ಸುಹಾನಾ ಅಗಸ್ತ್ಯ ಪ್ರೇಮದಲ್ಲಿ ಖಾನ್ & ಬಚ್ಚನ್ ಕುಟುಂಬ ನಿರೀಕ್ಷಿಸದ ಟ್ವಿಸ್ಟ್‌: ದಿ ಆರ್ಚೀಸ್ ತಂಡ ಹೇಳಿದ್ದೇನು?

First Published | Dec 31, 2023, 2:27 PM IST

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹಾಗೂ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಆಗಸ್ತ್ಯ ನಂದಾ ಅವರು  ಇತ್ತೀಚೆಗಷ್ಟೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಈ ಹಿಂದೆಯೇ ಗಾಸಿಪ್ ಆಗಿತ್ತು. ಆದರೆ ಈಗ ಮತ್ತೆ  ಈ ವಿಚಾರ ಮುನ್ನೆಲೆಗೆ ಬಂದಿದೆ. 

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹಾಗೂ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಆಗಸ್ತ್ಯ ನಂದಾ ಅವರು  ಇತ್ತೀಚೆಗಷ್ಟೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. 

ಜೋಯಾ ಅಖ್ತರ್ ಅವರ ನಿರ್ದೇಶನ ದಿ ಅರ್ಚೀಸ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಇಬ್ಬರೂ ಸಿನಿಮಾರಂಗವನ್ನು ಪ್ರವೇಶಿಸಿದ್ದರು. ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಈ ಹಿಂದೆಯೇ ಗಾಸಿಪ್ ಆಗಿತ್ತು. ಆದರೆ ಈಗ ಮತ್ತೆ  ಈ ವಿಚಾರ ಮುನ್ನೆಲೆಗೆ ಬಂದಿದೆ. 

Tap to resize

ಅಂಗ್ಲ ಮಾಧ್ಯಮವೊಂದರ ವರದಿಯ ಪ್ರಕಾರ, ಸುಹಾನ ಖಾನ್ ಹಾಗೂ ಆಗಸ್ತ್ಯ ನಂದಾ ಬೇರ್ಪಡಿಸಲಾಗದಷ್ಟು ಹತ್ತಿರವಾಗಿದ್ದಾರೆ ಎಂದು ತಿಳಿದು ಬಂದಿದೆ. ದಿ ಆರ್ಚೀಸ್ ಸೆಟ್‌ನಲ್ಲಿಯೂ ಕೂಡ ಇವರಿಬ್ಬರು ಒಬ್ಬರಿಂದೊಬ್ಬರು ಕಣ್ತೆಗೆಯದಂತೆ ಇರುತ್ತಿದ್ದರು. ಒಬ್ಬರನೊಬ್ಬರು ನೋಡುತ್ತಲೇ ಇರುತ್ತಾ ಜೊತೆಯಲ್ಲೇ ಇದ್ದರು. 

ಈ ಯುವ ಲವ್‌ಬರ್ಡ್‌ಗಳ ಒಲವಿನ ಬಗ್ಗೆ ದಿ ಆರ್ಚೀಸ್‌ ಸಿನಿಮಾ ತಂಡಕ್ಕೂ ಚೆನ್ನಾಗೆ ತಿಳಿದಿತ್ತು.  ಸಿನಿಮಾ ತಂಡದ ಎಲ್ಲರೂ ಇಡೀ ಸೆಟ್‌ನಲ್ಲಿ ಅಡ್ಡಾಡುತ್ತಿದ್ದಾರೆ. ಈ ಲವ್‌ಬರ್ಡ್‌ಗಳು ಮಾತ್ರ ಯಾವುದಾದರು ಮೂಲೆ ಸೇರಿ ಮಾತನಾಡುತ್ತಾ ನಿಂತು ಬಿಡುತ್ತಿದ್ದರು. ಜೊತೆಯಾಗಿ ಊಟ ಮಾಡುತ್ತಿದ್ದರು ಎಂದು ಈ ಸಿನಿಮಾ ತಂಡದ ಮೂಲವೊಂದು ವರದಿ ಮಾಡಿದೆ. 


ಆದರೆ ಬಾಲಿವುಡ್‌ನ ಸ್ಟಾರ್ ಕಿಡ್‌ಗಳ ಈ ಪ್ರೇಮಕ್ಕೆ ಬಚ್ಚನ್ ಹಾಗೂ ಖಾನ್ ಕುಟುಂಬಗಳ ಪ್ರತಿಕ್ರಿಯೆ ಹೇಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಕುಟುಂಬದವರ ಜೊತೆಯೂ ಆತ್ಮೀಯ ಸಂಬಂಧವನ್ನು ಹೊಂದಿರುವ  ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸುಹಾನಾ ಮತ್ತು ಅಗಸ್ತ್ಯ ನಡುವಿನ ಒಡನಾಟವು ದಿ ಆರ್ಚಿಸ್‌ಗಾಗಿ ಒಟ್ಟಿಗೆ ಇರುವವರೆಗೂ ಇರುತ್ತದೆ ಎಂದು ಮೊದಲಿಗೆ ಎರಡೂ ಕುಟುಂಬಗಳು ಭಾವಿಸಿದ್ದವು. ಆದರೆ ಈ ಎರಡು ಕುಟುಂಬಗಳ ನಿರೀಕ್ಷೆ ಸುಳ್ಳು ಮಾಡಿರುವ ಈ ಜೋಡಿ ದಿ ಆರ್ಚೀಸ್ ಸಿನಿಮಾದ ನಂತರವೂ ತಮ್ಮ ಸಂಬಂಧವನ್ನು ಮುಂದುವರಿಸಿದ್ದಾರೆ. 

ಮೊದಲಿಗೆ ಖಾನ್ ಹಾಗೂ ಬಚ್ಚನ್ ಕುಟುಂಬ ಇದನ್ನು ಪೆಹಲಾ ಪೆಹಲಾ ಪ್ಯಾರ್(ಮೊದ ಮೊದಲ ಪ್ರೀತಿ) ಎಂದೇ ಭಾವಿಸಿದ್ದರು. ಹೆಚ್ಚೆಂದರ ದಿ ಆರ್ಚೀಸ್ ಶೂಟಿಂಗ್ ಮುಗಿಯುವವರೆಗೆ ಈ ಜೋಡಿ ಜೊತೆಗಿರಬಹುದು ಎಂದು ಭಾವಿಸಿದ್ದರು. 

ಆದರೆ ಈಗ ಸಂಬಂಧ ಹೀಗೆಯೇ ಮುಂದುವರೆದಿದ್ದು, ಅವರಿಬ್ಬರೂ ಯುವ ಜೋಡಿಗಳಾಗಿ ಮುಂದುವರಿಯಲಿದ್ದಾರೆ. ಅದು ಒಳ್ಳೆಯದೇ ಯುವ ಜೋಡಿ ಪ್ರೀತಿಯನ್ನು ಹುಡುಕಲಿ, ಸುಂದರವಾದ ಸಂಬಂಧವೊಂದು ಮುಂದೆ ಇದನ್ನು ಎಲ್ಲಿಗೆ ಕೊಂಡೊಯ್ಯುತದೋ ಯಾರಿಗೆ ಗೊತ್ತು ಎಂದು ಹೇಳಿಕೊಂಡಿದ್ದಾರೆ ಎಂಬ ಅಭಿಪ್ರಾಯವಿದೆ ಎಂದು ತಿಳಿದು ಬಂದಿದೆ. 

ಕೆಲವು ವರದಿಗಳ ಪ್ರಕಾರ ಈ ಹಿಂದೆಯೇ ಅಗಸ್ತ್ಯ ತಾಯಿ ಶ್ವೇತಾ ಬಚ್ಚನ್ ಅವರು ತನ್ನ ಮಗನ ಈ ಪ್ರೇಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿತ್ತು.  ಆಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ, ಸುಹಾನಾ ಹಾಗೂ ಅಗಸ್ತ್ಯ ಇಬ್ಬರೂ ಜೋಡಿಗಳಾಗಿದ್ದು, ಅವರು ತಮ್ಮ ಸಂಬಂಧವನ್ನು ಎಲ್ಲೂ ಅಡಗಿಸಿಟ್ಟಿಲ್ಲ, 

ಅಲ್ಲದೇ ಅಗಸ್ತ್ಯ ತನ್ನ ಪ್ರೇಯಸಿ ಸುಹಾನಾಳನ್ನು ಕ್ರಿಸ್‌ಮಸ್ ಪಾರ್ಟಿಗೂ ಕರೆದೊಯ್ದಿದ್ದ. ಈ ಪಾರ್ಟಿಯನ್ನು ಅಗಸ್ತ್ಯನ  ತಂದೆಯ ಕಡೆಯ ಕುಟುಂಬದವರು ಆಯೋಜಿಸಿದ್ದರು

ಅಲ್ಲಿ ಆತ ಸುಹಾನಾಳನ್ನು ತನ್ನ ಸಂಗಾತಿ ಎಂದೇ ಪರಿಚಯಿಸಿದ್ದ. ಅಲ್ಲದೇ ಅಗಸ್ತ್ಯ ತಾಯಿ ಶ್ವೇತಾ ಬಚ್ಚನ್ ಕೂಡ ಈ ಸಂಬಂಧವನ್ನು ಒಪ್ಪಿಕೊಂಡರು ಎಂದು ತಿಳಿದು ಬಂದಿದೆ. 

Latest Videos

click me!