Parenting Tips: ಭಾರತೀಯ ಕುಟುಂಬಗಳಲ್ಲಿ, ಅಜ್ಜ-ಅಜ್ಜಿಯರ ವಾತ್ಸಲ್ಯವನ್ನು ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ. ಅವರ ಕಥೆಗಳು, ಅನುಭವಗಳು ಮತ್ತು ಪ್ರೀತಿ ಮಕ್ಕಳ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ. ಆದರೆ, ಕೆಲವೊಮ್ಮೆ ಅವರ ಅತಿಯಾದ ಮುದ್ದು ಮಕ್ಕಳ ಮೇಲೆ ಪರಿಣಾಮ ಬೀರುತ್ತೆ.
ಮಗುವಿನ ಪ್ರತಿಯೊಂದು ಆಸೆಯನ್ನು ಪೂರೈಸುವುದು, ನಿಯಮಗಳನ್ನು ನಿರ್ಲಕ್ಷಿಸುವುದು ಅಥವಾ "ಕೋಪಮಾಡಬೇಡ" ಎಂಬ ನೆಪದಿಂದ ಶಿಸ್ತನ್ನು ನಿರ್ಲಕ್ಷಿಸುವುದು ಇವೆಲ್ಲವೂ ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಅಜ್ಜ-ಅಜ್ಜಿಯರ ಪ್ರೀತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ತಮ್ಮ ಮಗುವನ್ನು ಸರಿಯಾದ ಹಾದಿಯಲ್ಲಿ ನಡೆಸುವುದು ಹೇಗೆ ಅನ್ನೋದೆ ಪೋಷಕರಿಗೆ ದೊಡ್ಡ ಸವಾಲಾಗುತ್ತದೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಪೋಷಕರು ನೋಡೋಣ.
27
ಅಜ್ಜ-ಅಜ್ಜಿಯರ ಭಾವನೆಗಳು
ಮೊದಲನೆಯದಾಗಿ, ಈ ಪರಿಸ್ಥಿತಿಯು ಭಾವನೆಗಳಲ್ಲಿ ಬೇರೂರಿದೆ, ಆಸೆಗಳಲ್ಲಿ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅಜ್ಜ-ಅಜ್ಜಿಯರು ತಮ್ಮ ಜೀವನದ ಈ ಹಂತದಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ತಮ್ಮನ್ನು ತಾವು ಸಂತೋಷಗೊಳಿಸಲು ಇಷ್ಟಪಡುತ್ತಾರೆ.
37
ಅಜ್ಜ-ಅಜ್ಜಿ ಜೊತೆ ಮಾತನಾಡಿ
ಪೋಷಕರು ಅಜ್ಜ-ಅಜ್ಜಿಯರೊಂದಿಗೆ ನೇರವಾಗಿ ಜಗಳ ಮಾಡೋದನ್ನು ತಪ್ಪಿಸಬೇಕು ಮತ್ತು ಕೆಲವು ನಿಯಮಗಳು ತಮ್ಮ ಮಕ್ಕಳ ಭವಿಷ್ಯಕ್ಕೆ ಏಕೆ ಮುಖ್ಯವೆಂದು ಪ್ರೀತಿಯಿಂದ ವಿವರಿಸಬೇಕು.
ಅಜ್ಜ-ಅಜ್ಜಿಯರು ತಮ್ಮ ಮಕ್ಕಳನ್ನು ಸಿಹಿತಿಂಡಿಗಳಿಂದ ಸಂತೋಷಪಡಿಸಿದರೆ, ಅಂತಹ ಸಂದರ್ಭದಲ್ಲಿ ನೀವು ಕಥೆಗಳನ್ನು ಹೇಳಲು, ಅವರನ್ನು ವಾಕಿಂಗ್ ಗೆ ಕರೆದೊಯ್ಯಲು ಅಥವಾ ಅವರಿಗೆ ಸಣ್ಣ ಕ್ರಾಫ್ಟ್ ವಸ್ತುಗಳನ್ನು ಕಲಿಯಲು ಪ್ರೋತ್ಸಾಹಿಸಿ. ಇದು ಪ್ರೀತಿಯನ್ನು ಕಾಪಾಡಿಕೊಳ್ಳುತ್ತದೆ ಮತ್ತು ಅತಿಯಾದ ಮುದ್ದಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ.
57
ಪ್ರೀತಿಯಿಂದ ವಿವರಿಸಿ
ನಿಮ್ಮ ಮಗುವನ್ನು ನೇರವಾಗಿ ಬೈಯುವ ಬದಲು, ಸಕಾರಾತ್ಮಕ ರೀತಿಯಲ್ಲಿ ವಿವರಿಸಿ. ಹೀಗೆ ಮಾಡೋದರಿಂದ ನಿಯಮಗಳು ಏನೆಂದು ನಿಮ್ಮ ಮಗುವಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
67
ತಾಳ್ಮೆಯಿಂದಿರಿ
ಪೋಷಕರು ತಾಳ್ಮೆಯಿಂದಿರಬೇಕು. ಕುಟುಂಬ ಬ್ಯಾಲೆನ್ಸ್ ಆಗಿರೋದು ರಾತ್ರೋರಾತ್ರಿ ಆಗುವುದಿಲ್ಲ. ಆದರೆ ಎಲ್ಲರೂ ಒಟ್ಟಾಗಿ ಸಣ್ಣ ಹೆಜ್ಜೆಗಳನ್ನು ಇಟ್ಟಾಗ, ಮಗು ಹಾಳಾಗುವುದಿಲ್ಲ ಅಥವಾ ಪ್ರೀತಿಯಿಂದ ವಂಚಿತವಾಗುವುದಿಲ್ಲ.
77
ಯಾವಾಗಲೂ ಈ ವಿಷಯ ನೆನಪಿಡಿ:
ಅಜ್ಜ-ಅಜ್ಜಿಯರ ವಾತ್ಸಲ್ಯ ಮತ್ತು ಪೋಷಕರ ಶಿಸ್ತು ಒಟ್ಟಾಗಿ ಮಗುವಿನ ಗುಣವನ್ನು ರೂಪಿಸುತ್ತದೆ. ಮಕ್ಕಳ ಉತ್ತಮ ಜೀವನಕ್ಕಾಗಿ ನೀವು ಉತ್ತಮ ರೀತಿಯಲ್ಲಿ ಮಕ್ಕಳಿಗೆ ವಿಷ್ಯಗಳನ್ನು ತಿಳಿ ಹೇಳಬೇಕು.