ಯಾವುದೇ ಸಂಬಂಧವನ್ನು (relationship) ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ವಿಶೇಷವಾಗಿ ನೀವು ದಂಪತಿಗಳಾಗಿದ್ದರೆ, ನಿಮ್ಮ ಸಂಬಂಧವು ಅನೇಕ ವಿಷಯಗಳಿಂದಾಗಿ ಹಳಸಿ ಹೋಗುವ ಸಾಧ್ಯತೆ ಇದೆ. ಅನೇಕ ಕಾರಣಗಳಿಗಾಗಿ ದಂಪತಿ ನಡುವೆ ವ್ಯತ್ಯಾಸಗಳು ಉಂಟಾಗುತ್ತವೆ, ಆದರೆ ಆಹಾರಕ್ಕೆ (food habits) ಸಂಬಂಧಿಸಿದಂತೆ ಸಂಬಂಧದಲ್ಲಿ ಅನೇಕ ಬಾರಿ ಬಿರುಕು ಉಂಟಾಗಬಹುದು ಎಂದು ನಿಮಗೆ ತಿಳಿದಿದೆಯೇ. ಅದು ಹೇಗೆ ಉಂಟಾಗುತ್ತೆ ಮತ್ತು ಅದನ್ನು ಹೇಗೆ ತಪ್ಪಿಸುವುದು ಎಂದು ತಿಳಿಯೋಣ-
ವಿರುದ್ಧ ಶಕ್ತಿಗಳು ಪರಸ್ಪರ ಆಕರ್ಷಿಸುತ್ತವೆ (Opposite Nature Attracts) ಎಂದು ಹೇಳಲಾಗುತ್ತದೆ, ಆದರೆ ಆಹಾರ ಪದ್ಧತಿಯಲ್ಲಿ ದಂಪತಿ ಪರಸ್ಪರ ವಿರುದ್ಧವಾಗಿದ್ದರೆ, ಇದು ಸಹ ಆಕರ್ಷಿಸುತ್ತದೆಯೇ? ಬಹುಶಃ ಇಲ್ಲ! ಎನ್ನಬಹುದು. ಅನೇಕ ಕಾರಣಗಳಿಗಾಗಿ ಸಂಬಂಧಗಳಲ್ಲಿ ವ್ಯತ್ಯಾಸಗಳು ಉಂಟಾಗಬಹುದು (differences in couples) , ಆದರೆ ಆಹಾರವು ಮನೆಯಲ್ಲಿ ಅನೇಕ ಜಗಳಗಳಿಗೆ ಕಾರಣವಾಗುವ ಒಂದು ಸಮಸ್ಯೆಯಾಗಿದೆ.
ಆಹಾರದಿಂದ ಹೇಗೆ ಜಗಳ ಸಾಧ್ಯ ಅನ್ನೋದನ್ನು ನೀವು ಕೇಳಬಹುದು. ದಂಪತಿಗಳಲ್ಲಿ ಒಬ್ಬರು ಸಸ್ಯಾಹಾರ ಮತ್ತೊಬ್ಬರು ಮಾಂಸಾಹಾರ (non vegetarian) ಆಗಿದ್ದರೆ ಈ ಸಮಸ್ಯೆ ಬಗ್ಗೆ ನಿಮಗೆ ಗೊತ್ತಾಗುತ್ತೆ. ಯಾಕಂದ್ರೆ ಈ ಆಹಾರದ ಹೋರಾಟವು ಹೆಚ್ಚಾಗಿ ಸಸ್ಯಾಹಾರಿ ಮತ್ತು ಮಾಂಸಾಹಾರದ ನಡುವೆ ಇರುತ್ತದೆ.
ಒಬ್ಬರು ಸಸ್ಯಾಹಾರಿ ಮತ್ತು ಇನ್ನೊಬ್ಬರು ಮಾಂಸಾಹಾರಿಗಳಾಗಿದ್ದರೆ, ಅದು ಮನೆಯಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ಇದಲ್ಲದೆ, ಎರಡನೇ ಕಾರಣವೆಂದರೆ ಒಬ್ಬರು ಸಸ್ಯಾಹಾರಿ ಮತ್ತು ಇನ್ನೊಬ್ಬರು ಜಂಕ್ ಫುಡ್ ಪ್ರಿಯರು (junk food lover). ಒಂದೆಡೆ, ಸಸ್ಯಾಹಾರಿಗಳು ಡೈರಿ ಉತ್ಪನ್ನಗಳನ್ನು ತಿನ್ನುವುದಿಲ್ಲ ಮತ್ತು ಅನಾರೋಗ್ಯಕರ ಆಹಾರವನ್ನು ತಿನ್ನುವುದಿಲ್ಲ, ಮತ್ತೊಂದೆಡೆ, ಜಂಕ್ ಫುಡ್ ಪ್ರಿಯರು ಅನಾರೋಗ್ಯಕರ ವಸ್ತುಗಳನ್ನು ತಿನ್ನುತ್ತಾರೆ ಮತ್ತು ಆರೋಗ್ಯದ ಪ್ರಜ್ಞೆ ಹೊಂದಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಬುದ್ಧಿವಂತಿಕೆಯಿಂದ ಒಟ್ಟಿಗೆ ಬದುಕಲು ಮತ್ತು ಪರಸ್ಪರ ಸಂಬಂಧದ ಮೇಲೆ ಪರಿಣಾಮ ಬೀರದಂತೆ ಸಂಬಂಧವನ್ನು(effect on relationship) ಕಾಪಾಡಲು ಏನು ಮಾಡಬೇಕೆಂದು ತಿಳಿಯೋಣ.
