ವಿವಾಹೇತರ ಸಂಬಂಧಕ್ಕಿಂತ ಬಹಳ ಭಿನ್ನ Open Marriage, ವಿವಾಹಿತರಲ್ಲಿ ಹೆಚ್ಚುತ್ತಿದೆ ಈ ಟ್ರೆಂಡ್!

Published : Aug 14, 2025, 02:43 PM IST

ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ 'ಮದುವೆ'ಯನ್ನು ಇನ್ನೂ ಪವಿತ್ರ ಬಂಧವೆಂದೇ ಪರಿಗಣಿಸಲಾಗಿದೆ. ಆದರೂ ಭಾರತೀಯ ದಂಪತಿ ಈ ಪವಿತ್ರ ಬಂಧದಲ್ಲಿ ಮುಕ್ತ ವಿವಾಹದ ಪರಿಕಲ್ಪನೆಯನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. 

PREV
16
ವೇಗವಾಗಿ ಅಳವಡಿಕೆ

ಭಾರತದಲ್ಲಿ ವಿದೇಶಿ ಟ್ರೆಂಡನ್ನ ಹೆಚ್ಚು ಫಾಲೋ ಮಾಡ್ತಾ ಇದ್ದಾರೆ. ಅದು ಬಟ್ಟೆಯ ವಿಚಾರದಲ್ಲಿ ಇರ್ಬೋದು ಅಥವಾ ಲೈಫ್‌ಸ್ಟೈಲ್ ಆಗಿರಬಹುದು. ಅದೆಲ್ಲಾ ಬಿಡಿ, ಭಾರತೀಯರು ತಮ್ಮ ವೈವಾಹಿಕ ಜೀವನದಲ್ಲಿಯೂ ವಿದೇಶಿ ಟ್ರೆಂಡ್‌ನ ಹೊಸ ಪರಿಕಲ್ಪನೆಯೊಂದನ್ನ ಅನುಸರಿಸುತ್ತಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗ್ಬೋದು. ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ 'ಮದುವೆ'ಯನ್ನು ಇನ್ನೂ ಪವಿತ್ರ ಬಂಧವೆಂದೇ ಪರಿಗಣಿಸಲಾಗಿದೆ. ಆದರೂ ಭಾರತೀಯ ದಂಪತಿ ಈ ಪವಿತ್ರ ಬಂಧದಲ್ಲಿ ಮುಕ್ತ ವಿವಾಹದ ಪರಿಕಲ್ಪನೆಯನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ.

26
ಮನಶಾಸ್ತ್ರಜ್ಞರು ಹೇಳಿದ್ದೇನು?

ಹೌದು, ಮುಕ್ತ ವಿವಾಹ(Open Marriage)ದ ಪರಿಕಲ್ಪನೆಯು ವಿದೇಶದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಈಗ ಈ ಪ್ರವೃತ್ತಿ (Trend)ಭಾರತದಲ್ಲೂ ತನ್ನ ಬೇರುಗಳನ್ನು ಹರಡುತ್ತಿದೆ. ಹಾಗಾಗಿ ಮನಶಾಸ್ತ್ರಜ್ಞರು ಈ ಬಗ್ಗೆ ಏನು ಹೇಳಿದ್ದಾರೆಂದು ನೋಡೋಣ ಬನ್ನಿ...

36
ಅಷ್ಟಕ್ಕೂ ಈ ಮುಕ್ತ ವಿವಾಹ ಎಂದರೇನು?

ಕಾಲ ಕಳೆದಂತೆ ಮದುವೆ, ಕುಟುಂಬದ ಪರಿಕಲ್ಪನೆಯು ಬದಲಾಗುತ್ತಿದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ. ಕೆಲವು ವಿವಾಹಿತರು ಒಂದೇ ಸಂಗಾತಿಯೊಂದಿಗೆ ತಮ್ಮ ಜೀವನವನ್ನು ಕಳೆಯಲು ಬಯಸುತ್ತಾರೆ. ಆದರೆ ಮತ್ತೆ ಕೆಲವರು ಮದುವೆಯ ನಂತರ ಹೊಸ ಆಯ್ಕೆಯನ್ನು ಅನ್ವೇಷಿಸಲು ಬಯಸುತ್ತಾರೆ. ಈಗ ಮುಕ್ತ ವಿವಾಹ ವಿಚಾರಕ್ಕೆ ಬರುವುದಾದರೆ ಇದು ಒಂದು ರೀತಿಯ ಸಮ್ಮತಿಯ ವಿವಾಹವಾಗಿದ್ದು, ಇದರಲ್ಲಿ ವಿವಾಹಿತ ದಂಪತಿಗಳು ತಮ್ಮ ಮೂಲ ಸಂಬಂಧವನ್ನು ಉಳಿಸಿಕೊಂಡು ಮದುವೆಯ ನಂತರ ಯಾವುದೇ ಸಂಗಾತಿ ಇತರರೊಂದಿಗೆ ಲೈಂಗಿಕ ಅಥವಾ ಪ್ರೇಮ ಸಂಬಂಧ ಹೊಂದಬಹುದು ಎಂದು ಒಪ್ಪುತ್ತಾರೆ. ಆದರೆ ಭಾರತೀಯ ಸಮಾಜದಲ್ಲಿ ಇದನ್ನು ಕಾನೂನುಬದ್ಧವಾಗಿ ಸರಿಯೆಂದು ಪರಿಗಣಿಸುವುದಿಲ್ಲ.

