Homosexual Wedding: ಬಾಂಗ್ಲಾದೇಶದ ಯುವತಿ-ತಮಿಳುನಾಡಿನ ಹುಡುಗಿಯ ಅದ್ಧೂರಿ ಮದುವೆ

Published : Sep 04, 2022, 02:48 PM ISTUpdated : Sep 04, 2022, 03:15 PM IST

ಮದುವೆಯೆಂದರೆ ಒಬ್ಬ ಹುಡುಗ ಹಾಗೂ ಹುಡುಗಿ ಬದಲಾಗುವುದು. ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ಈಗ ಟ್ರೆಂಡ್ ಬದಲಾಗಿದೆ. ಹುಡುಗಿಯರು ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ ಮತ್ತು ಹುಡುಗರು ಹುಡುಗರನ್ನು ಮದುವೆಯಾಗುತ್ತಿದ್ದಾರೆ. ಮೇಲಾಗಿ ಸ್ವಯಂ ವಿವಾಹದ ಟ್ರೆಂಡ್ ಕೂಡ ಶುರುವಾಗಿದೆ. ಹಾಗೆಯೇ ತಮಿಳುನಾಡಿನಲ್ಲೊಬ್ಬ ಯುವತಿ, ಬಾಂಗ್ಲಾದೇಶದ ಯುವತಿಯನ್ನು ಮದುವೆಯಾಗಿದ್ದಾಳೆ. 

PREV
18
Homosexual Wedding: ಬಾಂಗ್ಲಾದೇಶದ ಯುವತಿ-ತಮಿಳುನಾಡಿನ ಹುಡುಗಿಯ ಅದ್ಧೂರಿ ಮದುವೆ

ಇತ್ತೀಚೆಗೆ ತಮಿಳುನಾಡಿನಲ್ಲಿ ಇಂಥಾ ಮದುವೆಯೊಂದು ನಡೆದಿದೆ. ಇಬ್ಬರು ಹುಡುಗಿಯರು ಮದುವೆಯಲ್ಲಿ ಮದುವೆಯೆಂಬ ಬಂಧನದಲ್ಲಿ ಒಂದಾಗಿದ್ದಾರೆ. ತಮಿಳುನಾಡಿನ ಹುಡುಗಿ ಬಾಂಗ್ಲಾದೇಶದ ಹುಡುಗಿಯನ್ನು ಮದುವೆಯಾಗಿದ್ದಾಳೆ. ತಮಿಳು ಯುವತಿ ಸುಭಿಕ್ಷಾ ಸುಬ್ರಹ್ಮಣಿ ಅವರು ಬಾಂಗ್ಲಾದೇಶದ ಟೀನಾ ದಾಸ್ ಅವರನ್ನು ತಮಿಳು ಬ್ರಾಹ್ಮಣರ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾದರು. ಆಗಸ್ಟ್ 31ರಂದು ಚೆನ್ನೈನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಿತು.

28

29 ವರ್ಷದ ಸುಭಿಕ್ಷಾ ಸುಬ್ರಮಣಿ ಡೆಲಾಯ್ಟ್‌ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಟೀನಾ ಬಾಂಗ್ಲಾದೇಶದ ಹಿಂದೂ ಕುಟುಂಬದಲ್ಲಿ ಜನಿಸಿದರು. ಪ್ರಸ್ತುತ ಅವರು ಕೆನಡಾದ ಕ್ಯಾಲ್ಗರಿಯಲ್ಲಿ ನೆಲೆಸಿದ್ದಾರೆ. ತಾನು ಉಭಯಲಿಂಗಿ ಎಂದು 19ನೇ ವಯಸ್ಸಿನಲ್ಲಿ ತನ್ನ ಪೋಷಕರಿಗೆ ಹೇಳಿದ್ದರೂ ಅವರು ಕ್ಯಾರೇ ಎನ್ನಲಿಲ್ಲ ಎಂದು ಸುಭಿಕ್ಷಾ ಹೇಳಿದ್ದಾರೆ. ಬಹಳ ವರ್ಷಗಳ ನಂತರ ಅವರಿಗೆ ಈ ವಿಷಯ ಅರ್ಥವಾಯಿತು ಎಂದರು.

38

ಸುಭಿಕ್ಷಾ ಸುಬ್ರಮಣಿ ಹುಡುಗಿಯನ್ನೇ ಮದುವೆಯಾಗುವುದು ಆಕೆಯ ತಾಯಿ ಪೂರ್ಣ ಪುಷ್ಪಕಲಾಗೆ ಮೊದಲು ಇಷ್ಟವಿರಲ್ಲಿಲ್ಲ. ನಮ್ಮದು ಮಧುರೈ. ನಂತರ ನಾನು ಕತಾರ್‌ನಲ್ಲಿ ಕೆಲವು ವರ್ಷಗಳ ಕಾಲ ಇದ್ದೆ. ಕೆನಡಾಕ್ಕೆ ಹೋದ ನಂತರವೇ ನನಗೆ ಇಂಥಾ ಸಮುದಾಯದ ಬಗ್ಗೆ ಗೊತ್ತಾಯಿತು  ಎಂದು ಸುಭಿಕ್ಷಾ ಅವರ ತಾಯಿ ಪೂರ್ಣ ಪುಷ್ಪಕಲಾ ಹೇಳಿದರು. ಅವರು ಕ್ಯಾಲ್ಗರಿಯಲ್ಲಿ ಪ್ಲೇ ಸ್ಕೂಲ್ ನಡೆಸುತ್ತಿದ್ದಾರೆ.

