ನಿಜವಾದ ಪ್ರೀತಿ ಅಂತೇನಾದ್ರೂ ಇರುತ್ತಾ? ಇದ್ರೆ ಅದು ಹೇಗಿರುತ್ತೆ?

First Published | Dec 4, 2023, 5:34 PM IST

ಪ್ರೀತಿಗೆ ಜನರು ಏನೇನೋ ಅರ್ಥಗಳನ್ನು ನೀಡುತ್ತಾರೆ. ಪ್ರೀತಿ ಎಂದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳುವುದು, ತುಂಬಾನೆ ಇಷ್ಟಪಡೋದು ಇತ್ಯಾದಿ… ಇತ್ಯಾದಿ… ಆದರೆ ನಿಜವಾಗಿಯೂ ಪ್ರೀತಿಯೆಂದರೇನು? ಇಲ್ಲಿದೆ ನಿಮಗೆ ತಿಳಿದಿಲ್ಲದ ವಿಷ್ಯಗಳು.
 

ಪ್ರೀತಿಯ ನಿಜವಾದ (real love) ವ್ಯಾಖ್ಯಾನ, ನಿಜವಾದ ಅರ್ಥವೇನು? ಸಂಗಾತಿಗಳು ಪರಸ್ಪರ ಬಡಿದುಕೊಳ್ಳುವ ಹೃದಯ ಬಡಿತಗಳನ್ನು ಕೇಳಿದಾಗ ಅದು ಪ್ರೀತಿ ಎನಿಸುವುದೇ? ನೀನಿಲ್ಲದೇ ನನಗೆ ಬಾಳಲೂ ಸಾಧ್ಯವಿಲ್ಲ ಅನ್ನೋದೇ ಪ್ರೀತಿಯೇ? ಪ್ರೀತಿಸಿದವರ ಹೆಸರಿನ ಟ್ಯಾಟೂ ಹಾಕೋದೇ ಪ್ರೀತಿಯೇ? ನಿಜವಾದ ಪ್ರೀತಿ ಹೇಗಿರುತ್ತೆ ಗೊತ್ತಾ? ಇಲ್ಲಿದೆ ನಿಮಗೆ ತಿಳಿಯದ ವಿಷ್ಯಗಳು… 

ಆಳವಾದ ಸಂಪರ್ಕ (deep conncetcion)
ಪ್ರೀತಿ ಬಹಳ ಆಳವಾದ ಸಂಪರ್ಕ. ಭಾವನೆಗಳ ಸಾಗರ. ಇದು ನಿಮ್ಮನ್ನು ಎಲ್ಲಾ ವಿಷಯಗಳಲ್ಲೂ ಸ್ಟ್ರಾಂಗ್ ಆಗಿಸುತ್ತೆ, ನಿಮ್ಮಲ್ಲಿ ಯಾವುದೇ ಬೇಸರ ಇದ್ದರೆ ಅದನ್ನು ನಿವಾರಿಸುತ್ತೆ, ಅಷ್ಟೇ ಯಾಕೆ ನಿಜವಾದ ಪ್ರೀತಿ ಜೀವನವನ್ನು ಸುಂದರವಾದ ನೆನಪುಗಳಿಂದ ತುಂಬುತ್ತದೆ.

Tap to resize

ನಿಜವಾದ ಪ್ರೀತಿ (real love)
ನಿಜವಾದ ಪ್ರೀತಿ ಎಂದಿಗೂ ಪರಿಪೂರ್ಣತೆಯ ಬಗ್ಗೆ ಅಂದರೆ ಪರ್ಫೆಕ್ಷನ್ ಬಗ್ಗೆ ಚಿಂತೆ ಮಾಡೋದೇ ಇಲ್ಲ. ಒಬ್ಬರಿಗೊಬ್ಬರು ತಮ್ಮ ಮಿಸ್ಟೇಕ್ಸ್, ಗುಣ, ಅವಗುಣ ಮತ್ತು ದೌರ್ಬಲ್ಯಗಳನ್ನು ಸ್ವೀಕರಿಸಿ, ಸಂಬಂಧವನ್ನು ಬಲಪಡಿಸೋದೆ ನಿಜವಾದ ಪ್ರೀತಿ. 

ಗಾರ್ಡನ್ ಆಫ್ ಲವ್ (Garden of Love) 
ಪ್ರೀತಿ ಅನ್ನೋದು ಕೇವಲ ಬಣ್ಣದ ಮಾತುಗಳ ಮೂಲಕ ಅರಳೋದಿಲ್ಲ. ನಿಜವಾದ ಪ್ರೀತಿಯ ಹೂವು ಹೃದಯದ ತೋಟದಲ್ಲಿ ನಂಬಿಕೆ, ದಯೆ ಮತ್ತು ಹಂಚಿಕೊಂಡ ಕನಸುಗಳ ಕೋಮಲ ದಳಗಳೊಂದಿಗೆ ಅರಳುತ್ತದೆ. 