46
ಮುಕ್ತ ಮದುವೆ ಮತ್ತು ವಿವಾಹೇತರ ಸಂಬಂಧ ಒಂದೇನಾ?

ನೀವು ಮುಕ್ತ ವಿವಾಹ ಮತ್ತು ವಿವಾಹೇತರ ಸಂಬಂಧ ಒಂದೇ ಎಂದು ಭಾವಿಸುತ್ತಿದ್ದರೆ ಅದು ತಪ್ಪು. ಎರಡರ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಮುಕ್ತ ವಿವಾಹವು ಒಮ್ಮತದ ಒಪ್ಪಂದವಾಗಿದ್ದು, ಇದರಲ್ಲಿ ಇಬ್ಬರೂ ಪಾರ್ಟ್ನರ್ಸ್ ಮದುವೆಯ ನಂತರ ಇನ್ನೊಬ್ಬ ವ್ಯಕ್ತಿಯೊಂದಿಗೆ ರೊಮ್ಯಾನ್ಸ್ ಮಾಡಲು ಅಥವಾ ಲೈಂಗಿಕ ಸಂಬಂಧ ಹೊಂದಲು ಒಪ್ಪುತ್ತಾರೆ.

56
ಇದು ರಹಸ್ಯ ಸಂಬಂಧ

ಆದರೆ ವಿವಾಹೇತರ ಸಂಬಂಧವು ಸಾಮಾನ್ಯವಾಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ರಹಸ್ಯ ಸಂಬಂಧವಾಗಿರುತ್ತದೆ. ಮತ್ತು ಮೊದಲ ಸಂಗಾತಿ ಅದಕ್ಕೆ ಒಪ್ಪಿಗೆ ನೀಡುವುದಿಲ್ಲ. ಸಿಂಪಲ್ಲಾಗಿ ಹೇಳುವುದಾದರೆ ಮುಕ್ತ ವಿವಾಹದಲ್ಲಿ ಸಂಗಾತಿಗೆ ಎಲ್ಲವೂ ತಿಳಿದಿರುತ್ತದೆ ಮತ್ತು ವಿವಾಹೇತರ ಸಂಬಂಧದಲ್ಲಿ ಸಂಗಾತಿಯಿಂದ ಎಲ್ಲಾ ವಿಷಯಗಳನ್ನು ಮರೆಮಾಡಲಾಗುತ್ತದೆ.

66
ಭಾರತದಲ್ಲಿ ಮುಕ್ತ ವಿವಾಹ ಟ್ರೆಂಡನ್ನು ಅನುಸರಿಸಲಾಗುತ್ತಿದೆಯೇ?

ಹೌದು, ಕಾಲಾನಂತರದಲ್ಲಿ ಭಾರತದಲ್ಲಿ ಮುಕ್ತ ವಿವಾಹದ ಪ್ರವೃತ್ತಿಯನ್ನು ಅನುಸರಿಸಲಾಗುತ್ತಿದೆ. ಇದು ವಿವಾಹಿತ ದಂಪತಿಗಳಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. ಭಾರತೀಯ ಸಮಾಜವು ಹೆಚ್ಚಾಗಿ ಏಕಪತ್ನಿತ್ವ ಮತ್ತು ವ್ಯವಸ್ಥಿತ ವಿವಾಹಕ್ಕೆ ಒತ್ತು ನೀಡುತ್ತಿದ್ದರೂ, ಬದಲಾಗುತ್ತಿರುವ ವರ್ತನೆಗಳು ಮತ್ತು ಜಾಗತಿಕ ಪ್ರವೃತ್ತಿಗಳ ಜನಪ್ರಿಯತೆಯಿಂದಾಗಿ ಮುಕ್ತ ವಿವಾಹವನ್ನು ಅನುಸರಿಸಲಾಗುತ್ತಿದೆ.

Read more Photos on
click me!

Recommended Stories