ಮೈಸೂರು ಅರಮನೆಯಲ್ಲಿ ರಾಜಮನೆತನದ ಮದುವೆ ಅದ್ಧೂರಿಯಾಗಿ ನಡೆದಿತ್ತು. ಯುವ ಜೋಡಿಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಶಿಕಾ ಕುಮಾರಿ ಸಿಂಗ್ (ಈಗ ತ್ರಿಶಿಕಾ ದೇವಿ ಒಡೆಯರ್) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ಐದು ದಿನಗಳ ಕಾಲ ನಡೆದ ವಿವಾಹವು ಕಣ್ಮನ ಸೆಳೆಯುವಂತಿತ್ತು. ಮೈಸೂರು ಮಹಾರಾಜ ಯದುವೀರ್ ಒಡೆಯರ್ ಹಾಗೂ ರಾಣಿ ತ್ರಿಶಿಕಾದೂ ರಾಯಲ್ ಲವ್ ಸ್ಟೋರಿ. ಅವರ ದಿನಚರಿಯ ಬಗ್ಗೆಯೂ ಹಲವು ಕುತೂಹಲಕಾರಿ ವಿಚಾರಗಳಿವೆ. ಆ ಬಗ್ಗೆ ತಿಳಿಯೋಣ.
ಬಾಲ್ಯದಿಂದಲೇ ಸ್ನೇಹಿತರು
ಯದುವೀರ್ ಮತ್ತು ತ್ರಿಶಿಕಾ ನಡುವೆ ಚಿಕ್ಕಂದಿನಲ್ಲೇ ಪ್ರೀತಿಯಿತ್ತು. ಇಬ್ಬರೂ ಬಾಲ್ಯದಿಂದಲೇ ಗೆಳೆಯರಾಗಿದ್ದರು. ಇಬ್ಬರ ಮನೆತನದವರೂ ಜೊತೆಯಾಗಿ ಪಾರ್ಟಿ ಮಾಡುತ್ತಿದ್ದ ಕಾರಣ ಆಗಾಗ ಭೇಟಿಯೂ ಆಗುತ್ತಿದ್ದರು. ಮೈಸೂರಿನ ರಾಜಮನೆತನದವರೂ, ಪಂಜಾಬ್‌ನ ರಾಜಮನೆತನದವರೂ ಕೂಡಿದಾಗ ಈ ಪಾರ್ಟಿಗಳು ನಡೆಯುತ್ತಿದ್ದವು. ಅಲ್ಲಿ ಇವರಿಬ್ಬರ ಪರಿಚಯ, ಸ್ನೇಹ ಉಂಟಾಗಿತ್ತು. ಅದು ಪ್ರೇಮಕ್ಕೆ ತಿರುಗಿದ್ದು ಅವರಿಬ್ಬರ ವಿದ್ಯಾಭ್ಯಾಸದ ಟೈಮ್‌ನಲ್ಲಿ.
ಯದುವೀರ್ ಮತ್ತು ತ್ರಿಶಿಕಾ ಇಬ್ಬರೂ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣಗಳನ್ನು ಬೆಂಗಳೂರಿನಲ್ಲಿ ಮಾಡಿದವರು. ಯದುವೀರ್ ಅವರು ವಿದ್ಯಾನಿಕೇತನ ಸ್ಕೂಲಿನಲ್ಲಿ, ತ್ರಿಶಿಕಾ ಬಾಲ್ಡ್‌ವಿನ್ ಕಾಲೇಜು, ಜ್ಯೋತಿನಿವಾಸ್ ಕಾಲೇಜು, ಕೆನಡಿಯನ್ ಇಂಟರ್‌ನ್ಯಾಶನಲ್ ಸ್ಕೂಲಿನಲ್ಲಿ ಕಲಿತವರು. ನಂತರದ ಶಿಕ್ಷಣವನ್ನು ಅಮೆರಿಕದಲ್ಲಿ ಇಬ್ಬರೂ ಇದ್ದು ಓದಿದವರು. ಆಮ್‌ಹರ್ಸ್ಟ್‌ನ ಮಸಾಚುಸೆಟ್ಸ್ ಯೂನಿವರ್ಸಿಟಿಯಲ್ಲಿ ಯದುವೀರ್ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು. ಇಕಾನಮಿಕ್ಸ್ ಮತ್ತು ಇಂಗ್ಲಿಷ್ ಓದಿದರು.
