ವಿಚ್ಛೇದನದ ಸಮಯದಲ್ಲಿ ಹೆಂಡತಿ ಕೇಳಿದಷ್ಟು ಜೀವನಾಂಶವನ್ನು ಗಂಡ ಕೊಡಬೇಕಾ? ನ್ಯಾಯಾಲಯವು ಯಾವ ಆಧಾರದ ಮೇಲೆ ಜೀವನಾಂಶವನ್ನು ನಿರ್ಧರಿಸುತ್ತದೆ? ಗಂಡನ ಆಸ್ತಿಯಲ್ಲಿ ಹೆಂಡತಿಗೆ ಅರ್ಧದಷ್ಟು ಪಾಲು ಸಿಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಹೆಂಡತಿ ಕೇಳಿದಷ್ಟು ಹಣ ಕೊಡಲು ಜೀವನಾಂಶವೇನು 'ಬ್ಲಾಂಕ್ ಚೆಕ್' ಅಲ್ಲ. ಕೋರ್ಟ್ ಜೀವನಾಂಶದ ಮೊತ್ತವನ್ನು ನಿರ್ಧರಿಸುವ ಮುನ್ನ ಹಲವು ಅಂಶಗಳನ್ನು ಪರಿಶೀಲಿಸುತ್ತದೆ. ದಂಪತಿ ಯಾಕೆ ಬೇರೆಯಾಗುತ್ತಿದ್ದಾರೆ, ಇದರಲ್ಲಿ ಗಂಡನ ತಪ್ಪಿದೆಯೇ ಎಂಬುದನ್ನು ಮೊದಲು ನೋಡುತ್ತದೆ.
26
ಹೆಂಡತಿಯ ಸಾಮರ್ಥ್ಯ, ಜವಾಬ್ದಾರಿಗಳು..
ಕೋರ್ಟ್, ಹೆಂಡತಿ ಓದಿದ್ದಾರಾ, ಸ್ವಂತವಾಗಿ ದುಡಿಯುವ ಶಕ್ತಿ ಇದೆಯಾ ಎಂದು ಪರಿಶೀಲಿಸುತ್ತದೆ. ಮಕ್ಕಳ ಜವಾಬ್ದಾರಿ ಯಾರ ಮೇಲಿದೆ ಎನ್ನುವುದೂ ಮುಖ್ಯವಾಗುತ್ತದೆ. ಜೊತೆಗೆ, ಗಂಡನ ಆದಾಯ ಮತ್ತು ಆಸ್ತಿಯ ಸ್ಥಿತಿಗತಿಯನ್ನೂ ಕೋರ್ಟ್ ಅಂದಾಜು ಮಾಡುತ್ತದೆ.
36
ಮುಖ್ಯವಾದ ವಾಸ್ತವಗಳು
ಗಂಡ ಎಷ್ಟೇ ಕೋಟ್ಯಧಿಪತಿಯಾಗಿದ್ದರೂ, ವಿಚ್ಛೇದನದ ಸಮಯದಲ್ಲಿ ಆತನ ಆಸ್ತಿಯಲ್ಲಿ ಅರ್ಧದಷ್ಟು ಭಾಗವನ್ನು ಹೆಂಡತಿಗೆ ನೀಡಬೇಕೆಂಬ ನಿಯಮ ಎಲ್ಲೂ ಇಲ್ಲ.
ಹೆಂಡತಿಯರು ಲಕ್ಷಾಂತರ ಅಥವಾ ಕೋಟ್ಯಂತರ ರೂಪಾಯಿ ಜೀವನಾಂಶ ಕೇಳುವುದು ಕೇವಲ ಸಮಯ ವ್ಯರ್ಥವೇ ಹೊರತು, ಅದರಿಂದ ಪ್ರಯೋಜನವಿಲ್ಲ. ಹಾಗಾಗಿ ಗಂಡಂದಿರು ಆತಂಕ ಪಡುವ ಅಗತ್ಯವಿಲ್ಲ.
56
ಕೇವಲ ಅವಶ್ಯಕತೆಗಳನ್ನು
ವಿಚ್ಛೇದನದ ಸಮಯದಲ್ಲಿ ಜೀವನಾಂಶವನ್ನು ಕೇವಲ ಅಗತ್ಯಗಳು ಮತ್ತು ಜವಾಬ್ದಾರಿಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆಯೇ ಹೊರತು, ಬೇಡಿಕೆಗಳನ್ನು ಆಧರಿಸಿಯಲ್ಲ.
66
ಕಾನೂನು ಅರಿವು ಮುಖ್ಯ
ಈ ಬಗ್ಗೆ ಕಾನೂನಿನ ಅರಿವು ಇಟ್ಟುಕೊಂಡರೆ ಅನಗತ್ಯ ಭಯ ಮತ್ತು ಆತಂಕವನ್ನು ತಪ್ಪಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.