ಈ ವಿಷ್ಯವನ್ನು ಗರ್ಲ್‌ಫ್ರೆಂಡ್ ಹೇಳಿದರೂ ಪುರುಷರು ಒಪ್ಪೋಲ್ಲ ಬಿಡಿ!

First Published | Jun 30, 2022, 2:40 PM IST

ಪುರುಷರು ಸಾಮಾನ್ಯವಾಗಿ ತಮ್ಮ ಕೆಲಸದಲ್ಲೇ ಮುಳುಗಿರುತ್ತಾರೆ. ಅವರು ಇನ್ನೊಬ್ಬರ ಜೀವನದಲ್ಲಿ ಇಂಟರ್ ಫಿಯರ್ (interference) ಮಾಡೋದು ಕೂಡ ಕಡಿಮೆಯೇ.. ಅದರ ಜೊತೆಗೆ ಅವರ ಜೀವನದಲ್ಲಿ ಯಾರೂ ಹಸ್ತಕ್ಷೇಪ ಮಾಡೋದನ್ನು ಸಹ ಅವರು ಇಷ್ಟಪಡೋದಿಲ್ಲ. ಅವರು ಪತ್ನಿಯನ್ನು ಎಷ್ಟೇ ಪ್ರೀತಿಸುತ್ತಿದ್ದರೂ ಕೆಲವೊಂದು ವಿಷಯಗಳಲ್ಲಿ ಅವರು ಪತ್ನಿಯ ಮಾತನ್ನು ಒಪ್ಪೋದೆ ಇಲ್ಲ.

ಲುಕ್ಸ್ :

ಪುರುಷರು ತಮ್ಮನ್ನು ತಾವು ಹೇಗೆ ನೋಡಿಕೊಳ್ಳಬೇಕು ಅನ್ನೋದನ್ನು ಚೆನ್ನಾಗಿಯೇ ತಿಳಿದಿದ್ದಾರೆ. ತಮ್ಮ ಲುಕ್ಸ್ (looks) ಬಗ್ಗೆ ತಮ್ಮ ಪಾರ್ಟ್ನರ್ ಹೇಳೋದನ್ನು ಅವರು ಇಷ್ಟ ಪಡೋದಿಲ್ಲ. ಕ್ಷೌರ, ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಇತ್ಯಾದಿ ಬಗ್ಗೆ ಪದೇ ಪದೇ ಸಂಗಾತಿ ಹೇಳಲು ಆರಂಭಿಸಿದಾಗ ಅವರು ಕಿರಿಕಿರಿಗೊಳ್ಳುತ್ತಾರೆ.

ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ:

ಭಾರತೀಯ ಸಮಾಜದಲ್ಲಿ (Indian society), ಪುರುಷರನ್ನು ಮನೆಯ ಮುಖ್ಯಸ್ಥ ಎನ್ನಲಾಗುತ್ತೆ. ಮೊದಲಿನಿಂದಲೂ, ಅವರು ಕುಟುಂಬವನ್ನು ಆದ್ಯತೆ ನೀಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಿರುವಾಗ ಯಾರಾದರೂ ಕುಟುಂಬದ ಬಗ್ಗೆ ಕೆಟ್ಟದ್ದನ್ನು ಹೇಳಿದ್ರೆ ಪುರುಷರಿಗೆ ಇಷ್ಟವಾಗೋದಿಲ್ಲ. 

Tap to resize

ವ್ಯವಹಾರ:

ತಮ್ಮ ಕುಟುಂಬದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ತೆಗೆದುಕೊಳ್ಳಲು ಪುರುಷರ ಮೇಲೆ ತುಂಬಾ ಒತ್ತಡ ಇರುತ್ತೆ. ಅವರು ತಮ್ಮ ಎಜುಕೇಶನ್ ಬೇಗ ಮುಗಿಸಿ, ಉದ್ಯೋಗ ಮತ್ತು ವ್ಯವಹಾರ ಇತ್ಯಾದಿ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ. ಈ ಟೈಮಿನಲ್ಲಿ ಅವರು ಮಹಿಳೆಯ ತಮ್ಮ ಬ್ಯುಜಿನೆಸ್‌ನಲ್ಲಿ ಇಂಟರ್ ಫಿಯರ್ ಆಗೋದನ್ನು ಇಷ್ಟಪಡೋದಿಲ್ಲ. 

ಡ್ರೈವಿಂಗ್:

ಪುರುಷರು ತಮ್ಮ ಡ್ರೈವಿಂಗ್ ಸ್ಕಿಲ್ (Driving Skill) ಬಗ್ಗೆ ಸಾಕಷ್ಟು ವಿಶ್ವಾಸ (Confidence) ಹೊಂದಿರುತ್ತಾರೆ. ಅವರು ಕಾನ್ಫಿಡೆಂಟಿನಿಂದ ಡ್ರೈವ್ ಮಾಡಲು ಇಷ್ಟಪಡುತ್ತಾರೆ. ಈ ಟೈಮಿನಲ್ಲಿ, ಅವರ ಸಂಗಾತಿ ಅವರಿಗೆ ಡ್ರೈವಿಂಗ್ ರೂಲ್ಸ್ ಬಗ್ಗೆ ಹೇಳಲು ಬಂದಾಗ, ಅವರಿಗೆ ಇರಿಟೇಟ್ ಆಗುತ್ತೆ.

ಆಹಾರ:

ಪುರುಷರ ಹಾರ್ಟ್ ಟಚ್ ಮಾಡಬೇಕೆಂದು ನೀವು ಬಯಸಿದ್ರೆ ಅದು ರುಚಿ ರುಚಿಯಾದ ಆಹಾರದ ಮೂಲಕ ಸಾಧ್ಯವಾಗುತ್ತೆ. ಅವರು ತಿನ್ನಲು ಮತ್ತು ಕುಡಿಯಲು ಇಷ್ಟಪಡುತ್ತಾರೆ, ಆದರೆ ತರಕಾರಿ ವಿಷಯದಲ್ಲಿ, ಅವರು ತುಂಬಾ ಆಯ್ಕೆ ಮಾಡುತ್ತಾರೆ. ಮಹಿಳೆಯರು ಆಹಾರದ ಆಯ್ಕೆ ಬದಲಾಯಿಸಲು ಪ್ರಯತ್ನಿಸಿದರೆ, ಆ ದಿನ ಫೈಟ್ ನಡೆಯುವುದು ಖಚಿತ.

ಸ್ನೇಹಿತರ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ:

ಪತ್ನಿಯು ಪತಿಯ ಸ್ನೇಹಿತರ ಬಗ್ಗೆ ಕೆಟ್ಟದ್ದನ್ನು ಹೇಳಿದಾಗ ಪುರುಷರಿಗೆ ತುಂಬಾ ಕೋಪ ಬರುತ್ತೆ. ಸ್ನೇಹಿತರ ಬಗ್ಗೆ ಕೆಟ್ಟದಾಗಿ ಹೇಳಿದಾಗ ಅವರಿಗೆ ಎಷ್ಟೊಂದು ಕೋಪ ಬರುತ್ತೆ ಎಂದರೆ ಅವರು ಬಯ್ಯುವ ಸಾಧ್ಯತೆ ಕೂಡ ಇದೆ. 

ಕ್ರಿಕೆಟ್:

ಜನರಲ್ಲಿ ಕ್ರಿಕೆಟ್ ಬಗ್ಗೆ ತುಂಬಾನೆ ಕ್ರೇಜ್ ಇರುತ್ತೆ. ವಿಶೇಷವಾಗಿ ಪುರುಷರು ಕ್ರಿಕೆಟ್ (Cricket Match) ವೀಕ್ಷಿಸುವಾಗ, ಅವರು ಯಾವುದೇ ರೀತಿ ಸಮಸ್ಯೆ ಆಗೋದನ್ನು ಇಷ್ಟಪಡೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ತಾಯಿ ಅಥವಾ ಹೆಂಡತಿ ಸೀರಿಯಲ್ ನೋಡಬೇಕೆಂದು ಒತ್ತಾಯಿಸಿದಾಗ ಅಥವಾ ಬೇರೆ ಕೆಲಸ ಮಾಡಲು ಒತ್ತಡ ಹೇರಿದಾಗ, ಇವರಿಕೆ ಕೋಪ ಬರುತ್ತೆ.

ಬಟ್ಟೆಗಳ ಬಣ್ಣ, ಟ್ರೆಂಡ್ ಬಗ್ಗೆ:

ಬಟ್ಟೆಗಳು ಪುರುಷರಿಗೆ ಹೆಚ್ಚು ಮುಖ್ಯವಲ್ಲ. ಅವರು ಆರಾಮದಾಯಕವೆಂದು ಕಂಡುಕೊಳ್ಳುವ ಬಟ್ಟೆಗಳನ್ನು ಮತ್ತೆ, ಮತ್ತೆ ಹಾಕುತ್ತಾರೆ. ಹೀಗಿರುವಾಗ, ಗೆಳತಿ ಅಥವಾ ಹೆಂಡತಿ ಡ್ರೆಸ್ ಟ್ರೆಂಡ್ (Dress Trend) ಬಗ್ಗೆ ಕಮೆಂಟ್ ಮಾಡಿದಾಗ ಅವರಿಗೆ ಇಷ್ಟವಾಗೋದಿಲ್ಲ.
 

Latest Videos

click me!