ಮಗುವಾದ್ರೆ ಸಂಬಂಧ ಸುಧಾರಿಸೋದು ಹೌದಾ? ಹ್ಯಾಪಿ ಮ್ಯಾರೀಡ್‌ ಲೈಫಿಗೆ ಟಿಪ್ಸ್

First Published Dec 15, 2022, 2:29 PM IST

ನೀವು ಇದನ್ನು ಮಾಡಿದರೆ, ಸಂಬಂಧ ಉತ್ತಮವಾಗಿರುತ್ತೆ, ನೀವು ಅದನ್ನು ಮಾಡಿದರೆ ಬಂಧವು ಬಲವಾಗಿರುತ್ತದೆ…. ನೀವು ಆಗಾಗ್ಗೆ ಅಂತಹ ಅನೇಕ ಸಲಹೆಗಳನ್ನು ಸಂಬಂಧಿಕರಿಂದ, ಫ್ರೆಂಡ್ಸ್ ಗಳಿಂದ ಪಡೆಯುತ್ತೀರಿ ಅಲ್ವಾ? ಆದರೆ ನಿಜವಾಗಿಯೂ ಎಲ್ಲರೂ ನೀಡೋ ಸಲಹೆಗಳಿಂದ ಲೈಫ್ ಚೆನ್ನಾಗಿರುತ್ತಾ?

ಹೇ ಈಗಷ್ಟೇ ಮದ್ವೆ ಆಗಿದ್ದಲ್ವಾ? ಅವ್ನು ಈಗ ಜಗಳ ಮಾಡ್ಬೋದು, ಹೊಡಿಬೋದು, ಸ್ವಲ್ಪ ದಿನ ಆದ್ಮೇಲೆ ಎಲ್ಲಾ ಸರಿ ಆಗುತ್ತೆ… ಲೈಫ್ ಚೆನ್ನಾಗಿಲ್ಲ ಅಂತ ಬೇಜಾರ್ ಮಾಡ್ಬೇಡ… ಎಲ್ಲಾ ಒಂದು ಮಗು ಆಗೋವರ್ಗೂ ಮಾತ್ರ ಆಮೇಲೆ ಲೈಫ್ ತುಂಬಾನೆ ಚೆನ್ನಾಗಿರುತ್ತೆ, ಗಂಡ ತುಂಬಾನೆ ಪ್ರೀತಿ ಮಾಡ್ತಾನೆ… ಅಲ್ಲಿವರೆಗೆ ಎಲ್ಲವನ್ನೂ ಸಹಿಸ್ಕೊಂಡಿರು..

ಇದು ಸಾಮಾನ್ಯವಾಗಿ ಹೆಚ್ಚಿನ ಹುಡುಗಿಯರು ತಮ್ಮ ಮನೆಯವರಿಂದ, ಕುಟುಂಬದವರಿಂದ, ಸ್ನೇಹಿತರಿಂದ ಪಡೆಯೋ ಸಲಹೆಗಳು (relationship tips). ಆದ್ರೆ ನಿಜವಾಗಿಯೂ ಇಂತಹ ಸಲಹೆಯನ್ನು ಅನುಸರಿಸದವರೆಲ್ಲಾ ಚೆನ್ನಾಗಿದ್ದಾರಾ? 

