ಇತ್ತೀಚಿನ ದಿನಗಳಲ್ಲಿ ಪ್ರೀತಿ-ವ್ಯವಸ್ಥಿತ ವಿವಾಹಗಳ ಟ್ರೆಂಡ್ (marriage trend) ಎರಡೂ ಚಾಲ್ತಿಯಲ್ಲಿದೆ. ಲವ್ ಮ್ಯಾರೇಜ್ ನಲ್ಲಿ ಇಬ್ಬರು ಪ್ರೀತಿಸುವ ಜೋಡಿಗಳು ತಮ್ಮ ಕುಟುಂಬಗಳ ಸಮ್ಮುಖದಲ್ಲಿ ಸಂತೋಷದಿಂದ ಮದುವೆಯಾಗುತ್ತಾರೆ. ಆದರೆ ಅರೇಂಜ್ ಮ್ಯಾರೇಜ್ ನಲ್ಲಿ ಈ ಕ್ರೇಜ್ ಇನ್ನೂ ವಿಭಿನ್ನವಾಗಿರುತ್ತೆ ಏಕೆಂದರೆ ಮೊದಲಿನಿಂದಲೂ ಇಡೀ ಕುಟುಂಬವು ಸಂತೋಷದಿಂದ ಕಾಣುತ್ತದೆ. ಆರಂಭದಲ್ಲಿ ಎರಡು ಕುಟುಂಬಗಳು ಒಂದಾಗುತ್ತವೆ, ನಂತರ ಇಬ್ಬರು ಜೋಡಿಗಳು, ಸೇರುತ್ತಾರೆ, ಒಬ್ಬರನ್ನೊಬ್ಬರು ನಿಧಾನವಾಗಿ ಅರಿತುಕೊಳ್ಳುತ್ತಾರೆ, ನಂತರ ಎಲ್ಲರೂ ಒಟ್ಟಾಗಿ ಸೇರಿ ಸಂತೋಷದಿಂದ ಮದುವೆಯಾಗುತ್ತಾರೆ.