ನೆಮ್ಮದಿ ಬೇಕಾ? ಹಾಗಿದ್ರೆ ಸೊಸೆಗೆ ಈ 7 ವಿಚಾರಗಳನ್ನ ಹೇಳೋಕೆ ಹೋಗ್ಬೇಡಿ ಅತ್ತೆಯರಾ!

First Published | Oct 24, 2024, 5:26 PM IST

ಸೊಸೆಯೊಂದಿಗೆ ಗೌರವಯುತ ಮತ್ತು ಸಾಮರಸ್ಯದ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಂದು ಗೊತ್ತಿಲ್ಲದೇ ಮಾಡುವ ತಪ್ಪುಗಳು ಅತ್ತೆ ಸೊಸೆ ಮಧ್ಯೆ ವಿರಸ ತಂದಿಡಬಹು. ಇಲ್ಲಿ ನಾವು ಅತ್ತೆ ತನ್ನ ಸೊಸೆಗೆ ಎಂದಿಗೂ ಹೇಳಬಾರದ 7 ವಿಷಯಗಳ ಬಗ್ಗೆ ತಿಳಿಸುತ್ತಿದ್ದೇವೆ. ಈ ಮೂಲಕ ಅನಗತ್ಯ ಸಂಘರ್ಷಗಳ ತಪ್ಪಿಸಿ ಕುಟುಂಬ ಬಾಂಧವ್ಯವನ್ನು ಬಲಪಡಿಸಬಹುದು.

ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧವು ಸೂಕ್ಷ್ಮವಾಗಿರುತ್ತದೆ, ಕೆಲವೊಮ್ಮೆ ತಿಳಿಯದೇ ಆಡುವ ಮಾತುಗಳು ಸಂಬಂಧದಲ್ಲಿ ಬಿರುಕು ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಶಾಂತಿಯುತ, ಗೌರವಾನ್ವಿತ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಅತ್ತೆ ತನ್ನ ಸೊಸೆಗೆ ಹೇಳಬಾರದ ಕೆಲವು ವಿಚಾರಗಳನ್ನು ನಾವು ನಿಮಗಿಂದು ತಿಳಿಸುತ್ತೇವೆ. ಈ ಮೂಲಕ ಅತ್ತೆ ಸೊಸೆ ನಡುವಣ ವಿರಸ ತಡೆದು  ಸಾಮರಸ್ಯದ ಕುಟುಂಬ ವಾತಾವರಣವನ್ನು ಬೆಳೆಸಬಹುದು

 ಟೀಕೆ ಮಾಡಬೇಡಿ

ನಿಮ್ಮ ಸೊಸೆಯನ್ನು ನಿರಂತರವಾಗಿ ಟೀಕಿಸುವುದನ್ನು ಕಡಿಮೆ ಮಾಡಿ. ನಮ್ಮ ಕಾಲದಲ್ಲಿ ಹಾಗಿತ್ತು ಹೀಗಿತ್ತು ಹಾಗೆ ಮಾಡ್ತಿದ್ದೆವು ಹೀಗೆ ಮಾಡ್ತಿದ್ದೆವು ಎಂದು ಹೇಳುವುದನ್ನು ನಿಲ್ಲಿಸಿ ಏಕೆಂದರೆ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಪರಿಸ್ಥಿತಿಗಳು ಬದಲಾಗುತ್ತವೆ. ಹೊಸ ವಿಚಾರ ಮಾಡಲು ಹೊರಟಾಗ ಇದಕ್ಕೆ ನಮ್ಮ ಮನೆಯಲ್ಲಿ ಅನುಮತಿ ಇಲ್ಲ ಎಂದು ಹೇಳುವುದನ್ನು ನಿಲ್ಲಿಸಿ, ಇಂದಿನ ಪೀಳಿಗೆಗೆ ವಿಭಿನ್ನ ದೃಷ್ಟಿಕೋನಗಳಿವೆ ಅವರು ನಮಗಿಂತ ಸ್ಮಾರ್ಟ್ ಎಂಬುದನ್ನು ಒಪ್ಪಿಕೊಳ್ಳಿ.

