ಬಾಲಿವುಡ್ ನಟಿ ಸಾರಾ ಅಲಿ ಖಾನ್ ಬಾಲಿವುಡ್‌ನ ಖ್ಯಾತ ಕಲಾವಿದರಾದ ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ ಅವರ ಮಗಳು, ಪಟೌಡಿ ರಾಜಮನೆತನದ ಮೊದಲ ಕುಡಿ, ಬಾಲಿವುಡ್‌ನ ಹಿರಿಯ ನಟಿ ಶರ್ಮಿಳಾ ಟಾಗೋರ್ ಮೊಮ್ಮಗಳು. ಆದರೆ ಬೆಳೆದಿದ್ದು ಮಾತ್ರ ಒಂಟಿಯಾಗಿದ್ದ ಅಮ್ಮ ಅಮೃತಾ ಸಿಂಗ್ ಜೊತೆ.
ಪ್ರೀತಿಸಿ ಮದ್ವೆಯಾದ ಸೈಪ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರು 2004 ರಲ್ಲಿ ವಿಚ್ಛೇದನದ ಪಡೆದು ಪರಸ್ಪರ ದೂರ ದೂರವಾಗಿದ್ದರು. ಆಗ ಸಾರಾ ಅಲಿ ಖಾನ್‌ಗೆ ಕೇವಲ 9 ವರ್ಷ,
ಇತ್ತ ಸೈಫ್ ಅಲಿ ಖಾನ್ ತನಗಿಂತ ವಿಚ್ಚೇದನದ 6-7 ವರ್ಷಗಳ ನಂತರ ಸರಿ ಸುಮಾರು 10 ವರ್ಷ ಕಿರಿಯವಳಾದ ಬಾಲಿವುಡ್ ನಟಿ ಕರೀನಾ ಕಪೂರ್ ಅವರನ್ನು 2012ರಲ್ಲಿ ಮದ್ವೆಯಾಗಿದ್ದರು.
ಆದರೆ ಅಮೃತಾ ಸಿಂಗ್ ಮಾತ್ರ ಮದ್ವೆಯಾಗದೆಯೇ ಉಳಿದ್ದು, ಇಬ್ಬರು ಮಕ್ಕಳಾದ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಖಾನ್ ಅವರನ್ನು ಬೆಳೆಸಿ ದೊಡ್ಡವರಾಗಿಸಿದರು.
ಹೀಗಿರುವಾಗ ಇತ್ತೀಚೆಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಒಬ್ಬಂಟಿ ತಾಯಿಯ ಜೊತೆ ತಾನು ಹೇಗೆ ಬೆಳೆದೆ, ಅಮೃತಾ ಸಿಂಗ್ ಅವರು ತನ್ನನ್ನು ಯಾರಿಗೂ ಅಂಜದಂತೆ ಧೈರ್ಯವಾಗಿ ಸ್ವಾತಂತ್ರವಾಗಿ ಹೇಗೆ ಬೆಳೆಸಿದರು. ಆ ಅನುಭವ ಹೇಗಿತ್ತು ಎಂಬ ಬಗ್ಗೆ ಮಾತನಾಡಿದ್ದಾರೆ.
ಒಬ್ಬಂಟಿ ಅಮ್ಮನೊಂದಿಗೆ (single mother) ಬೆಳೆದ ನನಗೆ ಸಣ್ಣ ವಯಸ್ಸಿನಲ್ಲೇ ಯಾರಿಗೂ ಅವಲಂಬಿತವಾಗಬಾರದು ಎಂಥಾಹ ಪರಿಸ್ಥಿತಿಯಲ್ಲೂ ಯಾರಿಗೂ ಅಂಜದೇ ಮುಂದುವರಿಯಬೇಕು ಎಂಬುದರ ಅರಿವಾಗಿತ್ತು ಎಂಬುದನ್ನು ಸಾರಾ ಹೇಳಿದ್ದಾರೆ.
