ಗಂಡ ಬೈದ್ರೂ, ಹೊಡೆದ್ರೂ ಸಹಿಸೋ ಹೆಂಡ್ತಿ, ಗಂಡನ ಈ ಮಿಸ್ಟೇಕ್ ಮಾತ್ರ ಸಹಿಸಲ್ಲ!

First Published | Dec 19, 2023, 3:57 PM IST

ದಾಂಪತ್ಯದಲ್ಲಿ, ಗಂಡ-ಹೆಂಡತಿ ಮಧ್ಯೆ ಜಗಳ ಅನ್ನೋದು ಸಾಮಾನ್ಯ. ಆದ್ರೆ ಕೆಲವೊಂದು ತಪ್ಪುಗಳು ಯಾವತ್ತೂ ಕ್ಷಮೆಗೆ ಅರ್ಹವಾಗಿರುವುದಿಲ್ಲ. ಅದರಲ್ಲೂ ಗಂಡ ಮಾಡೋ ಇಂಥಾ ಕೆಲವು ತಪ್ಪುಗಳನ್ನು ಹೆಂಡ್ತಿಯಾದವಳು ಯಾವತ್ತಿಗೂ ಕ್ಷಮಿಸೋದಿಲ್ಲ. ಅಂಥಾ ತಪ್ಪುಗಳು ಯಾವುವು?

ದಾಂಪತ್ಯದಲ್ಲಿ, ಗಂಡ-ಹೆಂಡತಿ ಮಧ್ಯೆ ಜಗಳ ಅನ್ನೋದು ಸಾಮಾನ್ಯ. ಆದ್ರೆ ಕೆಲವೊಂದು ತಪ್ಪುಗಳು ಯಾವತ್ತೂ ಕ್ಷಮೆಗೆ ಅರ್ಹವಾಗಿರುವುದಿಲ್ಲ. ಅದರಲ್ಲೂ ಗಂಡ ಮಾಡೋ ಇಂಥಾ ಕೆಲವು ತಪ್ಪುಗಳನ್ನು ಹೆಂಡ್ತಿಯಾದವಳು ಯಾವತ್ತಿಗೂ ಕ್ಷಮಿಸೋದಿಲ್ಲ. ಅಂಥಾ ತಪ್ಪುಗಳು ಯಾವುವು?

ಯಾರೂ ಪರಿಪೂರ್ಣರಲ್ಲ. ಪರಿಪೂರ್ಣವಾಗಿರುವುದು ಯಾರಿಗೂ ಸಹ ಸಾಧ್ಯವಿಲ್ಲ. ಎಲ್ಲರ ಜೀವನದಲ್ಲಿಯೂ ತಪ್ಪುಗಳು ಸಂಭವಿಸುತ್ತವೆ. ಹೀಗಾಗಿ ಸಂಬಂಧವನ್ನು ಕಾಪಾಡಿಕೊಳ್ಳಲು ಕೆಲವೊಂದು ವಿಷಯಗಳನ್ನು ಮರೆತುಬಿಡುವುದು, ಕ್ಷಮಿಸುವುದು ಸಹ ಅವಶ್ಯಕ. ಆದರೆ ಕೆಲವೊಂದು ತಪ್ಪುಗಳು ಬಹಳ ಬೇಗನೇ ಹೃದಯವನ್ನು ನೋಯಿಸಿ ಬಿಡುತ್ತದೆ.

Latest Videos


ಗಂಡ ಮತ್ತು ಹೆಂಡತಿಯ ಸಂಬಂಧದಲ್ಲಿ ತಾಳ್ಮೆ ತುಂಬಾ ಮುಖ್ಯ. ಪತಿ ತಪ್ಪು ಮಾಡಿದಾಗ ಹೆಂಡತಿಯನ್ನು ಕ್ಷಮಿಸುವುದು ಮತ್ತು ಹೆಂಡತಿ ತಪ್ಪು ಮಾಡಿದಾಗ ಪತಿಯನ್ನು ಕ್ಷಮಿಸುವುದು ಉತ್ತಮ ಸಂಬಂಧದ ಮಾರ್ಗಗಳು. ಆದರೆ ಪದೇ ಪದೇ ತಪ್ಪು ಮಾಡಿದರೆ ಅದು ಸಂಬಂಧದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.

ಆದರೆ ಸಂಸಾರದಲ್ಲಿ ಇಂಥಾ ಕೆಲವೊಂದು ತಪ್ಪುಗಳನ್ನು ಮಾಡಿದರೂ ಆ ತಪ್ಪನ್ನು ಹೆಂಡತಿ ಕ್ಷಮಿಸುವುದಿಲ್ಲ. ಅಂಥಾ ತಪ್ಪುಗಳು ಯಾವುವು?