ಕೆಲವೊಂದು ಸಲಹೆಗಳು ನಿಮ್ಮ ವಿಷಯದಲ್ಲಿ ಕೆಲಸ ಮಾಡಬಹುದು ಅಥವಾ ಅದು ಎಂದಿಗೂ ಕೆಲಸ ಮಾಡದಿರಬಹುದು. ಸಂಬಂಧವನ್ನು ನಿರ್ಮಿಸುವುದು ಬಿಡಿ ಆದರೆ ಸಂಬಂಧವನ್ನು ಹಾಳು ಮಾಡುವ ಕೆಲವು ಸಲಹೆಗಳಿವೆ, ಅಂತಹ ಸಲಹೆಗಳಿಂದ ದೂರವಿರುವ ಅಗತ್ಯವಿದೆ. ಯಾಕಂದ್ರೆ ಹಿರಿಯರು ಹೇಳ್ತಾರೆ ಅಂತ ಈಗಿನ ಕಾಲದಲ್ಲಿ ಅಂತಹ ಸಲಹೆಗಳನ್ನು ಪಾಲಿಸ್ತಾ ಬಂದ್ರೆ ಒಂದು ದಿನ ನಮ್ಮ ಮಗಳನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಹಾಗಾಗಿ ಯಾವ ಸಲಹೆಗಳನ್ನು ಪಾಲಿಸಬಾರದು ಅನ್ನೋದನ್ನು ನೋಡೋಣ. 
 

ಪುರುಷರು ಮೊದಲು

ಹಿಂದಿನಿಂದ ನಡೆದು ಬಂದ ಸಂಪ್ರದಾಯ ಅಂದ್ರೆ ಎಲ್ಲಾ ವಿಷ್ಯದಲ್ಲೂ ಹುಡುಗರೇ ಮುಂದೆ ಇರಬೇಕು. ಅದು ಪ್ರಪೋಸ್ (propose) ಮಾಡೋ ವಿಷ್ಯ ಇರಲಿ ಇನ್ಯಾವುದೇ ವಿಷ್ಯವೂ ಆಗಿರಲು, ಹುಡುಗರು ಮೊದಲು ವ್ಯಕ್ತಪಡಿಸಿದ್ರೆ ಸರಿ, ಅದೇ ಹುಡುಗಿಯರು ಹೇಳಿದ್ರೆ ತಪ್ಪಾಗುತ್ತೆ. ಉದಾಹರಣೆಗೆ, ಹುಡುಗಿಯೊಬ್ಬಳು ತನ್ನ ಪ್ರೀತಿಯನ್ನು ತೋರಿಸಲು ಪ್ರಯತ್ನಿಸಿದರೆ, ಆಗ ನೀವು ಅವಳ ಬಗ್ಗೆ ಅನೇಕ ಕೆಟ್ಟ ಆಲೋಚನೆಗಳನ್ನು ಹೊಂದುವಿರಿ. ಆದರೆ ಈಗ ಕಾಲ ಬದಲಾಗಿದೆ ಯಾರು ಬೇಕಾದರೂ ಯಾವುದೇ ಸಮಯದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಬಹುದು.

ಜಗಳ ಮಾಡಿ ನಿದ್ರೆ ಮಾಡ್ಬೇಡಿ

ಜಗಳವಾದ ನಂತರ ನಿದ್ರೆಗೆ ಹೋಗಬೇಡಿ, ನಿದ್ರೆ ಮಾಡುವ ಮುನ್ನ ಜಗಳವನ್ನು ಪರಿಹರಿಸಿಕೊಳ್ಳಿ ಮತ್ತು ನಂತರ ನಿದ್ರೆ ಮಾಡಿ ಎಂದು ಆಗಾಗ್ಗೆ ಜನ ಹೇಳಿರೋದನ್ನು ನೀವು ಕೇಳಿರಬಹುದು.  ಆದರೆ ಜಗಳದ ಸಮಯದಲ್ಲಿ ಮನಸ್ಥಿತಿ (bad mood) ತುಂಬಾ ಕೆಟ್ಟದಾಗಿರುತ್ತೆ, ಈ ಸಮಯದಲ್ಲಿ ಮಾತನಾಡಿದ್ರೆ ಜಗಳ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಆದುದರಿಂದ ಮಲಗೋದೆ ಬೆಸ್ಟ್ ಆಯ್ಕೆ.

ಸಮಯದೊಂದಿಗೆ ಎಲ್ಲವೂ ಸುಧಾರಿಸುತ್ತದೆ

ವೈವಾಹಿಕ ಜೀವನದಲ್ಲಿನ (Married Life) ತೊಂದರೆ ಬಗ್ಗೆ ಹೇಳಿದ್ರೆ, ಪ್ರತಿಯೊಬ್ಬರೂ ಹೇಳೋದು, ಸಮಯ ಆದಾಗ ಎಲ್ಲಾನೂ ಸರಿ ಆಗುತ್ತೆ ಅಂತ. ಆದರೆ ಇಂದಿನ ಸಮಯದಲ್ಲಿ, ಅದು ಸಮಸ್ಯೆಗಳು ಸಮಯದೊಂದಿಗೆ ಸರಿ ಹೋಗಲು ಸಾಧ್ಯವಿಲ್ಲ. ಅನೇಕ ಬಾರಿ ನೀವು ಎಲ್ಲವನ್ನೂ ಸರಿಪಡಿಸಲು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸದೆ ಕಾಯುವುದು ಸರಿಯಾದ ಆಯ್ಕೆಯಲ್ಲ.   

ಮಕ್ಕಳನ್ನು ಹೊಂದೋದರಿಂದ, ಎಲ್ಲವೂ ಸರಿಹೋಗುತ್ತದೆ

ಒಂದು ಮಗುವಾಗ್ಲಿ ಆಮೇಲೆ ಎಲ್ಲಾನೂ ಸರಿ ಆಗುತ್ತೆ ಎನ್ನುತ್ತಾರೆ ಜನ. ಆದರೆ ಒತ್ತಾಯದ ಮೇರೆಗೆ ಇಬ್ಬರೂ ಮಗು ಮಾಡಿಕೊಂಡರೆ, ಇಬ್ಬರಿಗೂ ಆ ಮಗುವಿನ ಮೇಲೆ ಪ್ರೀತಿ ಇರೋದಿಲ್ಲ, ಅಥವಾ ಮಗುವನ್ನು ಸಾಕುವಂತಹ ಸರಿಯಾದ ಜವಾಬ್ಧಾರಿ ಸಹ ಬರೋದಿಲ್ಲ. ಆದುದರಿಂದ ಇನ್ನೊಬ್ಬರ ಮಾತು ಕೇಳಿ, ಮಕ್ಕಳನ್ನು ಪಡೆಯೋ ಯೋಚನೆ ಮಾಡಬೇಡಿ. 

You are man, ಮನೆ ಕೆಲಸ ಎಲ್ಲಾ ಮಾಡ್ಬೇಡಿ

ನೀವು ಮನೆ ಕೆಲಸಗಳನ್ನು ನಿರ್ವಹಿಸುವುದನ್ನು ನೋಡಿದಾಗ ನಿಮ್ಮ ಅನೇಕ ಸ್ನೇಹಿತರು ನಿಮಗೆ ಈ ಸಲಹೆಗಳನ್ನು ನೀಡಿರಬಹುದು. ಆದರೆ ಅವರ ಮಾತನ್ನು ಕೇಳಬೇಡಿ. ಇದನ್ನು ನಂಬಬೇಡಿ ಏಕೆಂದರೆ ನಿಮ್ಮ ಸಂಗಾತಿ ನಿಮ್ಮಷ್ಟೇ ವೃತ್ತಿಪರ ಕೆಲಸವನ್ನು ಮಾಡುತ್ತಾರೆ. ಆದ್ದರಿಂದ ಮನೆಕೆಲಸಗಳಲ್ಲಿಯೂ ಜವಾಬ್ದಾರಿಯು ಸಮಾನವಾಗಿರಬೇಕು.ಇಬ್ಬರೂ ಜೊತೆಗೆ ಸೇರಿ ಮನೆ ಕೆಲಸ ಮಾಡಿದ್ರೆ, ಇಬ್ರೂ ನೆಮ್ಮದಿಯಾಗಿ ಸಂಸಾರ ನಡೆಸಲು ಸಹ ಸಾಧ್ಯವಾಗುತ್ತೆ.

click me!