ಹನಿಮೂನ್ ಫೋಟೋ ಹಂಚಿಕೊಂಡ ಸಿದ್ಧಾರ್ಥ್ ಮಲ್ಯ, ಸ್ಟಾರ್ ನಟಿಯರೊಂದಿಗಿನ ಡೇಟಿಂಗ್ ನೆನಪಿಸಿದ ಭಾರತೀಯರು!

First Published | Jun 28, 2024, 7:02 PM IST

ದಿವಾಳಿಯಾಗಿ  ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಪುತ್ರ ಸಿದ್ಧಾರ್ಥ್ ಮಲ್ಯ ಇತ್ತೀಚೆಗೆ ಬಹುಕಾಲದ ಗೆಳತಿ ಜೊತೆಗೆ ಹಸೆಮಣೆ ಏರಿದ್ದಾರೆ. ಲಂಡನ್‌ನಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಸಿದ್ದಾರ್ಥ್ ಮಲ್ಯ ಅವರು  ತನ್ನ ಗೆಳತಿ ಜಾಸ್ಮಿನ್‌ ರನ್ನು ಕೈಹಿಡಿದಿದ್ದಾರೆ. ಸದ್ಯ ಹನಿಮೂನ್ ಮೂಡ್‌ನಲ್ಲಿರುವ ಸಿದ್ದಾರ್ಥ್,  ಸ್ಯಾಂಟೋರಿನಿ  ದ್ವೀಪ ಸಮುದ್ರದಲ್ಲಿರುವ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ಇದು ದಕ್ಷಿಣ ಏಜಿಯನ್ ನ ಗ್ರೀಸ್‌ನಲ್ಲಿದೆ.

ಆದರೆ ಹನಿಮೂನ್‌ ಮೂಡ್‌ ನಲ್ಲಿರುವ ಸಿದ್ದಾರ್ಥ್ ಮಲ್ಯಗೆ ಭಾರತೀಯರು ಹಳೆ ಗರ್ಲ್ ಪ್ರೆಂಡ್ಸ್ ಗಳನ್ನು ನೆನಪಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಯಾವಾಗ ಅಪ್ಪ ವಿಜಯ್ ಮಲ್ಯರನ್ನು ಕರೆದುಕೊಂಡು ಭಾರತಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಸಿದ್ಧಾರ್ಥ್ ಮಲ್ಯ ಅವರು ಬಾಲಿವುಡ್ ನಲ್ಲಿ ಅನೇಕ ಮಂದಿ ಜೊತೆಗೆ ಡೇಟಿಂಗ್ ನಲ್ಲಿದ್ದರು. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಸೋನಾಲ್ ಚೌಹಾನ್ ಮತ್ತು ಇತರರು ಸೇರಿದಂತೆ ಬಾಲಿವುಡ್‌ನ ಕೆಲವು ಮನಮೋಹಕ ನಟಿಯರೊಂದಿಗೆ ಇವರ ಹೆಸರು ತಳುಕು ಹಾಕಿಕೊಂಡಿತ್ತು. 

ಸಿದ್ಧಾರ್ಥ್ ಮಲ್ಯ ಅವರ ಡೇಟಿಂಗ್ ಇತಿಹಾಸದಲ್ಲಿ ಹೆಚ್ಚು ಚರ್ಚೆಗೆ ಒಳಗಾದ ವಿಷ್ಯ ಎಂದರೆ ಅದು ನಟಿ ದೀಪಿಕಾ ಪಡುಕೋಣೆ ಅವರೊಂದಿಗಿನ ಸಂಬಂಧ.  ಅಂದು ದೀಪಿಕಾ ಮತ್ತು ಸಿದ್ದಾರ್ಥ್ ಮಲ್ಯ ಸಂಬಂಧವು  ಟಾಕ್‌ ಆಫ್ ದಿ ಟೌನ್ ಆಗಿತ್ತು. ಐಪಿಎಲ್ ಪಂದ್ಯಗಳು, ಈವೆಂಟ್‌ಗಳು ಮತ್ತು ಸಮಾರಂಭಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಬಳಿಕ ಸಿದ್ದಾರ್ಥ್ ಆಕೆ ಹುಚ್ಚು ಹೆಣ್ಣು, ಉಡುಗೊರೆಯಾಗಿ ನೀಡಿದ್ದ ದುಬಾರಿ ವಜ್ರಗಳು ಮತ್ತು ಬ್ಯಾಗ್‌ಗಳನ್ನು ಎಂದಿಗೂ ಹಿಂದಿರುಗಿಸಲಿಲ್ಲ ಎಂದು ಆರೋಪಿಸಿದರು. ಅದಕ್ಕೆ ಕೌಂಟರ್ ಕೊಟ್ಟ ದೀಪಿಕಾ, ಡಿನ್ನರ್ ಡೇಟ್‌ನಲ್ಲಿ ಬಿಲ್ ಪಾವತಿಸಲು ಸಿದ್ಧಾರ್ಥ್ ಕೇಳಿದ್ದ ಘಟನೆಯನ್ನು ನೆನಪಿಸಿಕೊಂಡು ಮುಜುಗರಕ್ಕೀಡುಮಾಡಿದ್ದ ಎಂದು ಆರೋಪಿಸಿದ್ದರು.