yaduveer
ಯದುವೀರ್‌ಗೆ ಇಪ್ಪತ್ತನಾಲ್ಕು, ತ್ರಿಶಿಕಾಗೆ ಇಪ್ಪತ್ತಮೂರು ವಯಸ್ಸಲ್ಲಿ ಮದುವೆ ಅದೇ ಸಂದರ್ಭದಲ್ಲಿ ತ್ರಿಶಿಕಾ ಕೂಡ ಬಾಸ್ಟನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. ಅದೇ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು ಹಾಗೂ ಇಬ್ಬರಲ್ಲೂ ಪ್ರೀತಿ ಮೂಡಿತ್ತು ಎಂದು ಹೇಳಲಾಗುತ್ತದೆ. ಇಬ್ಬರೂ ಹೆಚ್ಚು ಕಡಿಮೆ ಸಮಾನ ವಯಸ್ಸಿನವರು. ಮದುವೆಯಾದಾಗ ಯದುವೀರ್‌ಗೆ ಇಪ್ಪತ್ತನಾಲ್ಕು, ತ್ರಿಶಿಕಾಗೆ ಇಪ್ಪತ್ತಮೂರು ವಯಸ್ಸಾಗಿತ್ತು
ನಂತರ ಇಬ್ಬರ ಹಿರಿಯರೂ ಅವರ ವಿವಾಹವನ್ನು ನಿಶ್ಚಯಿಸಿದರು. ಯದುವೀರ್ ಅವರನ್ನು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ದತ್ತು ಸ್ವೀಕರಿಸಿಕೊಂಡಿದ್ದರು. ಯದುವೀರ್ ಮೈಸೂರಿನ ಮಹಾರಾಜರಾಗಿದ್ದರು. ತ್ರಿಶಿಕಾ ನೇರವಾಗಿ ಮೈಸೂರಿನ ಮಹಾರಾಣಿಯಾಗಿಯೇ ಅರಮನೆಗೆ ಕಾಲಿಟ್ಟರು. ನಾಲ್ಕು ದಶಕಗಳ ನಂತರ ಕಂಡ ಅದ್ಧುರಿಯ ಮದುವೆಗೆ ಮೈಸೂರು ಸಾಕ್ಷಿಯಾಯಿತು.
ಇಬ್ಬರ ಆಹಾರಕ್ರಮದಲ್ಲಿ ವ್ಯತ್ಯಾಸ
ಯದುವೀರ್ ಮತ್ತು ತ್ರಿಶಿಕಾರದ್ದು ಪ್ರೇಮ ವಿವಾಹವಾದರೂ ಇಬ್ಬರ ಆಹಾರಕ್ರಮದಲ್ಲೂ ಬಹಳಷ್ಟು ವ್ಯತ್ಯಾಸವಿದೆ. ತ್ರಿಶಿಕಾ ಕಟ್ಟುನಿಟ್ಟಾದ ವೆಜೆಟೇರಿಯನ್. ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುವ ಅವರು ಮೊಟ್ಟೆಯನ್ನು ಸಹ ಸೇವಿಸುವುದಿಲ್ಲ. ಆದರೆ ಮಹಾರಾಜರು ಮಾಂಸಾಹಾರಿ. ಅರಮನೆಯಿಂದ ಹೊರ ಬಂದಾಗ ಮಾಂಸಾಹಾರ ಸೇವನೆ ಮಾಡುತ್ತಾರೆ.
