ವೆಡ್ಡಿಂಗ್ ಡೇ ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಜನರು ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಳ್ಳೋದು ಇತ್ತೀಚಿಗೆ ಟ್ರೆಂಡ್ ಆಗಿದೆ. ಎಲ್ಲರ ಗಮನ ಸೆಳೆಯೋಕೆ ಕಪಲ್ಸ್ ಚಿತ್ರ-ವಿಚಿತ್ರವಾಗಿ ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬ ವಧು ಸೀರೆಯನ್ನು ಪಂಚೆಯಂತೆ ಎತ್ತಿ ಕಟ್ಟಿ ಫೋಟೋ ಶೂಟ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಈಗೀಗಾ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಗಳು ಇಲ್ಲದೇ ಮದುವೆಯೇ ನಡೆಯುವುದಿಲ್ಲ ಎಂಬ ಮಟ್ಟಿಗೆ ಟ್ರೆಂಡ್ ಸೆಟ್ ಕ್ರಿಯೇಟ್ ಆಗಿದೆ. ಡಿಫರೆಂಟ್ ಆಗಿರಬೇಕೂಂತ ಕಸದ ಮಧ್ಯೆ, ಕೆಸರಿನಲ್ಲಿ ಉರುಳಾಡ್ಕೊಂಡೆಲ್ಲಾ ಫೋಟೋಶೂಟ್ ಮಾಡ್ತಾರೆ. ಹಾಗೆಯೇ ಇತ್ತಿಚಿಗೆ ವೈರಲ್ ಆದ ವಿಡಿಯೋದಲ್ಲಿ ವಧು, ಸೀರೆಯನ್ನು ಪಂಚೆಯಂತೆ ಎತ್ತಿ ಕಟ್ಟಿ ಕಾಲಿನ ಟ್ಯಾಟೂ ತೋರಿಸಿದ್ದಾಳೆ.
ವಧು ಕಾಡಿನ ಮಧ್ಯೆ ತಾನು ಮದುವೆಗೆ ತೊಟ್ಟ ಸೀರೆ ಮೊಣಕಾಲಿನ ತನಕ ಎತ್ತಿ ಕೊಂಡು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಂಡಿದ್ದಾಳೆ. ಸದ್ಯ ಈ ಫೋಟೋ ಶೂಟ್ನ ಚಿತ್ರಗಳು ವೈರಲ್ ಆಗುತ್ತಿದ್ದು, ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ವೆಡ್ಡಿಂಗ್ ಫೋಟೋಶೂಟ್ ಅಂದ್ರೆ ವಧು ಗ್ರ್ಯಾಂಡ್ ಆಗಿ ಡ್ರೆಸ್ ಮಾಡ್ಕೊಂಡು ಫೋಟೋಗಳಿಗೆ ಫೋಸ್ ಕೊಡೋದು ಕಾಮನ್. ಆದ್ರೆ ಇಲ್ಲಿ ಮಾತ್ರ ವಧು, ಸಾಂಪ್ರದಾಯಿಕವಾಗಿ ಸೀರೆ ಉಟ್ಟು, ಆಭರಣಗಳನ್ನು ಹಾಕಿದ್ರೂ ಅಶ್ಲೀಲವಾಗಿ ಸೀರೆ ಮೇಲಕ್ಕೆತ್ತಿ ಕಟ್ಟಿದ್ದಾಳೆ ಎಂದು ನೆಟ್ಟಿಗರು ಕಮೆಂಟಿಸಿದ್ದಾರೆ.
ಒಬ್ಬ ಬಳಕೆದಾರರು, 'ಸೀರೆಯನ್ನು ಇನ್ನೂ ಸ್ಪಲ್ಪ ಮೇಲಕ್ಕೆತ್ತಿ ಕಟ್ಟಿದ್ದರೆ ಸರಿಯಾಗುತ್ತಿತ್ತು' ಎಂದು ಹಾಸ್ಯ ಮಾಡಿದ್ದಾರೆ. ಇನ್ನೊಬ್ಬರು, 'ತೋರಿಸಬೇಕೆಂದು ಹೊರಟಿದ್ದೀರಾ, ಅಡಗಿಸಬೇಕೆಂದು ಹೊರಟಿದ್ದೀರಾ' ಮೊದಲು ಡಿಸೈಡ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ವ್ಯಕ್ತಿ, 'ಇವರು ಖಂಡಿತವಾಗಿಯೂ ವರ್ಕ್ಔಟ್ ಮಾಡಬೇಕು' ಎಂದಿದ್ದಾರೆ. ಇನ್ನೊಬ್ಬರು, 'ಟ್ಯಾಟೂ ಎಲ್ಲಿಯವರೆಗೆ ಇದೆ ತೋರಿಸಿ' ಎಂದು ಕಾಲೆಳೆದಿದ್ದಾರೆ.
ಇತ್ತೀಚೆಗೆ ಡಿವೋರ್ಸ್ ಪಡೆದ ಮಹಿಳೆಯೊಬ್ಬರು ಫೋಟೋಶೂಟ್ ಮಾಡಿರುವ ಫೋಟೋ ವೈರಲ್ ಆಗಿತ್ತು. ಇದೀಗ ಈ ವಧು ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಜನರು ಸಭ್ಯತೆಯನ್ನು ಮರೆತು ಹೀಗೆಲ್ಲಾ ಮಾಡೋದು ಎಷ್ಟು ಸರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.