ಹೀಗಾಗುತ್ತಿದ್ದರೆ ಶೀಘ್ರದಲ್ಲೇ ಸಂಗಾತಿ ನಿಮ್ಮಿಂದ ದೂರ ಆಗಬಹುದು!

Suvarna News   | Asianet News
Published : Oct 09, 2020, 05:02 PM IST

ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಒಂದಲ್ಲ ಒಂದು ಬಾರಿ ಪ್ರೀತಿಯಲ್ಲಿ ಬೀಳುತ್ತಾರೆ. ಆ ಅನುಭವವೆ ಮಧುರವಾಗಿರುತ್ತದೆ. ಪ್ರೀತಿ ಜೀವನ ಮತ್ತು ಸಂಬಂಧದಲ್ಲಿ ಸಿಹಿಯನ್ನು ತುಂಬುತ್ತದೆ ಜೊತೆಗೆ ಎರಡು ಹೃದಯವನ್ನು ಬೆಸೆಯುತ್ತದೆ. ಪ್ರೀತಿ ಮಾಡುವುದು ಎಷ್ಟು ಸುಲಭವೋ, ಅದನ್ನು ನಿಭಾಯಿಸುವುದು ಅಷ್ಟೇ ಕಷ್ಟವಾಗಿದೆ.

PREV
110
ಹೀಗಾಗುತ್ತಿದ್ದರೆ ಶೀಘ್ರದಲ್ಲೇ ಸಂಗಾತಿ ನಿಮ್ಮಿಂದ ದೂರ ಆಗಬಹುದು!

ಯಾವಾಗ ಎರಡು ವ್ಯಕ್ತಿಗಳು ಪ್ರೀತಿಯ ಕೊಂಡಿಯಲ್ಲಿ ಬೆಸೆಯುತ್ತಾರೆ, ಆವಾಗ ಇಬ್ಬರ ನಡುವೆ ವಿಶ್ವಾಸ ಇರಲೇಬೇಕಾಗುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದಿದ್ದರೆ ಆ ಸಂಬಂಧ ಎಷ್ಟು ಬೇಗ ಆರಂಭವಾಗಿರುತ್ತದೆಯೋ, ಅಷ್ಟೇ ಬೇಗ ಮುರಿದು ಹೋಗುತ್ತದೆ.

210

 ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ಇಬ್ಬರು ಒಂದೇ ರೀತಿಯಾಗಿ ಪ್ರೀತಿ ಮಾಡುವುದು ಮುಖ್ಯವಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದರೆ ಇಬ್ಬರ ನಡುವೆ ಬ್ರೇಕ್‌ಅಪ್‌ ಆಗುವ ಸಾಧ್ಯತೆ ಇದೆ. ನಿಮ್ಮ ಜೀವನದಲ್ಲಿ ಈ ರೀತಿ ನಡೆಯುತ್ತಿದ್ದರೆ ಸದ್ಯದಲ್ಲಿ ಸಂಗಾತಿ ನಿಮ್ಮಿಂದ ದೂರ ಆಗುತ್ತಿದ್ದಾರೆ ಎಂದು ಅರ್ಥ. 

310

ಸಣ್ಣ ಪುಟ್ಟ ಕಾರಣಗಳಿಗೆ ನಿಮ್ಮ ಬಳಿ ಜಗಳ ಮಾಡಿಕೊಂಡು ಬಂದರೆ ನಿಮ್ಮ ನಡುವೆ ಮೊದಲಿನ ಹಾಗೆ ಏನು ಉಳಿದಿಲ್ಲ ಎಂದು ಅರ್ಥ.

410

ಪೂರ್ತಿ ಸಮಯ ಆಫೀಸ್‌, ಫ್ರೆಂಡ್ಸ್‌ ಜೊತೆಗೆ ಕಳೆಯುತ್ತಾರೆ. ನಿಮ್ಮ ಜೊತೆ ಐದು ನಿಮಿಷ ಮಾತನಾಡಲು ಅವರಿಗೆ ಸಮಯ ಇರೋದಿಲ್ಲ.

