ನೀವು ಏನೇ ಮಾಡಿದ್ರೂ ಇಂಥ ಮಹಿಳೆಯರನ್ನು ಸಂತೋಷಪಡಿಸಲು ಸಾಧ್ಯವೇ ಇಲ್ಲ!

First Published | Nov 4, 2023, 2:51 PM IST

ಮಹಿಳೆಯರ ವಿಷಯಕ್ಕೆ ಬಂದಾಗ, ಜನರ ಹೃದಯದಲ್ಲಿ ವಿಭಿನ್ನ ರೀತಿಯ ಭಾವನೆ ಇರುತ್ತೆ. ಯಾಕಂದರೆ ಪ್ರತಿಯೊಬ್ಬ ಮಹಿಳೆಯೂ ವಿಭಿನ್ನವಾಗಿರುತ್ತಾರೆ. ಕೆಲವು ಮಹಿಳೆಯರು ಜೀವನವನ್ನು ಸಂತೋಷವಾಗಿರಿಸಿದ್ರೆ, ಇನ್ನೂ ಕೆಲವು ಮಹಿಳೆಯರು ತಮ್ಮ ಜೀವನವನ್ನು ನರಕವಾಗಿಸಲು ಕಾರಣರಾಗಿದ್ದಾರೆ ಎಂಬ ಸತ್ಯವೂ ಇದೆ.
 

ಜೀವನದಲ್ಲಿ ತಾವು ಸಂತೋಷವಾಗಿಲ್ಲ ಎಂದು ದೂರುವ ಅನೇಕ ಮಹಿಳೆಯರು ಇದ್ದಾರೆ. ಅವರಲ್ಲಿ ಕೆಲವರು ನಿಜವಾಗಿಯೂ ಕಷ್ಟಕರವಾದ ಜೀವನವನ್ನು ಹೊಂದಿದ್ದಾರೆ, ಆದರೆ ಕೆಲವರು ತಮ್ಮ ಸ್ವಂತ ಸಂತೋಷವನ್ನು ತಾವೇ ನಾಶ ಮಾಡುತ್ತಾರೆ. 
 

ವಾಸ್ತವವಾಗಿ, ಕೆಲವು ಮಹಿಳೆಯರ ಸ್ವಭಾವವೇ ಹಾಗಿರುತ್ತೆ, ಅದು ಅವರಿಗೆ ಅಥವಾ ಅವರ ಸುತ್ತಲಿನವರಿಗೆ ಸಂತೋಷವಾಗಿರಲು ಅವಕಾಶ ನೀಡುವುದಿಲ್ಲ. ಈ ಕಾರಣದಿಂದಾಗಿಯೇ ಪುರುಷರು ತಮ್ಮ ಸರ್ವಸ್ವವನ್ನೇ ಅವರಿಗೆ ಧಾರೆ ಎರೆದರೂ ಅವರು ಸಂತೋಷವಾಗಿರಲು ಸಾಧ್ಯವಿಲ್ಲ. ಅವರು ಯಾವ ರೀತಿಯ ಮಹಿಳೆಯರು ನೋಡೋಣ.

Tap to resize

ಹಣದ ದುರಾಸೆ
ಕೆಲವು ಮಹಿಳೆಯರಿಗೆ ಹಣದ ದುರಾಸೆ ಹೆಚ್ಚಾಗಿರುತ್ತೆ. ತಮ್ಮ ನಿಜವಾದ ಪ್ರೀತಿ ಅಥವಾ ಭಾವನೆಗಳೊಂದಿಗೆ ಅವರ ಮುಂದೆ ಯಾರು ಹೋದರೂ, ಅವರು ಎಲ್ಲವನ್ನೂ ಹಣದ ಆಧಾರದ ಮೇಲೆ ಅಳೆಯುತ್ತಾರೆ. ಅಂತಹ ಮಹಿಳೆಯರಿಗೆ ತಮ್ಮ ಗಂಡ, ಅಥವಾ ಬಾಯ್ ಫ್ರೆಂಡ್ ಶ್ರೀಮಂತರಾಗಿರಬೇಕು ಎಂದು ಬಯಸುತ್ತಾರೆ, ಇದರಿಂದ ಅವರ ಸ್ಥಾನಮಾನ ಹೆಚ್ಚಾಗುತ್ತದೆ ಮತ್ತು ಎಲ್ಲಾ ಆಸೆಗಳು ಸಹ ಈಡೇರುತ್ತವೆ. ತಮ್ಮ ಬಾಯ್ ಫ್ರೆಂಡ್ ಬಳಿ ಹಣ ಇಲ್ಲ ಎಂದು ಅವರಿಗೆ ಅನಿಸಿದ್ರೆ, ಬೇಗನೆ ಅಂತಹ ಸಂಬಂಧದಿಂದ ದೂರ ಉಳಿಯುತ್ತಾರೆ.  

ಅಹಂ ತುಂಬಿದ ಮಹಿಳೆ 
ವ್ಯಕ್ತಿತ್ವದಲ್ಲಿ ಅಹಂ (ego) ಹೆಚ್ಚಾಗಿದ್ದರೆ, ದೇವರು ಸ್ವತಃ ಅವನ ಮುಂದೆ ಬಂದರೂ, ಅವನು ಕೆಟ್ಟದಾಗಿ ಕಾಣುತ್ತಾನೆ. ಅಹಂನಿಂದ ತುಂಬಿರುವ ಮಹಿಳೆಯರು ಎಲ್ಲರನ್ನೂ ತಮಗಿಂತ ಕಡಿಮೆ ಎಂದು ಅಂದುಕೊಳ್ಳುತ್ತಾರೆ ಮತ್ತು ಇದು ಅವರನ್ನು ಮಾನವ ಭಾವನೆಗಳಿಂದ ದೂರವಿರಿಸುತ್ತದೆ. ಇತರರನ್ನು ಸಣ್ಣವರೆಂದು ಪರಿಗಣಿಸುವ ಮಹಿಳೆಯರು ಜೀವನದಲ್ಲಿ ಎಂದಿಗೂ ನಿಜವಾದ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ.  

ಒಂದೇ ಸಮಯದಲ್ಲಿ ಹಲವರೊಂದಿಗೆ ಪ್ರೇಮ
ಕೆಲವು ಮಹಿಳೆಯರು ಒಂದೇ ಸಮಯದಲ್ಲಿ ಹಲವರೊಂದಿಗೆ ಸಂಬಂಧ ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಮದುವೆಯಾದರೂ, ಅವರ ಹೃದಯವು ಬೇರೊಬ್ಬರ ಹಿಂದೆ ಹೋಗುತ್ತದೆ. ಈ ರೀತಿಯಾದಾಗ ಈ ಮಹಿಳೆಯರು ಸಂತೋಷದ ಕೆಲವು ಕ್ಷಣಗಳಿಗಾಗಿ, ತಮ್ಮ ಆಸೆ ಈಡೇರಿಸಿಕೊಳ್ಳಲು ತಮ್ಮ ಉತ್ತಮ ವೈವಾಹಿಕ ಜೀವನವನ್ನು (Married Life) ಸಹ ಪಣಕ್ಕಿಡುತ್ತಾರೆ.
 

ಇತರರ ಬಗ್ಗೆ ಅಸೂಯೆ (Jealous) ಪಡುವವರು
ಮನಸ್ಸಿನಲ್ಲಿ ಕಿರಿಕಿರಿಯ ಭಾವನೆ ಇದ್ದರೆ, ಎಲ್ಲವೂ ಕಹಿಯಿಂದ ತುಂಬಿದೆ ಎಂದು ಅನಿಸೋಕೆ ಶುರುವಾಗುತ್ತೆ. ಅಸೂಯೆಪಡುವ (jealousy) ಮಹಿಳೆಯರು ಯಾರೂ ಸಂತೋಷವಾಗಿರುವುದನ್ನು ಅಥವಾ ಯಶಸ್ಸಿನ ಏಣಿಯನ್ನು ಏರುವುದನ್ನು ಎಂದಿಗೂ ಸಹಿಸೋದಿಲ್ಲ. ಅವರ ಇಡೀ ಜೀವನವು ಇತರರನ್ನು ಅವಮಾನಿಸಲು, ಇತರರ ವಿರುದ್ಧ ಮಾತನಾಡಲು ಅಥವಾ ಇತರನ್ನು ಕೆಳಗಿಳಿಸಲು ತಂತ್ರಗಳನ್ನು ಪ್ರಯತ್ನಿಸಲು ಮೀಸಲಿಡುತ್ತಾರೆ. ಇಡೀ ಜೀವನದಲ್ಲಿ ಇದನ್ನೇ ಮಾಡುತ್ತಿರುವಾಗ, ಸಂತೋಷಕ್ಕೆ ಅವಕಾಶ ಎಲ್ಲಿದೆ?

Latest Videos

click me!