ನೋಡೋಕೆ ಚೆನ್ನಾಗಿದ್ದೀರಾ? ಹಾಗಾದ್ರೆ ಆಂತರಿಕ ಸೌಂದರ್ಯ ಹೆಚ್ಚಿಸಿಕೊಳ್ಳಿ

First Published | Feb 19, 2024, 4:22 PM IST

ನಮಗೆ ಫ್ಯೂಚರ್ ಟೈಂ ಟ್ರಾವೆಲ್ ಮಾಡಲು ಬಂದಿದ್ದರೆ, ಭವಿಷ್ಯದಲ್ಲಿ ನಾವು ಹೇಗೆಲ್ಲ ಆಗಿರುತ್ತೇವೆ ಎಂಬುದು ಮುಂಚೆಯೇ ತಿಳಿಯುವಂತಿದ್ದರೆ ಬದುಕನ್ನು ಬೇರೆಯೇ ರೀತಿ ನಡೆಸಿಕೊಳ್ಳಬಹುದಿತ್ತು. ಹೀಗೆ ಉತ್ತಮ ಭವಿಷ್ಯಕ್ಕಾಗಿ ನೀವು ಮುಂಚೆಯೇ ತಿಳಿದಿರಬೇಕಾದ ಕೆಲ ಉತ್ತಮ ವಿಷಯಗಳು ಇಲ್ಲಿವೆ..

ನಿಮ್ಮ ಕ್ರಶ್ ಒಬ್ಬರನ್ನು ಮೆಚ್ಚಿಸುವ ಸಲುವಾಗಿ ದೈಹಿಕವಾಗಿ ಹೆಚ್ಚು ಆಕರ್ಷಕವಾಗುವತ್ತ ಜಾಸ್ತಿ ಸಮಯ ವ್ಯಯ ಮಾಡಬೇಡಿ. ಬದಲಿಗೆ, ಮಾನಸಿಕವಾಗಿ ಹೆಚ್ಚು ಆಕರ್ಷಕವಾಗುವುದರತ್ತ ಗಮನ ಹರಿಸಿ. ಹೆಚ್ಚು ಅಧ್ಯಯನ ಮಾಡಿ, ನಿಮ್ಮ ಕೆಟ್ಟ ಯೋಚನೆಗಳನ್ನು ಹೊರಗೆ ತಳ್ಳಿ, ನಿಮ್ಮ ಭಯಗಳನ್ನು ಗೆಲ್ಲುವತ್ತ ಸಮಯ ಕೊಡಿ ಹಾಗೂ ನಿಮ್ಮಷ್ಟಕ್ಕೆ ಸಂತೋಷವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ.

ವಯಸ್ಸು 15-30 ಜೀವನದ ಅತ್ಯದ್ಬುತ ಕಾಲ. ಈ ಸಮಯದಲ್ಲಿ ನೀವು ಗೆಳೆಯರನ್ನು ಮಾಡಿಕೊಳ್ಳುತ್ತೀರಿ, ಕೆಲವರನ್ನು ಕಳೆದುಕೊಳ್ಳುತ್ತೀರಿ. ತಪ್ಪು ಮಾಡುತ್ತೀರಿ, ಅದರಿಂದ ಕಲಿಯುತ್ತೀರಿ. ಪ್ರೀತಿಯಲ್ಲಿ ಬೀಳುತ್ತೀರಿ, ಲವ್ ಫೇಲ್ಯೂರ್ ಅನುಭವಿಸುತ್ತೀರಿ, ಸಾಕಷ್ಟನ್ನು ಬದುಕು ಕಲಿಸುತ್ತದೆ. ನಿಮ್ಮ ಮುಗ್ಧತೆಯನ್ನು ಕಳಚಿ ಮೆಚುರಿಟಿ ಕೊಡುತ್ತದೆ. ಈ ವರ್ಷಗಳನ್ನು ಎಂಜಾಯ್ ಮಾಡುವುದು ಅಥವಾ ಹಾಳು ಮಾಡಿಕೊಳ್ಳುವುದು ನಿಮ್ಮ ಕೈಲೇ ಇದೆ ಎಂಬುದು ನೆನಪಿರಲಿ.