510

ಹಿಂದೆ ನಿಮ್ಮಲ್ಲಿ ಏನು ನೋಡಿ ಅವರು ಇಷ್ಟಪಟ್ಟಿದ್ದರೋ ಅದೇ ಇಂದು ಅವರ ಕೋಪಕ್ಕೆ ಕಾರಣವಾಗುತ್ತಿದ್ದರೆ ಇಬ್ಬರ ಸಂಬಂಧ ಹಾಳಾಗುತ್ತಿದೆ ಎಂದು ಅರ್ಥ.

610

ನೀವು ಕರೆ ಮಾಡಿದಾಗ ಅವರು ರಿಸೀವ್‌ ಮಾಡದೆ ಇರುವುದು. ಕೆಲವೊಮ್ಮೆ ಪೂರ್ತಿಯಾಗಿ ಬ್ಯುಸಿ ಎಂದು ಬರುತ್ತದೆ. ಆದರೆ ಮತ್ತೆ ಅವರು ನಿಮಗೆ ಕಾಲ್‌ ಬ್ಯಾಕ್‌ ಮಾಡೋದೆ ಇಲ್ಲ.

710

ನಿಮ್ಮ ಫೀಲಿಂಗ್ಸ್‌ಗಳನ್ನು ಹೇಳಲು ನೀವು ಒಂದು ಪೇಜ್‌ನಷ್ಟು ಬರೆದು ಮೆಸೇಜ್ ಮಾಡಿದರೂ ಅವರ ರಿಪ್ಲೈ ಇಲ್ಲದೆ ಇದ್ದರೆ ಅಥವಾ ಒಂದು ಲೈನ್‌ನ ಉತ್ತರ ಬಂದರೆ ಈ ಸಂಬಂಧ ಹೆಚ್ಚು ಸಮಯ ಉಳಿದಿಲ್ಲ ಎಂದು ಅರ್ಥ.

810

ಇನ್ನೊಬ್ಬರಿಗೆ ಹೋಲಿಕೆ ಮಾಡಿ ನಿಮ್ಮ ಕೀಳಾಗಿ ಕಂಡರೆ, ನೀವು ಆಗಲೆ ಅರ್ಥ ಮಾಡಿಕೊಳ್ಳಿ. ಈ ಸಂಬಂಧವನ್ನು ನೀವು ಉಳಿಸಿಕೊಳ್ಳಲು ಏನಾದರು ಮಾಡಲೇಬೇಕು ಎಂದು.

910

ಅವರ ಜೀವನದ ಬಗ್ಗೆ ನಿಮ್ಮ ಬಳಿ ಏನು ಹೇಳಲು ಇಷ್ಟಪಡದೆ ಇದ್ದರೆ ಅಥವಾ ನಿಮ್ಮ ಬಳಿ ಇರುವುದೇ ಒಂದು ತಲೆನೋವು ಎಂಬಂತೆ ವರ್ತಿಸಿದರೆ ಅರ್ಥಮಾಡಿಕೊಳ್ಳಿ, ನಿಮ್ಮ ಸಂಬಂಧ ಎಲ್ಲಿ ಹೋಗುತ್ತಿದೆ ಎಂದು. 

1010

ಈ ಎಲ್ಲಾ ರೀತಿಯ ಅನುಭವ ನಿಮಗೂ ಆಗುತ್ತಿದ್ದರೆ, ಸಂಬಂಧ ಕೊನೆಯಾಗುತ್ತಿದೆ ಎಂದು ಅರ್ಥ. ಆದುದರಿಂದ ಪರಿಸ್ಥಿತಿ ಕೆಟ್ಟದಾಗುವ ಮುನ್ನ ಎಚ್ಚೆತ್ತುಕೊಂಡು ಸಂಬಂಧ ಸರಿಪಡಿಸುವತ್ತ ಗಮನ ಹರಿಸಿ, ಇಲ್ಲವಾದರೆ ಸಂಬಂಧಕ್ಕೆ ಇತಿಶ್ರೀ ಹಾಡುವುದೇ ಉಚಿತ... 

click me!

Recommended Stories