ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ತಾರಾ ಜೋಡಿ: ವಾರ್ಷಿಕೋತ್ಸವದ ಸಂಭ್ರಮ- ಕ್ಯೂಟ್​ ಫೋಟೋಸ್​

Published : May 25, 2026, 01:03 PM IST

'ಶ್ರೀರಸ್ತು ಶುಭಮಸ್ತು' ಖ್ಯಾತಿಯ ಲಾವಣ್ಯ ಭಾರದ್ವಾಜ್ ಮತ್ತು 'ಅಮೃತಧಾರೆ' ಖ್ಯಾತಿಯ ಶಶಿ ಹೆಗ್ಡೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿವಾಹ ವಾರ್ಷಿಕೋತ್ಸವದಂದು ಸುದ್ದಿಯನ್ನು ಹಂಚಿಕೊಂಡಿದ್ದು, 'ರಾಜಾ ರಾಣಿ' ಧಾರಾವಾಹಿಯಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ  ಪ್ರೇಮಕಥೆ ಕುತೂಹಲಕಾರಿಯಾಗಿದೆ.

PREV
16
ತಾರಾ ಜೋಡಿ ಕಂದನ ನಿರೀಕ್ಷೆಯಲ್ಲಿ

ಶ್ರೀರಸ್ತು ಶುಭಮಸ್ತು ಪೂರ್ಣಿ ಅರ್ಥಾತ್​ ನಟಿ ಲಾವಣ್ಯ ಭಾರದ್ವಾಜ್​ ಮತ್ತು ಅಮೃತಧಾರೆಯಲ್ಲಿ ಜೀವ ಪಾತ್ರಧಾರಿಯಾಗಿದ್ದ ಶಶಿ ದಂಪತಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ಅರ್ಥಾತ್​ ಮೇ 25 ಈ ಜೋಡಿಯ ವಿವಾಹ ವಾರ್ಷಿಕೋತ್ಸವ.

26
ವಿವಾಹ ವಾರ್ಷಿಕೋತ್ಸವ

ವಿವಾಹ ವಾರ್ಷಿಕೋತ್ಸವದ ಶುಭ ಗಳಿಗೆಯಲ್ಲಿ ಜೋಡಿ ಕ್ಯೂಟ್​ ಫೋಟೋಗಳನ್ನು ಶೇರ್​ ಮಾಡಿಕೊಂಡಿದೆ. ಇದರಲ್ಲಿ ಲಾವಣ್ಯ ಅವರು ತುಂಬು ಗರ್ಭಿಣಿಯಾಗಿದ್ದು ವಾರ್ಷಿಕೋತ್ಸವದ ನಿಮಿತ್ತ ಪತಿಯ ಜೊತೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.

36
ಲವ್​ ಮ್ಯಾರೇಜ್​

ಅಂದಹಾಗೆ ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಲಾವಣ್ಯ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದು, ಆಗಾಗ್ಗೆ ಹಲವಾರು ರೀಲ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.

46
ಇಂಟರೆಸ್ಟಿಂಗ್​ ಲವ್​ ಸ್ಟೋರಿ

ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು.

56
ಸ್ನೇಹಕ್ಕೆ ತಿರುಗಿದ ಪರಿಚಯ

‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ.

66
ಬಾಲ್ಯದ ಬಗ್ಗೆ ನಟಿ

ಮದುವೆಯಾಗಿ ವರ್ಷದ ಬಳಿಕ ಈ ಜೋಡಿ ಈಚೆಗೆ ಮನಾಲಿಗೆ ಹೋಗಿ ಪ್ರವಾಸ ಮಾಡಿದ್ದು, ಇದು ನಮ್ಮ ಹನಿಮೂನ್​ ಎಂದು ತಮಾಷೆ ಮಾಡಿದ್ದರು. ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ತಂದೆ, ಲಾವಣ್ಯ ಹುಟ್ಟಿದ ಬಗ್ಗೆ ತಿಳಿಸಿದ್ದರು. ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್‌ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories