Propose Day 2022: ಪ್ರೀತಿ ಹುಟ್ಟಿದ್ಯಾ? ಪ್ರಪೋಸ್ ಮಾಡಲಿವೆ ಸಾವಿರ ದಾರಿ

First Published | Feb 8, 2022, 6:35 PM IST

ಪ್ರತಿ ವರ್ಷ ವ್ಯಾಲೆಂಟೈನ್‌ ವೀಕ್‌ನ ಎರಡನೇ ದಿನ ಅಂದರೆ ಫೆಬ್ರುವರಿ 8 ರಂದು ಪ್ರಪೋಸ್ ಡೇ (Propose Day 2022) ಎಂದು ಸೆಲೆಬ್ರೆಟ್‌ ಮಾಡಲಾಗುತ್ತದೆ. ಈ ದಿನ ವಿಶೇಷವಾಗಿ  ಇಲ್ಲಿಯವರೆಗೆ ತಮ್ಮ ಭಾವನೆಗಳನ್ನು ತುಂಬಿಸಿಕೊಂಡಿರುವ ಮತ್ತು  ತಮ್ಮ ಭಾವನೆಗಳನ್ನು ನಿವೇದನೆ ಮಾಡಿಕೊಳ್ಳುವ ಎಲ್ಲರಿಗಾಗಿ ಅರ್ಪಿತ. ಈ ದಿನವೇ ಅನೇಕ ಹೊಸ ಜೋಡಿಗಳು ಹುಟ್ಟಿಕೊಳ್ಳುತ್ತವೆ. ನೀವು ಪ್ರಪೋಸ್ ದಿನದಂದು ನಿಮ್ಮ ಸಂಗಾತಿಗೆ ಪ್ರಪೋಸ್‌ ಮಾಡಲು ಯೋಜಿಸುತ್ತಿದ್ದರೆ, ಇಲ್ಲಿದೆ ಕೆಲವು ಐಡಿಯಾಗಳು.

Propose Dayಯಂದು  ನೀವು ನಿಮ್ಮ ಪ್ರೀತಿಯನ್ನು ಹೇಗೆ ಹೇಳುವುದು ಎಂದು ಯೋಚಿಸುತ್ತಿದ್ದರೆ ಮತ್ತು  ನಿಮ್ಮ ಮತ್ತು ನಿಮ್ಮ ಸಂಗಾತಿಯ ದಿನವನ್ನು ಹೆಚ್ಚು ವಿಶೇಷವಾಗಿಸಲು  ಬಯಸಿದ್ದರೆ, ಇಲ್ಲಿವೆ ಕೆಲವು ಐಡಿಯಾಗಳು.  

ನಿಮ್ಮ ಪ್ರಪೋಸ್‌ ಹೆಚ್ಚು ವಿಶೇಷವಾಗಿಸಲು ಯೋಜಿಸುತ್ತಿದ್ದರೆ, ಅವರ ಮೇಲಿನ ನಿಮ್ಮ ಪ್ರೀತಿಯನ್ನು ಇಡೀ ಜಗತ್ತಿಗೆ ಘೋಷಿಸಲು ನೀವು ಬಯಸಿದ್ದರೆ, ರೇಡಿಯೊ ಚಾನೆಲ್‌ ಮೂಲಕ ಪ್ರಪೋಸ್‌ ಮಾಡಬಹುದು.

Tap to resize

ಟ್ರೇಜರ್‌ ಹಂಟ್‌:
ನಿಮ್ಮ ಸಂಗಾತಿಯೊಂದಿಗೆ ಆಟವಾಡುವ ಮೂಲಕ  ಪ್ರಪೋಸ್‌  ಮಾಡಬಹುದು. ಸಂಗಾತಿಯನ್ನು ಟ್ರೇಜರ್‌ ಹಂಟ್‌ಗೆ ಕಳುಹಿಸಿ ಮತ್ತು ಆಟದ ಕೊನೆಯಲ್ಲಿ, ಪ್ರಪೋಸ್‌ ಮಾಡಬಹುದು. ಮದುವೆಯ ಪ್ರಸ್ತಾಪದೊಂದಿಗೆ ಕೊನೆಗೊಳ್ಳುವಂತೆ ಟ್ರೇಜರ್‌ ಹಂಟ್ ಆಟ ರಚಿಸಬಹುದು. ಮೊದಲು ಮನೆಯಲ್ಲಿ ಸುಳಿವುಗಳನ್ನು ಬಿಡಬಹುದು ಮತ್ತು ನಂತರ ನೆಚ್ಚಿನ ಸ್ಥಳ ಅಥವಾ ಸ್ಥಳದಲ್ಲಿ ಈ ಗೇಮ್‌ ಕೊನೆಗೊಳ್ಳಬಹುದು.

ಜನರು ತುಂಬಿದ ರೆಸ್ಟೋರೆಂಟ್‌ನಲ್ಲಿ ತಮ್ಮ ಸಂಗಾತಿ ಪ್ರೀತಿ ಬಗ್ಗೆ ಪ್ರಸ್ತಾಪಿಸಿದಾಗ ಚಲನಚಿತ್ರಗಳಲ್ಲಿನ ಆ ದೃಶ್ಯಗಳು ನೆನಪಿಗೆ ಬರುತ್ತವೆ. ನೀವೂ ಹಾಗೆ ಮಾಡಬಹುದು. ಪ್ರಪೋಸ್‌ ಜೊತೆ ಅವರ ನೆಚ್ಚಿನ ಸಂಗೀತವನ್ನು ನುಡಿಸುವ ಬ್ಯಾಂಡ್‌ನ  ಟಚ್‌ ಸೇರಿಸಲು ಮರೆಯಬೇಡಿ.

ಕಡಲತೀರ ಅಥವಾ ಪರ್ವತಕ್ಕೆ ಹಾಲಿಡೇ ಸಾಧ್ಯವಾಗದಿದ್ದರೂ, ನಿಮ್ಮ ಸಂಗಾತಿಯನ್ನು ಹತ್ತಿರದ ಸುಂದರವಾದ ಸ್ಥಳಕ್ಕೆ ಅಥವಾ ನಗರದ ಅಥವಾ ಸುತ್ತಮುತ್ತಲಿನ ನಿಮ್ಮ ಪಾರ್ಟ್‌ನರ್‌ನ ನೆಚ್ಚಿನ ಸ್ಥಳಕ್ಕೆ ಕರೆದೊಯ್ಯಬಹುದು. ಮತ್ತು  ಅಲ್ಲಿ ಪ್ರಪೋಸ್‌ ಮಾಡಿ.

ರೆಫ್ರಿಜಿರೇಟರ್‌ನಲ್ಲಿ ಸಣ್ಣ ಮೆಸೇಜ್‌ಗಳನ್ನು ಅಂಟಿಸುವ  ಮೂಲಕ ನಿಮ್ಮ ಸಂಗಾತಿಗೆ ಪ್ರಪೋಸ್‌ ಮಾಡಬಹುದು. ಫ್ರಿಜ್ ಆಯಸ್ಕಾಂತಗಳನ್ನು ಬಳಸಿ ನಿಮ್ಮ ಪ್ರೀತಿಯ ಮೆಸೇಜ್‌ಗಳನ್ನು ಅಂಟಿಸಿ ಸರ್‌ಪ್ರೈಸ್‌ ಪ್ರಪೋಸಲ್‌ ಡೇ ಅನ್ನು ವಿಶೇಷವಾಗಿಸಿ.  

Latest Videos

click me!