Numerology ಹೆಚ್ಚಿನ ಜನರಿಗೆ ಗೊತ್ತಿರೋದಿಲ್ಲ, ಆದರೆ ನಮ್ಮ ಹುಟ್ಟಿದ ದಿನಾಂಕ ನಮ್ಮ ಸ್ವಭಾವದ ಬಗ್ಗೆ ಸಾಕಷ್ಟು ಹೇಳುತ್ತೆ. ಸಂಖ್ಯಾಶಾಸ್ತ್ರ ಪ್ರಕಾರ, ನಾವು ಹುಟ್ಟಿದ ದಿನಾಂಕದ ಅಂಕೆಗಳನ್ನು ಸೇರಿಸಿದಾಗ ಒಂದು ಮೂಲ ಸಂಖ್ಯೆ ಸಿಗುತ್ತದೆ.
ಯಾರಾದರೂ 5, 14 ಅಥವಾ 23ನೇ ತಾರೀಖಿನಲ್ಲಿ ಹುಟ್ಟಿದ್ರೆ, ಅವರ ಸಂಖ್ಯೆ 5 ಆಗಿರುತ್ತೆ. ಈ 5 ಸಂಖ್ಯೆಯವರ ಬಗ್ಗೆ ಒಂದು ವಿಶೇಷ ಸಂಗತಿ ಏನೆಂದರೆ — ಇವರು ಎಲ್ಲರಿಗೂ ತುಂಬಾ ಸುಲಭವಾಗಿ ಇಷ್ಟ ಆಗಿಬಿಡ್ತಾರೆ ಈ ಸಂಖ್ಯೆಗೆ ಬುಧ ಗ್ರಹದ ಪ್ರಭಾವ ಇದೆ ಅಂತ ಹೇಳುತ್ತಾರೆ. ಅದಕ್ಕೇ ಈ ಜನರು ಚತುರರಾಗಿರ್ತಾರೆ, ಮಾತಾಡೋದಲ್ಲೂ ಚೆನ್ನಾಗಿರ್ತಾರೆ. ಯಾವ ಪರಿಸ್ಥಿತಿ ಬಂದರೂ ಅದನ್ನು ನಿಭಾಯಿಸೋ ಸಾಮರ್ಥ್ಯ ಇವರಿಗೆ ಇರುತ್ತೆ.
25
ಇವರ ಬಗ್ಗೆ ಇನ್ನೊಂದು ಮುಖ್ಯ ವಿಷಯ — ಇವರು ಬಾಸ್‌ಗೆ ತುಂಬಾ ಇಷ್ಟವಾಗ್ತಾರೆ
ಯಾಕೆ ಅಂದ್ರೆ, ಇವರು ಕೆಲಸವನ್ನು ಜವಾಬ್ದಾರಿಯಾಗಿ ಮಾಡ್ತಾರೆ, ಹೇಳಿದುದನ್ನ ಸರಿಯಾಗಿ ಮುಗಿಸ್ತಾರೆ. ಮೇಲಧಿಕಾರಿಗಳಿಗೆ ಇವರ ಮೇಲೆ ನಂಬಿಕೆ ಬರುತ್ತೆ. ಅದರಿಂದ ಇವರು ಬೇಗ ಗಮನಕ್ಕೆ ಬರುತ್ತಾರೆ.
35
ಒಟ್ಟಾಗಿ ಕೆಲಸ ಮಾಡುವುದರಲ್ಲಿ ಇವರು ತುಂಬಾ ನಿಪುಣರು
ಯಾರ ಜೊತೆಯಾದರೂ ಬೇಗ ಹೊಂದಿಕೊಳ್ಳ್ತಾರೆ, ಎಲ್ಲರ ಜೊತೆ ಒಳ್ಳೆಯ ಸಂಬಂಧ ಇಡ್ತಾರೆ. ಅದರಿಂದ ಇವರ ಜೊತೆ ಕೆಲಸ ಮಾಡೋದು ಎಲ್ಲರಿಗೂ ಇಷ್ಟ ಆಗುತ್ತೆ.
45
ಮಾತನಾಡೋದು ಇವರ ದೊಡ್ಡ ಶಕ್ತಿ
ಇವರು ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಹೇಳ್ತಾರೆ. ಅದರಿಂದ ಯಾವ ಕೆಲಸವಾದರೂ ಸುಲಭವಾಗಿ ಮುಗಿಸಿಕೊಳ್ಳುತ್ತಾರೆ.
55
ಇನ್ನೊಂದು ಒಳ್ಳೆಯ ಗುಣ
ಇನ್ನೊಂದು ಒಳ್ಳೆಯ ಗುಣ ಏನೆಂದರೆ — ಇವರು ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳೋದಿಲ್ಲ. ಮೊದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳ್ತಾರೆ, ನಂತರ ತೀರ್ಮಾನ ಮಾಡ್ತಾರೆ. ಅದಕ್ಕೇ ಇವರ ನಿರ್ಧಾರಗಳು ಸರಿಯಾಗಿರೋ ಸಾಧ್ಯತೆ ಜಾಸ್ತಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.