ಅವರಿಗಾಗಿ ಹೃದಯ ಮಿಡಿಯುತ್ತದೆ
ನಿಜವಾದ ಪ್ರೀತಿ ಅಂದ್ರೆ ಬಲವಂತವಾಗಿ ಇನ್ನೊಬ್ಬರ ಪ್ರೀತಿಯನ್ನು ಪಡೆದುಕೊಳ್ಳೋದು ಅಲ್ವೇ ಅಲ್ಲ. ನಿಜವಾದ ಪ್ರೀತಿ ಎಂದರೆ, ಪ್ರೀತಿಸಿದವರಿಗಾಗಿ ಎಲ್ಲವನ್ನೂ ಮಾಡಲು ಸಿದ್ಧರಾಗೋದು, ಜೊತೆಗೆ ಅವರಿಲ್ಲದೇ ಬದುಕಲು ಸಾಧ್ಯವೇ ಇಲ್ಲ ಅನ್ನೋ ಭಾವನೆ.

ಜೊತೆಯಾಗುವುದು
ನಿಜವಾದ ಪ್ರೀತಿಯು ಪ್ರೀತಿಯ ಒಂದು ನೋಟದಿಂದ ಪ್ರಾರಂಭವಾಗುತ್ತದೆ ಮತ್ತು ಜೀವನ ಪರ್ಯಂತ ಒಟ್ಟಿಗೆ ಇರುವುದಾಗಿ ಭರವಸೆ ಮತ್ತು ಪ್ರತಿಜ್ಞೆಗಳೊಂದಿಗೆ ಮುಂದುವರಿಯುತ್ತದೆ. ಅಲ್ಲಿ ಯಾವುದೇ ಒತ್ತಡ, ಬಲವಂತ ಇರೋದೇ ಇಲ್ಲ. 

ಬದ್ಧತೆ (Commitement)
ನಿಜವಾದ ಪ್ರೀತಿಯು ಒಬ್ಬರು ನನಗೆ ಬೇಕೇ ಬೇಕು ಎನ್ನುವ ಹಠವಲ್ಲ, ಆದರೆ ನಿಜವಾದ ಪ್ರೀತಿ ಅಂದ್ರೆ ಸಂಗಾತಿಯನ್ನು ತಮ್ಮ ಜೀವನ ಪರ್ಯಂತ, ಎಲ್ಲಾ ಕ್ಷಣಗಳಲ್ಲೂ ತಮ್ಮ ಜೊತೆ ಇರಿಸಿಕೊಳ್ಳುವಂತಹ ಬಯಕೆ.
 

ಪ್ರೀತಿಯ ಕಸೂತಿ
ನಿಜವಾದ ಪ್ರೀತಿಯು ಜೀವನದ ಕಸೂತಿಯಲ್ಲಿರುವ ಚಿನ್ನದ ದಾರದಂತೆ, ಪ್ರತಿ ಕ್ಷಣದಲ್ಲೂ ಸಂತೋಷ, ಅರ್ಥ ಮತ್ತು ಉದ್ದೇಶವನ್ನು ಹೆಣೆಯುತ್ತದೆ. ಇದರಿಂದ ಸಂಬಂಧ ಯಾವಾಗಲೂ ಗಟ್ಟಿಯಾಗುತ್ತಲೇ ಹೋಗುತ್ತದೆ. 

ಪ್ರತಿ ಕ್ಷಣವೂ ಬೆಳೆಯುತ್ತದೆ
ನಿಜವಾದ ಪ್ರೀತಿ (love) ಎಂದರೆ ನಿಮ್ಮ ಸಂಗಾತಿ ಮೇಲಿನ ಪ್ರೀತಿ, ದಿನ, ವಾರ, ವರ್ಷ ಕಳೆದಂತೆ, ಅವರೊಂದಿಗೆ ಇದ್ದಷ್ಟು ಕ್ಷಣ ಹೆಚ್ಚುತ್ತಲೇ ಹೋಗುತ್ತದೆ. ಇದೇ ನಿಜವಾದ ಪ್ರೀತಿ. 

ಇಬ್ಬರಲ್ಲ ಒಬ್ಬರು 
ಪ್ರೀತಿ ಅಂದರೆ ನಾವಿಬ್ಬರೂ ಇನ್ನು ಮುಂದೆ ಒಬ್ಬರೇ ಎನ್ನುವ ಭಾವ. ನಿಜವಾದ ಪ್ರೀತಿಯಲ್ಲಿ ನಾವು ಎರಡು ಜನರಲ್ಲ, ಎರಡು ಆತ್ಮಗಳ (two souls) ಮಿಲನ ಅನ್ನೋ ಸತ್ಯ ತಿಳಿಯುವುದು ಮತ್ತು ನಾವಿಬ್ಬರು ಎಂದಿಗೂ ಜೊತೆಯಾಗಿ ಇರುತ್ತೇವೆ ಎನ್ನುವ ಭರವಸೆ ಇರಿಸೋದು.

Latest Videos

click me!