ಸಾನಿಯಾ ಮಿರ್ಜಾ ಮಗನಿಗೆ ಶಾಲೆಯಲ್ಲಿ ಕಿರುಕುಳ; ತಂದೆಯ ಮೂರನೇ ಮದುವೆ ಕಾರಣ

First Published | Feb 4, 2024, 12:25 PM IST

ಸಾನಿಯಾ ಮಿರ್ಜಾ ಮಾಜಿ ಪತಿ ಶೋಯೆಬ್ ಮಲಿಕ್ ಮೂರನೇ ವಿವಾಹವಾಗಿದ್ದರಿಂದ ಅವರ ಮಗ ಪುಟ್ಟ ಇಝಾನ್‌ ಶಾಲೆಯಲ್ಲಿ ಎಷ್ಟರ ಮಟ್ಟಿಗೆ ದೌರ್ಜನ್ಯ ಎದುರಿಸುತ್ತಿದ್ದಾನೆ ಎಂದರೆ ಆತ ಶಾಲೆಗೆ ಹೋಗಲೇ ಒಪ್ಪುತ್ತಿಲ್ಲವಂತೆ!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದಾಗಿನಿಂದ, ಶೋಯೆಬ್ ಮತ್ತು ಸಾನಿಯಾ ಮಿರ್ಜಾ ನಡುವಿನ ಪ್ರಕ್ಷುಬ್ಧ ವಿವಾಹದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ತಂದೆಯ ಈ ಕೃತ್ಯ ಸಾನಿಯಾ ಪುತ್ರ 5 ವರ್ಷದ ಇಝಾನ್ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರುತ್ತಿದೆಯಂತೆ.

ಭಾರತದ ಟೆನಿಸ್ ತಾರೆ ಸಾನಿಯಾ ಶೋಯೆಬ್‌ನಿಂದ ವಿಚ್ಛೇದನ ಪಡೆದಿರುವುದನ್ನು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದೃಢಪಡಿಸಿದ ನಂತರ, ಸಾನಿಯಾ ಮತ್ತು ಶೋಯೆಬ್ ಅವರ ಮಗ ಇಝಾನ್ ಮಿರ್ಜಾ ಮಲಿಕ್ ಸಾಕಷ್ಟು ಅಹಿತಕರ ಸಂದರ್ಭಗಳನ್ನು ಎದುರಿಸುತ್ತಿದ್ದಾನೆ ಎನ್ನಲಾಗಿದೆ.

Tap to resize

ಈಗ ಇತ್ತೀಚಿನ ವರದಿಗಳ ಪ್ರಕಾರ, ಸಾನಿಯಾ ಮತ್ತು ಶೋಯೆಬ್ ಅವರ ಮಗ ಇಝಾನ್ ತನ್ನ ತಂದೆಯ ಮೂರನೇ ಮದುವೆಯ ನಂತರ ಶಾಲೆಯಲ್ಲಿ ದೌರ್ಜನ್ಯ ಎದುರಿಸುತ್ತಿದ್ದಾನೆ.

ನಯೀಮ್ ಹನೀಫ್ ಎಂಬ ಪಾಕಿಸ್ತಾನಿ ಪತ್ರಕರ್ತ ಸಾನಿಯಾ ತನ್ನ ಮಗನ ಮಾನಸಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ತನ್ನ ತಂದೆಯ ಮೂರನೇ ಮದುವೆಯ ಸುತ್ತಲಿನ ಸುದ್ದಿಯು ಅವನಿಗೆ ಭಾವನಾತ್ಮಕ ಯಾತನೆ ಉಂಟುಮಾಡುತ್ತಿದೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ವಿವಾಹವಾದ 8 ವರ್ಷಗಳ ಬಳಿಕ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಂಪತಿಗೆ 2018ರ ಅಕ್ಟೋಬರ್ 30ರಂದು ಪುತ್ರ ಇಝಾನ್‌  ಜನಿಸಿದ್ದ.

ಸಾನಿಯಾ ಆಗಾಗ ಮಗನೊಂದಿಗಿನ ಚಿತ್ರಗಳನ್ನು ಹಂಚಿಕೊಳ್ಳುತ್ತಾ, ಈತ ತಮ್ಮ ಜೀವನದ ಲೈಫ್‌ಲೈನ್, ಕಷ್ಟದ ಕತ್ತಲಲ್ಲಿ ಕಾಣುವ ಬೆಳಕು ಎಂದೆಲ್ಲ ಕ್ಯಾಪ್ಶನ್ ಕೊಡುತ್ತಿರುತ್ತಾರೆ.

ಸಾನಿಯಾ ಶೋಯೆಬ್ ದಂಪತಿ ದುಬೈನಲ್ಲಿ ವಾಸವಾಗಿದ್ದರು. ಆದರೆ, ಶೋಯೆಬ್‌ನ ಏಕಪಕ್ಷೀಯ ವಿಚ್ಚೇದನ ಖುಲಾದ ಬಳಿಕ ಸಾನಿಯಾ ಹೈದರಾಬಾದ್‌ನ ತವರುಮನೆಯಲ್ಲಿದ್ದಾರೆ. ಮಗನನ್ನು ಕೂಡಾ ಇಲ್ಲಿಯ ಶಾಲೆಗೆ ಸೇರಿಸಿದ್ದಾರೆ.

ಆದರೆ, ಶಾಲೆಯಲ್ಲಿ ಅವನ ಸಹಪಾಠಿಗಳು ಮತ್ತು ಇತರರು ಅವನನ್ನು ತಂದೆಯ ಮದುವೆಯ ಬಗ್ಗೆ ಕೇಳುತ್ತಲೇ ಇರುತ್ತಾರೆ. ಹಾಗೂ ಕೆಲವರು ಟೀಸ್ ಮಾಡುತ್ತಾರೆ. ಈ ಕಾರಣದಿಂದ ಆತ ಇನ್ನು ಮುಂದೆ ಶಾಲೆಗೆ ಹೋಗುವುದಿಲ್ಲ ಎಂದು ಹಟ ಹಿಡಿದಿದ್ದಾನಂತೆ. 

ಇತ್ತೀಚೆಗೆ, ಸಾನಿಯಾ ಮಿರ್ಜಾ Instagram‌ನಲ್ಲಿ ತಮ್ಮ ಮಗ ಇಝಾನ್ ಮತ್ತು ಸೊಸೆ ದುವಾ ಅವರೊಂದಿಗೆ ಚಿತ್ರವನ್ನು ಹಂಚಿಕೊಂಡು, ಇವರೇ ತಮ್ಮ ಬದುಕಿನ ಲೈಫ್‌ಲೈನ್ ಎಂದಿದ್ದಾರೆ. 

ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು 2010 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾದರು. ಅವರ ಸಂಬಂಧವು ಸಾಕಷ್ಟು ಸವಾಲುಗಳನ್ನು ಎದುರಿಸಿತು.

ಆದರೆ, ಶೋಯೆಬ್ ಸಾಮಾಜಿಕ ಮಾಧ್ಯಮದಲ್ಲಿ ಸಾನಿಯಾ ಮಿರ್ಜಾರಿಂದ ವಿಚ್ಛೇದನವನ್ನು ದೃಢೀಕರಿಸದೆ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದ ಫೋಟೋ ಹಾಕಿದ್ದರು. ಬಳಿಕ ಇವರಿಬ್ಬರ ವಿಚ್ಚೇದನ ಸಾಕಷ್ಟು ಸುದ್ದಿಯಾಗುತ್ತಲೇ ಇದೆ. 

Latest Videos

click me!