2023ರ ಕೊನೆಯ ತಿಂಗಳಲ್ಲಿ ನಾವಿದ್ದೇವೆ. ಈ ವರ್ಷ ಅತೀ ಹೆಚ್ಚು ಅಶ್ಲೀಲ ಚಿತ್ರ ನೋಡಿದವರು ಯಾರು? ಯಾವ ದೇಶದ ಮಂದಿ ಅಶ್ಲೀಲ ಚಿತ್ರವನ್ನು ಹೆಚ್ಚಾಗಿ ನೋಡುತ್ತಾರೆ ಅನ್ನೋ ಕುರಿತು ಕುತೂಹಲಕರ ಮಾಹಿತಿಯನ್ನು ಪೊರ್ನ್ ಹಬ್ ಅಧ್ಯಯನ ನಡೆಸಿ ಬಹಿರಂಗ ಪಡಿಸಿದೆ.
ಗರಿಷ್ಠ ಸಮಯ ಅಥವಾ ಅತೀ ಹೆಚ್ಚು ಪೋರ್ನ್ ವಿಡಿಯೋ ನೋಡುವ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಹಾಗಾದರೆ ಮೊದಲೆರಡು ಸ್ಥಾನದಲ್ಲಿ ಯಾರಿದ್ದಾರೆ?
2023ರಲ್ಲಿ ಅತೀ ಹೆಚ್ಚು ಪೋರ್ನ್ ವಿಡಿಯೋ ನೋಡಿದ ದೇಶ ಅನ್ನೋ ಹಣೆಪಟ್ಟಿಯನ್ನು ಫಿಲಿಪೈನ್ಸ್ ಹೊತ್ತುಕೊಂಡಿದೆ. ಫಿಲಿಪೈನ್ಸ್ ಮಂದಿ ಹೆಚ್ಚಿನ ಸಮಯ ಪೋರ್ನ್ ವಿಡಿಯೋ ನೋಡುತ್ತಾರೆ. ಸರಾಸರಿ ಪ್ರಕಾರ ಪ್ರತಿ ದಿನ 11 ನಿಮಿಷ ಅಶ್ಲೀಲ ವಿಡಿಯೋ ನೋಡುತ್ತಾರೆ ಎಂದು ಪೋರ್ನ್ ಹಬ್ ವರದಿ ಹೇಳುತ್ತಿದೆ.
2ನೇ ಸ್ಥಾನ ಪೊಲೆಂಡ್ ಪಾಲಾಗಿದೆ. 1998ರಲ್ಲಿ ಪೊಲೆಂಡ್‌ನಲ್ಲಿ ಪೋರ್ನೊಗ್ರಫಿಯನ್ನು ಕಾನೂನುಬದ್ಧಗೊಳಿಸಲಾಗಿದೆ. ಕೆಲ ನಿರ್ಬಂಧಗಳೂ ಇವೆ. ಆದರೆ 2023ರಲ್ಲಿ ಪೊಲೆಂಡ್ ಅತೀ ಹೆಚ್ಚು ಸಮಯ ಅಶ್ಲೀಲ ಚಿತ್ರ ನೋಡಿದ 2ನೇ ದೇಶವಾಗಿದೆ.
3ನೇ ಸ್ಥಾನದಲ್ಲಿರುವ ಭಾರತದಲ್ಲಿ ಪೊರ್ನೋಗ್ರಫಿ ಕಾನೂನು ಬಾಹಿರ. ಇದು ಲೈಂಗಿಕ ದೌರ್ಜನ್ಯವಾಗಿದೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದೆ ನೀಡಲಿರುವ ಕಾರಣ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಆದರೆ ಲೈಂಗಿಕತೆ ಕುರಿತು ಜಾಗೃತಿ ಮೂಡಿಸಲು ಭಾರತ ಸರ್ಕಾರ ಹಲವು ಕಾರ್ಯಕ್ರಮಗಳಿವೆ. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಇತರ ಕಡಿಮೆ ಜನಸಂಖ್ಯೆ ಹೊಂದಿದೆ ದೇಶಕ್ಕೆ ಹೋಲಿಸಿದರೆ ಸಹಜವಾಗಿ ಗರಿಷ್ಠ ಪ್ರಮಾಣ ತೋರಿಸಲಿದೆ.
ವಿಯ್ನೆಟಾಂ, ಟರ್ಕಿ, ಸೌದಿ ಹಾಗೂ ಪಾಕಿಸ್ತಾನ ನಂತರದ ಸ್ಥಾನದಲ್ಲಿದೆ. 2023ರಲ್ಲಿ ಪಾಕಿಸ್ತಾನದಲ್ಲಿ ಪೋರ್ನ್ ವಿಡಿಯೋ ವೀಕ್ಷಿಸುವವರ ಸಂಖ್ಯೆ ಗಣನೀಯ ಏರಿಕೆಯಾಗಿದೆ ಎಂದು ಪೋರ್ನ್‌ಹಬ್ ವರದಿ ಹೇಳುತ್ತಿದೆ. ಮೊರಕ್ಕೋ, ಇರಾನ್ ಹಾಗೂ ಜರ್ಮನಿ ಕ್ರಮವಾಗಿ 8,9 ಹಾಗೂ 10ನೇ ಸ್ಥಾನದಲ್ಲಿದೆ.
ಪೋರ್ನ್ ಹಬ್ ವರದಿ ಪ್ರಕಾರ ಶೇಕಡಾ 53 ರಷ್ಟು 11 ರಿಂದ 16 ವಯಸ್ಸಿನ ಹದಿಹರೆಯರು ಪೋರ್ನ್ ವಿಡಿಯೋ ನೋಡುತ್ತಾರೆ ಎಂದಿದೆ. ಇದು ಅವರ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳುತ್ತಿದೆ.
ಸ್ಮಾರ್ಟ್‌ಫೋನ್ ಹಾಗೂ ಇಂಟರ್ನೆಟ್ ಕ್ರಾಂತಿಯಿಂದ ಈಗನ ಹದಿಹರೆಯ ಸಮೂಹ ಹೆಚ್ಚಾಗಿ ಪೋರ್ನ್ ವಿಡಿಯೋ ದಾಸರಾಗುತ್ತಿದ್ದಾರೆ ಅನ್ನೋ ಆರೋಪವಿದೆ. ಇದೀಗ ಪೋರ್ನ್ ಹಬ್ ಅಂಕಿ ಅಂಶಗಳು ಈ ಆರೋಪಕ್ಕೆ ಪೂರಕವಾಗಿದೆ.