ಈ ವಿಷಯಗಳನ್ನು ನೆನಪಿನಲ್ಲಿಡಿ
ಮೊದಲನೆಯದಾಗಿ, ಪರಸ್ಪರರ ಆಹಾರ ಪದ್ಧತಿಯನ್ನು (food habits) ಅಂದರೆ ನಿಮ್ಮ ಸಂಗಾತಿಯ ಆಹಾರ ಆಯ್ಕೆಗಳನ್ನು ಗೌರವಿಸಿ. ಪರಸ್ಪರರ ಆಹಾರ ಪದ್ಧತಿಯನ್ನು ಗೇಲಿ ಮಾಡಬೇಡಿ. ಯಾಕಂದ್ರೆ ಪ್ರತಿಯೊಬ್ಬರಿಗೂ ಆಯ್ಕೆಯ ಸ್ವಾತಂತ್ರವಿದೆ. ಅವರಿಗೆ ಏನಿಷ್ಟ ಅದನ್ನು ಅವರು ತಿನ್ನಲಿ.
ಯಶಸ್ವಿ ಸಂಬಂಧವು (successful relationship) ಅನೇಕ ಸ್ಥಳಗಳಲ್ಲಿ ಸಣ್ಣ ಹೊಂದಾಣಿಕೆಗಳನ್ನು ಬಯಸುತ್ತದೆ, ಆದ್ದರಿಂದ ನಿಮ್ಮ ಸಂಗಾತಿಯ ಆಹಾರ ಪದ್ಧತಿಯನ್ನು ಅರ್ಥಮಾಡಿಕೊಳ್ಳಿ ಮತ್ತು ಅದನ್ನು ಸ್ವೀಕರಿಸಿ ಮತ್ತು ನಿಮ್ಮ ಸಂಗಾತಿಯೂ ಇದನ್ನ ಸ್ವೀಕರಿಸುವಂತೆ ಮಾಡಿ. ಈ ರೀತಿಯಾಗಿ ಒಟ್ಟಿಗೆ ನಡೆಯುವ ಮೂಲಕ, ಮನೆಯಲ್ಲಿ ಆಹಾರ ಮತ್ತು ಪಾನೀಯಗಳ ಜಗಳವನ್ನು ತಪ್ಪಿಸಬಹುದು.
ನೀವು ಜಂಕ್ ಫುಡ್ (Junk Food) ಪ್ರಿಯರಾಗಿದ್ದರೆ ಮತ್ತು ನಿಮ್ಮ ಸಂಗಾತಿ ಆರೋಗ್ಯಕರ ಆಹಾರ ತಿನ್ನುವವರಾಗಿದ್ದರೆ, ನಿಮ್ಮ ಸಂಗಾತಿಯ ಆಯ್ಕೆಗೆ ಅನುಗುಣವಾಗಿ ಹೊಂದಿಕೊಳ್ಳಲು ನೀವು ಪ್ರಯತ್ನಿಸಬಹುದು. ಆರೋಗ್ಯಕರ ಅಭ್ಯಾಸಗಳನ್ನು (healthy habits) ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ ಮತ್ತು ನಿಮ್ಮ ಸಂಬಂಧಗಳು ಸಹ ಬಲವಾಗಿರುತ್ತವೆ.
ನೀವು ಮನೆಯ ಹೊರಗೆ ತಿನ್ನಲು ಹೋದಾಗಲೆಲ್ಲಾ, ಮನೆಯಲ್ಲಿಯೇ ಏನು ತಿನ್ನಬಹುದು ಎನ್ನುವ ಬಗ್ಗೆ ಮಾತನಾಡಿಕೊಂಡರೆ ಉತ್ತಮ. ಮನೆಯ ಹೊರಗಿನ ಯಾರ ಮುಂದೆಯಾದರೂ ತಿನ್ನುವುದು ಮತ್ತು ಕುಡಿಯುವುದು ಮುಂತಾದ ಸಣ್ಣ ವಿಷಯದ ಬಗ್ಗೆ ವಾದಿಸಬೇಡಿ. ಇತರರ ಮುಂದೆ ಜಗಳವಾಡುವುದು ನಿಮ್ಮ ಇಮೇಜ್ ಅನ್ನು ಹಾಳುಮಾಡುತ್ತದೆ ಮತ್ತು ಇಷ್ಟವಿಲ್ಲದೇ ಆಹಾರ ತಿನ್ನಬೇಕಾಗುತ್ತೆ.
ಕೆಲವೊಮ್ಮೆ ನಿಮ್ಮ ಸಂಗಾತಿಯ ನೆಚ್ಚಿನ ಆಹಾರವನ್ನು ಕುಕ್ ಮಾಡಿ ಅಥವಾ ಆರ್ಡರ್ ಮಾಡಿ ಮತ್ತು ಅವರಿಗೆ ಸರ್ಫ್ರೈಸ್ (surprise) ನೀಡಿ. ಈ ರೀತಿಯಾಗಿ, ನೀವು ವಿಭಿನ್ನ ಆಹಾರ ಪದ್ಧತಿಗಳಿಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ರೆ, ಇಬ್ಬರ ಸಂಬಂಧವೂ ಗಟ್ಟಿಯಾಗುತ್ತೆ, ಇಬ್ಬರೂ ಪ್ರೀತಿಯಿಂದ ಜೀವನ ಮಾಡಲು ಸಾಧ್ಯವಾಗುತ್ತೆ.