ಕೆಲವು ಸಂಬಂಧಗಳಲ್ಲಿ (Relationship) ಪದೇ ಪದೇ ಅಸಮಾಧಾನ, ಸಣ್ಣ ಪುಟ್ಟ ಕಾರಣಕ್ಕೂ ಕಲಹ ಆಗುತ್ತಿರುತ್ತದೆ. ಈ ರೀತಿಯ ಮನಸ್ತಾಪ ಇಬ್ಬರ ನಡುವಿನ ಬಾಂಧವ್ಯವನ್ನು ಹಾಳು ಮಾಡುತ್ತದೆ. ಇಂತಹ ಸಂಬಂಧಗಳು ಮುರಿದು ಬಿದ್ರೂ, ಹಳೆಯ ನೆನಪುಗಳು (Old Memories) ನಿಮ್ಮ ಸುತ್ತವೇ ಸುತ್ತುತ್ತಿರುತ್ತವೆ. ಈ ನೆನಪುಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತವೆ. ಮಾಜಿ ಗೆಳತಿ ಅಥವಾ ಗೆಳೆಯನ ಹಳೆ ನೆನಪುಗಳಿಂದ ಹೊರ ಬಂದು ಹೊಸ ಜೀವನ ಸಾಗಿಸಬೇಕಾಗುತ್ತದೆ.
26
ಮನಸ್ಸು ಶಾಂತಿ
ಇಂತಹ ಸಂಘರ್ಷದ ಹೊರ ಬಂದಾಗ ಮನಸ್ಸು ಶಾಂತಿಯನ್ನು ಬಯಸುತ್ತದೆ. ಒಂದು ಸಮಯದಲ್ಲಿ ಸಂಬಂಧದಿಂದ ದೂರವಾಗಿದ್ದಕ್ಕೆ ಸಂತೋಷದಿಂದ (After Breakup) ಕುಣಿದು ಕುಪ್ಪಳಿಸಬೇಕು ಅಂತ ಅನ್ನಿಸುತ್ತದೆ. ನಂತರ ಜೀವನದ ಏರಿಳಿತ ಹಳೆಯ ಸಂಬಂಧ ನೆನಪುಗಳನ್ನು ಕಣ್ಮುಂದೆ ತರಲು ಆರಂಭಿಸುತ್ತದೆ. ಸಂಬಂಧ ಕೊನೆಗೊಂಡರೂ ಈ ಬಂಧದಿಂದಾಗಿ ಆ ವ್ಯಕ್ತಿಯನ್ನು ಮರೆಯುವುದು ನಮಗೆ ತುಂಬಾ ಕಷ್ಟಕರವಾಗಿರುತ್ತದೆ. ಇಂತಹ ನೆನಪುಗಳು ಹಳೆ ಸಂಬಂಧದ ಸಖ್ಯ ಬಯಸಲು ಆರಂಭಿಸುವ ಮೂಲಕ ಆ ಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.
36
ಹಳೆ ಸಂಬಂಧದ ನೆನಪುಂಟು ಮಾಡುವ ಕ್ಷಣ
ಬೇರ್ಪಟ್ಟ ನಂತರವೂ ಕೆಲವು ಹಳೆ ಸಂಬಂಧ ನೆನಪು ಮತ್ತು ಕೆಲವು ಕ್ಷಣಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಉಡುಗೊರೆಯಾಗಿ ನೀಡಿದ ವಸ್ತುಗಳು, ಆತ್ಮೀಯವಾಗಿ ಕಳೆದ ಕ್ಷಣದ ಫೊಟೋ ಅಥವಾ ವಿಡಿಯೋಗಳನ್ನು ಉಳಿಸಿಕೊಳ್ಳುತ್ತಾರೆ. ಇದರಿಂದಾಗಿ ಹಳೆ ಸಂಬಂಧದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಹಳೆ ಸಂಬಂಧದ (Old Relationship) ನೆನಪುಂಟು ಮಾಡುವ ಕ್ಷಣ, ವಸ್ತುಗಳಿರೋದರಿಂದ ಇದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಇಂತಹ ಒಳ್ಳೆಯ ನೆನಪುಗಳು ಹಳೆ ಸಂಬಂಧದ ಕಹಿ ವಿಷಯಗಳನ್ನು ಮರೆ ಮಾಡುತ್ತವೆ.
ಸಂಬಂಧ ದೂರವಾದ ಬಳಿಕ ಯಾಕೆ ಬೇರೆಯಾದೆವು ಎಂಬ ಕಾರಣ ತಿಳಿಯದಿದ್ದಾಗ ಮನಸ್ಸು ಗೊಂದಲದಲ್ಲಿ ಸಿಲುಕುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ಕೊಂಡುಕೊಳ್ಳಲು ಹೋದಾಗ ಮಾಜಿ ಗೆಳೆಯ ಅಥವಾ ಗೆಳತಿ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಈ ಸಮಯದಲ್ಲಿ ನಿಮಗೆ ಆ ವ್ಯಕ್ತಿಯೊಂದಿಗೆ ಕಳೆದ ಪ್ರತಿಯೊಂದು ಕ್ಷಣಗಳು ಕಣ್ಮುಂದೆ ಬರುತ್ತವೆ. ಹೀಗಾದಾಗ ಮಾಜಿ ಸಂಗಾತಿಯತ್ತ ಮತ್ತೆ ಆಕರ್ಷಣೆಗೆ ಒಳಗಾಗುತ್ತೀರಿ. ಇದರಿಂದ ಹಳೆ ಸಂಬಂಧದಿಂದ ಹೊರ ಬರಲು ಸಾಧ್ಯವಾಗಲ್ಲ.
56
ಮಾಜಿ ಸಂಗಾತಿ ಹೊಂದಿದ್ದ ಮಹತ್ವಾಕಂಕ್ಷೆ
ಮಾಜಿ ಸಂಗಾತಿ ಜೊತೆಯಲ್ಲಿದ್ದಾಗ ಆರಂಭಿಸಿದ ಕೆಲಸಗಳು ಕೆಲವೊಮ್ಮೆ ಅರ್ಧಕ್ಕೆ ಸ್ಥಗಿತಗೊಂಡಿರುತ್ತವೆ. ಈ ಕೆಲಸಗಳನ್ನು ಪೂರ್ಣಗೊಳಿಸಲು ಮುಂದಾದ್ರೆ ಮಾಜಿ ಸಂಗಾತಿಯ ನೆನಪು ಬರುತ್ತದೆ. ಆ ಕೆಲಸದ ಬಗ್ಗೆ ಮಾಜಿ ಸಂಗಾತಿ ಹೊಂದಿದ್ದ ಮಹತ್ವಾಕಂಕ್ಷೆಗಳು ನಿಮ್ಮ ಕೋಪವನ್ನು ತಣಿಸುವಂತೆ ಮಾಡುತ್ತವೆ. ಇಂತಹ ಘಟನೆಗಳು ನಿಮ್ಮನ್ನು ಮಾಜಿ ಸಂಗಾತಿಯತ್ತ ಹೋಗುವಂತೆ ಮಾಡುತ್ತವೆ.
66
ಒಂಟಿ ಜೀವನಕ್ಕೆ ಆಸರೆ
ಸಂಬಂಧದಲ್ಲಿರುವಾಗ, ಗೆಳೆಯ/ಗೆಳತಿ ಒಳ್ಳೆಯ ಗೆಳೆಯ/ಗೆಳತಿ, ನಂಬಿಕಸ್ತ ವ್ಯಕ್ತಿ ಮತ್ತು ಆಸರೆಯಾಗಿರುತ್ತಾರೆ. ಬೇರ್ಪಟ್ಟಾಗ ಈ ಆಸರೆಯನ್ನು ಕಳೆದುಕೊಳ್ಳುತ್ತೇವೆ. ಈ ಶೂನ್ಯವನ್ನು ತುಂಬಲು ಸಾಧ್ಯವಾಗದೆ ಚಡಪಡಿಸುವಾಗ, ಮನಸ್ಸು ಹಳೆಯ ನೆನಪುಗಳನ್ನು ಹುಡುಕುತ್ತದೆ. ಒಂಟಿಯಾಗಿದ್ದಾಗ ಜೊತೆಗೆ ಆಸರೆಯನ್ನು ಹುಡುಕುತ್ತದೆ. ಹೊಸ ದಾರಿ ಸಿಗೋವರೆಗೂ ಮೊದಲಿದ್ದ ಆಸರೆಯನ್ನೇ ಮನಸ್ಸು ಬಯಸುತ್ತದೆ ಮತ್ತು ಅದಕ್ಕಾಗಿ ಹಾತೊರೆಯುವಂತೆ ಮಾಡುತ್ತದೆ.