ಭಾರತದಲ್ಲಿ 2024 ಜನಸಂಖ್ಯೆ 1.44 ಶತಕೋಟಿ, ಅದರಲ್ಲಿ 743.39 ಮಿಲಿಯನ್ ಪುರುಷರು ಮತ್ತು 698.29 ಮಿಲಿಯನ್ ಮಹಿಳೆಯರು. ಇದು 51.56% ಪುರುಷರು ಮತ್ತು 48.44% ಮಹಿಳೆಯರು. ಲಿಂಗಾನುಪಾತ 1000 ಪುರುಷರಿಗೆ 951 ಮಹಿಳೆಯರು, ಇದು ಆತಂಕಕಾರಿ ಅಂಕಿ ಅಂಶವಾಗಿದೆ.
ಭಾರತದ ಲಿಂಗಾನುಪಾತವು ರಾಜ್ಯಗಳಿಂದ ರಾಜ್ಯಕ್ಕೆ ವ್ಯತ್ಯಾಸಗೊಳ್ಳುತ್ತದೆ. ಕೇರಳದಲ್ಲಿ 1000 ಪುರುಷರಿಗೆ 1084 ಮಹಿಳೆಯರಿದ್ದಾರೆ, ಛತ್ತೀಸ್‌ಗಢದಲ್ಲಿ 1017, ಹರಿಯಾಣದಲ್ಲಿ 879, ಪಂಜಾಬ್‌ನಲ್ಲಿ 895, ಮತ್ತು ಉತ್ತರ ಪ್ರದೇಶದಲ್ಲಿ 912. ಕೆಲವು ರಾಜ್ಯಗಳಲ್ಲಿ ಇನ್ನೂ ಕಡಿಮೆ ಅನುಪಾತಗಳಿವೆ.
ಜಾಗತಿಕ ದೃಷ್ಟಿಕೋನ:
ಜಾಗತಿಕವಾಗಿ, ಪ್ರತಿ 100 ಹುಡುಗಿಯರಿಗೆ 105 ಹುಡುಗರು ಜನಿಸುತ್ತಾರೆ. ಜೀವಿತಾವಧಿ ಮತ್ತು ವಲಸೆ ಈ ಅನುಪಾತಗಳ ಮೇಲೆ ಪ್ರಭಾವ ಬೀರುತ್ತವೆ. ವಿಶ್ವಸಂಸ್ಥೆ ವರದಿಯ ಪ್ರಕಾರ, ಮೊಲ್ಡೊವಾ, ಲಾಟ್ವಿಯಾ, ಅರ್ಮೇನಿಯಾ ಮತ್ತು ರಷ್ಯಾಗಳು ಹೆಚ್ಚಿನ ಮಹಿಳಾ ಜನಸಂಖ್ಯೆಯನ್ನು ಹೊಂದಿವೆ.
ಮೊಲ್ಡೊವಾದ ಜನಸಂಖ್ಯೆಯ 53.98% ಮಹಿಳೆಯರು, ಆದರೂ ಲಿಂಗ ಸಮಾನತೆಯ ಸವಾಲುಗಳನ್ನು ಅವರು ಎದುರಿಸುತ್ತಿದ್ದಾರೆ. ಮಹಿಳೆಯರು ಉತ್ತಮ ಉದ್ಯೋಗಾವಕಾಶ ಜವಾಬ್ದಾರಿಗಳಿಗಾಗಿ ಕರೆ ನೀಡುತ್ತಿದ್ದಾರೆ.
ಲಾಟ್ವಿಯಾದ ಜನಸಂಖ್ಯೆಯು 53.68% ಮಹಿಳೆಯರಾಗಿದ್ದು, ಕಿರಿಯ ಜನಸಂಖ್ಯೆಯನ್ನು ಹೊಂದಿದೆ. ಅಲ್ಲಿ ಪುರುಷರ ಧೂಮಪಾನದ ಅಭ್ಯಾಸವೂ ಅವರ ಕಡಿಮೆ ಜೀವಿತಾವಧಿಗೆ ಕೊಡುಗೆ ನೀಡುತ್ತದೆ. ಇದರ ಜೊತೆಗೆ ಕೆಲಸಕ್ಕಾಗಿ ಪುರುಷರ ವಲಸೆಯಿಂದಾಗಿ ಅರ್ಮೇನಿಯಾದ ಜನಸಂಖ್ಯೆಯ 53.61% ಮಹಿಳೆಯರು.
ರಷ್ಯಾದಂತೆ, ಉಕ್ರೇನ್ ಹೆಚ್ಚಿನ ಮಹಿಳಾ ಜನಸಂಖ್ಯೆಯನ್ನು ಹೊಂದಿದೆ (53.50%), 60% ಮಹಿಳೆಯರು ಉನ್ನತ ಶಿಕ್ಷಣ ಪದವಿಗಳನ್ನು ಹೊಂದಿದ್ದಾರೆ. ಜಾರ್ಜಿಯಾ (53.4%), ಬೆಲಾರಸ್ (53.4%), ಲಿಥುವೇನಿಯಾ (52.85%), ಟೊಂಗಾ (52.59%), ಮತ್ತು ಸರ್ಬಿಯಾ (52.51%) ಸಹ ಪುರುಷರಿಗಿಂತ ಹೆಚ್ಚು ಮಹಿಳೆಯರನ್ನು ಹೊಂದಿವೆ. ಹೀಗಾಗಿ ಹುಡುಗಿ ಸಿಗದವರು ವಿದೇಶದಲ್ಲಿ ಗೆಳತಿ ಹುಡುಕುವುದು ಸುಲಭವಾಗಬಹುದು.