ಪ್ರೀತಿ ಯಾವಗಬೇಕಾದರೂ, ಯಾರ ಮೇಲೆ ಬೆಕಾದರೂ ಆಗಬಹುದು ಗೊತ್ತಾ? ಆದ್ರೆ ಅದೇ ಪ್ರೀತಿ ಬೆಸ್ಟ್ ಫ್ರೆಂಡ್ ಮೇಲೆ ಆದ್ರೆ? ಬೆಸ್ಟ್ ಫ್ರೆಂಡ್ (best friend)ಬೆಸ್ಟ್ ಫ್ರೆಂಡ್ ಅಂತಿರ್ತೀವಿ, ಆದ್ರೆ ಒಂದು ಸಮಯದಲ್ಲಿ ಅವರನ್ನು ಬಿಟ್ಟಿರಲು ಸಾಧ್ಯವಾಗದಷ್ಟು ಭಾವನೆ ಬೆಳೆದಿರುತ್ತೆ. ಇದು ಸ್ನೇಹಾನಾ? ಅಥವಾ ಬೆಸ್ಟ್ ಫ್ರೆಂಡ್ ಮೇಲೆ ಲವ್ ಆಗಿದ್ಯಾ? ಅಂತಾನೆ ಗೊತ್ತಾಗೋದಿಲ್ಲ. ಹಾಗಿದ್ರೆ ಇದನ್ನ ಕಂಡು ಹಿಡಿಯೋದು ಹೇಗೆ?
ಪ್ರೀತಿಯ ಭಾವನೆ ವಿಭಿನ್ನವಾಗಿದೆ. ಪ್ರೀತಿ ಯಾರಿಗಾದರೂ ಮತ್ತು ಯಾವಾಗ ಬೇಕಾದರೂ ಆಗಬಹುದು, ಆದರೆ ಕೆಲವೊಮ್ಮೆ ಈ ಆಕರ್ಷಣೆಯು ನಮ್ಮ ಬೆಸ್ಟ್ ಫ್ರೆಂಡ್ ಮೇಲೆಯೂ ಆಗಬಹುದು. ಉತ್ತಮ ಸ್ನೇಹಿತನಲ್ಲಿ ಸಂಗಾತಿಯನ್ನು ಹುಡುಕುವುದಕ್ಕಿಂತ ಉತ್ತಮವಾದ ವಿಷಯ ಬೇರೆ ಇಲ್ಲ ಅಲ್ವಾ?. ನಿಮಗೆ ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ, ಫ್ರೆಂಡ್ ಶಿಪ್ ಕ್ಕಿಂತ ಜಾಸ್ತಿ ಬೇರೆ ಏನೋ ಆಗಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬೇಕಾದ್ರೆ, ನೀವಿದನ್ನು ಓದಬೇಕು.
ವಿಶೇಷ ಭಾವನೆ: ಪ್ರೀತಿಯು ಸ್ನೇಹದಿಂದ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ, ಇದು ಅಕ್ಷರಶಃ ನಿಜವಾಗಿದೆ. ಕೆಲವೊಮ್ಮೆ ನೀವು ನಿಮ್ಮ ಸ್ನೇಹಿತರಿಂದಲೇ ವಿಶೇಷ ಅನುಭವ (special feeling) ಪಡೆಯುತ್ತೀರಿ. ಅವರು ನಿಮ್ಮ ಜೊತೆಗಿದ್ದರೆ ಬೇರೆ ಏನು ಬೇಡ ಎನ್ನುವಂತಹ ಭಾವನೆ ಮೂಡುತ್ತದೆ. ಸದಾ ಕಾಲ ಅವರ ಜೊತೆಗೆಯೇ ಇರಬೇಕು ಅನಿಸೋದು ಸ್ನೇಹ ಅಲ್ಲ, ಪ್ರೀತಿ.
ಅವರು ಇನ್ನೊಬ್ಬರ ಜೊತೆಗೆ ಕ್ಲೋಸ್ ಆದ್ರೆ ಅಸೂಯೆ: ಸಾಮಾನ್ಯ ಸ್ನೇಹದಲ್ಲಿ, ಸ್ನೇಹಿತನ ಯಾವುದೇ ಫ್ರೆಂಡ್ಸ್ ಬಗ್ಗೆ ನೀವು ಅಸೂಯೆ (jealosy) ಪಡುವುದಿಲ್ಲ, ಆದರೆ ಇದು ಈಗ ನಿಮಗೆ ಸಂಭವಿಸುತ್ತಿದ್ದರೆ, ನಿಮ್ಮ ಬೆಸ್ಟ್ ಫ್ರೆಂಡ್ ಇನ್ಯಾರದ್ದೋ ಜೊತೆ ಸ್ವಲ್ಪ ಕ್ಲೋಸ್ ಆಗಿದ್ರೆ ನಿಮಗೆ ಜೆಲಸ್ ಆಗುತ್ತಿದ್ದರೆ. ನಿಮ್ಮ ಫ್ರೆಂಡ್ ಜೊತೆ ಬೇರೆ ಯಾರೂ ಸಮಯ ಕಳೆಯೋದು ನಿಮಗೆ ಇಷ್ಟ ಆಗ್ತಿಲ್ಲ ಅಂದ್ರೆ ಅದು ಲವ್.