Tap to resize

ನೋ ಎಂದು ಹೇಳುವುದಕ್ಕೆ ಉದ್ದವಾದ ವಿವರಣೆ ಕೊಡುವುದನ್ನು ಬಿಡಿ. ಯಾರಿಗಾದರೂ ನೀವು ಹಾಕಿದ ಬೌಂಡರಿ ಕಷ್ಟವಾದರೆ ಅದು ಅವರ ಸಮಸ್ಯೆಯೇ ಹೊರತು ನಿಮ್ಮದಲ್ಲ. ನೀವು ಕಳೆದುಕೊಳ್ಳಬಹುದಾದ ಅತಿ ದೊಡ್ಡ ತೂಕ ಎಂದರೆ, ಮತ್ತೊಬ್ಬರು ಏನು ಯೋಚಿಸುತ್ತಾರೋ ಎಂದು ತಲೆಯಲ್ಲಿ ತುಂಬಿಕೊಳ್ಳುವ ತೂಕ.

ಮದುವೆಯಾಗುವ ಮುನ್ನ, ನಿಮ್ಮ ಕನಸುಗಳು, ಕುಟುಂಬದ ರೀತಿ, ಹಣಕಾಸಿನ ಸ್ಥಿತಿ, ಮಕ್ಕಳ ಕುರಿತಾದ ಆಲೋಚನೆ, ನಿಮ್ಮ ಹಳೆಯ ಪ್ರೀತಿ ಎಲ್ಲದರ ವಿಚಾರವಾಗಿ ಸರಿಯಾಗಿ ಚರ್ಚಿಸಿ ಎಲ್ಲ ಓಕೆ ಎನಿಸಿದ ಮೇಲೆ ಮುಂದುವರಿಯಿರಿ. ಏಕೆಂದರೆ, ಮದುವೆಯೆಂದರೆ ಪ್ರೀತಿಯೊಂದೇ ಅಲ್ಲ. 

ಮತ್ತೊಬ್ಬರಿಗೆ ಯಾವುದು 'ಫನ್' ಎನಿಸುತ್ತದೋ ಅದನ್ನು ಸಬ್‌ಸ್ಕ್ರೈಬ್ ಮಾಡಲು ಹೋಗಬೇಡಿ. ಏಕೆಂದರೆ, ಫನ್ ಎಂದರೆ ಕೇವಲ ಕುಡಿಯುವುದು, ಸೇದುವುದು, ಪಾರ್ಟಿ ಮಾಡುವುದಲ್ಲ. ಫನ್ ಎನ್ನುವುದು ಪುಸ್ತಕವನ್ನು ಓದಿ ಮುಗಿಸುವುದರಲ್ಲಿ, ರಾತ್ರಿಯೊಂದರ ತಂಗಾಳಿಯನ್ನು ಆಸ್ವಾದಿಸುವುದರಲ್ಲಿ, ಆಪ್ತರೊಂದಿಗೆ ಆಳವಾದ ಸಂಭಾಷಣೆಯಲ್ಲ ತೊಡಗಿಸಿಕೊಳ್ಳುವುದರಲ್ಲಿ, ವಾಕ್ ಮಾಡುವುದು, ಕಲೆ, ಕ್ರಾಫ್ಟ್ ಎಲ್ಲದರಲ್ಲಿಯೂ ಇದೆ. ನಿಮಗೆ ಯಾವುದರಲ್ಲಿ ಸಿಗುತ್ತದೆ ಎಂದು ಕಂಡುಕೊಳ್ಳಿ.

ನಿಮ್ಮ ಏನೆಲ್ಲ ನೋವುನಷ್ಟಗಳಿವೆಯೋ ಅವೆಲ್ಲದರ ಸಮಸ್ಯೆಯಿಂದ ಹೊರ ಬಂದ ಮೇಲಷ್ಟೇ ಮಕ್ಕಳನ್ನು ಮಾಡಿಕೊಳ್ಳಿ. ಇಲ್ಲದಿದ್ದರೆ, ನಿಮ್ಮ ಮಕ್ಕಳ ತಲೆಯ ಮೇಲೆ ನಿಮ್ಮ ನೋವಿನ ಭಾರಗಳು ಬೀಳುತ್ತವೆ.

Latest Videos

click me!