ಒಬ್ಬನ ಜೊತೆ ಸಂಬಂಧದಲ್ಲಿ ನಂಬಿಕೆ ಇಲ್ಲ: ದೈಹಿಕ ಕ್ರಿಯೆಯ ಬಗ್ಗೆ ನಟಿ ಶಹಾನಾ ಗೋಸ್ವಾಮಿ ಓಪನ್​ ಮಾತೇನು

Published : May 28, 2026, 05:29 PM IST

ನಟಿ ಶಹನಾ ಗೋಸ್ವಾಮಿ ತಮ್ಮ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತಾನು ಅನೇಕ ಮುಕ್ತ ಸಂಬಂಧಗಳಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಪ್ರೀತಿಯು ಒಬ್ಬ ವ್ಯಕ್ತಿಗೆ ಸೀಮಿತವಾಗಬಾರದು ಮತ್ತು ಕೆಲವು ಸಂಬಂಧಗಳು ದೈಹಿಕವಾಗಿಯೂ ಬೆಳೆಯಬಹುದು ಎಂಬುದು ತಮ್ಮ ದೃಷ್ಟಿಕೋನ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

PREV
15
ಸಂಬಂಧಗಳ ಬಗ್ಗೆ ನಟಿ ಶಹನಾ ಗೋಸ್ವಾಮಿ

ಸಿನಿಮಾ ಸೆಲೆಬ್ರಿಟಿಗಳ ಬದುಕು ಯಾವತ್ತಿಗೂ ಸಂಬಂಧಗಳ ಸುತ್ತಲೂ ಸುತ್ತುತ್ತಲೇ ಇರುತ್ತದೆ. ಆದರೆ ಹಲವರು ಅದನ್ನು ಓಪನ್​ ಆಗಿ ಹೇಳಿಕೊಳ್ಳುವುದಿಲ್ಲ. ಆದರೆ ಇದೀಗ ಹೀರೋಯಿನ್, ರಾಕ್ ಆನ್ ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವ ನಟಿ ಶಹನಾ ಗೋಸ್ವಾಮಿ (Shahana Goswami) ತಮ್ಮ ಬಹು ಸಂಬಂಧಗಳ ಬಗ್ಗೆ ಓಪನ್​ ಆಗಿ ಮಾತನಾಡಿದ್ದಾರೆ.

25
ಓರ್ವನ ಜೊತೆ ವಿಶ್ವಾಸವಿಲ್ಲ

ನಾನು ಕೇವಲ ಒಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿಲ್ಲ, ಅನೇಕ ಜನರ ಜೊತೆ ನನ್ನ ಸಂಬಂಧವಿದೆ. ಪ್ರೀತಿಯ ಬಗ್ಗೆ ನನ್ನ ದೃಷ್ಟಿಕೋನವೇ ಬೇರೆ ಇದೆ. ಹಲವಾರು ಮುಕ್ತ ಸಂಬಂಧಗಳಲ್ಲಿ ಇದ್ದೇನೆ. ಈ ಸಂಬಂಧಗಳಲ್ಲಿ ಯಾವುದೂ ನನಗೆ ಸಾಂದರ್ಭಿಕವಲ್ಲ ಎಂದಿದ್ದಾರೆ.

35
ಕೆಲವು ದೈಹಿಕ ಸಂಬಂಧ

ಹಲವರ ಜೊತೆ ದೀರ್ಘಕಾಲೀನ ಸಂಬಂಧಗಳನ್ನು ಹೊಂದಿದ್ದೇನೆ. ಕೆಲವು ಸ್ನೇಹಗಳಿಗೆ ಸೀಮಿತವಾದರೆ, ಇನ್ನು ಕೆಲವು ದೈಹಿಕ ಸಂಬಂಧಗಳಾಗಿ ಬೆಳೆಯುತ್ತವೆ. ಈ ಸಂಬಂಧಗಳಲ್ಲಿ ಯಾವುದೂ ಯಾವುದೇ ನಿರ್ದಿಷ್ಟ ದಿಕ್ಕಿನಲ್ಲಿ ಬಲವಂತವಾಗಿಲ್ಲ, ಎಲ್ಲವೂ ಸಹಮತದ ಮೇರೆಯೇ ನಡೆಯುತ್ತದೆ ಎಂದು ನಟಿ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್​ಕಾಸ್ಟ್​ನಲ್ಲಿ ಹೇಳಿದ್ದಾರೆ.

45
ಏನಾಗುತ್ತೆ ಯೋಚಿಸಲ್ಲ

ನನ್ನ ಫ್ರೆಂಡ್ಸ್​ಗಳಲ್ಲಿ ಕೆಲವರು ಕೇವಲ ಸ್ನೇಹವಾಗಿರುತ್ತದೆ. ಕೆಲವೊಮ್ಮೆ ಅದು ಭೌತಿಕವಾಗಿರುತ್ತದೆ. ಅದನ್ನು ಒಂದೇ ವಿಷಯಕ್ಕೆ ಸಂಕುಚಿತಗೊಳಿಸುವ ಅಗತ್ಯವಿಲ್ಲ. ಮುಂದೆ ಏನಾಗುತ್ತದೆ ಎಂದು ನಾನು ಯೋಚಿಸುವುದಿಲ್ಲ. ಏಕೆಂದರೆ, ಸ್ನೇಹದಲ್ಲಿ ಮುಕ್ತರಾಗಿರುವಾಗ, ಇವೆಲ್ಲಾ ಮ್ಯಾಟರೇ ಆಗುವುದಿಲ್ಲ ಎಂದಿದ್ದಾರೆ ನಟಿ.

55
ಒಬ್ಬ ಪುರುಷ ಎನ್ನೋದು ತಪ್ಪು

ಭಾವನೆ, ಪ್ರೀತಿ ಎಂದರೆ ಸಂಪೂರ್ಣವಾಗಿ ಮತ್ತು ಒಬ್ಬ ಪುರುಷನೊಂದಿಗೆ ಮಾತ್ರ ಇರುವುದು ಎಂಬ ಕಲ್ಪನೆಯು ಎಷ್ಟು ಆಳವಾಗಿ ಬೇರೂರಿದೆ ಎಂದರೆ ಅದನ್ನು ಹೊರತುಪಡಿಸಿ ಯಾವುದೇ ಸಂಬಂಧವು ಅನೇಕ ಜನರಿಗೆ ತಪ್ಪಾಗಿ ಅನಿಸುತ್ತದೆ. ಪ್ರೀತಿ ಮುಕ್ತವಾಗಿರಬೇಕು ಎಂದು ನಾನು ಯಾವಾಗಲೂ ನಂಬಿದ್ದೆ. ಅದು ಮಿತಿಗೊಳಿಸುವ ಅಥವಾ ಬಂಧಿಸುವ ವಿಷಯವಾಗಬಾರದು. ಅದಕ್ಕೆ ನಾನು ಎಲ್ಲಾ ಓಪನ್​ ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories