ಹುಡುಗಿ ನೋಡಿದ್ದೇನೆ, ಮುಂದಿನ ವರ್ಷ ಮದ್ವೆ: ಮರು ವಿವಾಹದ ಬಗ್ಗೆ ಮೌನ ಮುರಿದ ಚಂದನ್ ಶೆಟ್ಟಿ

Published : Apr 04, 2026, 04:28 PM IST

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ನಂತರ ಅನುಭವಿಸಿದ ನೋವಿನಿಂದ ಹೊರಬಂದಿದ್ದಾರೆ. ಮುಂದಿನ ವರ್ಷ ಮದುವೆಯಾಗಲು ಯೋಜಿಸಿದ್ದು, ಈಗಾಗಲೇ  ಹುಡುಗಿಯರನ್ನು ನೋಡಿರುವುದಾಗಿ ಮತ್ತು ಈ ಬಾರಿ ತರಾತುರಿ ಮಾಡದೆ ಪೋಷಕರ ಒಪ್ಪಿಗೆಯೊಂದಿಗೆ ಮುಂದುವರೆಯುವುದಾಗಿ ತಿಳಿಸಿದ್ದಾರೆ.

PREV
16
ಬಿಗ್​ಬಾಸ್​ನಿಂದ ಫೇಮಸ್​

Bigg Bossನಿಂದ ಫೇಮಸ್​ ಆಗಿರೋ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ (Niveditha Gowda) ವಿಷ್ಯ ಎಲ್ಲರಿಗೂ ತಿಳಿದದ್ದೇ. ನಿವೇದಿತಾಗೆ ಇನ್ನೂ ವಯಸ್ಸು 20 ಇರುವಾಗಲೇ ಬಿಗ್​ಬಾಸ್​ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಚಂದನ್​ ಶೆಟ್ಟಿಯವರ ಲವ್​ಗೆ ಬಿದ್ದು, ಮೈಸೂರು ದಸರಾ ವೇದಿಕೆಯಲ್ಲಿ ಪ್ರಪೋಸ್​ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗುವುದರಿಂದ ಹಿಡಿದು, ಡಿವೋರ್ಸ್ ಪಡೆದಾಗಿನಿಂದ, ತುಂಡುಡುಗೆಯಲ್ಲಿ ರೀಲ್ಸ್‌ ಮಾಡುವ ಇಂದಿನವರೆಗೂ ನಿವೇದಿತಾ ಸದಾ ಸುದ್ದಿಯಲ್ಲಿದ್ದರೆ, ತಮ್ಮ ಸಿನಿಮಾದಲ್ಲಿ ಮುಂದುವರೆದಿದ್ದಾರೆ ಚಂದನ್​ ಶೆಟ್ಟಿ.

26
ದಾಂಪತ್ಯ ಜೀವನಕ್ಕೆ ವಿದಾಯ

2024ರ ಜೂನ್​ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದೆ ಈ ಜೋಡಿ. ಇದಾಗಲೇ ನಿವೇದಿತಾ ಕೂಡ 2ನೇಮದ್ವೆ ಬಗ್ಗೆ ಮಾತನಾಡಿದ್ದರು. ಚಂದನ್ ಶೆಟ್ಟಿ ನಟನಾಗ್ಬೇಕು ಅಂತ ಕನಸು ಕಂಡಿದ್ದರು. ಆಗ ಬಂದ ಮೊದಲ ಕಥೇಯೇ ಈ "ಎಲ್ರ ಕಾಲೆಳೆಯುತ್ತೆ ಕಾಲ" ಚಿತ್ರ. ಈ ಚಿತ್ರಕ್ಕೆ ರಾಜಗುರು ಕಥೆ ಬರೆದಿದ್ದಾರೆ.

36
ಎರಡನೆಯ ಮದುವೆಯ ಬಗ್ಗೆ

ಇದಾಗಲೇ ಡಿವೋರ್ಸ್​ ಪಡೆದು ಎರಡು ವರ್ಷಗಳಾಗುತ್ತಾ ಬಂದಿದ್ದು, ಚಂದನ್​ ಶೆಟ್ಟಿ ಅವರು ಇದೀಗ ಎರಡನೆಯ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹುಡುಗಿ ನೋಡಿಬಂದಿರುವ ಬಗ್ಗೆಯೂ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

46
ತುಂಬಾ ಎಫೆಕ್ಟ್​ ಆಗಿತ್ತು

ವಿಚ್ಛೇದನ ಪಡೆದಾಗ ತಮ್ಮ ಮನಸ್ಸಿಗೆ ತುಂಬಾ ಬೇಸರವಾಗಿತ್ತು, ಅದು ಕೆಲಸದ ಮೇಲೂ ಪರಿಣಾಮ ಬೀರಿತ್ತು. ಈಗ ಆ ನೋವಿನಿಂದ ಹೊರಬಂದಿದ್ದೇನೆ. ಮದುವೆ ಮುರಿದು ಬಿತ್ತು ಎಂದು ಅದರ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ಮುಂದಿನ ವರ್ಷ ಮದುವೆಯಾಗುವ ಪ್ಲ್ಯಾನ್​ ಮಾಡಿದ್ದೇನೆ ಎಂದಿದ್ದಾರೆ ನಟ.

56
ಮುಂದಿನ ವರ್ಷ ಮದುವೆ

ನನಗೆ ಡಿವೋರ್ಸ್ ಆದಾಗ ತುಂಬಾನೆ ಹರ್ಟ್ ಆಗಿತ್ತು. ಸಂಗೀತ ಸಾಧನೆಯಲ್ಲಿ ಮನಸ್ಸು ಶಾಂತವಾಗಿರಬೇಕು. ಆದರೆ ಡಿವೋರ್ಸ್​ನಿಂದ ಕೆಲಸದ ಮೇಲೂ ಎಫೆಕ್ಟ್ ಆಗಿತ್ತು. ಒಳ್ಳೆ ಟ್ಯೂನ್ ಮಾಡಲು ಬೇಕಾದ ಪ್ರಶಾಂತ ಮನಸ್ಸು ಇರಲಿಲ್ಲ. ಎಲ್ಲಾ ಕೆಲಸ ನಿಧಾನವಾಯ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದು, ಮತ್ತೊಂದು ಮದುವೆಯ ಬಗ್ಗೆ ಯೋಚನೆ ಮಾಡಿದ್ದೇನೆ ಎಂದಿದ್ದಾರೆ.

66
ಮೊದಲಿನ ತಪ್ಪು ಮಾಡಲ್ಲ

ಒಂದಿಬ್ಬರು ಹುಡುಗಿಯರನ್ನು ನೋಡಿದ್ದೇನೆ. ಸಮಾಧಾನವಾಗಿ ಟೈಮ್​ ತೆಗೆದುಕೊಂಡು ನಿರ್ಧಾರ ಮಾಡುತ್ತೇನೆ. ಮೊದಲಿನ ಮದುವೆಯಲ್ಲಿ ಮಾಡಿರೋ ತಪ್ಪು ಮತ್ತೆ ಮಾಡಲ್ಲ. ಅಪ್ಪ ಮತ್ತು ಅಮ್ಮ ಒಪ್ಪಿಕೊಂಡ ಮೇಲೆ ಮದುವೆ ಆಗುತ್ತೇನೆ. ಮೊದಲಿನ ರೀತಿ ತರಾತುರಿ ಮಾಡುವುದಿಲ್ಲ ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories