ಕಾವೇರಿಯಂಥ ಅತ್ತೆ ಯಾರಿಗೂ ಬೇಡ, ಮಗನ ಮದ್ವೆ ಆಗೋ ಮುನ್ನ ಕುಸುಮರಂತೆ ಬದಲಾಗಿ!

First Published | Nov 6, 2023, 4:49 PM IST

ಲಕ್ಷ್ಮೀ ಬಾರಮ್ಮ ಸೀರಿಯನ್ ನ ಕಾವೇರಿ ಕಷ್ಯಪ್ ತರ ಅತ್ತೆ ಇದ್ರೆ ಯಾರಿಗೂ ಇಷ್ಟವಾಗಲ್ಲ. ಮದುವೆ ನಂತರ ಅತ್ತೆ ಸೊಸೆ ಬಾಂಧವ್ಯ ಚೆನ್ನಾಗಿರಬೇಕು ಅಂದ್ರೆ ಕೆಲವೊಂದು ಬದಲಾವಣೆ ನಮ್ಮಲ್ಲಿ ಆಗಲೇ ಬೇಕು. ಮಗನ ಮದುವೆಗೆ ಮುಂಚಿತವಾಗಿ ಪೋಷಕರು ತಮ್ಮ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಬೇಕು, ಇಲ್ಲದಿದ್ದರೆ ಮಗ ಮತ್ತು ಸೊಸೆಯೊಂದಿಗಿನ ಸಂಬಂಧವು ಕೆಲವೇ ತಿಂಗಳುಗಳಲ್ಲಿ ಮುರಿದುಹೋಗುತ್ತದೆ. ಅದೇ ಭಾಗ್ಯಲಕ್ಷ್ಮಿ ಸೀರಿಯಲ್‌ನ ಕುಸುಮಾ ನೋಡಿ, ಅತ್ತೆ ಅಂತ ಡಾಮಿನೇಟ್ ಮಾಡಿದರೂ ಸೊಸೆಗೆ ಮಾತ್ರ ಪ್ರೀತಿಯನ್ನು ಕಡಿಮೆ ಮಾಡಿಲ್ಲ.
 

ಲಕ್ಷ್ಮೀ ಬಾರಮ್ಮ ಸೀರಿಯನ್ ನ ಕಾವೇರಿ ಕಷ್ಯಪ್ ತರ ಅತ್ತೆ ಇದ್ರೆ ಯಾರಿಗೂ ಇಷ್ಟವಾಗಲ್ಲ. ಮದುವೆ ನಂತರ ಅತ್ತೆ ಸೊಸೆ ಬಾಂಧವ್ಯ ಚೆನ್ನಾಗಿರಬೇಕು ಅಂದ್ರೆ ಕೆಲವೊಂದು ಬದಲಾವಣೆ ನಮ್ಮಲ್ಲಿ ಆಗಲೇ ಬೇಕು. ಮಗನ ಮದುವೆಗೆ ಮುಂಚಿತವಾಗಿ ಪೋಷಕರು ತಮ್ಮ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಬೇಕು, ಇಲ್ಲದಿದ್ದರೆ ಮಗ ಮತ್ತು ಸೊಸೆಯೊಂದಿಗಿನ ಸಂಬಂಧವು ಕೆಲವೇ ತಿಂಗಳಲ್ಲಿ ಮುರಿದು ಹೋಗುತ್ತದೆ
 

ಮಗನ ಮದುವೆ ನಂತರ ಸಂಬಂಧವನ್ನು ಬಲವಾಗಿಡಲು ಪೋಷಕರು ತಮ್ಮ ಮಾತು ಮತ್ತು ಕ್ರಿಯೆಗಳನ್ನು ಬಹಳ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು. ಏಕೆಂದರೆ ಈಗ ವಿಷಯಗಳು ನಿಮಗೆ ಮತ್ತು ನಿಮ್ಮ ಮಗನಿಗೆ ಮಾತ್ರ ಸೀಮಿತವಾಗಿಲ್ಲ, ಅವನ ಹೆಂಡತಿಯೂ ಅವನೊಂದಿಗೆ ಸೇರುತ್ತಾಳೆ.
 