Tap to resize

ದೀಪಿಕಾ ನಂತರ, ಸಿದ್ಧಾರ್ಥ್ ಕತ್ರಿನಾ ಕೈಫ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು. ಇಬ್ಬರೂ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು, ಅವರ ಸಂಬಂಧದ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡವು. ಅಂತಿಮವಾಗಿ ವೈಯಕ್ತಿಕ ಸಮಸ್ಯೆಗಳು ಮತ್ತು ವಿಭಿನ್ನ ದೃಷ್ಟಿಕೋನಗಳಿಂದಾಗಿ ಇಬ್ಬರಲ್ಲಿ ಬಿರುಕು ಮೂಡಿತು. ಸಿದ್ಧಾರ್ಥ್ ಅಥವಾ ಕತ್ರಿನಾ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ದೃಢಪಡಿಸಿರಲಿಲ್ಲ.

ನಟಿ ಸೋನಾಲ್ ಚೌಹಾಣ್ ಅವರು ಸಿದ್ಧಾರ್ಥ್ ಅವರೊಂದಿಗೆ ಸಂಪರ್ಕ ಹೊಂದಿದ ಮತ್ತೊಬ್ಬಾಕೆ. ನಟಿ, ಗಾಯಕಿಯೊಂದಿಗಿನ ಸಿದ್ಧಾರ್ಥ್ ಅವರ ಸಂಬಂಧವು ಸುದ್ದಿಯಾಯ್ತು. ಏಕೆಂದರೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡರು. ಇಬ್ಬರೂ ಒಟ್ಟಿಗೆ ವಿವಿಧ ಪಾರ್ಟಿಗಳು ಮತ್ತು ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ಅವರ ಸಂಬಂಧವು ಹೆಚ್ಚು ಕಾಲ ಉಳಿಯದಿದ್ದರೂ, ಇದು ಮಾಧ್ಯಮಗಳು ಮತ್ತು ಅಭಿಮಾನಿಗಳನ್ನು ಕುತೂಹಲ ಕೆರಳಿಸಿದ್ದು ಸುಳ್ಳಲ್ಲ

ಸಿದ್ಧಾರ್ಥ್ ಹಾಲಿವುಡ್ ನಟಿ ಫ್ರೀಡಾ ಪಿಂಟೋ ಜೊತೆಗೂ ಸಂಬಂಧ  ಹೊಂದಿದ್ದರು. ಆದರೆ ಇಬ್ಬರೂ ವದಂತಿಗಳನ್ನು ನಿರಾಕರಿಸಿದರು, ನಾವಿಬ್ಬರೂ ಕೇವಲ ಒಳ್ಳೆಯ ಸ್ನೇಹಿತರು ಎಂದೇ ಹೇಳಿಕೊಂಡರು. ಆದರೆ 2016 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಪಾರ್ಟಿಗಳಲ್ಲಿ ಸೇರಿದಂತೆ ಅವರು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡಾಗ ಅನುಮಾನಗಳು ಹೆಚ್ಚಾದವು. ಬಳಿಕ ಈ ಸಂಬಂಧವು ಬ್ರೆಕಪ್ ಆಯ್ತು.

ಇಷ್ಟೇ ಅಲ್ಲ  ಸಿದ್ಧಾರ್ಥ್ ಅವರ ಡೇಟಿಂಗ್  ಜೀವನದಲ್ಲಿ ನಟಿಯರಾದ ಸೋಫಿ ಚೌಧರಿ ಮತ್ತು ಏಂಜೆಲಾ ಜಾನ್ಸನ್ ಅವರಂತಹ ಇತರ ನಟಿಯರ ಹೆಸರು ಕೂಡ ತಳುಕು ಹಾಕಿಕೊಂಡಿತ್ತು.  

ಐಸ್ಲ್ಯಾಂಡಿಕ್ ಮಾಡೆಲ್ ಮತ್ತು ನಟಿ ಏಂಜೆಲಾ, ವರ್ಷಗಳ ಹಿಂದೆ ಸಿದ್ಧಾರ್ಥ್ ಅವರೊಂದಿಗೆ  ಸಂಬಂಧವನ್ನು ಹೊಂದಿದ್ದರು ಎಂದು ವದಂತಿ ಇತ್ತು. ಅವರ ಸಂಬಂಧದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ರೂಮರ್ ಇದ್ದಿದ್ದಂತೂ ನಿಜ.

Latest Videos

click me!