ಯದುವೀರ್ ಹಾಗೂ ತ್ರಿಶಿಕಾ ಇಬ್ಬರ ದಿನಚರಿಯೂ ಹೆಚ್ಚು ಹೋಲಿಕೆಯಿದೆ. ಇಬ್ಬರೂ ಬೆಳಗ್ಗೆ ಐದು ಗಂಟೆಗೆ ಏಳುತ್ತಾರೆ. ಯದುವೀರ್ ಸೂರ್ಯನಮಸ್ಕಾರ ಮತ್ತು ಇತರ ಯೋಗಾಸನಗಳನ್ನು ಮಾಡುತ್ತಾರೆ. ತ್ರಿಶಿಕಾ ಕೂಡ ಯೋಗಾಸನ ಮಾಡುತ್ತಾರೆ. ದಿನಕ್ಕೊಮ್ಮೆ ಹನುಮಾನ್ ಚಾಲೀಸ್ ಪಠಿಸುತ್ತಾರೆ. ಇಬ್ಬರೂ ರಾತ್ರಿ ಒಂಬತ್ತೂವರೆಗೆಲ್ಲ ಮಲಗಿಬಿಡುತ್ತಾರೆ. ಇಬ್ಬರೂ ಮಗ, ಯುವರಾಜನ ಆಟಪಾಠ-ಆರೈಕೆಯಲ್ಲಿ ಸಮಯ ಕಳೆಯುತ್ತಾರೆ.
ತ್ರಿಶಿಕಾ ಅವರಿಗೆ ಒಳ್ಳೆಯ ಓದುವ ಹವ್ಯಾಸ ಇದೆ. ಅರಮನೆಯಲ್ಲಿ ಅವರದೇ ಆದ ಲೈಬ್ರೆರಿಯೂ ಇದೆ. ಯದುವೀರ್ ಕೂಡ ಚೆನ್ನಾಗಿ ಓದಿಕೊಂಡಿದ್ದಾರೆ ಹಾಗೂ ಈಗಲೂ ಓದುತ್ತಾರೆ. ತ್ರಿಶಿಖಾ ದೇವಿ ಒಡೆಯರ್ ಮೈಸೂರು ಅರಮನೆಯ ಪರಂಪರೆಯ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ. ಮಾ ಪ್ರಮೋದಾ ದೇವಿ ಒಡೆಯರ್ ತುಂಬಾ ಕರುಣಾಮಯಿ ಮತ್ತು ಮೈಸೂರು ರಾಜಮನೆತನದ ಎಲ್ಲಾ ಆಚರಣೆಗಳು ಮತ್ತು ಪ್ರಾಚೀನ ಸಂಪ್ರದಾಯಗಳನ್ನು ನಮಗೆ ಕಲಿಸಿದ್ದಾರೆ. ಈಗ, ನಾನು ಯದುವೀರ್ ಅವರಿಂದ ಹೆಚ್ಚು ಕಲಿಯುತ್ತಿದ್ದೇನೆ ಮತ್ತು ಒಟ್ಟಿಗೆ ಕಲಿಯುವುದು ಅದನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಯದುವೀರ್ ಇಬ್ಬರ ನಡುವಿನ ಪ್ರೀತಿ ಬಗ್ಗೆ ಮಾತನಾಡಿ, ನಾವು ಒಟ್ಟಿಗೆ ಬಹಳಷ್ಟು ವಿನೋದವನ್ನು ಹೊಂದಿದ್ದೇವೆ ಮತ್ತು ಸಾಧ್ಯವಾದಷ್ಟು ವೈಯಕ್ತಿಕ ಸಮಯವನ್ನು ನಮಗೆ ನಾವೇ ನೀಡಲು ಪ್ರಯತ್ನಿಸುತ್ತೇವೆ. ಇದು ನಾವು ಬದುಕುತ್ತಿರುವ ದ್ವಂದ್ವ ಜೀವನವಾಗಿದ್ದು, ನಾವು ಇಲ್ಲಿ ಹೇಗೆ ಬದುಕುತ್ತೇವೆ ಎಂಬುದಕ್ಕೆ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ.