6 ವರ್ಷ ಒಟ್ಟಿಗಿದ್ದು ಕೈಕೊಟ್ಟಳು, ಇನ್ನೊಬ್ಬಳು ಬೇಗನೇ ಬಿಟ್ಟುಹೋದಳು: ರಾಜ್​ ಬಿ. ಶೆಟ್ಟಿ ಸೀಕ್ರೆಟ್​ ರಿವೀಲ್

Published : Mar 20, 2026, 12:44 PM IST

ನಟ ರಾಜ್ ಬಿ. ಶೆಟ್ಟಿ 'ಭರ್ಜರಿ ಬ್ಯಾಚುಲರ್ಸ್' ಶೋನಲ್ಲಿ ತಮ್ಮ ಪ್ರೇಮ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ಆರು ವರ್ಷಗಳ ಕಾಲ ಇದ್ದ ಸಂಬಂಧ ಮುರಿದುಬಿದ್ದಿದ್ದು ಹೇಗೆ ಮತ್ತು ಆ ಬ್ರೇಕಪ್ ತನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

PREV
16
ಪ್ಯಾನ್​ ಇಂಡಿಯಾ ಮೀರಿದ ಸ್ಟಾರ್​

ಕಡಿಮೆ ಬಜೆಟ್​ನಲ್ಲಿ ಸಿನಿಮಾ ಒಂದು ಹೇಗೆ ಚಿಂದಿ ಉಡಾಯಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತದ್ದು ರಾಜ್​. ಬಿ. ಶೆಟ್ಟಿ. ಅವರ ಒಂದು ಮೊಟ್ಟೆಯ ಕಥೆಯಾಗಲಿ, ಸು ಫ್ರಂ ಸೋ ಆಗಲಿ ಚಿಂದಿ ಉಡಾಯಿಸಿದ ಚಿತ್ರಗಳು. ಸು ಫ್ರಂ ಸೋ ರಾಜ್​ ಬಿ.ಶೆಟ್ಟಿ ಅವರ ಈ ಚಿತ್ರ ನಿರೀಕ್ಷೆಗೂ ಮೀರಿ ಗಳಿಕೆ ಮಾಡಿತು.. ಇತರ ಭಾಷೆಗಳಲ್ಲಿಯೂ ಚಿತ್ರಕ್ಕೆ ಸಕರ್​ ರೆಸ್ಪಾನ್ಸ್ ಸಿಕ್ಕಿತು. ಹೀಗೆ ಹಲವು ಚಿತ್ರಗಳನ್ನು ನೀಡಿದವರು ಅವರು.

26
ಲವ್​ ಬಗ್ಗೆ ರಾಜ್​ ಬಿ.ಶೆಟ್ಟಿ

ಇದೀಗ ಅವರು, ತಮ್ಮ ಲವ್​ ಜೀವನದ ಬಗ್ಗೆ ಇದೇ ಮೊದಲ ಬಾರಿಗೆ ಭಾರಿ ಸಿಕ್ರೇಟ್​ ರಿವೀಲ್​ ಮಾಡಿದ್ದಾರೆ. ಲವ್​ ಫೇಲ್ಯೂರ್​, ಅದರಿಂದ ತಾವು ಕಲಿತತದ್ದು ಹಾಗೂ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆಯ ಕುರಿತು ನಟ ಇದೀಗ ಮಾತನಾಡಿದ್ದಾರೆ.

36
ಆರು ವರ್ಷಗಳ ರಿಲೇಷನ್​

ಭರ್ಜರಿ ಬ್ಯಾಚುಲರ್ಸ್​ ಷೋನಲ್ಲಿ ಇದನ್ನು ಹೇಳಲಾಗಿದ್ದು, namma_kannada_tv ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಒಬ್ಬಳು ನನ್ನ ಜೊತೆ ಆರು ವರ್ಷ ಇದ್ದಳು. ಈ ರಿಲೇಷನ್​ ಸೆಟ್​ ಆಗುವಾಗಲೇ ನಾನು ಹೇಳಿದ್ದೆ. ನೀನು ಬಿಟ್ಟು ಹೋಗುತ್ತಿ ಎಂದರೆ ನಾನು ಕಾರಣ ಕೇಳಲ್ಲ ಎಂದು. ಅದು ಹಾಗೆಯೇ ಆಯ್ತು. ಆರು ವರ್ಷಗಳ ಬಳಿಕ ಅವಳು ಬಿಟ್ಟು ಹೋದಳು ಎಂದಿದ್ದಾರೆ ರಾಜ್​.

46
ಕೆಟ್ಟವನಾಗಿ ಉಳಿದುಕೊಳ್ತಿದ್ದೆ

ಅವಳು ಆಗ ಬಿಟ್ಟು ಹೋಗದಿದ್ದರೆ ನಾನು ಕೆಟ್ಟ ಮನುಷ್ಯನಾಗಿಯೇ ಉಳಿದುಕೊಳ್ಳುತ್ತಿದ್ದೆ ಎಂದು ನನಗೆ ಎನ್ನಿಸುತ್ತಿದೆ. ನಾನೇನೂ ಒಳ್ಳೆಯವನು ಎಂದಲ್ಲ. ಆದರೆ ಬ್ರೇಕಪ್ ಆದ ಮೇಲೆ ನನಗೆ ಗೊತ್ತಾಯ್ತು. ನಾನು ಅವಳಿಗೆ ಸರಿಯಾಗಿ ಪ್ರೀತಿನೇ ಕೊಡಲಿಲ್ಲ ಎನ್ನುವುದು ಎಂದಿದ್ದಾರೆ ನಟ.

56
ಅವಳು ಕಲಿಸಿದ ಪಾಠ

ಆದರೆ ಅವಳು ಬ್ರೇಕಪ್​ ಮಾಡಿರುವುದರಿಂದ ನಾನು ಬೆಳೆದೆ. ಇಲ್ಲದಿದ್ದರೆ ಕೆಟ್ಟವನಾಗಿಯೇ ಇರುತ್ತಿದ್ದೆ. ನೀನು ನನ್ನ ಜೊತೆ ಇರಲು ಯೋಗ್ಯ ಅಲ್ಲ ಎನ್ನುವುದನ್ನು ಅವಳು ಕಲಿಸಿಕೊಟ್ಟಳು ಎಂದಿದ್ದಾರೆ.

66
ಈಗಲೂ ಒಬ್ಬಳು ಇದ್ದಾಳೆ

ಅದಾದ ಮೇಲೆ ಇನ್ನೊಬ್ಬ ಜೊತೆ ಬೇಗ ಬ್ರೇಕಪ್​ ಆಯ್ತು. ಅದಾದ ಬಳಿಕ ಈಗಲೂ ಒಬ್ಬಳು ಇದ್ದಾಳೆ ಎನ್ನುವ ಮೂಲಕ ಪತ್ನಿಯ ಬಗ್ಗೆ ಮಾತನಾಡಿದ್ದಾರೆ ರಾಜ್​. ಈಗ ಇರುವವಳಿಗೆ ಸಾಕಷ್ಟು ಲೈಫ್​ನಲ್ಲಿ ಹುಡುಕಾಟ ಇದೆ. ನನಗೂ ಹುಡುಕಾಟ ಇದೆ. ಇಬ್ಬರೂ ಹ್ಯಾಪ್ಪಿ ಆಗಿದ್ದೇವೆ ಎಂದಿದ್ದಾರೆ ರಾಜ್​.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories