Published : Mar 15, 2024, 11:39 AM ISTUpdated : Mar 15, 2024, 11:49 AM IST
ಮುಕೇಶ್ ಅಂಬಾನಿ-ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್ ಗುಜರಾತ್‌ನ ಜಾಮ್ನಾ ನಗರದಲ್ಲಿ ಅದ್ಧೂರಿಯಾಗಿ ನಡೆದಿದೆ. ಆದ್ರೆ ಸಮಾರಂಭವನ್ನು ಗುಜರಾತ್ ಬದಲು ಈ ದೇಶದಲ್ಲಿ ಆಯೋಜಿಸೋಕೆ ಪ್ಲಾನ್ ಮಾಡಿತ್ತಂತೆ ಅಂಬಾನಿ ಫ್ಯಾಮಿಲಿ.
ವಿಶ್ವದ ಬಿಲಿಯನೇರ್‌ಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ-ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್ ಗುಜರಾತ್‌ನ ಜಾಮ್ನಾ ನಗರದಲ್ಲಿ ಅದ್ಧೂರಿಯಾಗಿ ನಡೆದಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು. ಜಗತ್ತೇ ಅದ್ಧೂರಿ ಸಮಾರಂಭವನ್ನು ಬೆರಗುಗಣ್ಣಿನಿಂದ ನೋಡಿದೆ.
28
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ, ಮಾರ್ಚ್ 1ರಿಂದ 3ರ ವರೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗಾಗಿ ಮೂರು ದಿನಗಳ ವಿವಾಹ ಪೂರ್ವ ಸಮಾರಂಭವನ್ನು ಆಯೋಜಿಸಿದ್ದರು. ಅನಂತ್-ರಾಧಿಕಾ , ಬಾಲ್ಯದ ದಿನಗಳನ್ನು ಜೊತೆಯಾಗಿ ಕಳೆದಿರುವ ಕಾರಣಕ್ಕಾಗಿ ಜಾಮ್ನಾ ನಗರವನ್ನು ಇವೆಂಟ್ ನಡೆಸಲು ಆಯ್ಕೆ ಮಾಡಲಾಗಿತ್ತು.
38
ಆದರೆ ಅಂಬಾನಿ ಕುಟುಂಬ ಇದಕ್ಕೂ ಮೊದಲು ವಿದೇಶದಲ್ಲಿ ಪ್ರಿ ವೆಡ್ಡಿಂಗ್ ನಡೆಸಲು ಪ್ಲಾನ್ ಮಾಡಿತ್ತು. ಹೌದು, ಬಹುತೇಕರಿಗೆ ಗೊತ್ತಿಲ್ಲದ ವಿಷಯವಿದು.
48
ವರದಿಯ ಪ್ರಕಾರ, ಅಂಬಾನಿಗಳು ಮೂಲತಃ ಉತ್ತರ ಆಫ್ರಿಕಾದ ಮೊರಾಕೊದಲ್ಲಿ ಅನಂತ್ ಮತ್ತು ರಾಧಿಕಾ ಅವರ ಮದುವೆಯ ಪೂರ್ವ ಸೋಯರಿಯನ್ನು ಆಯೋಜಿಸಲು ಯೋಜಿಸಿದ್ದರು.
58
ಅಂಬಾನಿಗಳು ಮೊದಲು ಉತ್ತರ ಆಫ್ರಿಕಾದಲ್ಲಿ ಪ್ರಿ-ವೆಡ್ಡಿಂಗ್ ಇವೆಂಟ್ ನಡೆಸಲು ನಿರ್ಧರಿಸಿದರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಗಮ್ಯಸ್ಥಾನದ ಆಚರಣೆಗಳಿಗೆ ಫಾರಿನ್ ಕಂಟ್ರಿಗಳಿಗಿಂತ ಹೆಚ್ಚಾಗಿ ಭಾರತವನ್ನು ಆಯ್ಕೆ ಮಾಡುವಂತೆ ವಿನಂತಿಸಿದ ಕಾರಣ ಗುಜರಾತ್‌ನಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು ಎಂದು ತಿಳಿದುಬಂದಿದೆ.
68
ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಬಾಲಿವುಡ್, ಟೆಕ್ ಮತ್ತು ಸಂಗೀತ ಉದ್ಯಮ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು. ಬಾರ್ಬಡಿಯನ್ ಗಾಯಕ ರಿಹಾನ್ನಾ ಶೋವನ್ನು ಸಹ ಏರ್ಪಡಿಸಲಾಗಿತ್ತು. ಮೂವರು ಖಾನ್‌ಗಳಾದ ಅಮೀರ್, ಶಾರುಖ್ ಮತ್ತು ಸಲ್ಮಾನ್ ಸಹ ಇವೆಂಟ್‌ನಲ್ಲಿ ಡ್ಯಾನ್ಸ್ ಮಾಡಿದರು.
78
ವರದಿಯ ಪ್ರಕಾರ, ಅತಿಥಿಗಳಿಗಾಗಿ ಒಟ್ಟು 2500 ಖಾದ್ಯಗಳನ್ನು ತಯಾರಿಸಲಾಯಿತು. 21 ರಿಂದ 65 ಬಾಣಸಿಗರು ಇದನ್ನು ತಯಾರಿಸಿದರು. ಅಂಬಾನಿಗಳು ಪ್ರಿ ವೆಡ್ಡಿಂಗ್ ಇವೆಂಟ್‌ನ ಭರ್ಜರಿ ಔತಣಕೂಟಕ್ಕೆ ಸುಮಾರು 210 ಕೋಟಿ ಖರ್ಚು ಮಾಡಿದ್ದಾರೆ.
88
ಅಂಬಾನಿಗಳು ಅನಂತ್-ರಾಧಿಕಾ ವಿವಾಹ ಪೂರ್ವ ಸಮಾರಂಭಕ್ಕೆ ಅಂದಾಜು 120 ಮಿಲಿಯನ್ ಪೌಂಡ್ ಅಂದರೆ ಸುಮಾರು1259 ಕೋಟಿ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅನಂತ್ ಮತ್ತು ರಾಧಿಕಾ ಜುಲೈ 12, 2024 ರಂದು ವಿವಾಹವಾಗಲಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.