48

ಸುಭಿಕ್ಷಾ ಹುಡುಗಿಯನ್ನೇ ಮದುವೆಯಾಗುವುದರಿಂದ ಭಾರತದಲ್ಲಿರುವ ನಮ್ಮ ಸಂಬಂಧಿಕರು ನಮ್ಮೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಸುಭಿಕ್ಷಾ ಸಮಾಜದಲ್ಲಿ ಹೇಗೆ ಇರುವುದು ಎಂದು ಮೊದಮೊದಲು ತುಂಬಾ ಆತಂಕಗೊಂಡಿದ್ದೆವು ಎಂದು ಪೂರ್ಣಾ ಪುಷ್ಪಕಲಾ ಹೇಳಿದರು. ಆದರೆ  ಈಗ ಆಲೋಚನೆಗಳು ಬದಲಾಗಿವೆ ಎಂದರು. ಮಗಳ ಸಂತೋಷವೇ ನನಗೆ ಮುಖ್ಯ ಎಂದು ಪೂರ್ಣಪುಷ್ಪಕಲಾ ಸ್ಪಷ್ಟಪಡಿಸಿದರು.

58

' ನಾವಿಬ್ಬರೂ ಮದುವೆಯಾಗಬೇಕೆಂಬ ಕನಸು ಕಂಡೆವು. ಆದರೆ ಹೀಗಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ತುಂಬಾ ಸಂತೋಷವಾಗುತ್ತಿದೆ. ನಮಗೆ ಇಷ್ಟವಾದವರು ನಮ್ಮ ಜೊತೆಯಲ್ಲಿಯೇ ಇದ್ದು ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟರು. ನಾವು ತುಂಬಾ ಅದೃಷ್ಟವಂತರು' ಎಂದು ಸುಭಿಕ್ಷಾ ಸುಬ್ರಮಣಿ ಹೇಳಿದರು.

68

35 ವರ್ಷದ ಟೀನಾ ಲೆಸ್ಬಿಯನ್. ಕ್ಯಾಲ್ಗರಿಯ ಫೂತ್‌ಹಿಲ್ಸ್ ವೈದ್ಯಕೀಯ ಕೇಂದ್ರದಲ್ಲಿ ರೋಗಿಗಳ ಆರೈಕೆಯಲ್ಲಿ ಕೆಲಸ ಮಾಡುತ್ತಾರೆ. ಅವಳು ಲೆಸ್ಬಿಯನ್ ಎಂದು ತಿಳಿಯುವ ಮೊದಲು ಅವಳು ಯುವಕನನ್ನು ಮದುವೆಯಾಗಿದ್ದಳು. ನಾಲ್ಕು ವರ್ಷಗಳ ಕಾಲ ಅವನೊಂದಿಗೆ ವಾಸಿಸುತ್ತಿದ್ದಳು. ಅದರ ನಂತರ, ತನ್ನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು, ಅವಳು ತನ್ನ ಪತಿಗೆ ವಿಚ್ಛೇದನ ನೀಡಿದಳು.

78

'ನಾನು ಈಶಾನ್ಯ ಬಾಂಗ್ಲಾದೇಶದ ಮೌಲ್ವಿಬಜಾರ್ ಎಂಬ ಸಣ್ಣ ಪಟ್ಟಣದಲ್ಲಿ ಬೆಳೆದೆ. ನನ್ನ ಪೋಷಕರು ಮತ್ತು ನಾನು 2003 ರಲ್ಲಿ ಮಾಂಟ್ರಿಯಲ್‌ಗೆ ಬಂದೆವು. ನನ್ನ ಪೋಷಕರಿಗೆ LGBTQI+ ಸಮುದಾಯದ ಬಗ್ಗೆ ತಿಳಿದಿರಲಿಲ್ಲ. ಅವರು ನನ್ನ ವರ್ತನೆಯನ್ನು ನೋಡಿ ನನಗೆ ಏನಾದರೂ ಕಾಯಿಲೆ ಇದೆ ಎಂದು ಭಾವಿಸಿದರು. ನಾನು 19 ನೇ ವಯಸ್ಸಿನಲ್ಲಿ ಮದುವೆಯಾದೆ. ಮದುವೆಯಾದರೆ ಎಲ್ಲವೂ ಸರಿಹೋಗುತ್ತದೆ ಎಂದುಕೊಂಡರು. ಆದರೆ ಅದು ಆಗಲಿಲ್ಲ. ಈಗ ನಾನು ಇಷ್ಟಪಡುವ ವ್ಯಕ್ತಿಯನ್ನು ಮದುವೆಯಾಗಲು ನನಗೆ ಸಂತೋಷವಾಗಿದೆ' ಎಂದು ಟೀನಾ ಹೇಳಿದರು.

88

ಷಟೀನಾ ಅವರ ಸಂಬಂಧಿಕರೊಬ್ಬರು ಮಾತ್ರ ಮದುವೆಯಲ್ಲಿ ಭಾಗವಹಿಸಿದ್ದರು. ಸುಭಿಕ್ಷಾಳ ಅಜ್ಜಿ ಪದ್ಮಾವತಿ ಕೂಡ ಮದುವೆಯಲ್ಲಿ ಪಾಲ್ಗೊಂಡಿದ್ದರು. ಕೆನಡಾದಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿದ ದಂಪತಿಗಳು ಕ್ಯಾಲ್ಗರಿಗೆ ಹಿಂದಿರುಗುವ ಮೊದಲು ಏಷ್ಯಾಕ್ಕೆ ಪ್ರವಾಸವನ್ನು ಯೋಜಿಸುತ್ತಿದ್ದಾರೆ.

Read more Photos on
click me!

Recommended Stories