ದಂಪತಿ ನಡುವೆ ಎಷ್ಟು ಪ್ರೀತಿ ಇದೆ ಎಂಬುದು ಅವರಿಬ್ಬರ ಮಾತು ಮತ್ತು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಮಾತ್ರವಲ್ಲ, ಅವರ ಸಣ್ಣ ಪುಟ್ಟ ಕ್ರಿಯೆಯಿಂದ ಸಹ ತಿಳಿಯುತ್ತದೆ. ಇಬ್ಬರೂ ಒಟ್ಟಿಗೆ ಮಲಗುವ ವಿಧಾನವನ್ನು ಸಹ ಇದು ಒಳಗೊಂಡಿದೆ. ಹೌದು, ಸಂಗಾತಿಯೊಂದಿಗೆ ನೀವು ಮಲಗುವ ಭಂಗಿಯು ನಿಮ್ಮ ನಡುವಿನ ಸಂಬಂಧದ ಆಳವನ್ನು ತೋರಿಸುತ್ತದೆ. ಆದ್ದರಿಂದ ಯಾವ ಮಲಗುವ ಭಂಗಿ (sleeping position) ಯಾವ ಅರ್ಥವನ್ನು ಸೂಚಿಸುತ್ತೆ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧವೇನು ಎಂದು ತಿಳಿಯೋಣ.