ಅವರು ಹೇಳುವ ಎಲ್ಲಾ ವಿಷ್ಯಗಳನ್ನು ನೆನಪಿಡೋದು: ಅವರು ಹೇಳುವ ಎಲ್ಲವನ್ನೂ ನೀವು ನೆನಪಿಟ್ಟುಕೊಂಡರೆ ಅಥವಾ ನೀವು ಹೇಳುವ ಎಲ್ಲವನ್ನೂ ಅವರು ನೆನಪಿಸಿಕೊಂಡರೆ, ಈ ಚಿಹ್ನೆಗಳು ಏನೋ ಇದೆ ಎಂದು ಸೂಚಿಸುತ್ತವೆ. ಇದರರ್ಥ ಅವರು ನಿಮ್ಮ ಮಾತನ್ನು ಚೆನ್ನಾಗಿ ಕೇಳುತ್ತಾರೆ. ಜೊತೆಗೆ ಇಬ್ಬರಿಗೂ ಲವ್ ಆಗಿದೆ ಎಂದರ್ಥ.
ಯಾವಾಗಲೂ ಅವರ ಬಗ್ಗೆ ಯೋಚಿಸೋದು: ನೀವು ಯಾವಾಗಲೂ ನಿಮ್ಮ ಫ್ರೆಂಡ್ ಬಗ್ಗೆ ಯೋಚಿಸುತ್ತಿದ್ದರೆ (thinking about them) , ಅದು ನಿಮ್ಮ ಸಂಬಂಧವು ಸ್ನೇಹವನ್ನು ಮೀರಿ ಸಾಗಿದೆ ಎಂಬುದರ ಸಂಕೇತವಾಗಿದೆ. ಎಚ್ಚರವಾಗಿರೋವಾಗ್ಲೇ ಫ್ರೆಂಡ್ ಬಗ್ಗೆ ಕನಸು ಕಾಣೋದು, ವಿಶೇಷವಾಗಿ ನಿಮ್ಮ ಸುತ್ತಲೂ ಯಾರೂ ಇಲ್ಲದೇ ಇದ್ದಾಗ, ಅವರು ಇದ್ದಂತೆ ಅನುಭವ ಆಗೋದು ಎಲ್ಲವೂ ಪ್ರೀತಿಯ ಲಕ್ಷಣ.
ಅವರನ್ನು ಭೇಟಿಯಾಗಲು ಕಾತರ: ನಿಮ್ಮ ಹೃದಯವು ಯಾವಾಗಲೂ ಸ್ನೇಹಿತನೊಂದಿಗೆ ಇದ್ದರೆ ಅಥವಾ ಅವರನ್ನು ಭೇಟಿಯಾಗುತ್ತಿದ್ದರೆ ಎಷ್ಟು ಚೆನ್ನಾಗಿರೋದು ಎಂದು ಪದೇ ಪದೇ ಅಂದುಕೊಳ್ಳುತ್ತಿದ್ದರೆ. ಭೇಟಿಯ ನಂತರ ಒಂಟಿತನ (feeling alone) ಮತ್ತು ಅವರು ನನ್ನಿಂದ ದೂರಾದ್ರೆ ಎಂಬ ಭಯ ನಿಮ್ಮನ್ನು ಕಾಡುತ್ತಿದ್ದರೆ, ಅವರ ಮೇಲೆ ನಿಮಗೆ ವಿಶೇಷವಾದ ಫೀಲಿಂಗ್ ಇದೆ ಅನ್ನೋದನ್ನು ಅರ್ಥ ಮಾಡ್ಕೊಳಿ.
ಇದೆಲ್ಲಾ ನಿಮಗೂ ನಿಮ್ಮ ಫ್ರೆಂಡ್ ಮೇಲೆ ಆಗ್ತಿದ್ರೆ, ಇನ್ನು ತಡ ಮಾಡೋದೆ ಬೇಡ. ಈವಾಗ್ಲೇ ನಿಮ್ಮ ಫ್ರೆಂಡ್ ಬಳಿ ಎಲ್ಲವನ್ನೂ ಹೇಳಿಬಿಡಿ. ಅವರಿಗೂ ನಿಮ್ಮ ಮೇಲೆ ಇದೇ ಫೀಲಿಂಗ್ ಇದ್ದರೆ, ಸ್ನೇಹವನ್ನು ಸುಲಭವಾಗಿ ಪ್ರೀತಿಯ ಹಾದಿಯಲ್ಲಿ ಕೊಂಡೊಯ್ಯಬಹುದು. ಇಲ್ಲಾಂದ್ರೆ ಇಬ್ಬರು ಫ್ರೆಂಡ್ಸ್ ಆಗಿಯೇ ಇರಬಹುದು.