ಕುಟುಂಬ, ಸ್ನೇಹಿತರ ಮುಂದೆ ಅವಮಾನ
ಗಂಡ ಏನು ಮಾಡಿದರೂ ಹೆಂಡತಿ ಸಹಿಸಿಕೊಳ್ಳುತ್ತಾಳೆ. ಆದರೆ, ಮನೆಯಲ್ಲಿ ಎಲ್ಲರ ಮುಂದೆ, ಅದರಲ್ಲೂ ಮನೆಯವರು, ಸ್ನೇಹಿತರ ಮುಂದೆ ಅವಮಾನ ಮಾಡಿದರೆ ಅದನ್ನು ಯಾವತ್ತಿಗೂ ಮರೆಯುವುದಿಲ್ಲ. ಹೀಗೆ ಮಾಡಿದ ನಂತರ ಪತಿ ತನ್ನ ಹೆಂಡತಿಯಿಂದ ಮತ್ತೆ ಅದೇ ಪ್ರೀತಿ ಮತ್ತು ಗೌರವವನ್ನು ಪಡೆಯಲು ಸಾಧ್ಯವಿಲ್ಲ.

ಅನೈತಿಕ ಸಂಬಂಧ
ಮಹಿಳೆ ತನ್ನ ಗಂಡ ಮಾಡುವ ಎಂಥಾ ತಪ್ಪನ್ನೂ ಕ್ಷಮಿಸಬಲ್ಲಳು. ಹೊಡೆದರೂ ಬೈದರೂ ಸಹಿಸಿಕೊಳ್ಳುವವರೂ ಇದ್ದಾರೆ. ಆದರೆ ಅವಳ ಸ್ಥಾನವನ್ನು ಇನ್ನೊಬ್ಬ ಮಹಿಳೆ ತೆಗೆದುಕೊಂಡರೆ ಅವಳು ಅದನ್ನು ಸಹಿಸುವುದಿಲ್ಲ. ಗಂಡನ ಈ ರೀತಿಯ ದ್ರೋಹವು ಮಹಿಳೆಯಲ್ಲಿ ಪುರುಷ ಜನಾಂಗದ ಮೇಲೆ ಶಾಶ್ವತವಾಗಿ ಅಪನಂಬಿಕೆ, ಕೋಪ ಮತ್ತು ದ್ವೇಷವನ್ನು ತುಂಬುತ್ತದೆ.

ಎಲ್ಲರ ಮುಂದೆ ಕೈ ಎತ್ತುವುದು
ಹೆಂಡತಿಯ ವಿರುದ್ಧ ಕೈ ಎತ್ತುವ ಗಂಡಂದಿರನ್ನು ಯಾವ ಮಹಿಳೆಯೂ ಕ್ಷಮಿಸುವುದಿಲ್ಲ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧಗಳು ಪವಿತ್ರವಾಗಿರುತ್ತವೆ. ಇಬ್ಬರೂ ಹೊಂದಿಕೊಂಡು ಜೀವನ ನಡೆಸಬೇಕು. ಹೀಗಿರುವಾಗ ಗಂಡ ದಬ್ಬಾಳಿಕೆ ಮಾಡಿದರೆ, ಹತ್ತು ಜನರ ಮುಂದೆ ಅಗೌರವ ತೋರಿದರೆ ಅವಳು ತನ್ನ ಗಂಡನನ್ನು ಎಂದಿಗೂ ಕ್ಷಮಿಸುವುದಿಲ್ಲ. ಅದರಲ್ಲೂ ಎಲ್ಲರ ಮುಂದೆ ಕೈ ಎತ್ತುವುದನ್ನು ಮಹಿಳೆ ಯಾವತ್ತಿಗೂ ಇಷ್ಟಪಡಲ್ಲ.

ಸಮಸ್ಯೆಯಿದ್ದಾಗ ಜೊತೆಯಲ್ಲಿ ನಿಲ್ಲದವರು
ಸಂಗಾತಿ ಎಂದರೆ ಪ್ರತಿಯೊಂದು ಸುಖ ದುಃಖದಲ್ಲೂ ಒಬ್ಬರಿಗೊಬ್ಬರು ಬೆಂಬಲಿಸಬೇಕು. ಆದರೆ ದುರ್ಬಲ ಸಮಯದಲ್ಲಿ ಪುರುಷನು ತನ್ನ ಹೆಂಡತಿಯನ್ನು ಬೆಂಬಲಿಸದಿದ್ದಾಗ, ಅವಳಿಗೆ ಅಗತ್ಯವಾದ ಬೆಂಬಲವನ್ನು ನೀಡದಾಗ ಆಕೆ ನೊಂದುಕೊಳ್ಳುತ್ತಾಳೆ. ಮತ್ತು ಇದನ್ನು ಎಂದಿಗೂ ಮರೆಯುವುದಿಲ್ಲ. 

click me!