Tap to resize

2. ಇದು ನಿನ್ನ ಮನೆಯಲ್ಲ ಎಂದು ಹೇಳದಿರಿ

ಏನಾದರೂ ಮಾಡಿದಾಗ ಹೀಗೆ ಮಾಡಲು ಇದು ನಿಮ್ಮಪ್ಪನ ಮನೆಯಲ್ಲ ಎಂದು ಕೆಲವರು ಹೇಳುವುದನ್ನು ನೋಡಿರಬಹುದು. ಇಂತಹ ಮಾತುಗಳನ್ನು ನಿಲ್ಲಿಸಿ ಏಕೆಂದರೆ ಆಕೆ ನಿಮ್ಮೊಂದಿಗೆ ಇರಲು ತನ್ನ ಕುಟುಂಬವನ್ನು ತೊರೆದು ಬರುತ್ತಾಳೆ.. ಪದೇ ಪದೇ ನೀವು ಹೇಳುವ 'ಇದು ನಿಮ್ಮ ಮನೆಯಲ್ಲ' ಎಂಬ ಮಾತು ಆಕೆಗೆ ನೋವುಂಟು ಮಾಡುತ್ತವೆ. ಅವಳನ್ನು ಕುಟುಂಬದ ಸದಸ್ಯರಾಗಿ ಸ್ವೀಕರಿಸಿ.

3. ಆಕೆಯ ಹೆತ್ತವರ ಟೀಕಿಸಬೇಡಿ

ಮಕ್ಕಳು ಮಾಡುವ ತಪ್ಪಿಗೆ ಕೆಲವರು ಹೆತ್ತವರನ್ನು ಟೀಕಿಸುತ್ತಾರೆ. ಆದರೆ ಸೊಸೆ ಪ್ರಬುದ್ಧಳು, ಆಕೆಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪು ಮಾಡಿದಾಗ ಆಕೆಯ ಪೋಷಕರನ್ನು ಟೀಕಿಸುವುದನ್ನು ನಿಲ್ಲಿಸಿ ತಾಯಿಯಂತೆ ಅವಳನ್ನು ಕ್ಷಮಿಸಿ. ಅವಳ ಹೆತ್ತವರನ್ನು ಟೀಕಿಸಬೇಡಿ. ಯಾರಿಗೆ ಆದರೂ ಪೋಷಕರ ಟೀಕಿಸಿದರೆ ತೀವ್ರವಾದ ಕೋಪ ಬೇಸರ ಆಗುತ್ತದೆ. ಅಂತಹ ಪದಗಳು ನಿಮ್ಮ ಸಂಬಂಧವನ್ನು ಹಾನಿಗೊಳಿಸುತ್ತವೆ ಮತ್ತು ನಿಮ್ಮ ಬಗ್ಗೆ ಅವಳಿಗಿರುವ ಗೌರವವನ್ನು ಕಡಿಮೆ ಮಾಡುತ್ತವೆ.

ಅವಳನ್ನು ಬೇರೆಯವರೊಂದಿಗೆ ಹೋಲಿಸಬೇಡಿ

ನಿಮ್ಮ ಸೊಸೆಯನ್ನು ಬೇರೆಯವರೊಂದಿಗೆ ಹೋಲಿಸಬೇಡಿ, ಅವರ ಸೊಸೆ ಹಾಗೆ ಮಾಡ್ತಾಳೆ ಇವರ ಸೊಸೆ ಹೀಗೆ ಮಾಡ್ತಾಳೆ, ನನ್ನ ಸೊಸೆ ಮನೆ ಮಾತ್ರ ಕಾಲ ಮೇಲೆ ಕಾಲು ಹಾಕಿ ಕೂರ್ತಾಳೆ ಅಂತ ಒದರ್ತಿರಬೇಡಿ, ಅದು ಅಸಮಾಧಾನಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟ, ಮತ್ತು ನಿಮ್ಮ ಸೊಸೆಯನ್ನು ಬೇರೆಯವರ ಮಾನದಂಡಗಳಿಗೆ ತಕ್ಕಂತೆ ಬದುಕುವಂತೆ ಮಾಡುವ ಬದಲು ಅವಳು ಹೇಗಿರುವಳೋ ಹಾಗೆ ಪ್ರಶಂಸಿಸಿ.

