ಲವ್ ಮಾಡಿದ್ರೆ ಹೀಗೆಲ್ಲಾ ಆಗತ್ತಂತೆ... ನಾವು ಹೇಳ್ತಿಲ್ಲ, ವಿಜ್ಞಾನ ಹೇಳ್ತಿದೆ

First Published | Oct 7, 2020, 5:38 PM IST

ಪ್ರೀತಿ ಯಾವಾಗ ಬೇಕಾದ್ರೂ ಆಗತ್ತೆ ಆಲ್ವಾ? ಈ ಪ್ರೀತಿಲಿ ಬಿದ್ದ ಮೇಲೆ ಒಂದಲ್ಲ ಒಂದು ಬದಲಾವಣೆ ಪ್ರತಿಯೊಬ್ಬರ ಜೀವನದಲ್ಲಿ ಆಗಿಯೇ ಆಗುತ್ತೆ. ಆದ್ರೆ ನಿಮಗೆ ಗೊತ್ತೇ  ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ವಿಜ್ಞಾನ ಹೇಳುತ್ತೆ, ಲವ್ ಮಾಡ್ತಿದ್ರೆ ದೇಹದಲ್ಲಿ ಡೋಪಮೈನ್ ಹೆಚ್ಚಾಗಿ ವಿಚಿತ್ರ ಬದಲಾವಣೆ ಆಗುತ್ತಂತೆ. ಅಂತಹ ಬದಲಾವಣೆಗಳು ಯಾವುದು ಅನ್ನೋದರ ಬಗ್ಗೆ ವಿಜ್ಞಾನ ಏನು ಹೇಳುತ್ತೆ ನೋಡೋಣ... 

ಇಷ್ಟ ಪಡುವವರು ವ್ಯಕ್ತಿ ಕಣ್ಣೆದುರು ಬಂದಾಗ ಕಣ್ಣು ಮಿಟುಕಿಸದೇಅವರನ್ನ ನೋಡಬೇಕು ಎನಿಸುತ್ತದೆ. ಇದು ಪ್ರೀತಿ ಅಲ್ಲದೆ ಮತ್ತಿನ್ನೇನು?
ಪ್ರೀತಿಯಲ್ಲಿ ಬಿದ್ದಾಗ ನಶೆ ಏರಿದಂತಹ ಅನುಭವ ಉಂಟಾಗುತ್ತದೆ. ಇದರಿಂದ ಡೊಪಾಮೈನ್‌ ಹಾರ್ಮೋನ್‌ ಹೆಚ್ಚುತ್ತದೆ. ಹಾಗಾಗಿ ವಿಚಿತ್ರವಾಗಿ ವ್ಯವಹರಿಸಲು ಆರಂಭಿಸುತ್ತಾರೆ.
Tap to resize

ಪ್ರತಿದಿನ, ಪ್ರತಿಕ್ಷಣ ಅವರದ್ದೇ ಯೋಚನೆ ಮನಸಲ್ಲಿ..ದೇಹದಲ್ಲಿ ಫಿನ್‌ಲೆಥಿಲೈಮೈನ್‌ ರಿಲೀಸ್‌ ಆಗುವುದೇ ಈ ಅನುಭಕ್ಕೆ ಕಾರಣ. ಇದು ಒಂದು ರೀತಿಯ ಲವ್‌ ಡ್ರಗ್‌ ಆಗಿದೆ. ಇದು ಸಂಗಾತಿಯ ಕಡೆಗೆ ಹೆಚ್ಚಿನ ಮೋಹವನ್ನು ಉಂಟುಮಾಡುತ್ತದೆ.
ಅವರ ಖುಶಿ ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ನೀವು ನಿಮ್ಮ ಸಂಗಾತಿಯನ್ನು ಸಂತೋಷ ಪಡಿಸಲು ಯಾವ ಕೆಲಸ ಮಾಡಲು ಬೇಕಾದರೂ ರೆಡಿಯಾಗುತ್ತೀರಿ.
ಪ್ರೀತಿಯಲ್ಲಿ ಬಿದ್ದಿದ್ದರೆ ನಿಮ್ಮ ಮೆದುಳಿನಲ್ಲಿ ಕೋರ್ಟಿಸೋಲ್‌ ರಿಲೀಸ್‌ ಆಗುತ್ತದೆ. ಇದು ಹೆಚ್ಚು ಸ್ಟ್ರೆಸ್‌ ಉಂಟು ಮಾಡುತ್ತದೆ. ಇದರಿಂದಾಗಿ ಅವರು ನಿಮ್ಮ ಮುಂದೆ ಬಂದಾಗ ನಿಮ್ಮ ಧೈರ್ಯ ಅಡಗುತ್ತದೆ. ಹೃದಯ ಬಡಿತ ಹೆಚ್ಚುತ್ತದೆ.
ಪ್ರೀತಿ ಎಂಬುದು ಒಂದು ರೀತಿಯ ನವೀರಾದ ಯಾತನೆ. ಆದರೆ ನೀವು ಇಷ್ಟ ಪಡುವವರು ನಿಮ್ಮ ಮುಂದೆ ಇದ್ದರೆ ನಿಮ್ಮ ಎಲ್ಲಾ ನೋವು ಮಾಯವಾಗುತ್ತದೆ.
ಸಂಗಾತಿಯನ್ನು ಇಂಪ್ರೆಸ್‌ ಮಾಡುವ ಸಲುವಾಗಿ ಸಂಬಂಧದ ಆರಂಭದಲ್ಲಿ ಅನೇಕ ಬದಲಾವಣೆಗಳನ್ನು ತಂದುಕೊಳ್ಳುತ್ತಾರೆ, ಇದು ಸಹ ಪ್ರೀತಿ ಉಂಟಾಗಿದೆ ಅನ್ನೋದರ ಲಕ್ಷಣವಾಗಿದೆ.
ಪ್ರೀತಿಸುತ್ತಿದ್ದರೆ ದೈಹಿಕ ಆಕರ್ಷಣೆಯೂ ಹೆಚ್ಚುತ್ತದೆ, ಪ್ರೇಮಿಗಳು ಸ್ವಲ್ಪ ತುಂಟ ತುಂಟ ಮಾತುಗಳನ್ನು ಹೆಚ್ಚಾಗಿ ಆಡುತ್ತಾರೆ.
ಬೇರೆ ಬೇರೆ ರೀತಿಯ ಭಾವನೆ ಉಂಟಾಗಲು ಕಾರಣ ಹಲವು , ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಅದು ದೇಹದಲ್ಲಿ ರಿಲೀಸ್ ಆಗುವ ಹಾರ್ಮೋನ್ನಿಂದ ಈ ಎಲ್ಲಾ ಬದಲಾವಣೆ ಆಗುತ್ತದೆ.
ನಿಮಗೆ ಹೀಗೆಲ್ಲಾ ಆಗ್ತಿದೆ ಅಂದ್ರೆ ಖಂಡಿತವಾಗಿ ನಿಮಗೆ ಲವ್ ಆಗಿದೆ ಎಂದು ಅರ್ಥ..

Latest Videos

click me!