ್ ಜೊತೆ ಶೋಭಾ ಶೆಟ್ಟಿ ಎಂಗೇಜ್ ಆಗಿದ್ದು, ಇವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಅವರಿಗೆ ವಿವಾಹ ನಿಶ್ಚಿತಾರ್ಥವಾಗಿದೆ. ತೆಲುಗು ನಟ ಯಶವಂತ್ ಜೊತೆ ಶೋಭಾ ಶೆಟ್ಟಿ ಎಂಗೇಜ್ ಆಗಿದ್ದು, ಇವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ತೆಲುಗು ಬಿಗ್‌ಬಾಸ್‌ ಮನೆಗೆ ಪ್ರವೇಶ ಪಡೆದಿದ್ದ ಮಂಗಳೂರು ಮೂಲದ ಈ ಕನ್ನಡತಿ ನಟಿ ಅಲ್ಲಿ ಸಾಕಷ್ಟು ಸದ್ದು ಮಾಡಿ ಸುದ್ದಿಯಾಗಿದ್ದರು. 

Tap to resize

ಈಗ ತಮ್ಮ ಬಾಯ್‌ಫ್ರೆಂಡ್ ಹಾಗೂ ತೆಲುಗು ಸೀರಿಯಲ್ ನಟ ಯಶವಂತ್ ರೆಡ್ಡಿ ಜೊತೆ ಶೋಭಾ  ಶೆಟ್ಟಿ ವಿವಾಹ ನಿಶ್ಚಿತಾರ್ಥ ನಡೆದಿದೆ.

ತೆಲುಗಿನ ಕಾರ್ತಿಕ ದೀಪಂ ಸೀರಿಯಲ್‌ನಲ್ಲಿ ಶೋಭಾ ಶೆಟ್ಟಿ ಹಾಗೂ ಯಶವಂತ್ ರೆಡ್ಡಿ ಜೊತೆಯಾಗಿ ನಟಿಸಿದ್ದರು. ಇದೇ ಸಮಯದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು.

ಈ ಹಿನ್ನೆಲೆಯಲ್ಲಿ ಶೋಭಾ ಶೆಟ್ಟಿ ಹಾಗೂ ಯಶವಂತ್ ರೆಡ್ಡಿ ಮನೆಯವರು ಪರಸ್ಪರ ತಾಂಬೂಲ  ಬದಲಿಸಿಕೊಂಡು ಈ ಜೋಡಿಯ ಪ್ರೇಮಕ್ಕೆ ಪೋಷಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ. 

ಶೋಭಾ ಶೆಟ್ಟಿಯವರ ಬೆಂಗಳೂರಿನ ಮನೆಯಲ್ಲೇ ಈ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಹೊಸ ವರ್ಷದಂದು ಯಶವಂತ್ ಶೋಭಾಗೆ ಉಂಗುರ ತೊಡಿಸುವ ಮೂಲಕ ಮದುವೆ ಪ್ರಪೋಸಲ್ ಮಾಡಿದ್ದರು. 

ಕನ್ನಡದ ಅಗ್ನಿಸಾಕ್ಷಿ ಸಿರೀಯಲ್‌ನಲ್ಲೂ ನಟಿಸಿರುವ ಶೋಭಾ ಶೆಟ್ಟಿ, ಬಳಿಕ ತೆಲುಗು ಟಿವಿ ಸಿರೀಯಲ್‌ಗಳಲ್ಲಿ ನಟಿಸಲು ಆರಂಭಿಸಿದ್ದರು. ತೆಲುಗಿನ ಕಾರ್ತಿಕ ದೀಪಂ ಸೀರಿಯಲ್ ಇವರಿಗೆ ದೊಡ್ಡ ಬ್ರೇಕ್ ನೀಡಿತ್ತು. 

ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಅವರಿಗೆ ವಿವಾಹ ನಿಶ್ಚಿತಾರ್ಥವಾಗಿದೆ. ತೆಲುಗು ನಟ ಯಶವಂತ್ ಜೊತೆ ಶೋಭಾ ಶೆಟ್ಟಿ ಎಂಗೇಜ್ ಆಗಿದ್ದು, ಇವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Latest Videos

click me!