5. ಕುಟುಂಬದ ನಿರ್ಧಾರಗಳಲ್ಲಿ ಆಕೆಯನ್ನು ಸೇರಿಸಿ

ಕುಟುಂಬದಲ್ಲಿ ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆಕೆಯನ್ನು ಅಭಿಪ್ರಾಯ ಕೇಳಿ, ಅಕೆಯ ಅಭಿಪ್ರಾಯಗಳನ್ನು ನಿರ್ಲಕ್ಷಿಸಬೇಡಿ, ನಿಂಗೇನ್ ಗೊತ್ತು ಅಂತ ಮಾತಾಡ್ತಿದ್ದಿಯಾ ಅಂತ ಹೀಗೆಳೆಯಬೇಡಿ ಹಾಗೂ ಅವಳನ್ನು ನಿಮ್ಮ ಮಗಳೊಂದಿಗೆ ಹೋಲಿಸುವುದನ್ನು ಮೊದಲು ತಪ್ಪಿಸಿ ಇದು ಆಕೆಗೆ ನೋವುಂಟುಮಾಡುತ್ತದೆ ಮತ್ತು ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತದೆ.

6. ಅವಳ ಭಾವನೆಗಳನ್ನು ಗೌರವಿಸಿ

ನಿಮ್ಮ ಸೊಸೆ ತುಂಬಾ ಸೂಕ್ಷ್ಮ ಎಂದು ಹೇಳುವ ಮೂಲಕ ಅವಳ ಭಾವನೆಗಳನ್ನು ನಿರ್ಲಕ್ಷಿಸುವುದು ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸುತ್ತದೆ. ಅವಳ ಭಾವನೆಗಳನ್ನು ನಿರ್ಲಕ್ಷಿಸುವ ಬದಲು ಆಲಿಸಿ ಮತ್ತು ಅವಳ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಬಲವಾದ ಬಾಂಧವ್ಯವನ್ನು ನಿರ್ಮಿಸಲು ಪರಾನುಭೂತಿಯೂ ಬಹಳ ಮುಖ್ಯ.

7. ಆರ್ಥಿಕ ವಿಷಯಗಳು

ನಿಮ್ಮ ಸೊಸೆ ತನ್ನ ಹಣಕಾಸನ್ನು ಹೇಗೆ ನಿರ್ವಹಿಸುತ್ತಾಳೆ ಅಥವಾ ಹಣವನ್ನು ಹೇಗೆ ಖರ್ಚು ಮಾಡುತ್ತಾಳೆ ಎಂಬುದರ ಬಗ್ಗೆ ಕಾಮೆಂಟ್ ಮಾಡುವುದು ಸರಿಯಲ್ಲ. ನಿಮಗೆ ಅವರು ನಿರ್ದಿಷ್ಟವಾಗಿ ಹಣಕಾಸಿನ ಬಗ್ಗೆ ಸಲಹೆ ಕೇಳದ ಹೊರತು, ಈ ವಿಷಯವನ್ನು ಮಾತಾಡದಿರುವುದು ಉತ್ತಮ. ಪ್ರತಿ ದಂಪತಿಗಳು ತಮ್ಮ ಹಣಕಾಸನ್ನು ವಿಭಿನ್ನವಾಗಿ ನಿರ್ವಹಿಸುತ್ತಾರೆ ಮತ್ತು ನಿಮ್ಮ ಸೊಸೆಯ ಖರ್ಚು ಮಾಡುವ ಅಭ್ಯಾಸಗಳು ಆಕೆಯ  ವೈಯಕ್ತಿಕ ವಿಷಯ.

ಸೂಕ್ಷ್ಮತೆಯಿಂದ ಹೇಳಿದಾಗ ಅತ್ತೆಯ ಮಾತು ಪಾಲಿಸ್ತಾರೆ. ಆದರೆ ಬೇರೆಯವರಿಗೆಎ ಹೋಲಿಸಿ ಟೀಕೆ ಮಾಡಲು ಶುರು ಮಾಡಿದರೆ ಮುಂದೆ ನಿಮಗೆ ಕಷ್ಟ, ಹೀಗಾಗಿ ಈ ವಿಚಾರಗಳು ನಿಮ್ಮ ಗಮನದಲ್ಲಿರಲಿ, ಸೊಸೆಯನ್ನು ಒಳ್ಳೆ ಕೆಲಸ ಮಾಡಿದಾಗ ಹೊಗಳುವ ಮೂಲಕ ಆಕೆಯ ಜೊತೆ ಬಾಂಧವ್ಯ ಚೆನ್ನಾಗಿರುವಂತೆ ನೊಡಿಕೊಳ್ಳಿ.

Latest Videos

click me!