ಅಪಾರವಾಗಿ ಗೌರವಿಸುವ ವ್ಯಕ್ತಿ, ಬಾಲ್ಯದ ಗೆಳೆಯ, ನೆರೆಹೊರೆಯವರು ಇದ್ದಕ್ಕಿದ್ದಂತೆ ಮಾತು ಬಿಡುತ್ತಾರೆ, ಏಕೆಂದು ಕೇಳುವುದಕ್ಕೆ ಆಗುವುದಿಲ್ಲ, ಅವರು ಸೂಕ್ತ ಕಾರಣ ಕೊಡುವುದಿಲ್ಲ. ಇಂಥ ಸಂದರ್ಭದಲ್ಲಿ ಪರಸ್ಪರ ನಂಬಿಕೆ, ಸಂಬಂಧಗಳನ್ನು ಮರುನಿರ್ಮಾಣ ಮಾಡುವುದು ಒಂದು ಸಂಕಿರ್ಣ ಪ್ರಕ್ರಿಯೆ. ಇದರಲ್ಲಿ ಯಾರೋ ಒಬ್ಬರ ಪ್ರಯತ್ನದಿಂದ ನಡೆಯುವುದಿಲ್ಲ. ಮುರಿದಬಿದ್ದ ಸಂಬಂಧ ಪುನರ್ ನಿರ್ಮಾಣ ಮಾಡಲು ಎರಡು ಕಡೆಯಿಂದಲೂ ಪ್ರಯತ್ನವಾಗಬೇಕು. ಇಬ್ಬರಲ್ಲೂ ತಾಳ್ಮೆ, ತಿಳಿವಳಿಕೆ ಮತ್ತು ಬದ್ಧತೆಯಿರಬೇಕು. ಇದಕ್ಕಾಗಿ ಸಾಕಷ್ಟು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ. ಆದರೆ ಒಟ್ಟಾಗಿ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡರೆ ನಂಬಿಕೆಯನ್ನು ಪುನರ್ನಿರ್ಮಿಸಲು ಮತ್ತು ಮೊದಲಿಗಿಂತ ಬಲವಾಗಿ ಹೊರಬರಲು ಸಾಧ್ಯವಿದೆ.