ಇ ಟೈಮ್ಸ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರಿಗೆ ತಮ್ಮ ಬದುಕಿನ ಮೇಲೆ ಪ್ರಭಾವ ಬೀರಿದ ಓರ್ವ ಪ್ರಭಾವಿ ದಿಟ್ಟ ಮಹಿಳೆಯ ಬಗ್ಗೆ ಕೇಳಿದಾಗ ಅವರು ತಮ್ಮ ಅಮ್ಮ ಅಮೃತಾ ಸಿಂಗ್ ಬಗ್ಗೆ ಹೆಮ್ಮೆಯ ಮಾತನಾಡಿದ್ದಾರೆ.
ಇವತ್ತು ನಾನು ಏನಾಗಿದ್ದೇನೋ ಅದರ ಹಿಂದೆ ಅಮ್ಮನ ಪಾತ್ರ ಬಹಳ ಪ್ರಭಾವಶಾಲಿಯಾಗಿದೆ ಎಂದು ಹೇಳಿಕೊಂಡಿದ್ದಾರೆ ಸಾರಾ ಅಲಿ ಖಾನ್
ಬಹಳ ಸಣ್ಣ ವಯಸ್ಸಿನಲ್ಲೇ ಯಾರೂ ಕೂಡ ನನಗಾಗಿ ಏನೂ ಮಾಡುವುದಿಲ್ಲ ಎಂಬುದನ್ನು ನಾನು ಅರಿತುಕೊಂಡೆ, ಒಬ್ಬಂಟಿ ತಾಯಿಯೊಂದಿಗೆ ಬದುಕುವುದು ನಿಮ್ಮ ಬದುಕಿನ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ.
ನಿಮಗೆ ಸಹಾಯ ಸಿಗುವುದಿಲ್ಲ ಎಂದಲ್ಲಾ, ಆದರೆ ನಿಮ್ಮ ಬದುಕಿನ ಬೆಳವಣಿಗೆಗೆ ಆರಂಭಕ್ಕೆ ನೀವೆ ಮೊದಲ ಹೆಜ್ಜೆ ಇಡಬೇಕು, ನೀವು ಅದೃಷ್ಟವಂತರಾಗಿದ್ದರೆ, ಲಕ್ ನಿಮ್ಮ ಕೈ ಹಿಡಿದರೆ ದೇವರು ಬಯಸಿದರೆ ನೀವು ಬಯಸಿದ್ದು ಸಂಭವಿಸುತ್ತದೆ ಎಂದು ಸಾರಾ ಅಲಿ ಖಾನ್ ಹೇಳಿದ್ದಾರೆ.
ಇನ್ನು ಸಾರಾ ಸಿನಿಮಾ ಕೆಲಸಗಳ ಬಗ್ಗೆ ಹೇಳುವುದಾದರೆ, ನೆಟ್‌ಫ್ಲಿಕ್ಸ್‌ನಲ್ಲಿ ಮರ್ಡರ್ ಮುಬಾರಕ್ ಹಾಗೂ ಅಮೆಜಾನ್ ಫ್ರೈಮ್ ವೀಡಿಯೋದಲ್ಲಿ ಆಯೇ ವತನ್ ಮೇರೆ ವತನ್ ಎಂಬ ಎರಡು ಸೀರಿಸ್‌ಗಳಲ್ಲಿ ನಟಿಸಿದ್ದಾರೆ. ಹೋಮಿ ಅದಜಾನಿಸ್ ನಿರ್ದೇಶನದ ಮರ್ಡರ್ ಮುಬಾರಕ್ ಈಗಾಗಲೇ ಬಿಡುಗಡೆಯಾಗಿದ್ದು, ವಿಜಯ್ ವರ್ಮಾ ಪಂಕಜ್ ತ್ರಿಪಾಠಿ ಡಿಂಪಲ್ ಕಪಾಡಿಯಾ ಮುಂತಾದವರು ನಟಿಸಿದ್ದಾರೆ. ಹಾಗೆಯೇ ಆಯೇ ವತನ್ ಮೇರೆ ವತನ್ ದಲ್ಲಿ ಇಮ್ರಾನ್ ಹಶ್ಮಿ ಅವರು ಗೆಸ್ಟ್ ರೋಲ್ ನಿರ್ವಹಿಸಿದ್ದಾರೆ.