Tap to resize

ಭಾರತೀಯ ಸಂಸ್ಕೃತಿಯ ಪ್ರಕಾರ, ವಿವಾಹವು (marriage) ಕೇವಲ ಇಬ್ಬರು ವ್ಯಕ್ತಿಗಳನ್ನು ಮಾತ್ರವಲ್ಲದೆ ಎರಡು ಕುಟುಂಬಗಳನ್ನು ಬಂಧದಲ್ಲಿ ಬಂಧಿಸುತ್ತದೆ. ಆದ್ದರಿಂದ ಮದುವೆಯ ನಂತರ ಮಗಳು ಹೇಗೆ ಬದುಕಬೇಕು ಅಥವಾ ಮಗ ಹೇಗೆ ಬದುಕಬೇಕು ಎಂಬ ಪ್ರಶ್ನೆಯನ್ನು ಎತ್ತುವುದು ತಪ್ಪು. ಏಕೆಂದರೆ ಅನೇಕ ಸಂಬಂಧಗಳಿರುವಲ್ಲಿ, ಕೇವಲ ಇಬ್ಬರು ವ್ಯಕ್ತಿಗಳು ಅದನ್ನು ಗಟ್ಟಿಯಾಗಿರಿಸಲು ಸಾಧ್ಯವಿಲ್ಲ.
 

ಮಕ್ಕಳ ಮದುವೆಯ ನಂತರ, ಪೋಷಕರು ಅವರ ನಡವಳಿಕೆಯ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಏಕೆಂದರೆ ಇದು ಭವಿಷ್ಯದಲ್ಲಿ ಹೊಸ ಕುಟುಂಬದ ಭವಿಷ್ಯ ಮತ್ತು ಹೊಸ ಸದಸ್ಯರ ಸಂಬಂಧಗಳನ್ನು ನಿರ್ಧರಿಸುತ್ತದೆ. ಆದರೆ ಸಮಾಜದಲ್ಲಿ ಅದರ ಬಗ್ಗೆ ಯಾರೂ ಸಹ ಮಾತನಾಡೋದಿಲ್ಲ, ಆದರೆ ಅದರ ಫಲಿತಾಂಶವನ್ನು ಯಾರಿಂದಲೂ ಮರೆಮಾಡಲಾಗುವುದಿಲ್ಲ - 
 

ಹೆಚ್ಚಾಗಿ ಹೊಸದಾಗಿ ಮದುವೆಯಾದ ಹುಡುಗರು ಮತ್ತು ಹುಡುಗಿಯರು ಮದುವೆಯಾದ ಕೂಡಲೇ ಕುಟುಂಬದಿಂದ ಬೇರ್ಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಗ ಮತ್ತು ಸೊಸೆಯನ್ನು ನಿಮ್ಮಿಂದ ದೂರವಿರಿಸಲು ನೀವು ಬಯಸದಿದ್ದರೆ, ನಿಮ್ಮ ಕೆಲವು ಅಭ್ಯಾಸಗಳನ್ನು ಸುಧಾರಿಸಿ ಮತ್ತು ಇಲ್ಲಿ ಉಲ್ಲೇಖಿಸಿದ ವಿಷಯಗಳೊಂದಿಗೆ ನಿಮ್ಮ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿ.
 

ಎಲ್ಲದಕ್ಕೂ ಅಡ್ಡಿಪಡಿಸೋದು ಸರಿಯಲ್ಲ
ಮಕ್ಕಳು ಎಷ್ಟೇ ದೊಡ್ಡವರಾಗಿದ್ದರೂ ಸಹ, ಪೋಷಕರು ಯಾವಾಗಲೂ ಅವರ ಬಗ್ಗೆ ಚಿಂತಿತರಾಗಿರುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರು ಮನೆಯಿಂದ ಹೊರಟಾಗ ಅವರು ಹಿಂದಿರುಗುವ ಬಗ್ಗೆ ಕಣ್ಣಿಡುವುದು ಸಾಮಾನ್ಯ. ಆದರೆ ಇದರರ್ಥ ನೀವು ಎಲ್ಲದಕ್ಕೂ ಅಡ್ಡಿಪಡಿಸಬೇಕು ಮತ್ತು ಅವರ ಜೀವನವನ್ನು ಅವರ ರೀತಿಯಲ್ಲಿ ಬದುಕಲು ಬಿಡಬಾರದು ಎಂದಲ್ಲ. ಈ ನಿರ್ಬಂಧಗಳಿಂದಾಗಿ, ಸಾಮಾನ್ಯವಾಗಿ ಪ್ರತಿ ದಂಪತಿಗಳು ಕುಟುಂಬದಿಂದ ದೂರವಿರಲು ಬಯಸುತ್ತಾರೆ.

ನಿಂದಿಸೋದು
ಮದುವೆಗೆ ಮೊದಲು ನೀವು ಮಗನನ್ನು ಹೇಗೆ ಬೈದರೂ, ಮದುವೆಯ ನಂತರ ನೀವು ಅವನಿಗೆ ಮತ್ತು ಅವನ ಹೆಂಡತಿಗೆ ಸಂಪೂರ್ಣ ಗೌರವವನ್ನು ನೀಡಬೇಕು. ಹೀಗೆ ಮಾಡುವ ಮೂಲಕ, ಮನೆಗೆ ಬರುವ ಸೊಸೆಗೆ ನಿಮ್ಮ ಬಗ್ಗೆ ಮತ್ತು ಅವಳ ಗಂಡನ ಬಗ್ಗೆ ಗೌರವ ಮೂಡುತ್ತದೆ.

ನಿಂದನಾತ್ಮಕ ಮಾತುಗಳು ಯಾವಾಗಲೂ ಸಂಬಂಧಗಳನ್ನು ಹಾಳುಮಾಡುತ್ತವೆ. ನೀವು ಪದೇ ಪದೇ ನಿಂದಿಸುತ್ತಿದ್ದರೆ, ಅದರಿಂದ ಅವರು ಒಂದು ದಿನ ಖಂಡಿತವಾಗಿಯೂ ನಿಮಗೆ ತಿರುಗಿ ಉತ್ತರ ಕೊಟ್ಟೆ ಕೊಡುತ್ತಾರೆ.  ಕೆಲವರು ಮರಳಿ ಉತ್ತರ ಕೊಡದಿದ್ದರೂ, ಮನೆ ಬಿಟ್ಟು ಹೋಗುತ್ತಾರೆ. ಹಾಗಾಗಿ, ನಿಂದಿಸೋದನ್ನು ಬಿಟ್ಟು ಬಿಡಿ.
 

ಮಗನ ಬಗ್ಗೆ ಪೊಸೆಸಿವ್‌ನೆಸ್
ಮಗ ತನ್ನ ಹೆಂಡತಿಯ ಬಗ್ಗೆ ಸ್ವಲ್ಪ ಗಮನ ಹರಿಸಿದರೆ, ಕೆಲವು ಪೋಷಕರಿಗೆ ಇದು ಚುಚ್ಚಲು ಆರಂಭಿಸುತ್ತೆ. ಅವರು ಅಭದ್ರತೆಯನ್ನು ಪಡೆಯಲು ಪ್ರಾರಂಭಿಸುತ್ತಾರೆ, ಅದನ್ನು ಅವರು ಮಗ ಮತ್ತು ಸೊಸೆ ಮುಂದೆ ನಿಂದನೆಗಳ ರೂಪದಲ್ಲಿ ವ್ಯಕ್ತಪಡಿಸುತ್ತಾರೆ.

ಅಂತಹ ದೈನಂದಿನ ನಿಂದನೆಗಳು (abusing) ಯಾವುದೇ ವ್ಯಕ್ತಿಯನ್ನು ನಿಮ್ಮಿಂದ ದೂರವಿರಿಸಬಹುದು, ಅದು ನಿಮ್ಮ ಸ್ವಂತ ಮಗನಾಗಿದ್ದರೂ ಸಹ. ನೀವು ಯಾವಾಗಲೂ ನಿಮ್ಮ ಮಗ ಮತ್ತು ಸೊಸೆಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಲು ಬಯಸಿದರೆ, ನೀವು ಅವರೊಂದಿಗೆ ಅವರ ಸಂತೋಷದ ಭಾಗವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
 

ಪ್ರೈವೆಸಿ ಸಿಗದೇ ಇರೋದು
ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಅವಕಾಶ ಸಿಗದಿರುವುದು, ರೂಮಿಗೆ ಸಡನ್ ಆಗಿ ಬರೋದು, ಇವೆಲ್ಲಾ ಹೆಚ್ಚಿನ ದಂಪತಿಗೆ ಇಷ್ಟವಾಗದೇ ಇರುವ ಕೆಲವು ವಿಷಯಗಳಾಗಿವೆ. ಅಲ್ಲದೆ, ಮದುವೆಯ ಆರಂಭಿಕ ವರ್ಷಗಳಲ್ಲಿ ಪರಸ್ಪರ ತಿಳಿದುಕೊಳ್ಳಲು ಇವೆಲ್ಲವೂ (privacy) ಬಹಳ ಮುಖ್ಯ. ಹಾಗಾಗಿ ಹೊಸ ಜೋಡಿಗಳಿಗೆ ಪ್ರೈವೆಸಿ ನೀಡೋದನ್ನು ಕಲಿಯಿರಿ.

Latest Videos

click me!